For Quick Alerts
ALLOW NOTIFICATIONS  
For Daily Alerts

ಗೌರವರ್ಣದ ತ್ವಚೆಗಾಗಿ ಪ್ರಯತ್ನಿಸಿ- ಬೀಟ್‌ರೂಟ್ ಜ್ಯೂಸ್

By manu
|

ಕತ್ತರಿಸುವಾಗ ಕೆಂಪಗಿರುವ ಕಾರಣಕ್ಕೇ ಹಲವರಿಗೆ ಬೀಟ್ ರೂಟ್ ಇಷ್ಟವಾಗುವುದಿಲ್ಲ. ಆದರೆ ಈ ಕೆಂಬಣ್ಣದ ತರಕಾರಿ ಆರೋಗ್ಯದ ಜೊತೆಗೇ ತ್ವಚೆಯ ರಕ್ಷಣೆ ಮಾಡುವುದೂ ಸತ್ಯ. ಅದರಲ್ಲೂ ಚರ್ಮದ ನೆರಿಗೆಗಳನ್ನು ನಿವಾರಿಸಲು ಬೀಟ್‌ರೂಟ್ ಅತ್ಯುತ್ತಮವಾದ ಪೋಷಣೆಯನ್ನು ನೀಡುತ್ತದೆ. ಇದರಿಂದ ವೃದ್ಧಾಪ್ಯವನ್ನು ಮುಂದೂಡಿದಂತಾಗುತ್ತದೆ.

ಬೀಟ್ ರೂಟ್‌ನಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ಮ್ಯಾಂಗನೀಸ್, ಕಬ್ಬಿಣ, ಕರಗುವ ನಾರು ಮತ್ತು ಫೋಲೇಟ್‌ಗಳೆಂಬ ಪೋಷಕಾಂಶಗಳಿವೆ. ಇವು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುವ ಜೊತೆಗೇ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ತ್ವಚೆಯ ಕಾಂತಿ ಹೆಚ್ಚಿಸಿ ತಾಜಾತನವನ್ನು ನೀಡುತ್ತದೆ.

ಬೀಟ್ ರೂಟ್ ನಲ್ಲಿರುವ ಆರೋಗ್ಯಕರ ಗುಣಗಳು ಮೊಡವೆಗಳನ್ನು ನಿವಾರಿಸಲೂ ನೆರವಾಗುತ್ತವೆ. ಅಲ್ಲದೇ ಮೊಡವೆಗಳು ಮಾಗಿದ ಬಳಿಕ ಉಳಿಯುವ ಕಲೆಗಳು, ಗೀರುಗಳು ಮತ್ತು ಕಣ್ಣುಗಳ ಸುತ್ತಲ ಕಪ್ಪು ವರ್ತುಲಗಳನ್ನೂ ನಿವಾರಿಸಲು ನೆರವಾಗುತ್ತವೆ. ನೋಡಲು ಏನೂ ಚೆನ್ನಾಗಿಲ್ಲದೇ ಇದ್ದರೂ ನಿಮ್ಮ ಸೌಂದರ್ಯವನ್ನು ಚೆನ್ನಾಗಿಸುವ ಈ ಅದ್ಭುತ ತರಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಬೀಟ್‌ರೂಟ್ ನಲ್ಲಿರುವ ವಿವಿಧ ವಿಟಮಿನ್ ಮತ್ತು ಕಬ್ಬಿಣದಂತಹ ಖನಿಜಗಳ ಮೂಲಕ ಚರ್ಮದ ಕಾಂತಿ ಹೆಚ್ಚಲು ಸಾಧ್ಯವಾಗುತ್ತದೆ. ಬೀಟ್ ರೂಟ್ ಅನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇವಿಸುವ ಮೂಲಕ ಆರೋಗ್ಯ ಪಡೆಯಬಹುದಾದರೂ ಚರ್ಮಕ್ಕೆ ಇದರ ಆರೈಕೆ ಹೊರಗಿನಿಂದಲೇ ಹೆಚ್ಚು ಫಲಕಾರಿಯಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಇದಕ್ಕಾಗಿ ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಎರಡು ಚಿಕ್ಕಚಮಚ ಬೀಟ್ ರೂಟ್ ರಸವನ್ನು ಒಂದು ಚಮಚ ಮೊಸರಿನೊಂದಿಗೆ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮೊಡವೆಯ ಮೇಲೆ ದಪ್ಪನಾಗಿ ಹಚ್ಚಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಜೊತೆಗೇ ಹಸಿ ಬೀಟ್ ರೂಟ್ ನ ರಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಸೇವಿಸುತ್ತಾ ಇರಿ.

