For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯಕ್ಕೆ ದುಬಾರಿ ಬೆಲೆಯ ಫೇಸ್‌ಪ್ಯಾಕ್‍ಗಳೇಕೆ?

|

ಹೊಳೆಯುವ ತ್ವಚೆಯಿರುವ ಸುಂದರವಾದ ಮುಖವನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿರುತ್ತದೆ ಅದರಲ್ಲಿಯೂ ಹುಡುಗಿಯರಂತೂ ಕೇಳುವುದೇ ಬೇಡ..! ಆದರೆ ತ್ವಚೆಯಲ್ಲಿ ಅನಿರೀಕ್ಷಿತವಾಗಿ ಕಂಡುಬರುವ ಮೊಡವೆ, ಕಲೆ, ಗೆರೆಗಳು ಮುಂತಾದವು ಅವರ ಈ ಕನಸಿಗೆ ಭಂಗ ತರುತ್ತವೆ. ಆದರೆ ಅದಕ್ಕಾಗಿ ನೀವು ನೀವು ನಿರಾಸೆ ಆಗುವ ಅವಶ್ಯಕತೆ ಇಲ್ಲ. ಈ ಕಲೆಗಳನ್ನು ಮತ್ತು ಸೌಂದರ್ಯದ ಕಂಟಕಗಳನ್ನು ನಿವಾರಿಸಿಕೊಳ್ಳಲು ಹಲವಾರು ಪರಿಹಾರಗಳು ನಿಮ್ಮ ಮನೆಯಲ್ಲಿಯೇ ದೊರೆಯುತ್ತವೆ.

Homemade Face Packs For Fair Skin

ಕೆಲವೊಂದು ಮನೆಯಲ್ಲಿಯೇ ದೊರೆಯುವ ಫೇಸ್‌ಪ್ಯಾಕ್‌ಗಳು ನಿಮ್ಮ ಮುಖವನ್ನು ಸುಂದರವನ್ನಾಗಿ ಮಾಡುತ್ತವೆ. ಇವು ಕಲೆಗಳು ಮತ್ತು ಮೊಡವೆಗಳನ್ನು ನಿವಾರಿಸುತ್ತವೆ ಮತ್ತು ತ್ವಚೆಗೆ ಹೊಳಪನ್ನು ಸಹ ನೀಡುತ್ತವೆ. ಇದನ್ನು ಬಳಸುವುದರಿಂದ ತ್ವಚೆಯು ಮೃದು ಮತ್ತು ಯೌವನದಿಂದ ಕಂಗೊಳಿಸುತ್ತದೆ. ಆದ್ದರಿಂದ ಸ್ವಾಭಾವಿಕವಾದ ಈ ಫೇಸ್ ಪ್ಯಾಕ್‌ಗಳನ್ನು ಬಳಸಿ, ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

ಈ ಸ್ವಾಭಾವಿಕವಾದ ಫೇಸ್‌ಪ್ಯಾಕ್‍ಗಳು ತ್ವಚೆಯನ್ನು ಶಾಶ್ವತವಾಗಿ ಹೊಳೆಯುವಂತೆ ಮಾಡುತ್ತವೆ ಎಂಬುದು ವಿಶೇಷ. ಬನ್ನಿ ಅಂತಹ ಫೇಸ್ ಪ್ಯಾಕ್‌ಗಳನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಮತ್ತು, ಅದಕ್ಕೆ ಅಗತ್ಯವಾದ ಪದಾರ್ಥಗಳು ಯಾವುವು ಎಂದು ಇಂದು ತಿಳಿದುಕೊಳ್ಳೋಣ. ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!

ತುಳಸಿ ಮತ್ತು ಬೇವಿನ ಫೇಸ್ ಪ್ಯಾಕ್


ಈ ಫೇಸ್ ಪ್ಯಾಕ್ ಮಾಡಲು ಎರಡು ಟೀ ಚಮಚ ತುಳಸಿ ಪುಡಿಯನ್ನು ಎರಡು ಟೀ. ಚಮಚ ಬೇವಿನ ಪುಡಿ ಮತ್ತು ಒಂದು ಟೇಬಲ್ ಚಮಚ ಮುಲ್ತಾನಿ ಮಿಟ್ಟಿ ಜೊತೆಗೆ ಬೆರೆಸಿಕೊಳ್ಳಿ. ಇದಕ್ಕೆ ಕೆಲವು ಹನಿ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ. 15 ನಿಮಿಷ ಬಿಟ್ಟು, ನಂತರ ಮುಖವನ್ನು ತೊಳೆಯಿರಿ.

ಹೆಸರು ಕಾಳು ಮತ್ತು ಅರಿಶಿನ ಫೇಸ್ ಪ್ಯಾಕ್


ಎರಡು ಟೀ.ಚಮಚ ಹೆಸರುಕಾಳನ್ನು ಒಂದು ಚಿಟಿಕೆ ಅರಿಶಿನದ ಜೊತೆಗೆ ಬೆರೆಸಿಕೊಳ್ಳಿ. ಇದಕ್ಕೆ ಕೆಲವು ಹನಿ ಹಾಲನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖದ ಮತ್ತು ಕುತ್ತಿಗೆಗೆ ಲೇಪಿಸಿಕೊಂಡು 20 ನಿಮಿಷ ಬಿಡಿ. ಇದು ಒಣಗಿದ ಮೇಲೆ ಇದನ್ನು ಚೆನ್ನಾಗಿ ತೊಳೆಯಿರಿ.

ಎಳ್ಳು ಮತ್ತು ಅರಿಶಿನ
ಎಳ್ಳನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಆಪಲ್ ಸಿಡೆರ್ ವಿನಿಗರ್ ಮತ್ತು ಒಂದು ಚಿಟಿಕೆ ಅರಿಶಿನದ ಜೊತೆಗೆ ಬೆರೆಸಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಬಿಡಿ. ಆಮೇಲೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಶ್ರೀಗಂಧ ಮತ್ತು ರೋಸ್ ವಾಟರ್


ಒಂದು ಟೀ ಚಮಚ ಶ್ರೀಗಂಧಕ್ಕೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಮತ್ತು ಅದಕ್ಕೆ ಕೆಲವು ಹನಿ ರೋಸ್ ವಾಟರ್ ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖ ಮತ್ತು ಕುತ್ತಿಗೆ ಲೇಪಿಸಿ, 20 ನಿಮಿಷ ಬಿಡಿ. ನಂತರ ಇದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಹೊಳೆಯುವುದರಲ್ಲಿ ಸಂಶಯವೇ ಇಲ್ಲ.

ಜೇನು ತುಪ್ಪ ಮತ್ತು ಬೇವಿನ ಫೇಸ್ ಪ್ಯಾಕ್


ಈ ಫೇಸ್ ಪ್ಯಾಕ್ ಮಾಡಲು, ಒಂದು ಟೀ.ಚಮಚ ಜೇನು ತುಪ್ಪಕ್ಕೆ ಒಂದು ಚಿಟಿಕೆ ಅರಿಶಿನವನ್ನು ಮತ್ತು ಒಂದು ಟೀ. ಚಮಚ ಬೇವಿನ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದರ ಮೇಲೆ ಕೆಲವು ಹನಿ ರೋಸ್ ವಾಟರ್ ಹಾಕಿ. ನಂತರ ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಆಮೇಲೆ ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.
English summary

Homemade Face Packs For Fair Skin

A fair and glowing skin is a dream of every Indian girl. However fair skin only looks attractive if it is flawless, without any marks and spots. Take a look at some of the natural homemade face packs for fairness. Following are some of the home remedies to get fair skin.
X
Desktop Bottom Promotion