For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವರೋಗ ಪರಿಹಾರ ಶಕ್ತಿ-ಟೊಮೇಟೊ ಜ್ಯೂಸ್‌

By Arshad
|

ಚರ್ಮದ ಆರೈಕೆಗೆ ಟೊಮೇಟೋ ಉತ್ತಮವೇ? ಈ ಪ್ರಶ್ನೆಗೆ ಸೌಂದರ್ಯತಜ್ಞರು ಹೌದು ಎಂದೇ ಉತ್ತರಿಸುತ್ತಾರೆ. ಏಕೆಂದರೆ ಟೊಮೇಟೊಗೆ ಕೆಂಪು ಬಣ್ಣ ಬರಲು ಕಾಣವಾದ ಲೈಕೋಪೀನ್ ಎಂಬ ಪೋಷಕಾಂಶ ಚರ್ಮದ ಆರೈಕೆಗೆ ಉತ್ತಮವಾಗಿದೆ. ಇನ್ನೂ ಕೆಲವು ಸೌಂದರ್ಯತಜ್ಞರ ಪ್ರಕಾರ ಟೊಮೇಟೊ ಹಣ್ಣನ್ನು ಬಳಸಿ ಸೂರ್ಯನ ಪ್ರಖರ ಅತಿನೇರಳೆ ಕಿರಣಗಳ ಪ್ರಭಾವದಿಂದಲೂ ರಕ್ಷಣೆ ಪಡೆಯಬಹುದು.

ಆದರೆ ಇದಕ್ಕೆ ಟೊಮೇಟೊವನ್ನು ಹೇಗೆ ಬಳಸಬೇಕು ಎಂದು ತಿಳಿದಿರುವುದು ಅವಶ್ಯ. ನಿಯಮಿತವಾಗಿ ಟೊಮೇಟೊ ತಿರುಳನ್ನು ಚರ್ಮಕ್ಕೆ ಹಚ್ಚಿಕೊಳ್ಳುತ್ತಾ ಬಂದರೆ ನೆರಿಗೆಗಳು ಮೂಡುವ ಕ್ರಿಯೆ ನಿಧಾನವಾಗಿ ಮುಪ್ಪನ್ನೂ ಮುಂದೂಡಬಹುದು. ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!

ಟೊಮೇಟೊ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಚರ್ಮಕ್ಕೆ ಒಳಗಿನಿಂದ ಉತ್ತಮ ಪೋಷಣೆ ದೊರಕುವ ಕಾರಣ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಉತ್ತಮ ಸೆಳೆತ ಪಡೆಯುತ್ತದೆ. ಇದು ವಯಸ್ಸಿಗೂ ಮುನ್ನ ಚರ್ಮದಲ್ಲಿ ನೆರಿಗೆ ಬೀಳುವುದನ್ನು ತಡೆಯುತ್ತದೆ. ಆದರೆ ಈ ಆರೈಕೆ ಎಲ್ಲಾ ಪ್ರಕಾರದ ಚರ್ಮಗಳಿಗೆ ಸಮಾನವಾದ ಪರಿಣಾಮ ಬೀರದು. ಹುಳಿ ಸ್ವಾದಕ್ಕೆ ಹೆಸರಾಗಿರುವ ಟೊಮೇಟೊ ಹಣ್ಣಿನ ಪ್ರಯೋಜನಗಳೇನು?

ಆದ್ದರಿಂದ ಈ ಆರೈಕೆಯನ್ನು ಬಳಸುವ ಮುನ್ನ ಚರ್ಮತಜ್ಞರ ಸಲಹೆ ಪಡೆದು ಆ ಪ್ರಕಾರ ಮುನ್ನಡೆಯುವುದೇ ಸೂಕ್ತ. ಇಂದು ಟೊಮೇಟೊ ವನ್ನು ಮುಖದ ಮೇಲೆ ಹಚ್ಚಿಕೊಳ್ಳಲು ಸೂಕ್ತವಾದ ಕ್ರಮ ಯಾವುದು ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗುತ್ತಿದೆ.

