For Quick Alerts
ALLOW NOTIFICATIONS  
For Daily Alerts

ಪ್ರೌಢಾವಸ್ಥೆಯಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಪರಿಹಾರವೇನು?

|

ನಿಮ್ಮ ಅಂದವಾದ ಮುಖದ ಮೇಲೆ ಮೊಡವೆಗಳೇ ಕಾಣಿಸುತ್ತಿರುವಾಗ ಜೀವನವೇ ಬೇಸರವೆನಿಸುತ್ತದೆ ಅಲ್ಲವೇ? ಮೊಡವೆಗಳು ಮಾಯವಾದರೂ ಅದರ ಕಲೆ ಹಾಗೆ ಉಳಿದುಕೊಳ್ಳುತ್ತದೆ. ಇದು ದೊಡ್ಡ ಚಿಂತೆಯ ವಿಷಯ. ನಿಮ್ಮ ತ್ವಚೆ ನಿಜವಾಗಿಯೂ ನಿಮ್ಮ ಸ್ನೇಹಿತನಿದ್ದಂತೆ ಮತ್ತು ಇದರ ಬಗ್ಗೆ ಸಾಧ್ಯವಾದಷ್ಟು ಮಟ್ಟಿಗೆ ಕಾಳಜಿ ತೆಗೆದುಕೊಳ್ಳಬೇಕು.

ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಾಗ ತ್ವಚೆಗೆ ಹಾನಿಯಾಗಿ, ನಿಮ್ಮ ತ್ವಚೆಯನ್ನು ದ್ವೇಷಿಸಲು ಆರಂಭಿಸಬಹುದು. ಇದಕ್ಕೆ ಏನು ಮಾಡಬೇಕು? ದುಬಾರಿ ಕಾಸ್ಮೆಟಿಕ್ ಅಥವಾ ರಾಸಾಯನಿಕ ಚಿಕಿತ್ಸೆ ಮಾಡಿಕೊಳ್ಳಬೇಕೇ? ಇದು ಅನಿವಾರ್ಯವಲ್ಲ. ಮನೆಮದ್ದು ಕೂಡ ಮೊಡವೆಗೆ ಪರಿಹಾರ ಒದಗಿಸಬಲ್ಲದು. ನಿಮ್ಮ ತ್ವಚೆ ಕೂಡ ಉಸಿರಾಡುತ್ತದೆ ಮತ್ತು ಅದಕ್ಕೂ ಜೀವವಿದೆ. ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಿ. ತಾಳ್ಮೆ ತುಂಬಾ ಮುಖ್ಯ. ಗುಣಮುಖವಾಗಲು ಚಿಕಿತ್ಸೆಗೆ ಸರಿಯಾದ ಸಮಯ ನೀಡಿ. ಮೊಡವೆಗಳಿಗೆ ಸರಿಯಾದ ಮದ್ದನ್ನು ಪರಿಣಾಮಕಾರಿಯಾಗಿ ಮಾಡಬೇಕು. ಮೊಡವೆಗಳನ್ನು ಹೇಗೆ ನಿವಾರಿಸಬಹುದೆಂಬ ಕೆಲವೊಂದು ಟಿಪ್ಸ್‪ಗಳು ಇಲ್ಲಿವೆ.

ಬಾಳೆಹಣ್ಣು

Home remedies for Acne on face

ನೀವು ಬಾಳೆಹಣ್ಣು ಪ್ರಿಯರಾಗಿದ್ದರೆ ಅದರ ಸಿಪ್ಪೆಯನ್ನು ನಿಮ್ಮ ಚರ್ಮದ ಮೇಲೆ ಇಡಿ. ಇದು ಮೊಡವೆಗೆ ಒಳ್ಳೆಯ ಮದ್ದು. ಬಾಳೆಹಣ್ಣಿನ್ನು ತಿಂದು ಅದರ ಸಿಪ್ಪೆಯನ್ನು ನಿಮ್ಮ ಮುಖಕ್ಕೆ ಉಜ್ಜಿ. ಮುಖಕ್ಕೆ ಉಜ್ಜಿದ ಬಳಿಕ ಸುಮಾರು 30 ನಿಮಿಷಗಳ ಕಾಲ ಅದು ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.

