For Quick Alerts
ALLOW NOTIFICATIONS  
For Daily Alerts

ಮೊಡವೆಯ ಬಾಧೆಗೆ ತುಳಸಿಯ ನಲ್ಮೆಯ ಆರೈಕೆ

By Arshad
|

ಹದಿಹರೆಯದಲ್ಲಿ ಸಾಮಾನ್ಯವಾಗಿರುವ ಮೊಡವೆಗಳು ಮುಜುಗರಕ್ಕೆ ಕಾರಣವಾಗುತ್ತವೆ. ಅಲ್ಲದೇ ಇಡಿಯ ದಿನ ನೋವನ್ನೂ, ಉರಿಯನ್ನೂ ನೀಡುತ್ತಾ ನೆಮ್ಮದಿಯನ್ನು ಕೆಡಿಸುತ್ತವೆ. ಈಗಲೇ ಚಿವುಟಿ ತೆಗೆಯುವ ಎಂದು ಮನ ಹೇಳಿದರೆ ಬೇಡ, ಬಳಿಕ ಕಲೆ ಉಳಿಯುತ್ತದೆ ಎಂದು ವಿವೇಕ ಹೇಳುತ್ತದೆ. ಇವೆರಡರ ನಡುವಣ ಕಲಹದಲ್ಲಿ ಮನ ಮುದುಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ನೂರಾರು ಔಷಧಿ, ಕ್ರೀಂಗಳು ಲಭ್ಯವಿವೆ. ಆದರೆ ಮೊಡವೆಗಳಿಗೆ ಖಡಾಖಂಡಿತವಾದ ಔಷಧಿ ಇದುವರೆಗೆ ಲಭ್ಯವಿಲ್ಲ. ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಅಲ್ಲದೇ ಈ ಔಷಧಿಗಳಲ್ಲಿರುವ ಪ್ರಬಲ ರಾಸಾಯನಿಕಗಳು ಕೆಲವರಿಗೆ ಅಲರ್ಜಿಕಾರಕವಾಗಿದ್ದು ಚರ್ಮದ ಮೇಲೆ ಶಾಶ್ವತವಾದ ಹಾನಿಯನ್ನೂ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಎಲೆಗಳು ನಿಮ್ಮ ನೆರವಿಗೆ ಬರಲಿವೆ. ತುಳಸಿ ಎಲೆಗಳು ಹಲವು ರೀತಿಯಲ್ಲಿ ಅರೋಗ್ಯಕ್ಕೆ ಪೂರಕವಾಗಿವೆ. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

ಇವುಗಳ ರೋಗಾಣುಹಾರಕ (germicidal) ಶಿಲೀಂಧ್ರನಾಶಕ (fungicidal), ಜೀವಿರೋಧಿ (anti-bacterial) ಮತ್ತು ಪ್ರತಿಜೀವಕ (anti-biotic) ಗುಣಗಳು ದೇಹವನ್ನು ಹಲವು ರೀತಿಯಿಂದ ರಕ್ಷಿಸುತ್ತವೆ. ಅಲ್ಲದೇ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ಹಲವು ರೋಗಗಳನ್ನು ಬರದಂತೆ ತಡೆಯುತ್ತದೆ. ಮೊಡವೆಗಳಿಗೆ ತುಳಸಿ ಯಾವ ರೀತಿಯ ಆರೈಕೆ ನೀಡುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಹಬೆಯ ಮೂಲಕ ಚಿಕಿತ್ಸೆ