ಹಂತ #1

ಹಂತ #1

ಸುಮಾರು ಎರಡರಿಂದ ಮೂರು ಮಧ್ಯಮ ಗಾತ್ರದ, ಚೆನ್ನಾಗಿ ಹಣ್ಣಾಗಿರುವ ಟೊಮೇಟೊ ಹಣ್ಣುಗಳ ಬೀಜ ಮತ್ತು ಸಿಪ್ಪೆಯನ್ನು ನಿವಾರಿಸಿ ಕೇವಲ ತಿರುಳನ್ನು ಮಿಕ್ಸಿಯಲ್ಲಿ ಕಡೆದು ದ್ರಾವಣವನ್ನು ತಯಾರಿಸಿ. (ಒಂದು ವೇಳೆ ಮುಖದ ಮೇಲೆ ಮೊಡವೆಗಳಿದ್ದರೆ ಟೊಮೇಟೊ ಹಣ್ಣೊಂದರ ತುಂಡಿನ ಒಳಭಾಗದಿಂದ ಮೊಡವೆಯ ಮೇಲೆ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಿ. ಸುಮಾರು ಹತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.)

ಹಂತ #2

ಹಂತ #2

ಟೊಮೇಟೊ ದ್ರಾವಣವನ್ನು ಹತ್ತಿಯುಂಡೆಯನ್ನು ಬಳಸಿ ಈಗತಾನೇ ತೊಳೆದ ಮುಖದ ಮೇಲೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಉಜ್ಜಿಕೊಳ್ಳುತ್ತಾ ಸಾಕಷ್ಟು ರಸ ಮುಖದ ಮೇಲೆ ಆವರಿಸುವಂತೆ ನೋಡಿಕೊಳ್ಳಿ.

ಹಂತ #3

ಹಂತ #3

ಈ ರಸ ಮುಖದ ಮೇಲೆ ಒಣಗುವಂತೆ ಮಾಡಿ ಒಂದು ಘಂಟೆ ಕಾಲ ಹಾಗೇ ಬಿಡಿ. ಈ ಅವಧಿಯಲ್ಲಿ ಟೊಮೇಟೊ ರಸದಲ್ಲಿರುವ ಪೋಷಕಾಂಶಗಳು ಮತ್ತು ಕೊಂಚ ಆಮ್ಲೀಯತೆ ಮುಖವನ್ನು ತುರಿಸಲು ಪ್ರೇರೇಪಿಸುತ್ತವೆ. ಆದರೆ ಮನಸ್ಸನ್ನು ನಿಗ್ರಹಿಸಿ ತುರಿಸದಿರಲು ಪ್ರಯತ್ನಿಸಿ. ಸಂಗೀತ ಅಥವಾ ಬೇರಾವುದಾದರೂ ಮಾಧ್ಯಮದಿಂದ ಮನಸ್ಸನ್ನು ಬೇರೆಡೆಗೆ ಹೊರಳಿಸಿ.

ಹಂತ #4

ಹಂತ #4

ಒಂದು ಗಂಟೆಯ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಈಗಲೇ ಚರ್ಮ ಕೊಂಚ ಬಿಗಿಯಾಗಿರುವಂತೆ ಕಂಡುಬರುತ್ತದೆ. ಇದೇ ವಿಧಾನವನ್ನು ವಾರಕ್ಕೊಂದು ಸಲ ನಿಯಮಿತವಾಗಿ ಪುನರಾವರ್ತಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಂತ #4

ಹಂತ #4

ಈ ಕ್ರಮದಿಂದ ಮುಖದ ಮೇಲಿನ ಸೂಕ್ಷ್ಮರಂಧ್ರಗಳು ಕಿರಿದಾಗುತ್ತವೆ ಹಾಗೂ ಧೂಳು ಕುಳಿತುಕೊಳ್ಳುವ ಸಂಭವ ಕಡಿಮೆಯಾಗುತ್ತದೆ. ವಾಸ್ತವವಾಗಿ ಚರ್ಮ ಕೊಂಚ ಸೆಳೆತ ಪಡೆದಿರುವ ಕಾಣದಿಂದಲೇ ರಂಧ್ರಗಳು ಕೊಂಚ ಕಿರಿದಾಗಿದ್ದಂತೆ ಕಾಣುವುದೇ ಹೊರತು ಬೇರಾವ ಕಾರಣಗಳಿಲ್ಲ.


English summary

How To Apply Tomato On Face

Is tomato good for skin? Of course, there are many benefits of tomatoes for skin. They contribute to the lycopene levels which can make your skin appear healthier. In fact, some skin experts also say that tomatoes can protect your skin from the UV rays too. When applied externally, on your skin, they can even prevent wrinkles. So How To Apply Tomato On Face, have a look
X
Desktop Bottom Promotion