For Quick Alerts
ALLOW NOTIFICATIONS  
For Daily Alerts

ಕಾಂತಿಯುಕ್ತ ಮೃದು ತ್ವಚೆಗಾಗಿ ಮನೆಯಲ್ಲೇ ತಯಾರಿಸಿ ಬ್ಲೀಚ್

|

ನಿಮ್ಮ ಮುಖಕ್ಕೆ ಬ್ಲೀಚ್ ಮಾಡಬೇಕೆಂಬ ಆಸೆ ನಿಮಗಿದೆಯೇ? ಹಾಗಾದರೆ ಅದಕ್ಕಾಗಿ ಅಂಗಡಿಯಲ್ಲಿ ಹಣವನ್ನು ನೀಡಿ ಕೃತಕ ಬ್ಲೀಚ್ ಮಾಡಿಸಿಕೊಳ್ಳುವ ಬದಲಿಗೆ ಮನೆಯಲ್ಲಿಯೇ ನಿಮ್ಮ ಮುಖದ ತ್ವಚೆಗೆ ಒಪ್ಪುವ ಬ್ಲೀಚ್ ಮಾಡಿಕೊಳ್ಳಿ.

ಹೌದು ಈ ಅಂಕಣ ನಿಮಗೆ ತಿಳಿಸಲು ಹೋಗುತ್ತಿರುವುದು ಇದೇ ವಿಚಾರವನ್ನು. ಇದು ನಿಮ್ಮ ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಜೊತೆಗೆ ಇದು ನಿಮ್ಮ ಮುಖದಲ್ಲಿ ಸುಕ್ಕು, ಕಲೆ ಮುಂತಾದ ಅನಗತ್ಯ ಸಮಸ್ಯೆಗಳಿದ್ದಲ್ಲಿ ಅದನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಜೊತೆಗೆ ಇದು ನಿಮಗೆ ಅವಧಿ ಪೂರ್ವ ತ್ವಚೆಯ ಸಮಸ್ಯೆಗಳು ಬರದಂತೆ ಖಡಾಖಂಡಿತವಾಗಿ ಕಾಪಾಡುತ್ತದೆ.

ನಿಮ್ಮ ಮುಖದಲ್ಲಿರುವ ಎಲ್ಲಾ ಕಲೆಗಳನ್ನು ನಿವಾರಿಸಲು ಮತ್ತು ನಿಮ್ಮ ತ್ವಚೆಯನ್ನು ಸ್ವಲ್ಪ ತಿಳಿಗೊಳಿಸಲು ತಿಂಗಳಿಗೊಮ್ಮೆ ಬ್ಲೀಚ್ ಮಾಡಿ. ಆದರೆ ಇದಕ್ಕೆಂದು ಮಾರುಕಟ್ಟೆಯಲ್ಲಿ ದೊರೆಯುವ ಬ್ಲೀಚ್‌ಗಳನ್ನು ಬಳಸಬೇಡಿ. ಅವುಗಳಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿ ಮನೆಯಲ್ಲಿಯೇ ನಿಮ್ಮ ಅಗತ್ಯಕ್ಕೆ ತಕ್ಕಂತಹ ಬ್ಲೀಚ್‌ಗಳನ್ನು ಬಳಸಿ. ಇದರಿಂದ ತ್ವಚೆಗು ಒಳ್ಳೆಯದು ಮತ್ತು ನಿಮ್ಮ ಹಣವು ಉಳಿಯುತ್ತದೆ. ತಿಳಿ-ಬಿಳಿ ತ್ವಚೆ ಪಡೆಯಲು ನೀವೇ ಬ್ಲೀಚ್ ತಯಾರಿಸಿ

ಮೊಸರಿನ ಹೋಮ್ ಮೇಡ್ ರೆಸಿಪಿ

Homemade Bleach For Soft Skin

ಮೊಸರಿನಿಂದ ಮೃದುವಾದ ತ್ವಚೆಯನ್ನು ಪಡೆಯಬಹುದು. ಅದಕ್ಕಾಗಿ ಯೋಗರ್ಟನ್ನು ಮುಖದ ಮೇಲೆ ,ಮತ್ತು ಕುತ್ತಿಗೆಯ ಮೇಲೆ ಉಜ್ಜಿ. ಮೊಸರು ನಿರ್ಜೀವ ಕೋಶಗಳನ್ನು ಮತ್ತು ಕೊಳೆಯನ್ನು ತೆಗೆಯುವ ಮೂಲಕ ನಿಮ್ಮ ತ್ವಚೆಯ ಬಣ್ಣವನ್ನು ತಿಳಿಗೊಳಿಸುತ್ತದೆ.

