For Quick Alerts
ALLOW NOTIFICATIONS  
For Daily Alerts

ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್

By Deepak
|

ಮಾರುಕಟ್ಟೆಯಲ್ಲಿ ಈಗ ಎಲ್ಲಿ ನೋಡಿದರೂ ಮಾವಿನ ಹಣ್ಣಿನದೇ ಕಾರುಬಾರು. ಸಿಹಿ ಹಾಗೂ ಪೋಷಕಾಂಶಗಳೆರಡರಲ್ಲೂ ಮಾವಿಗೆ ಸರಿಸಾಟಿಯಾದ ಹಣ್ಣು ಇನ್ನೊಂದಿಲ್ಲ. ಇದು ಕೇವಲ ನಿಮ್ಮ ದೇಹದ ಆರೋಗ್ಯಕ್ಕೆ ಅಷ್ಟೇ ಅಲ್ಲ, ನಿಮ್ಮ ತ್ವಚೆಯ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ ಎಂಬುದೇ ಇದರ ವೈಶಿಷ್ಟ್ಯತೆ.

ಆದರೆ ಒಂದು ಮಾತು ಅಂತೂ ಸತ್ಯ ಮಗುವಿನಂತಹ ತ್ವಚೆಯನ್ನು ಇನ್ನೊಮ್ಮೆ ಪಡೆಯುವುದು ಅಸಾಧ್ಯವಾದ ಮಾತು. ಟಿ.ವಿಯಲ್ಲಿ ಬರುವ ಎಲ್ಲಾ ಜಾಹೀರಾತು ಉತ್ಪನ್ನಗಳು ನಿಮ್ಮ ತ್ವಚೆಯನ್ನು ಮತ್ತೆ ನಳನಳಿಸುವಂತೆ ಮಾಡಲಾರವು. ಇದಕ್ಕಾಗಿ ಮನೆ ಮದ್ದುಗಳೇ ಸರಿ, ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳ ಭಯವಿರುವುದಿಲ್ಲ. ಅಲ್ಲದೆ ಇಂತಹ ನೈಸರ್ಗಿಕ ಹಣ್ಣುಗಳಿಂದ ಸ್ವಾಭಾವಿಕವಾದ ವಿಟಮಿನ್ ಮತ್ತು ಪೋಷಕಾಂಶಗಳು ತ್ವಚೆಗೆ ಇನ್ನಷ್ಟು ಲಾಭದಾಯಕವಾಗಲಿದೆ. ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

ಮಾವಿನ ಹಣ್ಣುಗಳಲ್ಲಿ ಬೀಟಾ ಕೆರೋಟಿನ್, ಸ್ವಾಭಾವಿಕವಾದ ಹಣ್ಣಿನ ಆಮ್ಲಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ತ್ವಚೆಯ ಎಕ್ಸ್‌ಫೋಲಿಯೇಶನ್‌ಗೆ ಸಹಾಯ ಮಾಡುವುದರ ಜೊತೆಗೆ, ಕೆಟ್ಟ ಹವಾಮಾನದಿಂದ ಮುಖದ ಮೇಲೆ ಕೂರುವ ಧೂಳು ಮತ್ತು ಕೊಳೆಯನ್ನು ನಿವಾರಿಸುವುದರ ಮೂಲಕ ಮುಖಕ್ಕೆ ಕಳೆದುಹೋದ ಹೊಳಪನ್ನು ಮರಳಿ ನೀಡುವಲ್ಲಿ ಸಹಕಾರಿಯಾಗಿದೆ. ಬನ್ನಿ ಮಾವಿನ ಮಾವಿನ ಹಣ್ಣಿನ ಫೇಸ್ ಪ್ಯಾಕ್ ಬಗ್ಗೆ ತಿಳಿಯೋಣ...

