For Quick Alerts
ALLOW NOTIFICATIONS  
For Daily Alerts

ಕೊರೆಯುವ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

By Manu
|

ಸಾಮಾನ್ಯವಾಗಿ ಉಳಿದೆಲ್ಲಾ ಸಮಯಕ್ಕಿಂತ ಚಳಿಗಾಲದಲ್ಲಿ ಸೌಂದರ್ಯದ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ. ತ್ವಚೆ ಒಡೆಯುವುದು, ಪಾದಗಳಲ್ಲಿ ಬಿರುಕು, ತುಟಿ ಒಣಗಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಈ ರೀತಿಯ ನಾನಾ ಸಮಸ್ಯೆಗಳು ಕಂಡು ಬರುತ್ತದೆ. ನೀವು ಎಷ್ಟೇ ಬಾಡಿ ಲೋಷನ್ ಮತ್ತು ಮಾಯಿಶ್ಚರೈಸರ್ ಅನ್ನು ಚರ್ಮಕ್ಕೆ ಹಚ್ಚಿದರೂ ಕೂಡ ಇದರ ತೊಂದರೆ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಅದರ ಹೊಡೆತಕ್ಕೆ ಸಿಲುಕುವ ನಿಮ್ಮ ಶರೀರದ ಅಂಗವೆಂದರೆ ತುಟಿ ಹಾಗೂ ಕಾಲಿನ ಹಿಮ್ಮಡಿ ಹೊಡೆಯುವುದು. ಚಳಿಗಾಲದಲ್ಲಿ ಯುವ ಜನತೆಗಾಗಿ ಸೌಂದರ್ಯದ ಟಿಪ್ಸ್

ಹೌದು, ಚಳಿಗಾಲದಲ್ಲಿ ತ್ವಚೆ ಹಾಗೂ ದೇಹದ ಚರ್ಮದ ಆರೈಕೆಗೆ ಎಷ್ಟು ರಕ್ಷಣೆ ಮಾಡಿದರೂ ಸಾಲದು. ಅದರಲ್ಲೂ ನಿಮ್ಮದು ಶುಷ್ಕ ತ್ವಚೆಯಾಗಿದ್ದರಂತೂ ತ್ವಚೆಯನ್ನು ಕಾಳಜಿ ಮಾಡುವುದೇ ದಿನದ ಕೆಲಸವಾಗಿ ಬಿಡುತ್ತದೆ. ಚರ್ಮ ಶುಷ್ಕವಾದಷ್ಟು ಚರ್ಮದಲ್ಲಿ ಬಿರುಕು ಬಿಡುವುದು ಸಹಜ. ಇದರಿಂದ ನಿಮಗೆ ಚಳಿಗಾಲದಲ್ಲಿ ಸಾಕಷ್ಟು ಕಿರಿಕಿರಿ ಎನಿಸಬಹುದು.

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ, ತುಟಿಯೂ ಒಣಗಿ ರಕ್ತ ಸೋರಿ, ಮುಖದ ಚರ್ಮವೂ ಒರಟಾಗಿ ಏನು ಮಾಡಲಿ ಎಂದು ಅರ್ಥವಾಗುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿರಲು ಮನೆಯಲ್ಲೇ ಮಾಡಬಹುದಾದ ರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ, ಪ್ರಯತ್ನಿಸಿ ನೋಡಿ..

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಈ ಫೇಸ್ ಪ್ಯಾಕ್‌ ವಿಶೇಷವಾಗಿ ಚಳಿಗಾಲದಲ್ಲಿ ಕಾಡುವ ಶುಷ್ಕ ತ್ವಚೆಯುಳ್ಳವರಿಗೆ ಇದು ಅತ್ಯ೦ತ ಪೋಷಕ ಗುಣವುಳ್ಳ ಒ೦ದು ಫೇಸ್ ಪ್ಯಾಕ್‌ ಆಗಿರುತ್ತದೆ.