ಲಿಂಬೆ ಹಣ್ಣು


ಲಿಂಬೆ ಹಣ್ಣಿನಿಂದ ಸೌಂದರ್ಯ ಆರೈಕೆ ಲಿಂಬೆಹಣ್ಣಿನಿಂದ ಸೌಂದರ್ಯದ ಆರೈಕೆ ಹೇಗೆ? ನಿಂಬೆಹಣ್ಣಿನ ರಸವು ಮೊಡವೆಗೆ ಒಳ್ಳೆಯ ಮದ್ದು. ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ' ಸಮೃದ್ಧವಾಗಿದೆ ಮತ್ತು ಇದು ಮೊಡವೆಗಳನ್ನು ನಿವಾರಿಸುವ ಗುಣ ಹೊಂದಿದೆ. ಇದು ಚರ್ಮದ ಮೇಲ್ಪದವನ್ನು ಸುಲಿದುಹಾಕುವ ಗುಣ ಹೊಂದಿದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಬಿಳಿ ಮಾಡುತ್ತದೆ ಮತ್ತು ಚರ್ಮವನ್ನು ಪರಿಣಾಮಕಾರಿಯಾಗಿ ಆರೈಕೆ ಮಾಡುತ್ತದೆ. ಲಿಂಬೆರಸವನ್ನು ತ್ವಚೆಯ ಮೇಲೆ ಹಾಕಿ ಮತ್ತು ಕೆಲವು ನಿಮಿಷದ ಬಳಿಕ ತೊಳೆಯಿರಿ.

ಪಪ್ಪಾಯಿ


ಇಂದು ಮಾರುಕಟ್ಟೆಯಲ್ಲಿ ಸಿಗುವ ತ್ವಚೆಗೆ ಸಂಬಂಧಿಸಿದ ಹೆಚ್ಚಿನ ಉತ್ಪನ್ನಗಳಲ್ಲಿ ಪಪ್ಪಾಯಿ ಅಂಶ ಒಳಗೊಂಡಿರುತ್ತದೆ. ಮೊಡವೆಗಳಿಗೆ ಇದು ಒಳ್ಳೆಯ ಮದ್ದು. ಪಪ್ಪಾಯಿಯನ್ನು ಪೇಸ್ಟ್ ಮಾಡಿ ಅದನ್ನು ತ್ವಚೆ ಹಚ್ಚಿ. ಇದನ್ನು 15-20 ನಿಮಿಷಗಳವರೆಗೆ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮೊಡವೆಗಳಿಗೆ ಇದು ಒಳ್ಳೆಯ ವಿಧಾನ.

ಮೊಟ್ಟೆ


ಆಹಾರದಲ್ಲಿ ಕ್ಯಾಲ್ಸಿಯಂಗಾಗಿ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಿದ್ದರೆ ಇದು ಮೊಡವೆಗಳಿಗೂ ಒಳ್ಳೆಯ ಮದ್ದು. ಮೊಡವೆಗಳಿಗೆ ಮೊಟ್ಟೆಯ ಬಿಳಿಭಾಗವು ಒಳ್ಳೆಯ ಚಿಕಿತ್ಸೆ. ಇದರಲ್ಲಿ ಪ್ರೋಟೀನ್ ಮತ್ತು ಖನಿಜಗಳಿದ್ದು, ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ ಮತ್ತು ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ. ಈ ವಿಧಾನದ ಮೂಲಕ ನೀವು ತುಂಬಾ ಕಡಿಮೆ ಖರ್ಚಿನಲ್ಲಿ ತ್ವಚೆಯ ಆರೈಕೆ ಮಾಡಬಹುದು. ಮೊಟ್ಟೆಯ ಬಿಳಿಭಾಗವನ್ನು ತೆಗೆದು ಅದನ್ನು ನಿಮ್ಮ ತ್ವಚೆಗೆ ಹಚ್ಚಿ ಮತ್ತು ಅದನ್ನು ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತೊಳೆಯಿರಿ.
English summary

Home remedies for Acne on face

Your skin likes you. It protects you from the elements and literally keeps you together. You in turn do your best to protect it from any kind of damage. have a look how to reduce pimples in skin
Story first published: Saturday, March 21, 2015, 15:16 [IST]
X
Desktop Bottom Promotion