For Quick Alerts
ALLOW NOTIFICATIONS  
For Daily Alerts

ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

By Deepak
|

ನಮ್ಮಲ್ಲಿ ಒಂದು ವಿಶಿಷ್ಟ ಗುಣವಿದೆ. ಅಂದರೆ ಸುಲಭವಾಗಿ ಲಭ್ಯವಾಗದುದಕ್ಕೆ ಹೆಚ್ಚು ಬೆಲೆ ನೀಡುವುದು ಮತ್ತು ಅದಕ್ಕೆ ಸಮನಾದ, ಸುಲಭವಾಗಿ ಲಭ್ಯವಾಗುವುದನ್ನು ಕಡೆಗಣಿಸುವುದು. ಉದಾಹರಣೆಗೆ ಹತ್ತು ಸಾವಿರ ರೂಪಾಯಿಯ ಸೀರೆಗಿಂತಲೂ ಸಾವಿರ ರೂಪಾಯಿಯ ಸೀರೆ ಚೆನ್ನಾಗಿದ್ದರೂ ಬೆಲೆ ನೋಡಿದವರು ಹತ್ತು ಸಾವಿರದ ಸೀರೆಯೇ ಚೆನ್ನಾಗಿದೆ ಎನ್ನುತ್ತಾರೆ. ಅಂತೆಯೇ ನಮ್ಮೆಲ್ಲರ ಅಡುಗೆಮನೆಯ ನಿತ್ಯಸಂಗಾತಿ ಶುಂಠಿ ಕೂಡ.

ಅದರಲ್ಲೂ ಶುಂಠಿ ಎಂದಾಕ್ಷಣ ಅಡುಗೆಗೆ ಮಾತ್ರ ಸೀಮಿತವಾದ ಸಾಂಬಾರ ಪದಾರ್ಥವೆಂದು ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಶುಂಠಿ ಅಜೀರ್ಣ, ಶೀತ, ಕೆಮ್ಮು ಮೊದಲಾದ ತೊಂದರೆಗಳಿಗೆ ಹೇಗೆ ಉಪಯುಕ್ತವಾದ ಔಷಧಿಯೋ ಅಂತೆಯೇ ತ್ವಚೆಗೂ ಒಂದು ಉತ್ತಮವಾದ ಔಷಧಿಯಾಗಿದೆ. ಅಷ್ಟೇ ಅಲ್ಲದೆ ದುಬಾರಿ ಪ್ರಸಾಧನಗಳು ನೀಡುವ ಪರಿಣಾಮಕ್ಕಿಂತಲೂ ಉತ್ತಮವಾದ ಪರಿಣಾಮವನ್ನು ಅಡುಗೆಮನೆಯಲ್ಲಿ ಸದಾ ಇರುವ ಈ ಪುಟ್ಟ ಶುಂಠಿಯಿಂದ ಪಡೆಯಬಹುದು. ಬನ್ನಿ ಅಡುಗೆ ಮಾಡಲು ಬಳಸುವ ಪದಾರ್ಥವು ಹೇಗೆ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ ಎಂಬುದನ್ನು ಸ್ಲೈಡ್ ಶೋ ಮೂಲಕ ನೋಡೋಣ...

ಸಾಸಿವೆ - ಶುಂಠಿಯಲ್ಲಿ ಕಾಲು ನೆನೆಸಿಡಿ

ಸಾಸಿವೆ - ಶುಂಠಿಯಲ್ಲಿ ಕಾಲು ನೆನೆಸಿಡಿ

1 ಚಮಚದಷ್ಟು ಸಾಸಿವೆ ಪುಡಿಯನ್ನು ಮತ್ತು 2 ಚಮಚದಷ್ಟು ಶುಂಠಿಯನ್ನು ಬಾತ್ ಟಬ್ ಗೆ ಹಾಕಿ. ಉಗುರುಬೆಚ್ಚನೆಯ ನೀರು ಇದರಲ್ಲಿರಲಿ. ಹೆಚ್ಚು ಬಿಸಿಯಾಗಿರುವ ನೀರನ್ನು ಬಳಸಬೇಡಿ. ಇದರಲ್ಲಿ ನಿಮ್ಮ ಕಾಲುಗಳನ್ನು 15-20 ನಿಮಿಷಗಳ ಕಾಲ ನೆನೆಸಿಡಿ. ನಂತರ ಕಾಲನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು ಚೆನ್ನಾಗಿ ಒರೆಸಿಕೊಳ್ಳಿ.

