For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವರೋಗಕ್ಕೂ, ಸೀಬೆಹಣ್ಣಿನ ಎಲೆಗಳೇ ಸಾಕು!

By Manu
|

ಸಣ್ಣ ಪುಟ್ಟ ರೋಗಗಳಿಗೆ ಹಿತ್ತಲ ಗಿಡದ ಮನೆ ಮದ್ದೇ ಸಾಕು, ಎಂಬುದು ಇಂದಿನ ದಿನಗಳಲ್ಲಿ ನಿಜವಾಗುತ್ತಿದೆ. ನಮ್ಮ ಕೈತೋಟದಲ್ಲಿಯೇ ಹಲವಾರು ರೀತಿಯ ಔಷಧೀಯ ಸಸ್ಯಗಳಿದ್ದರೂ ನಾವು ಮಾತ್ರ ಔಷಧಿಯ ಸಸ್ಯಗಳನ್ನು ಇನ್ನೆಲ್ಲೋ ಹುಡುಕುತ್ತಾ ಇರುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ಹೊಸ ಹೊಸ ಉತ್ಪನ್ನಗಳನ್ನು ಬಳಸಿಕೊಂಡು ನಮ್ಮ ದೇಹದ ಸೌಂದರ್ಯವನ್ನೇ ಹಾಳು ಮಾಡುತ್ತೇವೆ.

ಮುಖದ ಮೇಲಿನ ನೆರಿಗೆ, ಮೊಡವೆ, ಕಂದುಕಲೆ, ಅಲರ್ಜಿ ಅಥವಾ ಕಪ್ಪುಕಲೆಗಳಿಂದ ನಿಮಗೆ ಚಿಂತೆಯಾಗುತ್ತಿದೆಯಾ? ಇದರ ಪರಿಹಾರಕ್ಕೆ ನೀವು ಯಾವುದೇ ರೀತಿಯ ಕೆಮಿಕಲ್ ಟ್ರೀಟ್‌ಮೆಂಟ್‌ಗೆ ಒಳಗಾಗಬೇಡಿ. ಇದಕ್ಕೆ ಅತ್ಯಂತ ಸರಳ ಮತ್ತು ನೈಸರ್ಗಿಕ ಚಿಕಿತ್ಸೆಯೆಂದರೆ ಸೀಬೆಹಣ್ಣಿನ ಎಲೆಗಳು. ನಿಮ್ಮ ಚರ್ಮದ ಸಮಸ್ಯೆಗೆ ನೆರವು ನೀಡಬಲ್ಲ ನಾಲ್ಕು ಅದ್ಭುತ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

Guava leaves to beat wrinkles, acne, and skin allergies

ನೆರಿಗೆ ಹೋಗಲಾಡಿಲು ನೆರವಾಗುವುದು
ಸೀಬೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಅಧಿಕವಾಗಿದೆ. ಅಧ್ಯಯನಗಳ ಪ್ರಕಾರ ಇದರ ಎಲೆಗಳಲ್ಲಿ ಹಣ್ಣಿಗಿಂತ ಹೆಚ್ಚು ಸ್ವತಂತ್ರ ರಾಡಿಕಲ್ ಶೇಖರಿಸುವ ಗುಣವಿದೆ. ಇದರಿಂದ ಇದು ನೆರಿಗೆಯನ್ನು ದೂರವಿಡಲು ನೆರವಾಗುತ್ತದೆ. ಇದನ್ನು ಹೊರತುಪಡಿಸಿ ಎಲೆಗಳಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣಗಳಿವೆ ಮತ್ತು ಇದು ನೆರಿಗೆ ಬೀಳುವುದನ್ನು ತಡೆಯುತ್ತದೆ.

ಮೊಡವೆಗಳನ್ನು ನಿವಾರಿಸಲು ನೆರವಾಗುವುದು
ಅಮೆರಿಕನ್ ಜರ್ನಲ್ ನ ಚೈನೀಸ್ ಮೆಡಿಸಿನ್ ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಸೀಬೆಹಣ್ಣಿನ ಎಲೆಗಳಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಗುಣಗಳು ಅತಿಯಾಗಿದೆ ಮತ್ತು ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ತುಂಬಾ ಪರಿಣಾಮಕಾರಿ. ಈ ಅಧ್ಯಯನವನ್ನು ಹೊರತುಪಡಿಸಿ ಸೀಬೆಕಾಯಿ ಎಲೆಗಳಲ್ಲಿ ಉರಿಯೂತ ವಿರೋಧಿ ಗುಣಗಳಿದ್ದು, ಇದು ತ್ವಚೆಯನ್ನು ತಂಪಾಗಿರಿಸಿ ಮೊಡವೆಗಳು ಮೂಡದಂತೆ ನೋಡಿಕೊಳ್ಳುತ್ತದೆ.

