For Quick Alerts
ALLOW NOTIFICATIONS  
For Daily Alerts

ಊರೆಲ್ಲಾ ಅಲೆದರೂ ಗುಣವಾಗದ ಸುಟ್ಟಗಾಯಕ್ಕೆ ಇಲ್ಲಿದೆ ಪರಿಹಾರ

|

ಮುಖ ಅಥವಾ ದೇಹದ ಇತರೆ ಭಾಗದಲ್ಲಿರುವ ಸುಟ್ಟ ಗಾಯದ ಕಲೆಗಳು, ಒಂದು ನೋವಿನ ಇತಿಹಾಸವನ್ನು ಹೊಂದಿರುತ್ತವೆ. ಇವು ನಿಮ್ಮ ದೇಹ ಮತ್ತು ಸೌಂದರ್ಯಕ್ಕೆ ಪೂರಕವಾಗಿರುವುದಿಲ್ಲ. ಅವುಗಳು ಯಾವಾಗಲು ನಿಮಗೆ ಆ ಸುಟ್ಟ ಗಾಯದಿಂದ ಆದ ನೋವನ್ನು ನೆನಪಿಗೆ ತರುತ್ತ ಇರುತ್ತವೆ. ಸುಟ್ಟ ಗಾಯದ ಕಲೆಗಳು ನಿಮ್ಮ ತ್ವಚೆಯಲ್ಲಿ ಶಾಶ್ವತವಾಗಿ ಕುಳಿತು ಬಿಡುತ್ತವೆ.

ಕಾಸ್ಮೆಟಿಕ್ ಸರ್ಜರಿ ಮಾಡಿದ ನಂತರವೂ ಸಹ ಇವುಗಳು ನಿವಾರಣೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಇಂತಹ ಕಲೆಗಳು ಇರುವವರು, ಔಷಧೀಯ ಕ್ರೀಮ್‌ಗಳಿಂದ ಹಿಡಿದು, ಸೌಂದರ್ಯ ವರ್ಧಿಸಲು ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಸುಟ್ಟ ಗಾಯಗಳ ತೀವ್ರತೆಯ ಮೇಲೆ ಅವುಗಳು ಮಾಯುವ ಅವಧಿ ನಿರ್ಧಾರವಾಗುತ್ತದೆ. ಇದಕ್ಕಾಗಿ ಪ್ರಕೃತಿಯು ಸಹ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಆದರೂ ನಾವು ಕೆಲವೊಂದು ಮನೆಮದ್ದುಗಳನ್ನು ಬಳಸಿ, ಇಂತಹ ಗಾಯದ ಕಲೆಗಳನ್ನು ನಿವಾರಿಸಿಕೊಳ್ಳಬಹುದು. ಪರಿಣಾಮಕಾರಿಯಾದ ಮನೆ ಮದ್ದುಗಳು, ಸುಟ್ಟ ಗಾಯದ ಕಲೆಗಳನ್ನು ನಿವಾರಿಸಿ, ನೀವು ಆತ್ಮವಿಶ್ವಾಸದಿಂದ ಜೀವನ ನಡೆಸಲು ಸಹಕರಿಸುತ್ತವೆ. ಇಂದು ನಾವು ನಿಮಗಾಗಿ ಸುಟ್ಟ ಗಾಯದ ಕಲೆಗಳನ್ನು ನಿವಾರಿಸಲು ಇರುವ ಮನೆ ಮದ್ದುಗಳ ಕುರಿತು ತಿಳಿಸುತ್ತೇವೆ. ಬನ್ನಿ ಅವು ಯಾವುವು ಎಂದು ನೋಡೋಣ. ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು

ಟೊಮೇಟೊ ಮತ್ತು ಲಿಂಬೆರಸ

ಟೊಮೇಟೊ ಮತ್ತು ಲಿಂಬೆರಸ

ಟೊಮೇಟೊ ಮತ್ತು ಲಿಂಬೆರಸದಲ್ಲಿ ಸ್ವಾಭಾವಿಕ ಆಸಿಡ್ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತವೆ. ವಿಟಮಿನ್ ಸಿಯು ಗಾಯದ ಕಲೆಗಳನ್ನು ಉಪಶಮನ ಮಾಡುತ್ತದೆ ಮತ್ತು ಆಸಿಡ್ ಗಾಯವನ್ನು ಮಾಯುವಂತೆ ಮಾಡುತ್ತದೆ. ಇದಕ್ಕಾಗಿ ಟೊಮೇಟೊ ಮತ್ತು ಲಿಂಬೆರಸ ಎರಡನ್ನೂ ಸೇರಿಸಿ, ಒಂದು ಮಿಶ್ರಣ ಮಾಡಿಕೊಳ್ಳಿ. ಇದನ್ನು ಹತ್ತಿಯ ಉಂಡೆಯ ಸಹಾಯದಿಂದ ಗಾಯದ ಕಲೆಗಳು ಇರುವ ಭಾಗಕ್ಕೆ ಲೇಪಿಸಿ. ನಂತರ ಅದನ್ನು 15 ನಿಮಿಷಗಳ ಕಾಲ ಬಿಡಿ, ಇದನ್ನು 15 ದಿನಗಳ ಕಾಲ ದಿನಕ್ಕೆ ಮೂರು ಬಾರಿ ಮಾಡಿ.

