For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದವನ್ನು ಇಮ್ಮಡಿಸುವ ಫೇಸ್‌ ಪ್ಯಾಕ್

|

ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಸೌಂದರ್ಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ. ಹಾಲಿನಂತಹ ಬಿಳುಪುಳ್ಳ ತ್ವಚೆ ನಿಮ್ಮದಾಗಬೇಕೆ?

ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಇಂತಹ ಸ್ವಾಭಾವಿಕ ಉತ್ಪನ್ನಗಳಲ್ಲಿ ಕೆಲವೊಂದನ್ನು ಇಲ್ಲಿ ಪರಿಚಯಿಸಲಾಗಿದ್ದು ಇದನ್ನು ಬಳಸುವುದರಿಂದ ನಮ್ಮ ತ್ವಚೆಗೆ ಅದ್ಭುತವಾದ ಹೊಳಪನ್ನು ನಾವು ನೀಡಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ಸೀಬೆಹಣ್ಣಿನ ಎಲೆ

ಸೀಬೆಹಣ್ಣಿನ ಎಲೆ

ಸೀಬೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಅಧಿಕವಾಗಿದೆ. ಅಧ್ಯಯನಗಳ ಪ್ರಕಾರ ಇದರ ಎಲೆಗಳಲ್ಲಿ ಹಣ್ಣಿಗಿಂತ ಹೆಚ್ಚು ಸ್ವತಂತ್ರ ರಾಡಿಕಲ್ ಶೇಖರಿಸುವ ಗುಣವಿದೆ. ಇದರಿಂದ ಇದು ನೆರಿಗೆಯನ್ನು ದೂರವಿಡಲು ನೆರವಾಗುತ್ತದೆ. ಇದನ್ನು ಹೊರತುಪಡಿಸಿ ಎಲೆಗಳಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣಗಳಿವೆ ಮತ್ತು ಇದು ನೆರಿಗೆ ಬೀಳುವುದನ್ನು ತಡೆಯುತ್ತದೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಳಸುವ ವಿಧಾನ

ಬಳಸುವ ವಿಧಾನ

ಸೀಬೆಕಾಯಿಯ ಕೆಲವು ಎಲೆಗಳನ್ನು ತೆಗೆದುಕೊಂಡು, ಇದನ್ನು ಚೆನ್ನಾಗಿ ಹುಡಿ ಮಾಡಿ ಬಿಸಿ ನೀರಿನ ಒಂದು ಪಾತ್ರೆಗೆ ಹಾಕಿ. ನೀರನ್ನು ಸರಿಯಾಗಿ ಕುದಿಸಿ ಮತ್ತು ನೀರು ಕಂದು ಬಣ್ಣಕ್ಕೆ ತಿರುಗುವ ತನಕ ಅದು ಕುದಿಯುತ್ತಾ ಇರಲಿ. ಇದನ್ನು ತಂಪಾಗಲು ಬಿಡಿ ಮತ್ತು ಹತ್ತಿಯ ಉಂಡೆ ಮಾಡಿ ಅದನ್ನು ಈ ನೀರಿನಲ್ಲಿ ಮುಳುಗಿಸಿ ನಿಮ್ಮ ಮುಖ ಅಥವಾ ಯಾವ ಭಾಗಕ್ಕೆ ಚಿಕಿತ್ಸೆ ನೀಡಲು ಬಯಸುತ್ತೀರೋ ಅಲ್ಲಿಗೆ ಹಚ್ಚಿ. ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಹಾಗೆ ಇರಲಿ. ಇದರ ಬಳಿಕ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡುವುದರಿಂದ ಫಲಿತಾಂಶ ಪಡೆಯಬಹುದು.