ತ್ವಚೆಯ ಕಲೆಗಳ ನಿವಾರಣೆಗೆ

ತ್ವಚೆಯ ಕಲೆಗಳ ನಿವಾರಣೆಗೆ

ತ್ವಚೆಯ ಕಲೆಗಳನ್ನು ನಿವಾರಿಸುವ ದಿವ್ಯೌಷಧ ಶುಂಠಿಯಾಗಿದ್ದು ದಿನಕ್ಕೆ ಎರಡು ಬಾರಿ ಶುಂಠಿಯನ್ನು ಮುಖಕ್ಕೆ ಉಜ್ಜಕೊಳ್ಳಿ. ತದನಂತರ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇನ್ನು ಶುದ್ಧ ನೀರಿನಿಂದ ತ್ವಚೆಯನ್ನು ತೊಳೆದುಕೊಳ್ಳಿ, ತ್ವಚೆಯಲ್ಲಿ ಆಗಿರುವ ಬದಲಾವಣೆಯನ್ನು ನೋಡಿ, ನೀವೇ ಅಚ್ಚರಿಗೊಳ್ಳುವಿರಿ

ಶುಂಠಿ - ಲಿಂಬೆ ಬಾಡಿ ಸ್ಕ್ರಬ್

ಶುಂಠಿ - ಲಿಂಬೆ ಬಾಡಿ ಸ್ಕ್ರಬ್

ನಿಮ್ಮ ದೇಹದಿಂದ ಸೆಲ್ಯುಲೈಟ್ ಅನ್ನು ನಿವಾರಿಸುತ್ತದೆ. ಶುಂಠಿ ಪ್ರಕೃತಿದತ್ತವಾದ ಸೆಲ್ಯುಲೈಟ್ ನಿವಾರಕ ಎಂದೆನಿಸಿದೆ. ತ್ವಚೆಯ ಕೊಳೆಯನ್ನು ನಿವಾರಿಸಿ ನಿಮ್ಮನ್ನು ತಾಜಾಗೊಳಿಸುತ್ತದೆ. ಇದಕ್ಕೆ ಲಿಂಬೆ ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಸ್ಕ್ರಬ್ ಅನ್ನು ಸಿದ್ಧಪಡಿಸಿಕೊಳ್ಳಬಹುದು. ನಿಮಿಷಗಳಲ್ಲಿ ಇದು ನಿಮ್ಮನ್ನು ಉಲ್ಲಸಿತಗೊಳಿಸುತ್ತದೆ.

ಶುಂಠಿ - ಲಿಂಬೆ ಬಾಡಿ ಸ್ಕ್ರಬ್

ಶುಂಠಿ - ಲಿಂಬೆ ಬಾಡಿ ಸ್ಕ್ರಬ್

ಒಂದು ಚಮಚ ಸಕ್ಕರೆ, 1 ಚಮಚ ಆಲೀವ್ ಎಣ್ಣೆ, ತಾಜಾವಾಗಿ ಕೊರೆದ 2 ಚಮಚದಷ್ಟು ಶುಂಠಿಯ ಪುಡಿ, 1 ಚಮಚದಷ್ಟು ಲಿಂಬೆಯ ರಸವನ್ನು ಪಾತ್ರೆಗೆ ಹಾಕಿಕೊಳ್ಳಿ. ನಿಮ್ಮ ದೇಹವನ್ನು ಈ ಮಿಶ್ರಣ ಬಳಸಿಉಜ್ಜಿಕೊಳ್ಳಿ. ಇದನ್ನು ವಾರಗಳವರೆಗೆ ಫ್ರಿಡ್ಜ್ ನಲ್ಲಿಯೂ ಕೂಡ ನಿಮಗೆ ಇರಿಸಿಕೊಳ್ಳಬಹುದಾಗಿದೆ.

ಶುಂಠಿ - ರೋಸ್ ಮಸಾಜ್ ಎಣ್ಣೆ

ಶುಂಠಿ - ರೋಸ್ ಮಸಾಜ್ ಎಣ್ಣೆ

ರೊಮ್ಯಾಂಟಿಕ್ ಆಯಿಲ್ ಎಂಬ ಹೆಸರೂ ಇದಕ್ಕಿದೆ. ಶುಂಠಿ, ರೋಸ್ ವಾಟರ್ ಮತ್ತು ಎಣ್ಣೆಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ನಿಮಗೆ ಆರಾಮವನ್ನು ನೀಡಿ ದೇಹಕ್ಕೆ ಬೆಚ್ಚನೆಯ ಅನುಭವವನ್ನು ಇದು ನೀಡುತ್ತದೆ. ನೀವು ಡೇಟ್‎ಗಾಗಿ ಹೊರಗೆ ಹೋಗುತ್ತಿದ್ದೀರಿ ಎಂದಾದಲ್ಲಿ ವಾರಕ್ಕೂ ಮುನ್ನ ಈ ಮಸಾಜ್ ಅನ್ನು ಮಾಡಿಸಿಕೊಳ್ಳಿ. ನಿಮ್ಮ ತ್ವಚೆ ಎಳಸಾಗುತ್ತದೆ ಮತ್ತು ಹೊಳೆಯುತ್ತಿರುತ್ತದೆ. ಒತ್ತಡ ನಿವಾರಿಸುವಲ್ಲಿ ಈ ಮಸಾಜ್ ಪಾತ್ರ ಹಿರಿದು.

