For Quick Alerts
ALLOW NOTIFICATIONS  
For Daily Alerts

ಚರ್ಮದ ಕೋಮಲತೆಗೆ ಒಮ್ಮೆ ಪ್ರಯತ್ನಿಸಿ ಮಗುವಿನ ಎಣ್ಣೆ

By manu
|

ಶೇಂಗಾ ಎಣ್ಣೆಯನ್ನು ಶೇಂಗಾದಿಂದ ಹಿಂಡಿ ತೆಗೆಯುತ್ತರೆ. ಕೊಬ್ಬರಿ ಎಣ್ಣೆಯನ್ನು ಕೊಬ್ಬರಿ ಎಣ್ಣೆಯಿಂದ ಹಿಂಡಿ ತೆಗೆಯುತ್ತಾರೆ, ಎಳ್ಳೆಣ್ಣೆಯನ್ನು ಎಳ್ಳಿನಿಂದ ಹಿಂಡಿ ತೆಗೆಯುತ್ತಾರೆ. ಹಾಗಿದ್ದರೆ ಮಗುವಿನ ಎಣ್ಣೆಯನ್ನು? .... ನಗು ಬರಿಸುವ ಈ ತರಲೆ ಪ್ರಶ್ನೆಗೆ ಉತ್ತರ ಕೊಡುವುದು ಕೊಂಚ ಕಷ್ಟ. ಆದರೆ ಮಗುವಿನ ಎಣ್ಣೆಯನ್ನು ಯಾವುದೇ ತರಹದ ಚರ್ಮಕ್ಕೂ ಬಳಸುವುದು ಮಾತ್ರ ತುಂಬಾ ಸುಲಭ.

ಏಕೆಂದರೆ ಇದು ಅತ್ಯಂತ ಮೃದು, ಕೋಮಲ ಹಾಗೂ ನಿರಪಾಯಕಾರಿಯಾಗಿದ್ದು ಮಗುವಿನ ಕೋಮಲ ತ್ವಚೆಗೆ ನೀಡುವ ಆರೈಕೆಯನ್ನೇ ನೀಡುತ್ತದೆ. ಅಲ್ಲದೇ ಮಗುವಿನ ಎಣ್ಣೆ ಕೂದಲಿಗೂ ಉತ್ತಮವಾಗಿದ್ದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ ಹಾಗೂ ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ತಲೆಯಲ್ಲಿ ಯಾವುದಾದರೂ ಸೋಂಕು ಇದ್ದ ಸಮಯದಲ್ಲಿ ಹಚ್ಚಲು ಅತ್ಯುತ್ತಮವಾದ ಎಣ್ಣೆಯಾಗಿದೆ.

ಚರ್ಮದಲ್ಲಿ ತುರಿಕೆ, ಕೆಂಪಗಾಗುವುದು, ಪುಡಿಯಂತೆ ಚರ್ಮ ಪಕಳೆಯೇಳುವುದು ಮೊದಲಾದ ತೊಂದರೆಗಳಿಗೆ ಮಗುವಿನ ಎಣ್ಣೆಯನ್ನು ಹಚ್ಚಿಕೊಂಡರೆ ಉತ್ತಮ ಪರಿಹಾರ ದೊರಕುತ್ತದೆ. ಆಲಿವ್ ಎಣ್ಣೆಯಂತೆಯೀ ಈ ಎಣ್ಣೆಯಲ್ಲಿಯೂ ಉರಿ ತಗ್ಗಿಸುವ ಗುಣವಿರುವ ಕಾರಣ ಚರ್ಮಕ್ಕೆ ಉತ್ತಮವಾಗಿದೆ. ತಜ್ಞರ ಪ್ರಕಾರ ಇದರೊಂದಿಗೆ ಕೆಲವು ಅವಶ್ಯಕ ತೈಲಗಳನ್ನು ಬೆರೆಸಿ ಬಳಸುವ ಮೂಲಕ ಇನ್ನೂ ಹೆಚ್ಚಿನ ಆರೈಕೆ ಪಡೆಯಬಹುದು.

ಅದರಲ್ಲೂ ಒಂದು ಕೈಯಲ್ಲಿ ಹಿಡಿಯುವಷ್ಟು ಎಣ್ಣೆಗೆ ಒಂದು ದೊಡ್ಡಚಮಚ ಬಾದಾಮಿ ಎಣ್ಣೆ ಸೇರಿಸಿದರೆ ವ್ಯಾಕ್ಸಿಂಗ್ ವಿಧಾನದ ಮೂಲಕ ಕೂದಲು ನಿವಾರಿಸಿದ ಸ್ಥಳದಲ್ಲಿ ಹಚ್ಚಿಕೊಳ್ಳಲು ಉತ್ತಮವಾಗಿದೆ. ಇದು ಒಂದೇ ವಾರದಲ್ಲಿ ಕೂದಲು ನಿವಾರಣೆಯಾದ ಚಿಕ್ಕ ದದ್ದುಗಳನ್ನು ಮತ್ತು ಉರಿಯನ್ನು ನಿವಾರಿಸುತ್ತದೆ.