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಬಿಸಿಲು ಅಥವಾ ಬೇರಾವುದಾರೂ ಕಾರಣದಿಂದ ತ್ವಚೆ ಗಾಢವಾಗಿದ್ದರೆ ಸಹಜವರ್ಣವನ್ನು ಪಡೆಯಲು ಬೀಟ್ ರೂಟ್ ರಸವನ್ನು ಸಮಪ್ರಮಾಣದ ಲಿಂಬೆರಸದಲ್ಲಿ ಬೆರೆಸಿ ಮುಖಕ್ಕೆ ಹತ್ತಿಯುಂಡೆಯ ಮೂಲಕ ಹಚ್ಚಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಒಣಗಿದ ಬಳಿಕ ಇನ್ನಷ್ಟು ಹಚ್ಚಿಕೊಳ್ಳಿ. ಹತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತ್ವಚೆ ಗೌರವರ್ಣ ಪಡೆಯುತ್ತಾ ಹೋಗುತ್ತದೆ.

ಕಣ್ಣ ಸುತ್ತಲ ಕಪ್ಪುವರ್ತುಲಗಳನ್ನು ನಿವಾರಿಸುತ್ತದೆ

ಕಣ್ಣ ಸುತ್ತಲ ಕಪ್ಪುವರ್ತುಲಗಳನ್ನು ನಿವಾರಿಸುತ್ತದೆ

ಕಣ್ಣ ಸುತ್ತಲ ಕಪ್ಪುವರ್ತುಲ ಅಥವಾ ಕಣ್ಣ ಕೆಳಗೆ ಊದಿಕೊಂಡಿರುವುದನ್ನು ನಿವಾರಿಸಲು ಬೀಟ್ ರೂಟ್ ರಸವನ್ನು ಹತ್ತಿಯುಂಡೆಯಲ್ಲಿ ಮುಳುಗಿಸಿ ನೇರವಾಗಿ ಪ್ರಭಾವಿತವಾದ ಭಾಗಕ್ಕೆ ಪ್ರತಿದಿನ ಮಲಗುವ ಮುನ್ನ ಹಚ್ಚಿಕೊಳ್ಳಿ.

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲ ಉದುರುವಿಕೆಗೆ ಕೂದಲ ಬುಡ ದೃಢವಾಗಿಲ್ಲದಿರುವುದು ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ಬೀಟ್ ರೂಟ್ ರಸ ಮತ್ತು ಹಸಿ ಶುಂಠಿಯ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲ ಬುಡಕ್ಕೆ ಸ್ನಾನಕ್ಕೂ ಮೊದಲು ನಯವಾಗಿ ಮಸಾಜ್ ಮಾಡಿ ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಸ್ನಾನ ಮಾಡಿ.

ಕಲೆಗಳನ್ನು ನಿವಾರಿಸುತ್ತದೆ

ಕಲೆಗಳನ್ನು ನಿವಾರಿಸುತ್ತದೆ

ಮೊಡವೆಗಳು ಒಣಗಿದ ಬಳಿಕ ಅಥವಾ ಚಿಕ್ಕಪುಟ್ಟ ಗಾಯಗಳು ಮಾಗಿದ ಬಳಿಕ ಉಳಿಯುವ ಕಲೆಯನ್ನು ನಿವಾರಿಸಲು ಸಮಪ್ರಮಾಣದಲ್ಲಿ ಬೀಟ್ ರೂಟ್ ರಸ ಮತ್ತು ಟೊಮೇಟೊ ರಸವನ್ನು (ಬೀಜ ಮತ್ತು ಸಿಪ್ಪೆ ನಿವಾರಿಸಿದ ತಿರುಳಿನ ರಸ) ಬೆರೆಸಿ ಹತ್ತಿಯುಂಡೆಯಿಂದ ದಪ್ಪನಾಗಿ ಈ ಸ್ಥಳಗಳ ಮೇಲೆ ಹಚ್ಚಿ ರಾತ್ರಿಯಿಡೀ ಒಣಗಿರಲು ಬಿಡಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಣಾಮ ಕಂಡುಬರುತ್ತದೆ.