ಅಲೊ ವಿರಾ ಜೆಲ್

ಅಲೊ ವಿರಾ ಜೆಲ್

ಅಲೊ ವಿರಾ ಜೆಲ್ ಗಾಯವನ್ನು ಉಪಶಮನ ಮಾಡುವ ಮತ್ತು ಕಲೆಗಳನ್ನು ನಿವಾರಿಸುವ ಪರಿಣಾಮಕಾರಿ ಮನೆಮದ್ದಾಗಿರುತ್ತದೆ.ಇದು ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು ನಿವಾರಿಸುತ್ತದೆ ಮತ್ತು ಹೊಸ ತ್ವಚೆ ಬರಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸಂಕೋಚಕ ಗುಣಗಳು, ಇನ್‍ಫೆಕ್ಷನ್‍ ಅನ್ನು ಕೊಲ್ಲುತ್ತದೆ. ಗಾಯದ ಮೇಲೆ ಅಲೊ ವಿರಾ ಜೆಲ್ ಅನ್ನು ನೇರವಾಗಿ ಲೇಪಿಸಿ ಮತ್ತು ಕೆಲವು ಸಮಯ ಉಜ್ಜಿ. ಇದನ್ನು 15 ನಿಮಿಷಗಳ ಕಾಲ ಬಿಟ್ಟು, ನಂತರ ತೊಳೆಯಿರಿ.

ಮೆಂತೆ ಬೀಜಗಳು

ಮೆಂತೆ ಬೀಜಗಳು

ಮೆಂತೆ ಬೀಜಗಳನ್ನು ರಾತ್ರಿಯೆಲ್ಲ ನೀರಿನಲ್ಲಿ ನೆನೆಸಿ. ಈ ನೆಂದ ಬೀಜಗಳನ್ನು ಸುಟ್ಟ ಗಾಯದ ಕಲೆಗಳ ಮೇಲೆ ಲೇಪಿಸಿ. ಅದನ್ನು ಒಂದು ಗಂಟೆಯ ಕಾಲ ಬಿಟ್ಟು, ನಂತರ ತೊಳೆಯಿರಿ. ಈ ಪ್ರಕ್ರಿಯೆಯನ್ನು ಗಾಯದ ಕಲೆಗಳು ನಿವಾರಣೆಯಾಗುವವರೆಗೆ ಪುನರಾವರ್ತಿಸಿ. ಸುಟ್ಟ ಗಾಯದ ಕಲೆಗಳನ್ನು ನಿವಾರಿಸಲು ಇದು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆಯಾಗಿರುತ್ತದೆ.

ಅರಿಶಿನ

ಅರಿಶಿನ

ಒಂದು ಟೇಬಲ್ ಚಮಚ ಅರಿಶಿನ ಪುಡಿಗೆ ಒಂದು ಟೀ ಚಮಚ ಜೇನು ತುಪ್ಪ ಮತ್ತು ಕೆಲವು ಹನಿ ರೋಸ್ ವಾಟರನ್ನು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು, ಸುಟ್ಟ ಗಾಯವಾಗಿರುವ ಭಾಗಕ್ಕೆ ಲೇಪಿಸಿ ಮತ್ತು ಮುಖದ ಮೇಲೆ ಮೃದುವಾಗಿ ಉಜ್ಜಿ. ಇದನ್ನು 20 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯು ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು ನಿವಾರಣೆ ಮಾಡುತ್ತದೆ. ಪರಿಶುದ್ಧವಾದ ಬಾದಾಮಿ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಮಲಗುವ ಮುನ್ನ ಅದನ್ನು ನಿಮ್ಮ ಮುಖದ ಮೇಲೆ ಲೇಪಿಸಿ. ಮೃದುವಾಗಿ ಇದನ್ನು ಕಲೆಗಳಿರುವ ಭಾಗದಲ್ಲಿ ಉಜ್ಜಿ, ಹೀಗೆ ಮಾಡುವುದರಿಂದ ತ್ವಚೆಯು ಬಾದಾಮಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದನ್ನು ಪ್ರತಿದಿನ ಮಾಡಿ, ನಿಮ್ಮ ತ್ವಚೆಯು ಕಲೆಗಳಿಂದ ಮುಕ್ತವಾಗುತ್ತದೆ.

ಮೊಸರು

ಮೊಸರು

ಗಾಯದ ಕಲೆಗಳನ್ನು ನಿವಾರಿಸಲು ಇರುವ ಮನೆ ಮದ್ದುಗಳಲ್ಲಿ ಮೊಸರು ಸಹ ಒಂದು. ಮೊಸರು ಮತ್ತು ಬಾರ್ಲಿಯ ಮಿಶ್ರಣವು ಕಲೆಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತವೆ. ಎರಡು ಟೇಬಲ್ ಚಮಚ ಮೊಸರಿನ ಜೊತೆಗೆ ಒಂದು ಟೀ ಚಮಚ ಬಾರ್ಲಿ ಪುಡಿ ಹಾಗು ಒಂದು ಚಿಟಿಕೆ ಅರಿಶಿನವನ್ನು ಬೆರೆಸಿಕೊಳ್ಳಿ. ಇದರ ಮೇಲೆ ಸ್ವಲ್ಪ ಲಿಂಬೆರಸನ್ನು ಬೆರೆಸಿಕೊಂಡು ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಕಲೆಗಳಿರುವ ಭಾಗಕ್ಕೆ ಲೇಪಿಸಿ, ಸಂಪೂರ್ಣವಾಗಿ ಕಲೆಗಳಿಂದ ಮುಕ್ತರಾಗಲು ಇದನ್ನು 15 ದಿನಗಳ ಕಾಲ ಪುನರಾವರ್ತಿಸಿ.

English summary

Home Remedies For Burn Marks On Face

Burn marks on the face or any other body part reminds of the painful memories. These marks are unaesthetic for your beauty and soul. They remind you of the fateful day when you had got the burn.Today, we will share with you some of the natural home remedies for burn marks...
Story first published: Wednesday, May 6, 2015, 10:39 [IST]
X
Desktop Bottom Promotion