ಮಾವಿನಹಣ್ಣು ಮತ್ತು ಜೇನಿನ ಫೇಸ್ ಮಾಸ್ಕ್

ಮಾವಿನಹಣ್ಣು ಮತ್ತು ಜೇನಿನ ಫೇಸ್ ಮಾಸ್ಕ್

ಮಾವಿನಹಣ್ಣು ಮತ್ತು ಜೇನು ಎರಡ ಮಿಶ್ರಣವು ನಿಮ್ಮ ತ್ವಚೆಗೆ ಅಗತ್ಯವಾಗಿರುವ ಮೊಯಿಶ್ಚರನ್ನು ಒದಗಿಸುತ್ತವೆ. ಸ್ವಲ್ಪ ಮಾವಿನಹಣ್ಣಿನ ಹಳದಿ ಭಾಗಕ್ಕೆ ಒಂದು ಟೀ.ಚಮಚ ಜೇನುತುಪ್ಪವನ್ನು ಹಾಗು ಸ್ವಲ್ಪ ಬಾದಾಮಿ ಎಣ್ಣೆಯನ್ನು ಬೆರೆಸಿ. ಇದರ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿ, 15 ನಿಮಿಷಗಳ ಕಾಲ ಬಿಡಿ. ನಂತರ ಮುಖ ತೊಳೆಯಿರಿ.

ಮಾವಿನ ಹಣ್ಣಿನ ತಿರುಳು

ಮಾವಿನ ಹಣ್ಣಿನ ತಿರುಳು

ಸ್ವಲ್ಪ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಟೀ.ಚಮಚ ವೈಟ್ ಕ್ಲೇ ಅಥವಾ ಓಟ್ಸ್, ಜೇನು ತುಪ್ಪ ಮತ್ತು ಹಾಲನ್ನು ಬೆರೆಸಿ. ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ತ್ವಚೆಯ ಮೇಲೆ ಲೇಪಿಸಿ. ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಅಥವಾ ಬೆಚ್ಚಗಿನ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಒರೆಸಿಕೊಳ್ಳಿ.

ಕಪ್ಪುಕಲೆಗಳನ್ನು ನಿವಾರಿಸಿ

ಕಪ್ಪುಕಲೆಗಳನ್ನು ನಿವಾರಿಸಿ

ಮಾವಿನ ಹಣ್ಣುಗಳು ತ್ವಚೆಯಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಸ್ವಲ್ಪ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಂಡು, ಅದನ್ನು ಹಾಲಿನ ಪುಡಿ ಮತ್ತು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಅದನ್ನು ವೃತ್ತಾಕಾರವಾಗಿ ನಿಮ್ಮ ತ್ವಚೆಯ ಮೇಲೆ ಲೇಪಿಸಿ. ಸ್ವಲ್ಪ ಹೊತ್ತಿನ ನಂತರ ಅದನ್ನು ತೊಳೆಯಿರಿ.

ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿ ಕೊಲೆಜಿನ್ ಪ್ರೋಟೀನ್‍ಗಳನ್ನು ಉತ್ಪಾದಿಸುತ್ತವೆ. ಕೊಲೆಜಿನ್‍ಗಳು ರಕ್ತನಾಳಗಳನ್ನು ರಕ್ಷಿಸುತ್ತವೆ. ಇವು ಇದಕ್ಕೆ ಸಂಬಂಧಿಸಿದ ಕೋಶಗಳನ್ನು ರಕ್ಷಿಸಿ ಚರ್ಮವು ಸುಕ್ಕಾಗದಂತೆ ತಡೆಯುತ್ತವೆ.

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.

English summary

Home Remedies For Glowing Skin With Mango

It is a wonderful time of the year with lots of sun and seasonal fruits. Not only consuming these fruits is a blessed thing but to make the best use of these fruits is a must. Summer takes a toll on your skin but the nature has its way of giving back with lots of seasonal fruits to dent and paint it on the skin for a healthy glow.
X
Desktop Bottom Promotion