ಕಿತ್ತಳೆ


ಮನೆಯಲ್ಲಿಯೇ ಬ್ಲೀಚ್ ಮಾಡಿಕೊಳ್ಳಲು ನೀವು ಎಂದಾದರು ನಿಮ್ಮ ಮನೆಯ ಹಣ್ಣಿನ ಬುಟ್ಟಿಯನ್ನು ಹುಡುಕಿದ್ದೀರಾ? ನಿಮ್ಮ ಮನೆಯಲ್ಲಿನ ಕಿತ್ತಳೆಗಳಲ್ಲಿ ವಿಟಮಿನ್ ಸಿ ಇರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿ ಅತ್ಯುತ್ತಮವಾದ ಬ್ಲೀಚಿಂಗ್ ಅಂಶಗಳು ಇರುತ್ತವೆ. ಇದು ಮುಖದಲ್ಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ಕಿತ್ತಳೆಯ ತಿರುಳಿನ ಜೊತೆಗೆ ಯೋಗರ್ಟ್ ಬಳಸಿ.

ಪಪ್ಪಾಯಿ ಹಣ್ಣು


ಪಪ್ಪಾಯಿ ಹಣ್ಣು ಸಹ ಮುಖದ ಬ್ಲೀಚಿಂಗಿಗೆ ನೆರವಾಗುತ್ತದೆ. ಹಣ್ಣಾದ ಪಪ್ಪಾಯಿ ಹಣ್ಣನ್ನು ಪೇಸ್ಟ್ ರೀತಿ ರುಬ್ಬಿಕೊಳ್ಳಿ. ಇದನ್ನು ಮುಖದ ಮೇಲೆ ಮತ್ತು ಕುತ್ತಿಗೆಯ ಮೇಲೆ ಲೇಪಿಸಿ. 10-12 ನಿಮಿಷದ ನಂತರ ಇದನ್ನು ತೊಳೆಯಿರಿ. ಸೂಕ್ಷ್ಮ ತ್ವಚೆಯವರಿಗೆ ನೈಸರ್ಗಿಕ ಬ್ಲೀಚ್ ಒಳ್ಳೆಯದು

ಜೇನು ತುಪ್ಪ


ಹೊಳೆಯುವ ತ್ವಚೆ ನಿಮಗೆ ಬೇಕಾದಲ್ಲಿ ಜೇನು ತುಪ್ಪದ ಮೊರೆ ಹೋಗಿ. ಜೇನು ತುಪ್ಪವು ಸುಲಭವಾಗಿ ದೊರೆಯುವ ಪದಾರ್ಥವಾಗಿದ್ದು, ಮೃದುವಾದ ತ್ವಚೆಗಾಗಿ ಮಾಡುವ ಬ್ಲೀಚ್‌ಗೆ ತುಂಬಾ ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರುತ್ತದೆ. ಲಿಂಬೆರಸ ಅಥವಾ ಮೊಸರಿನ ಜೊತೆಗೆ ಇದನ್ನು ನೇರವಾಗಿ ಮುಖ್ಕಕ್ಕೆ ಲೇಪಿಸಿ. ಇದರಿಂದ ಧನಾತ್ಮಕ ಪರಿಣಾಮಗಳು ದೊರೆಯುತ್ತವೆ.

ಸೌತೆಕಾಯಿ ಮತ್ತು ಅಲೋವಿರಾ


ನೀವು ಮನೆಯಲ್ಲಿಯೇ ತ್ವಚೆಯ ಆರೈಕೆ ಮಾಡಿಕೊಳ್ಳುವ ಕುರಿತು ಆಲೋಚಿಸುತ್ತಿದ್ದಲ್ಲಿ, ಈ ಎರಡು ಪದಾರ್ಥಗಳನ್ನು ನೀವು ಮರೆಯುವುದು ಅಸಾಧ್ಯದ ಮಾತು. ಸೌತೆಕಾಯಿ ರಸವನ್ನು ಅಲೋವಿರಾ ಜೆಲ್ ಜೊತೆಗೆ ಬೆರೆಸಿ ನಿಮ್ಮ ಮುಖಕ್ಕೆ ಲೇಪಿಸಿ. 20 ನಿಮಿಷ ಬಿಡಿ, ನಂತರ ಅದನ್ನು ತೊಳೆಯಿರಿ. ಇದರಿಂದ ನಿಮ್ಮ ತ್ವಚೆಯಲ್ಲಿರುವ ಕೊಳೆಯು ಹೋಗುತ್ತದೆ ಮತ್ತು ಅದಕ್ಕೆ ಹೊಳಪು ಬರುತ್ತದೆ.
English summary

Homemade Bleach For Soft Skin

Do you know using homemade bleach for soft skin works wonders compared to artificial bleaches? Yes, it does. Check out for few homemade bleaches for soft skin in this article. As your age grows, your skin renewals slow down and finally it stops and you can’t avoid the inevitable wrinkles and marks of age.
Story first published: Thursday, April 16, 2015, 19:35 [IST]
X
Desktop Bottom Promotion