ಈ ಎಣ್ಣೆಗೆ ಕೊಂಚ ಲ್ಯಾವೆಂಡರ್ ಹೂವಿನ ಎಣ್ಣೆಯನ್ನು ಸೇರಿಸಿದರೆ ಕಳೆಗುಂದಿರುವ ಚರ್ಮ ಕಳೆ ಪಡೆದುಕೊಳ್ಳುತ್ತದೆ. ಅಲ್ಲದೇ ಮುಖದಿಂದ ಮೇಕಪ್ ನಿವಾರಿಸಲೂ ಈ ಎಣ್ಣೆ ಉತ್ತಮವಾಗಿದೆ. ಇದು ಚರ್ಮದ ಮೇಲೆ, ವಿಶೇಷವಾಗಿ ಚರ್ಮದ ರಂಧ್ರಗಳಲ್ಲಿ ಕುಳಿತುಕೊಂಡಿದ್ದ ಮೇಕಪ್ ಪದರವನ್ನೂ ನಿವಾರಿಸಲು ಸಕ್ಷಮವಾಗಿದೆ. ಬನ್ನಿ ಈ ಎಣ್ಣೆ ಹಿರಿಯರಿಗೇಕೆ ಇಷ್ಟ ಎಂಬುದಕ್ಕೆ ಕಾರಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಚರ್ಮಕ್ಕೆ ಪೋಷಣೆ ನೀಡುತ್ತದೆ

ಚರ್ಮಕ್ಕೆ ಪೋಷಣೆ ನೀಡುತ್ತದೆ

ಒಂದು ವೇಳೆ ಆರ್ದ್ರತೆಯ ಕೊರತೆಯಿಂದ ಚರ್ಮ ವಿಪರೀತವಾಗಿ ಒಣಗಿದ್ದರೆ ಕೊಂಚ ಬಿಸಿಮಾಡಿದ ಮಗುವಿನ ಎಣ್ಣೆಯನ್ನು ಚರ್ಮಕ್ಕೆ ನವಿರಾಗಿ ಹಚ್ಚಿಕೊಳ್ಳಿ, ಇದು ಚರ್ಮದ ಒಣಗಿರುವ ಭಾಗದಲ್ಲಿ ಪೋಷಣೆ ನೀಡುವ ಮೂಲಕ ಕಾಂತಿಯನ್ನು ಹೆಚ್ಚಿಸಿ ಕೋಮಲವಾಗಿಸುತ್ತದೆ. ಕೇವಲ ಒಂದೇ ವಾರದಲ್ಲಿ ಒಣಚರ್ಮದ ತೊಂದರೆ ನಿವಾರಣೆಯಾಗುತ್ತದೆ.

ಚರ್ಮಕ್ಕೆ ಕಾಂತಿ ನೀಡುತ್ತದೆ

ಚರ್ಮಕ್ಕೆ ಕಾಂತಿ ನೀಡುತ್ತದೆ

ಕಾಂತಿ ಕಳೆದುಕೊಂಡ ಚರ್ಮ ಪೋಷಣೆಯ ಕೊರತೆಯನ್ನು ತೋರುತ್ತದೆ. ಇದಕ್ಕಾಗಿ ಮಗುವಿನ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಚರ್ಮದಡಿಯಲ್ಲಿರುವ ತೈಲಗ್ರಂಥಿಗಳಿಗೆ ಪ್ರಚೋದನೆ ದೊರೆತು ಚರ್ಮದ ನೈಸರ್ಗಿಕ ತೈಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಸಹಜಕಾಂತಿಯನ್ನು ಹೆಚ್ಚಿಸುತ್ತದೆ.

ಸೂಕ್ಷ್ಮ ತ್ವಚೆಗೂ ಸೂಕ್ತವಾಗಿದೆ

ಸೂಕ್ಷ್ಮ ತ್ವಚೆಗೂ ಸೂಕ್ತವಾಗಿದೆ

ಕೆಲವರ ಚರ್ಮ ಅತ್ಯಂತ ಸೂಕ್ಷ್ಮವಾಗಿದ್ದು ಕೊಂಚ ಪ್ರಖರವಾಗಿದ್ದರೂ ಅಲರ್ಜಿಯುಂಟುಮಾಡುತ್ತದೆ. ಇಂತಹವರಿಗೆ ಮಗುವಿನ ಎಣ್ಣೆ ಹೇಳಿ ಮಾಡಿಸಿದಂತಿದೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಸುರಕ್ಷಿತವಾಗಿ ಬಳಸಬಹುದು.