ಹಬೆಯ ಮೂಲಕ ಚಿಕಿತ್ಸೆ

ನಮ್ಮ ಚರ್ಮ ವಾಸ್ತವವಾಗಿ ಅತಿಸೂಕ್ಷ್ಮವಾದ ರಂಧ್ರಗಳನ್ನು ಹೊಂದಿದೆ. ಹಬೆಗೆ ಚರ್ಮವನ್ನು ಒಡ್ಡುವುದರಿಂದ ಈ ರಂಧ್ರಗಳು ಹಿಗ್ಗಿ ಇದರೊಳಗೆ ಸಿಕ್ಕಿಕೊಂಡಿದ್ದ ಕಲ್ಮಶಗಳು ಹೊರಬಂದು ಚರ್ಮ ಶುದ್ದವಾಗುತ್ತದೆ. ಈ ಹಬೆಯ ನೀರಿಗೆ ಕೆಲವು ತುಳಸಿ ಎಲೆಗಳನ್ನು ಸೇರಿಸುವುದರಿಂದ ಹಬೆಯ ಗುಣವನ್ನು ಆಗಾಧ ಪ್ರಮಾಣದಲ್ಲಿ ಹೆಚ್ಚಿಸಬಹುದು.

ಹಬೆಯ ಮೂಲಕ ಚಿಕಿತ್ಸೆ

ಹಬೆಯ ಮೂಲಕ ಚಿಕಿತ್ಸೆ

ಇದಕ್ಕಾಗಿ ಹಬೆಯಾಡುತ್ತಿರುವ ಬಿಸಿನೀರಿಗೆ ಸುಮಾರು ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಕೈಯಲ್ಲಿಯೇ ಸಾಕಷ್ಟು ಹಿಚುಕಿ ಸೇರಿಸಿ ಕೊಂಚ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ, ಮೊಡವೆಗಳಿಗೆ ಕಾರಣವಾಗುವ ಚರ್ಮದಡಿಯ ಕೊಳಕನ್ನೂ ಮೂಲದಿಂದ ಕಿತ್ತೆಸೆಯುತ್ತದೆ.

ಮುಖಲೇಪ ತಯಾರಿಸಿ

ಮುಖಲೇಪ ತಯಾರಿಸಿ

ಮುಖದ ಕಾಂತಿ ಹೆಚ್ಚಿಸಲು ಮುಖಲೇಪಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಹಚ್ಚುವುದರಿಂದ ಚರ್ಮ ಸೆಡೆತಗೊಂಡು ನೆರಿಗೆಗಳು ಮಾಯವಾಗುತ್ತವೆ ಹಾಗೂ ಮೊಡವೆಗಳು ಕಡಿಮೆಯಾಗಲೂ ನೆರವಾಗುತ್ತದೆ. ಈ ಮುಖಲೇಪದಲ್ಲಿ ತುಳಸಿಯ ಅಂಶವಿದ್ದರೆ ಈ ಗುಣಗಳು ಇನ್ನಷ್ಟು ಹೆಚ್ಚು ಫಲಪ್ರದವಾಗುತ್ತವೆ.

ಮುಖಲೇಪ ತಯಾರಿಸಿ

ಮುಖಲೇಪ ತಯಾರಿಸಿ

ಇದಕ್ಕಾಗಿ ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಘಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ತುಳಸಿ ಟೋನರ್

ತುಳಸಿ ಟೋನರ್

ಟೋನರ್ ಅಥವಾ ಚರ್ಮವನ್ನು ಕೊಂಚ ಆಳದಲ್ಲಿ ಸ್ವಚ್ಛಗೊಳಿಸುವ ದ್ರವದ ರೂಪದಲ್ಲಿಯೂ ತುಳಸಿ ಎಲೆಗಳನ್ನು ಬಳಸಬಹುದು. ಮೊಡವೆಗಳಿಗೆ ಕಾರಣವಾಗುವ ದ್ರವಗಳು ಚರ್ಮದ ಆಳದಲ್ಲಿ ಸಂಗ್ರಹವಾಗಿ ಹೊರಬರದೇ ಗಟ್ಟಿಯಾಗುವುದರಿಂದ ಆರೈಕೆ ಚರ್ಮದ ಬುಡಕ್ಕೆ ದೊರಕಬೇಕು. ಇದಕ್ಕಾಗಿ ಸುಲಭ ಉಪಾಯವೆಂದರೆ ಕೆಲವು ಹಸಿ ತುಳಸಿ ಎಲೆಗಳನ್ನು ಒಂದೆರಡು ಹನಿ ನೀರಿನೊಂದಿಗೆ ಅರೆದು ನೇರವಾಗಿ ಮೊಡವೆಯ ಮೇಲೆ ಹಚ್ಚಿಕೊಳ್ಳುವುದು. ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಹಚ್ಚಿಕೊಳ್ಳಬಹುದು.