ಎಟೊಪಿಕ್ ಡರ್ಮಟೈಟಿಸ್ ಚಿಕಿತ್ಸೆಗೆ ಸಹಕಾರಿ
ಸೀಬೆಕಾಯಿ ಎಲೆಗಳಲ್ಲಿ ಆ್ಯಂಟಿ ಅಲರ್ಜಿ ಗುಣಗಳಿವೆ ಮತ್ತು ಇದು ದೇಹವು ಉತ್ಪತ್ತಿ ಮಾಡುವ ಹಿಸ್ಟಮೈನೆಸ್(ಬಾಹ್ಯ ಅಂಶಗಳ ವಿರುದ್ಧ ಹೋರಾಡಲು ದೇಹವು ಉತ್ಪಾದಿಸುವ ಒಂದು ಅಂಶ. ಇದು ಉರಿಯೂತ ಉಂಟುಮಾಡಿ, ಅಲರ್ಜಿ ಲಕ್ಷಣಗಳ ಉತ್ಪತ್ತಿ ಉಂಟುಮಾಡುತ್ತದೆ)ನ್ನು ತಡೆಯುತ್ತದೆ. ಇದರಿಂದ ಎಟೊಪಿಕ್ ಡೆರ್ಮಟೈಟಿಸ್ ರೋಗಿಗಳಿಗೆ ಚಿಕಿತ್ಸೆಗೆ ಇದು ಸಹಕಾರಿ. ಇಷ್ಟು ಮಾತ್ರವಲ್ಲದೆ ಎಲೆಗಳಲ್ಲಿ ಇರುವಂತಹ ಉರಿಯೂತ ವಿರೋಧಿ ಗುಣಗಳು ಎಟೊಪಿಕ್ ಡೆರ್ಮಟೈಟಿಸ್ ನಿಂದ ಉಂಟಾಗುವ ಕೆಂಪುಕಲೆ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.

ಕಲೆಗಳನ್ನು(ಕಪ್ಪು ಮತ್ತು ಕಂದು) ನಿವಾರಿಸುತ್ತದೆ
ಸೀಬೆಕಾಯಿ ಎಲೆಗಳು ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಇದು ನಿಮ್ಮ ಮುಖದಲ್ಲಿರುವ ಕಪ್ಪು ಮತ್ತು ಕಂದು ಕಲೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಉರಿಯೂತ ಶಮನಗೊಳಿಸುವ ಗುಣಗಳು ಮಾತ್ರವಲ್ಲದೆ, ಬ್ಯಾಕ್ಟೀರಿಯಾವನ್ನು ಕೊಲ್ಲುವ ಗುಣಗಳಿವೆ. ಇದು ತ್ವಚೆಯ ಶಕ್ತಿಯನ್ನು ವರ್ಧಿಸಿ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.

ಬಳಸುವುದು ಹೇಗೆ?
ಸೀಬೆಕಾಯಿಯ ಕೆಲವು ಎಲೆಗಳನ್ನು ತೆಗೆದುಕೊಳ್ಳಿ.ಎಟೊಪಿಕ್ ಡರ್ಮಟೈಟಿಸ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸುವುದಾದರೆ ಒಣಗಿದ ಎಲೆಗಳನ್ನು ಬಳಸಿ. ಇದನ್ನು ಹುಡಿ ಮಾಡಿ ಬಿಸಿ ನೀರಿನ ಒಂದು ಪಾತ್ರೆಗೆ ಹಾಕಿ. ನೀರನ್ನು ಸರಿಯಾಗಿ ಕುದಿಸಿ ಮತ್ತು ನೀರು ಕಂದು ಬಣ್ಣಕ್ಕೆ ತಿರುಗುವ ತನಕ ಅದು ಕುದಿಯುತ್ತಾ ಇರಲಿ. ಇದನ್ನು ತಂಪಾಗಲು ಬಿಡಿ ಮತ್ತು ಹತ್ತಿಯ ಉಂಡೆ ಮಾಡಿ ಅದನ್ನು ಈ ನೀರಿನಲ್ಲಿ ಮುಳುಗಿಸಿ ನಿಮ್ಮ ಮುಖ ಅಥವಾ ಯಾವ ಭಾಗಕ್ಕೆ ಚಿಕಿತ್ಸೆ ನೀಡಲು ಬಯಸುತ್ತೀರೋ ಅಲ್ಲಿಗೆ ಹಚ್ಚಿ. ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಹಾಗೆ ಇರಲಿ. ಇದರ ಬಳಿಕ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡುವುದರಿಂದ ಫಲಿತಾಂಶ ಪಡೆಯಬಹುದು.

English summary

Guava leaves to beat wrinkles, acne, and skin allergies

Worried about the wrinkles, acne, blemishes, allergies or dark spots on your face? Well, you don’t need to get any chemical treatments to get rid of them. An easy and natural remedy for this is guava leaves. Here are the amazing leaf can help beat these skin problems.
X
Desktop Bottom Promotion