ಶುಂಠಿ - ರೋಸ್ ಮಸಾಜ್ ಎಣ್ಣೆ

ಶುಂಠಿ - ರೋಸ್ ಮಸಾಜ್ ಎಣ್ಣೆ

ಶುಂಠಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. 10 ಒಣಗಿದ ಗುಲಾಬಿ ಎಸಳುಗಳನ್ನು ಸೇರಿಸಿಕೊಳ್ಳಿ ಆಲೀವ್ ಆಯಿಲ್ ಅಥವಾ ಜೊಜೊಬಾ ಎಣ್ಣೆಯನ್ನು ಮಿಶ್ರಮಾಡಿಕೊಳ್ಳಿ. ಸಣ್ಣ ಪಾತ್ರೆಯಲ್ಲಿ ಈ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿಕೊಳ್ಳಿ ಮತ್ತು ಗಾಜಿನ ಬಾಟಲಿಯೊಂದಕ್ಕೆ ಈ ಎಣ್ಣೆಯನ್ನು ಹಾಕಿಡಿ. ಶುಂಠಿ ಬಾಟಲಿಯ ತಳಭಾಗಕ್ಕೆ ಊರಿಕೊಳ್ಳಬೇಕು. ಇದನ್ನು 7 ದಿನಗಳ ಕಾಲ ಹಾಗೆಯೇ ಬಿಡಿ. ಬಳಸುವ ಮೊದಲು ಚೆನ್ನಾಗಿ ಕುಲುಕಿಕೊಳ್ಳಿ. ನಂತರ ನಿಮ್ಮ ದೇಹಕ್ಕೆ ಇದರಿಂದ ಮಸಾಜ್ ಮಾಡಿಕೊಳ್ಳಿ. ನಿಮ್ಮ ದೇಹದ ಸೂಕ್ಷ್ಮ ಜಾಗಗಳನ್ನು ಬಿಡಿ. ಆರಾಮದಾಯಕ ಸಮಯ ನಿಮ್ಮದಾಗಿರುತ್ತದೆ.

ಶುಂಠಿ - ದಾಲ್ಚಿನಿ ಉಪ್ಪು ಸ್ನಾನ

ಶುಂಠಿ - ದಾಲ್ಚಿನಿ ಉಪ್ಪು ಸ್ನಾನ

ಸ್ನಾಯು ನೋವನ್ನು ಕಡಿಮೆ ಮಾಡಿ ಆಯಾಸವನ್ನು ಪರಿಹರಿಸುತ್ತದೆ. ತ್ವಚೆಯನ್ನು ಹೊಳೆಯಿಸಿ ರಕ್ತಪ್ರವಾಹವನ್ನು ವೃದ್ಧಿಸುತ್ತದೆ. ನಿತ್ಯವೂ ಇದರಲ್ಲಿ ಸ್ನಾನ ಮಾಡಿದರೆ ಅತ್ಯುತ್ತಮ ನಿದ್ದೆಗೂ ಇದು ಸಹಕಾರಿಯಾಗಲಿದೆ.

ಶುಂಠಿ - ದಾಲ್ಚಿನಿ ಉಪ್ಪು ಸ್ನಾನ ತಯಾರಿ ವಿಧಾನ

ಶುಂಠಿ - ದಾಲ್ಚಿನಿ ಉಪ್ಪು ಸ್ನಾನ ತಯಾರಿ ವಿಧಾನ

1/4 ಭಾಗದಷ್ಟು ಸಮುದ್ರ ಉಪ್ಪು ಅಥವಾ ಎಪ್ಸಮ್ ಉಪ್ಪನ್ನು ಬಳಸಿ. ಚೆನ್ನಾಗಿ ಹೆಚ್ಚಿರುವ ಶುಂಠಿಯ ತುಂಡುಗಳು 3 ಚಮಚದಷ್ಟಿರಲಿ. 1/2 ಚಮಚ ದಾಲ್ಚಿನಿ ಮತ್ತು 5 ಹನಿಗಳಷ್ಟು ಆರೆಂಜ್ ದ್ರವವನ್ನು ಸಣ್ಣ ಪಾತ್ರೆಯಲ್ಲಿ ಹಾಕಿರಿ. ಚೆನ್ನಾಗಿ ಕಲಸಿ. 15 -20 ನಿಮಿಷಗಳ ಕಾಲ ಹಾಗೆಯೇ ಇಡಿ ಉತ್ತಮ ಫಲ ಪಡೆದುಕೊಳ್ಳಿ.

English summary

Ginger Beauty Recipes To Fix Beauty Issues

Ginger, a natural ingredient present in every kitchen, can be used to fix many beauty-related issues. Ginger is not only good for health, but also has many beneficial properties for your skin as well. Have a look at how to use ginger for beauty and ginger recipes for beauty.
Story first published: Thursday, November 26, 2015, 20:32 [IST]
X
Desktop Bottom Promotion