ತುಳಸಿ ಟೋನರ್

ತುಳಸಿ ಟೋನರ್

ಇನ್ನೂ ಉತ್ತಮ ವಿಧಾನವೆಂದರೆ ಟೋನರ್ ದ್ರವನ್ನು ತಯಾರಿಸಿಕೊಳ್ಳುವುದು. ಇದಕ್ಕಾಗಿ ಒಂದು ಕಪ್ ನೀರನ್ನು ಕುದಿಸಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಸುಮರು ಹತ್ತು ತುಳಸಿ ಎಲೆಗಳನ್ನು ಕೈಯಲ್ಲಿ ಕಿವುಚಿ ಹಾಕಿ ಮುಚ್ಚಳ ಮುಚ್ಚಿ. ಹಸಿ ಎಲೆಗಳು ಲಭ್ಯವಿಲ್ಲದಿದ್ದರೆ ಒಣ ಎಲೆಗಳನ್ನು ಪುಡಿ ಮಾಡಿಯೂ ಹಾಕಬಹುದು. ಸುಮಾರು ಹತ್ತು ನಿಮಿಷ ಈ ನೀರು ಕುದಿಯಲಿ. ಬಳಿಕ ಮುಚ್ಚಳ ಮುಚ್ಚಿಯೇ ಇರುವಂತೆ ಒಂದು ಬದಿಯಲ್ಲಿ ತಣಿಯಲು ಬಿಡಿ.

ತುಳಸಿ ಟೋನರ್

ತುಳಸಿ ಟೋನರ್

ನೀರು ತಣಿದ ಬಳಿಕ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಹತ್ತಿಯುಂಡೆಯಲ್ಲಿ ಮುಳುಗಿಸಿ ಮುಖವನ್ನು ಹೆಚ್ಚಿನ ಒತ್ತಡವಿಲ್ಲದೇ ಒರೆಸಿ ಒಣಗಲು ಬಿಡಿ. ಸುಮಾರು ಒಂದೆರಡು ಘಂಟೆ ಬಳಿಕ ತಣ್ಣೀರಿನಿಂದ ಮುಖ ತೊಳೆದು ಇನ್ನೊಮ್ಮೆ ಹಚ್ಚಿ. ದಿನಕ್ಕೆ ನಾಲ್ಕಾರು ಬಾರಿ ಇದನ್ನು ಉಪಯೋಗಿಸಿ. ಇದರಿಂದ ಚರ್ಮದ ಅಡಿಗೂ ಪೋಷಣೆ ಲಭಿಸಿ ಮೊಡವೆಗಳಿಂದ ಮುಕ್ತಿ ದೊರಕುವುದು ಮಾತ್ರವಲ್ಲ, ಮುಂದಿನ ದಿನಗಳಲ್ಲೂ ಮೊಡವೆಯಾಗದಂತೆ ರಕ್ಷಣೆ ಸಿಗುತ್ತದೆ.

English summary

How Tulsi Can Cure Acne

Those small red colored bumps on the skin are not only embarrassing but can be rather painful. There are many products in the market that swear to get rid of pimples and acne. While some do work to an extent, the chances of getting relief are very slim. Besides, the chemical composition of these products can cause more harm than benefit. In such circumstances, it is worth knowing how tulsi leaves can cure acne.
X
Desktop Bottom Promotion