ಒಣಚರ್ಮದ ತೊಂದರೆಯನ್ನು ನಿವಾರಿಸುತ್ತದೆ

ಒಣಚರ್ಮದ ತೊಂದರೆಯನ್ನು ನಿವಾರಿಸುತ್ತದೆ

ಸಮಪ್ರಮಾಣದಲ್ಲಿ ಬೀಟ್ ರೂಟ್ ರಸ ಮತ್ತು ಹಸಿಹಾಲನ್ನು ಬೆರೆಸಿ ಇದಕ್ಕೆ ಕೆಲವು ಹನಿ ಜೇನುತುಪ್ಪ ಬೆರೆಸಿ ಒಣಚರ್ಮದ ಮೇಲೆ ತೆಳುವಾಗಿ ಹಚ್ಚಿಕೊಂಡು ಹತ್ತು ನಿಮಿಷದ ಬಳಿಕ ತೊಳೆದುಕೊಳ್ಳುವುದರಿಂದ ಚರ್ಮಕ್ಕೆ ಹೆಚ್ಚಿನ ಆದ್ರತೆ ದೊರೆತು ಒಣಚರ್ಮವಾಗಿರುವ ಸ್ಥಿತಿಯಿಂದ ಹೊರಬರುತ್ತದೆ.

ನೆರಿಗೆಗಳನ್ನು ನಿವಾರಿಸುತ್ತದೆ

ನೆರಿಗೆಗಳನ್ನು ನಿವಾರಿಸುತ್ತದೆ

ಸಾಮಾನ್ಯವಾಗಿ ನಲವತ್ತು ದಾಟುತ್ತಿದ್ದಂತೆಯೇ ಮುಖದ ಮೇಲೆ ನೆರಿಗೆಗಳು ಮೂಡಲು ಪ್ರಾರಂಭಿಸುತ್ತವೆ. ಇದನ್ನು ಮುಂದೆ ಹಾಕಲು ಪ್ರತಿ ವಾರಾಂತ್ಯದಲ್ಲಿ ಈ ಚಿಕಿತ್ಸೆ ಅನುಸರಿಸಿ. ಬೀಟ್ ರೂಟ್ ರಸವನ್ನು ತಿರುಳು ನಿವಾರಿಸದೇ ದಪ್ಪನಾಗಿ (ಅಂದರೆ ಕಡಿಮೆ ನೀರಿನೊಂದಿಗೆ ಅರೆದು) ಮುಖಕ್ಕೆ ಮುಖಲೇಪದಂತೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಕ್ರಮೇಣ ಚರ್ಮ ಸೆಳೆತ ಪಡೆದು ನೆರಿಗೆಯಿಂದ ದೂರವಾಗುತ್ತದೆ.

ತುಟಿಗಳ ಸೌಂದರ್ಯ ಹೆಚ್ಚಿಸುತ್ತದೆ

ತುಟಿಗಳ ಸೌಂದರ್ಯ ಹೆಚ್ಚಿಸುತ್ತದೆ

ನಿಮ್ಮ ತುಟಿಗಳ ಸೌಂದರ್ಯವನ್ನು ಹೆಚ್ಚಿಸಲೂ ಬೀಟ್ ರೂಟ್ ಉತ್ತಮವಾಗಿದೆ. ಇದಕ್ಕಾಗಿ ಪ್ರತಿ ರಾತ್ರಿ ಮಲಗುವ ಮುನ್ನ ಬೀಟ್ ರೂಟ್ ರಸದ ಕೆಲವು ಹನಿಗಳನ್ನು ತೆಳುವಾಗಿ ತುಟಿಗಳ ಮೇಲೆ ಹಚ್ಚಿ ನಿದ್ರಿಸಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.


English summary

How To Use Beet Juice For Skin

Is beetroot good for skin? Of course, yes and in fact many people use beet juice for wrinkles. This vegetable contains many nutrients that keep your skin healthy and also slow down the ageing process. Beet roots are packed with vitamin C, Potassium, Manganese, iron, Fibre and folate. They prevent many health issues and also keep your skin fresh by enhancing blood circulation. Read on to know about the advantages of beetroot for skin.
X
Desktop Bottom Promotion