ಮಸ್ಕಾರ ತೆಗೆಯಲೂ ಶಕ್ತವಾಗಿದೆ

ಮಸ್ಕಾರ ತೆಗೆಯಲೂ ಶಕ್ತವಾಗಿದೆ

ಕಣ್ಣಿನ ಕೂದಲುಗಳಿಗೆ ಹಚ್ಚಿಕೊಂಡ ಮಸ್ಕಾರ ವನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಇದಕ್ಕೆ ಒಂದು ಸುಲಭಮಾರ್ಗವಿದೆ. ಹತ್ತಿಯುಂಡೆಯೊಂದಕ್ಕೆ ಒಂದೆರಡು ಹನಿ ಮಗುವಿನ ಎಣ್ಣೆಯನ್ನು ಹಚ್ಚಿ ಇದನ್ನು ಕೂದಲುಗಳ ನಡುವೆ ಇರಿಸಿ ನಿಧಾನವಾಗಿ ಎಳೆಯಿರಿ. ಮಸ್ಕಾರ ಸುಲಭವಾಗಿ ಕರಗಿ ಹೊರಬರುತ್ತದೆ. ಮೇಕಪ್ ನಿವಾರಿಸಿದ ಬಳಿಕ ಮುಖಕ್ಕೆ ಇದೇ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡಿ.

ಉಗುರುಗಳಿಗೂ ಉತ್ತಮವಾಗಿದೆ

ಉಗುರುಗಳಿಗೂ ಉತ್ತಮವಾಗಿದೆ

ಉಗುರುಗಳು ದೃಢವಾಗಿರಲು ಉಗುರುಗಳ ಬುಡಕ್ಕೆ ಉತ್ತಮ ಪೋಷಣೆ ಅಗತ್ಯ. ಇದಕ್ಕಾಗಿ ಉಗುರಿನ ಮೇಲೆ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವ ಮೂಲಕ ಸಂದುಗಳಿಂದ ಉತ್ತಮ ಪೋಷಣೆ ಪಡೆಯುತ್ತದೆ ಹಾಗೂ ನೈಸರ್ಗಿಕ ಹೊಳಪನ್ನೂ ಪಡೆಯುತ್ತದೆ.

ಒಡೆದ ಹಿಮ್ಮಡಿಗಳನ್ನು ತುಂಬಿಸುತ್ತದೆ

ಒಡೆದ ಹಿಮ್ಮಡಿಗಳನ್ನು ತುಂಬಿಸುತ್ತದೆ

ಸಾಮಾನ್ಯವಾಗಿ ಪಾದಗಳ ಹಿಮ್ಮಡಿಯಲ್ಲಿ ಬಿರುಕುಗಳು ಆಳವಾಗಿದ್ದು ಕೆಲವೊಮ್ಮೆ ನೋವಿನಿಂದಲೂ ಕೂಡಿರುತ್ತವೆ. ಇದನ್ನು ನಿವಾರಿಸಲು ಕಾಲು ಮುಳುಗಿಸಲು ಸಾಧ್ಯವಾಗುವಷ್ಟು ಬಿಸಿನೀರಿನಲ್ಲಿ ಕೊಂಚ ಸೋಪು ಹಾಕಿ ಕಲಕಿ ಸುಮಾರು ಇಪ್ಪತ್ತು ನಿಮಿಷದಿಂದ ಅರ್ಧ ಗಂಟೆ ಪಾದಗಳನ್ನು ನೆನೆಸಿಡಿ. ಬಳಿಕ ಪಾದಗಳನ್ನು ಉಜ್ಜುವ ಯಾವುದೇ ಉಪಕರಣ ಅಥವಾ ಕಲ್ಲನ್ನು ಉಪಯೋಗಿಸಿ ಹಿಮ್ಮಡಿಯ ಚರ್ಮವನ್ನು ಕೆರೆಯಿರಿ. ಬಳಿಕ ತಣ್ಣೀರಿನಲ್ಲಿ ತೊಳೆದು ಸ್ವಚ್ಛವಾದ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿ. ಬಳಿಕ ಮಗುವಿನ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ಇಡಿಯ ಪಾದಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ವಿಧಾನ ಆಚರಿಸಿದರೆ ಕೆಲವೇ ದಿನಗಳಲ್ಲಿ ಬಿರುಕುಗಳು ತುಂಬಿಕೊಂಡು ಚರ್ಮ ನಯವಾಗುತ್ತದೆ.

ಕೂದಲಿಗೂ ಉತ್ತಮವಾಗಿದೆ

ಕೂದಲಿಗೂ ಉತ್ತಮವಾಗಿದೆ

ತಲೆಗೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳುವ ಮೂಲಕ ಒಣಚರ್ಮ ಮತ್ತು ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು. ಅಲ್ಲದೇ ಕೂದಲ ಬುಡಕ್ಕೆ ಉತ್ತಮ ಪೋಷಣೆ ನೀಡುವ ಮೂಲಕ ಕೂದಲು ಸ್ವಾಭಾವಿಕ ಬಣ್ಣ ಮತ್ತು ಹೊಳಪು ಪಡೆಯಲು ನೆರವಾಗುತ್ತದೆ.


Read in english - How Does Baby Oil Benefit Adult Skin?

English summary

How Does Baby Oil Benefit Adult Skin?

Baby oil is mild in nature and it is the best oil to use on any type of skin. Adults should use baby oil if they have sensitive skin as it helps soothe the skin, making it supple and soft to touch. Baby oil is also healthy for the hair and it helps nourish the scalp and get rid of dandruff. It is also the best oil to apply on the scalp if there is any infection.
Story first published: Wednesday, November 18, 2015, 11:49 [IST]
X
Desktop Bottom Promotion