For Quick Alerts
ALLOW NOTIFICATIONS  
For Daily Alerts

ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

By Arshad
|

ಯಾವುದೋ ಕಾರಣದಿಂದ ನಮ್ಮ ಚರ್ಮದ ಮೇಲೆ ಹಳೆಯ ಕಲೆ ಉಳಿದುಕೊಂಡಿದ್ದರೆ ಅದರ ಕುರಿತಾದ ಕಾಳಜಿ ಮತ್ತು ಕೀಳರಿಮೆ ಸದಾ ನಮ್ಮ ಮನಸ್ಸನ್ನು ಆವರಿಸಿರುತ್ತದೆ. ಅದರಲ್ಲೂ ಗೌರವರ್ಣದವರಲ್ಲಿ ಮುಖ, ಕುತ್ತಿಗೆ, ಕೈ ಮೊದಲಾದ ಕಡೆಗಳಲ್ಲಿ ಕಪ್ಪುಕಲೆಗಳು ಉಳಿದುಕೊಂಡಿದ್ದರೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಕೆಲವು ಔಷಧಿಗಳು ಲಭ್ಯವಿದೆಯಾದರೂ ಇದರಲ್ಲಿರುವ ಪ್ರಬಲ ರಾಸಾಯನಿಕಗಳು ಒಂದು ವೇಳೆ ಅಲರ್ಜಿಕಾರಕವಾಗಿದ್ದರೆ ಚರ್ಮದ ಕಪ್ಪುಕಲೆಗಳನ್ನು ಕಡಿಮೆಗೊಳಿಸುವ ಬದಲು ಇನ್ನಷ್ಟು ಗಾಢಗೊಳಿಸುವ ಸಂಭವವಿದೆ.

ಕೆಲವು ಸಂದರ್ಭಗಳಲ್ಲಿ ಕಪ್ಪು ಕಲೆಗಳು ಗುಲಾಬಿ ಬಣ್ಣಕ್ಕೆ ತಿರುಗಿದ್ದೂ ಇದೆ! ಇದಕ್ಕೆ ಪರ್ಯಾಯವಾಗಿ ಕೆಲವು ಮನೆಮದ್ದುಗಳು ಲಭ್ಯವಿದ್ದು ನಿಧಾನವಾಗಿಯಾದರೂ ಕಲೆಗಳು ಕಡಿಮೆಯಾಗಿ ಚರ್ಮ ತನ್ನ ಸಹಜವರ್ಣವನ್ನು ಪಡೆಯುತ್ತದೆ. ಮುಖದ ಕಪ್ಪು ಅಥವಾ ಕೆಂಪು ಕಲೆ ನಿವಾರಣೆಗೆ 8 ಟಿಪ್ಸ್

ಕಪ್ಪುಬಣ್ಣಕ್ಕೆ ಕೆಲವಾರು ಕಾರಣಗಳಿವೆ, ಬಿಸಿಲು, ಹಾರ್ಮೋನುಗಳ ಏರುಪೇರು ಮತ್ತು ವೃದ್ಧಾಪ್ಯವೂ ಕಾರಣವಾಗಿದೆ. ಕುತ್ತಿಗೆಯಲ್ಲಿ ಕಲೆಗಳಿರುವುದು ಹಾರ್ಮೋನುಗಳ ಏರುಪೇರಿನ ಪರಿಣಾಮವಾಗಿದೆ. ಇದಕ್ಕೆ ಮನೆಮದ್ದಿನ ಸರಿಯಾದ ಉಪಚಾರ ನೀಡಿದರೆ ಒಂದು ವಾರದಲ್ಲಿಯೇ ಈ ಕಲೆಗಳು ಸಾಕಷ್ಟು ಕಡಿಮೆಯಾಗಿರುವುದು ಕಂಡುಬರುತ್ತದೆ. ಆದರೆ ಯಾವುದೇ ಚಿಕಿತ್ಸೆಗೆ ಮುನ್ನ ನಿಮ್ಮ ಚರ್ಮ ಈ ಚಿಕಿತ್ಸೆಗೆ ಯಾವುದೇ ಅಲರ್ಜಿ ತೋರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಳಗಿನ ಸ್ಲೈಡ್ ಶೋನಲ್ಲಿ ತೋರಲಾಗಿರುವ ಚಿಕಿತ್ಸೆಯಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳಿ. ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳ ಚಿಂತೆ ಇನ್ಯಾಕೆ?

ಲಿಂಬೆ

ಲಿಂಬೆ

ಚರ್ಮದ ಕಲೆಯನ್ನು ನಿವಾರಿಸಲು ಲಿಂಬೆಹಣ್ಣಿನ ರಸ ಉತ್ತಮವಾಗಿದೆ. ಇದಕ್ಕಾಗಿ ಒಂದು ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ಕಲೆಗಳಿರುವ ಈಗ ತಾನೇ ತೊಳೆದು ಒರೆಸಿದ ಚರ್ಮದ ಮೇಲೆ ನಿಧಾನವಾಗಿ ಕಿವುಚುತ್ತಾ ನೇರವಾಗಿ ಹೆಚ್ಚಿ ಒಣಗಲು ಬಿಡಿ.