ನುಗ್ಗೆ ಸೊಪ್ಪಿನ ಫೇಸ್ ಪ್ಯಾಕ್

ನುಗ್ಗೆ ಸೊಪ್ಪಿನ ಫೇಸ್ ಪ್ಯಾಕ್

ಚರ್ಮ ಸಹಜ ಕಾಂತಿ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಮುಖಲೇಪಗಳು ಲಭ್ಯವಿವೆ. ಆದರೆ ದುಬಾರಿಯಾದ ಇವುಗಳ ಬದಲಿಗೆ ಸುಲಭವಾಗಿ ಇನ್ನಷ್ಟು ಪರಿಣಾಮಕಾರಿಯಾದ ಮುಖಲೇಪವನ್ನು ನಾವೇ ತಯಾರಿಸಿಕೊಳ್ಳಬಹುದು. ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಆಲೋವೆರಾ ಅಥವಾ ಲೋಳೆಸರ ಗಿಡ

ಆಲೋವೆರಾ ಅಥವಾ ಲೋಳೆಸರ ಗಿಡ

ಆಲೋವೆರಾ ಅಥವಾ ಲೋಳೆಸರ ಮರಳಿನಲ್ಲಿ ಬೆಳೆಯುವ ಒಂದು ಸಸ್ಯವಾಗಿದ್ದು ಚರ್ಮದ ಆರೈಕೆಗೆ ಅತ್ಯುತ್ತಮವಾಗಿದೆ. ಒಂದು ವೇಳೆ ನಿಮಗೆ ಮೊಡವೆಗಳ ತೊಂದರೆಯಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡುತ್ತದೆ.ಬಿಸಿಲಿನಿಂದ ಚರ್ಮ ಕಳೆಗುಂದಿದ್ದರೆ ಅಥವಾ ಸುಟ್ಟಂತೆ ಆಗಿದ್ದರೆ ಲೋಳೆಸರದ ಆರೈಕೆಯಿಂದ ಶೀಘ್ರವೇ ತ್ವಚೆ ಮೊದಲಿನ ಹೊಳಪನ್ನು ಪಡೆಯುತ್ತದೆ. ಬಿಸಿಲಿನ ಝಳದಿಂದ ರಕ್ಷಿಸುವ ಮೂಲಕ ಚರ್ಮವನ್ನು ತಂಪಾಗಿಡಲೂ ನೆರವಾಗುತ್ತದೆ.

ಗುಲಾಬಿ ಹೂವಿನ ದಳ

ಗುಲಾಬಿ ಹೂವಿನ ದಳ

ಪ್ರಿಯತಮೆಯ ಹೃದಯ ಗೆಲ್ಲಲು ಉಪಯೋಗವಾಗುವ ಹೂವಿನ ದಳಗಳು ಚರ್ಮದ ಆರೈಕೆಗೆ ಉತ್ತಮವಾಗಿವೆ. ಇದರ ದಳಗಳಲ್ಲಿ ಚರ್ಮಕ್ಕೆ ಆದ್ರತೆ ನೀಡುವ ಗುಣವಿದ್ದು ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತದೆ.ಇದಕ್ಕಾಗಿ ಕೆಲವು ಹೂಗಳ ದಳಗಳನ್ನು ಚೆನ್ನಾಗಿ ಅರೆದು ಲೇಪನವನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಅರ್ಧಗಂಟೆ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು.

ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಅಡಗಿವೆ. ಮೊದಲು ಬಾಳೆಹಣ್ಣನ್ನು ಚೆನ್ನಾಗಿ ರುಬ್ಬಿಕೊಂಡು, ಅದಕ್ಕೆ ಒಂದು ಟೀ ಚಮಚ ಜೇನು ತುಪ್ಪ ಮತ್ತು ಲಿಂಬೆ ರಸದ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಬಿಟ್ಟು, ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳ ಸಮಸ್ಯೆ ದೂರಾಗುತ್ತದೆ.

English summary

How to Get Clear Skin Using Home Remedies

Many people overlook the importance of good skincare until they have blemishes, acne, or dark spots. Skin is your largest organ and it protects you from UV radiation, supports your inner organs, and acts as a barrier from the outside environment. It contains nerve endings, fights infections, and helps maintain body temperature, There are many remedies you can utilize to achieve healthy, clear skin.
X
Desktop Bottom Promotion