ಸಾಮಗ್ರಿಗಳು

*ಹಾಲಿನ ಪುಡಿ

*ಕಡಲೆಹಿಟ್ಟು

*ಬಾದಾಮಿ ಪುಡಿ

*ಅರಿಶಿನ

*ಹಾಲಿನ ಕೆನೆ

*ಲಿ೦ಬೆರಸ

*ಪನ್ನೀರು

*ಆಲಿವ್ ಎಣ್ಣೆ

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಹಾಲಿನ ಪುಡಿಯ ಫೇಸ್ ಪ್ಯಾಕ್‌

ಎರಡು ಟೇಬಲ್ ಚಮಚಗಳಷ್ಟು ಹಾಲಿನ ಪುಡಿ, ಎರಡು ಟೇಬಲ್ ಚಮಚಗಳಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಬಾದಾಮಿ ಪುಡಿಗಳನ್ನು ಮಿಶ್ರಗೊಳಿಸಿರಿ. ಈಗ ಒ೦ದು ಟೇಬಲ್ ಚಮಚದಷ್ಟು ಹಾಲಿನ ಕೆನೆ ಹಾಗೂ ಒ೦ದು ಟೇಬಲ್ ಚಮಚದಷ್ಟು ಲಿ೦ಬೆಯ ರಸಗಳನ್ನು ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಜೊತೆಗೆ ಕೆಲವು ಹನಿಗಳಷ್ಟು ಪನ್ನೀರು ಹಾಗೂ ಆಲಿವ್ ಎಣ್ಣೆಯನ್ನೂ ಸೇರಿಸಿರಿ. ಈ ಮಿಶ್ರಣವನ್ನು ಒ೦ದು ಪೇಸ್ಟ್‌ನ ರೂಪಕ್ಕೆ ತ೦ದು, ಅದನ್ನು ನಿಮ್ಮ ಮುಖ ಹಾಗೂ ನಿಮ್ಮ ಮೈಮೇಲೆಲ್ಲಾ ಹದವಾದ ಮಾಲೀಸಿನೊ೦ದಿಗೆ ಲೇಪಿಸಿಕೊಳ್ಳಿರಿ. ಈ ಪ್ಯಾಕ್ ಅನ್ನು ಮೈಮೇಲೆ ಹಾಗೆಯೇ ಕೆಲಕಾಲ ಒಣಗಲು ಬಿಡಿರಿ ಹಾಗೂ ತದನ೦ತರ ಉಗುರುಬೆಚ್ಚಗಿನ ನೀರಿನಿ೦ದ ಅದನ್ನು ತೊಳೆದು ತೆಗೆಯಿರಿ. ಈ ಪ್ಯಾಕ್‌ನ ಗರಿಷ್ಟ ಲಾಭವನ್ನು ಪಡೆದುಕೊಳ್ಳುವ೦ತಾಗಲು ಈ ನೈಸರ್ಗಿಕವಾದ "ಸೌ೦ದರ್ಯ ಮಿಶ್ರಣ" ವನ್ನು ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ಹಚ್ಚಿಕೊಳ್ಳಿರಿ.

ತ್ವಚೆಯ ಸೌಂದರ್ಯಕ್ಕೆ ಬಾಳೆಹಣ್ಣು

ತ್ವಚೆಯ ಸೌಂದರ್ಯಕ್ಕೆ ಬಾಳೆಹಣ್ಣು

ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ.

ತುಟಿಯ ಸಮಸ್ಯೆಗೆ ಶುಂಠಿ ಸ್ಕ್ರಬ್!

ತುಟಿಯ ಸಮಸ್ಯೆಗೆ ಶುಂಠಿ ಸ್ಕ್ರಬ್!

ಚಳಿಗಾಲದಲ್ಲಿ ಸಾಮಾನ್ಯವಾಗಿ ತುಟಿಗಳು ಒಣಗಿ ಒಡೆಯಲು ಆರಂಭಿಸುತ್ತವೆ. ಅವುಗಳನ್ನು ನೀವು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲಿಲ್ಲವಾದಲ್ಲಿ ಅದರಿಂದ ರಕ್ತವು ಸಹ ಬರಬಹುದು. ಬನ್ನಿ ಇಂತಹ ಸಮಸ್ಯೆಗೆ ನೈಸರ್ಗಿಕವಾಗಿ ದೊರೆಯುವ ಶುಂಠಿ ಸ್ಕ್ರಬ್ ಅನ್ನು ಪ್ರಯತ್ನಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುಟಿಯ ಸಮಸ್ಯೆಗೆ ಶುಂಠಿ ಸ್ಕ್ರಬ್!

ತುಟಿಯ ಸಮಸ್ಯೆಗೆ ಶುಂಠಿ ಸ್ಕ್ರಬ್!

*ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಶುಂಠಿಯ ಸಿಪ್ಪೆಯನ್ನು ತೆಗೆದು, ಅದನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.

*ಒಂದು ಸಣ್ಣ ಬಟ್ಟಲನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಕಂದು ಸಕ್ಕರೆಯನ್ನು ಅಗತ್ಯ ಪ್ರಮಾಣದಲ್ಲಿ ಹಾಕಿ. ಈಗ ಅದಕ್ಕೆ ಶುಂಠಿಯ ತುಂಡುಗಳನ್ನು ಹಾಕಿ, ಜೊತೆಗೆ ಜೇನು ತುಪ್ಪವನ್ನು ಬೆರೆಸಿ.

*ಇದಾದ ಮೇಲೆ ಶುಂಠಿ ಜೇನುತುಪ್ಪದ ಮಿಶ್ರಣವನ್ನು ತುಟಿಗಳಿಗೆ ಲೇಪಿಸಿ. ಈ ಮಿಶ್ರಣವನ್ನು ಲೇಪಿಸುವಾಗ ವೃತ್ತಾಕಾರವಾಗಿ ಲೇಪಿಸಿ.

*ಇದೆಲ್ಲ ಮುಗಿದ ಮೇಲೆ ಒಂದು ಹಳೆ ಟವೆಲ್ ಅಥವಾ ಟಿಶ್ಯೂ ಪೇಪರ್ ತೆಗೆದುಕೊಂಡು, ಮಿಶ್ರಣವನ್ನು ಸ್ವಚ್ಛಗೊಳಿಸಿ.

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಬೇವಿನ ಲೇಪನ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಬೇವಿನ ಲೇಪನ

ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

English summary

Home Remedies For Winter Skin Care in Kannada

Winter is here, and for many people that means dry, flaky and cracked skin. Many skincare experts advise switching to more moisturizing hair and skincare products during the blustery months to avoid these problems. You don’t have to go out and choose the winter care products. Rather, the natural ingredients at home are very effective in bringing back moisture on your skin. Let us have a look at best natural homemade winter face packs and face masks.
X
Desktop Bottom Promotion