ಲಿಂಬೆ

ಲಿಂಬೆ

ಸುಮಾರು ಹದಿನೈದು ನಿಮಿಷದ ಬಳಿಕ (ಉರಿ ಎನಿಸಿದರೆ ಹತ್ತು ನಿಮಿಷ ಸಾಕು) ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಬಳಿಕ ಇಪ್ಪತ್ತನ್ನಾಲ್ಕು ಗಂಟೆಗಳ ಕಾಲ ಸೂರ್ಯನ ಬಿಸಿಲು ಬೀಳದಂತೆ ಕಾಪಾಡಿಕೊಳ್ಳಬೇಕು. ದಿನಕ್ಕೆ ಎರಡು ಬಾರಿಯಂತೆ ಉಪಯೋಗಿಸಿದರೆ ಸುಮಾರು ಆರರಿಂದ ಎಂಟು ವಾರಗಳಲ್ಲಿ ನಿಮ್ಮ ಕಲೆಗಳು ಇಲ್ಲವಾಗುತ್ತವೆ.

ಮೊಸರು

ಮೊಸರು

ಒಂದು ಕಪ್‌ನಲ್ಲಿ ಒಂದು ದೊಡ್ಡಚಮಚ ಓಟ್ಸ್ ಪುಡಿ, ಎರಡು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಮೊಸರು ಹಾಕಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಕಪ್ಪುಬಣ್ಣಕ್ಕೆ ಕಾರಣವಾದ ವರ್ಣದ್ರವ್ಯಗಳನ್ನು ತಿಳಿಗೊಳಿಸುವ ಗುಣ ಹೊಂದಿರುವ ಕಾರಣ ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.

ಮೊಸರು

ಮೊಸರು

ಸುಮಾರು ಹತ್ತರಿಂದ ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನದಲ್ಲೊಂದು ಬಾರಿ, ರಾತ್ರಿ ಮಲಗುವ ಮುನ್ನ ಪಾಲಿಸಿ. ಸುಮಾರು ನಾಲ್ಕರಿಂದ ಆರು ವಾರಗಳಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಮುಖದ ಮತ್ತು ಕುತ್ತಿಗೆಯ ಕಲೆಗಳನ್ನು ನಿವಾರಿಸಲೂ ಶಕ್ತವಾಗಿದೆ. ದಿನಕ್ಕೊಂದು ಲೋಟ ಕಿತ್ತಳೆ ರಸವನ್ನು ಕುಡಿಯುವ ಜೊತೆಗೇ ಕಿತ್ತಳೆಯ ಸಿಪ್ಪೆಯನ್ನು ಹಿಸುಕಿದರೆ ಚಿಮ್ಮುವ ದ್ರವವನ್ನು ಕಲೆಗಳ ಮೇಲೆ ಬೀಳುವಂತೆ ಮಾಡುವ ಮೂಲಕ ಅಥವಾ ಕಿತ್ತಳೆಸಿಪ್ಪೆಯ ಮೇಲ್ಭಾಗವನ್ನು ಕೆರೆದು ತೆಗೆದು ಮಿಕ್ಸಿಯಲ್ಲಿ ಅರೆದು ಮುಖಲೇಪದಂತೆ ಹಚ್ಚಿಕೊಳ್ಳುವ ಮೂಲಕವೂ ಉತ್ತಮ ಫಲಿತಾಂಶ ಕಂಡುಬರುತ್ತದೆ. ಈ ವಿಧಾನವನ್ನೂ ದಿನಕ್ಕೊಂದು ಬಾರಿ ಅನುಸರಿಸಬಹುದು.

ಹಾಲು

ಹಾಲು

ಹಸಿಹಾಲನ್ನು ನೆನೆಸಿದ ಹತ್ತಿಯಲ್ಲಿ ಅದ್ದಿ ಕಲೆಗಳ ಮೇಲೆ ಇರುವಂತೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಇಡಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.ಈ ವಿಧಾನ ವಯಸ್ಸಿನ ಕಾರಣದಿಂದ ಮೂಡುವ ಕಲೆಗಳಿಗೆ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಸುಮಾರು ಆರು ವಾರಗಳಲ್ಲಿ ಉತ್ತಮ ಫಲ ಕಂಡುಬರುತ್ತದೆ.

English summary

Home Remedies For Dark Skin Patches

Dark skin patches look ugly on the body, especially when your fair. These nasty looking patches can disappear with the help of certain home remedies. Lemon is a powerful ingredient which can be used on your skin to lighten the problem. Likewise, even ingredients which have lactic acid or any type of acid can help reduce the dark patch. The reason for these dark patches on the skin is due to hormonal problems, sun tan and even ageing.
X
Desktop Bottom Promotion