For Quick Alerts
ALLOW NOTIFICATIONS  
For Daily Alerts

ಮಗುವಿನಂತಹ ಕೋಮಲ ತ್ವಚೆ ಪಡೆಯುವ ಇರಾದೆಯೇ?

|

ನಮ್ಮ ಚರ್ಮದ ಹೊರಪದರದ ಜೀವಕೋಶಗಳು ಸತತವಾಗಿ ಒಣಗಿ ಸೂಕ್ಷ್ಮ ಪುಡಿಯ ರೂಪದಲ್ಲಿ ಅಂಟಿಕೊಂಡಿರುತ್ತದೆ. ಇದನ್ನು ಬರೆಯ ನೀರಿನಿಂದ ಹೊರತೆಗೆಯಲು ಸಾಧ್ಯವಿಲ್ಲ. ಮೊದಲು ಕ್ಲೀನ್ಸರ್ ಎಂಬ ದ್ರಾವಣದಿಂದ ಇದನ್ನು ಒರೆಸಿ ತೆಗೆಯಲಾಗುತ್ತಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ ಇದನ್ನು ತೆಗೆಯಲು Facial scrub ಎಂಬ ಮಾರ್ಜಕಗಳು ದೊರಕುತ್ತಿವೆ.

ಇವುಗಳನ್ನು ಬಳಸಿ ಮುಖ ತೊಳೆದುಕೊಳ್ಳುವುದರಿಂದ ಈ ಜೀವಕೋಶಗಳು ಸುಲಭವಾಗಿ ತೊಲಗುತ್ತವೆ ಹಾಗೂ ಹೊಸಚರ್ಮ ಕಾಂತಿಯುಕ್ತವಾಗಿ ಬೆಳಗುತ್ತದೆ. ಜೊತೆಗೇ ಸೂಕ್ಷ್ಮರಂಧ್ರಗಳಲ್ಲಿ ಅಂಟಿಕೊಂಡಿದ್ದ ಕೊಳೆ ಮತ್ತು ಎಣ್ಣೆಯ ಜಿಡ್ಡನ್ನೂ ತೊಲಗಿಸುತ್ತವೆ. ಇದರಿಂದ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಗ್ರಂಥಿಗಳ ಸ್ರವಿಕೆ ಹೊರಬರಲು ಸುಲಭವಾಗಿ ಮೊಡವೆಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ದಿನಕ್ಕೆರಡು ಬಾರಿ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!

ಮಾರುಕಟ್ಟೆಯಲ್ಲಿ ಹಲವು ವಿಧದ ಮಾರ್ಜಕಗಳು ಲಭ್ಯವಿದ್ದರೂ ಅವುಗಳಲ್ಲಿರುವ ವಿವಿಧ ರಾಸಾಯನಿಕಗಳ ಕಾರಣ ಎಲ್ಲರಿಗೂ ಇದು ಏಕಸಮಾನವಾಗಿ ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ಅದರ ಬದಲಿಗೆ ಮನೆಯಲ್ಲಿರುವ ಸುಲಭಸಾಮಾಗ್ರಿಗಳಿಂದಲೇ ಮಾರ್ಜಕವನ್ನು ತಯಾರಿಸಿಕೊಳ್ಳಬಹುದು. ಅಗ್ಗವೂ ಆದ ಇವುಗಳ ಬಳಕೆಯ ಬಗ್ಗೆ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಕಾಫಿ ಬೀಜಗಳು

ಕಾಫಿ ಬೀಜಗಳು

ಹುರಿಯದ ಕೆಲವು ಕಾಫಿ ಬೀಜಗಳನ್ನು ಮಿಕ್ಸಿಯ ಚಿಕ್ಕಜಾರಿನಲ್ಲಿ ನುಣ್ಣನೆಯ ಪುಡಿಯಾಗುವಂತೆ ಅರೆಯಿರಿ. ಇದನ್ನು ಸಮಪ್ರಮಾಣದಲ್ಲಿ ಜೇನು ಮತ್ತು ಆಲಿವ್ ಎಣ್ಣೆಯೊಡನೆ ಬೆರೆಸಿ ನುಣುಪಾದ ಲೇಪನ ತಯಾರಿಸಿ. ಇದನ್ನು ಈಗ ತಾನೇ ತೊಳೆದ ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಮೊಡವೆಗಳಿರುವ ಮುಖಕ್ಕೆ ಈ ಲೇಪನ ಅತ್ಯುತ್ತಮವಾಗಿದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕೊಂಚ ಕಪ್ಪು ಚಾಕಲೇಟನ್ನು ಬಿಸಿಯಾಗಿಸಿ. ಕರಗಲು ತೊಡಗಿದಾಕ್ಷಣ ಒಲೆಯಿಂದ ಇಳಿಸಿ ಸಮಪ್ರಮಾಣದಲ್ಲಿ ಬಾದಾಮಿ ಎಣ್ಣೆ ಮತ್ತು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ನೀವು ತಾಳಿಕೊಳ್ಳುವಷ್ಟು ಬಿಸಿಯಿರುವಂತೆಯೇ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸಬೇಡಿ. ಇದು ಚರ್ಮಕ್ಕೆ ಉತ್ತಮ ಆರೈಕೆ ನೀಡುವ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಹಸಿರು ಚಹಾ

ಹಸಿರು ಚಹಾ

ಒಂದು ಕಪ್ ಕುದಿನೀರಿಗೆ ಹಸಿರ್ ಚಹಾ ಬ್ಯಾಗ್ ಒಂದನ್ನು ಹಾಕಿ ನೀರು ತಣ್ಣಗಾಗುವವರೆಗೆ ಚಮಚದಿಂದಿ ಕೆಲವು ಬಾರಿ ತಿರುವಿ. ತಣ್ಣಗಾದ ಬಳಿಕ ಬ್ಯಾಗ್ ನಿವಾರಿಸಿ ಕೊಂಚ ಸಕ್ಕರೆ ಮತ್ತು ಜೇನು ಹಾಕಿ. ಈಗ ದ್ರಾವಣ ನೀರಿಗಿಂತ ಕೊಂಚ ಗಾಢವಿರಬೇಕು. ಇಲ್ಲದಿದ್ದರೆ ಇನ್ನೂ ಕೊಂಚ ಸಕ್ಕರೆ ಹಾಕಿ ಗಾಢವಾಗಿಸಿ. ಇದನ್ನು ಈಗತಾನೇ ತೊಳೆದ ಮುಖಕ್ಕೆ ಹಚ್ಚಿ ನಯವಾಗಿ ಸುಮಾರು ಐದು ನಿಮಿಷಗಳವರೆಗೆ ಮಸಾಜ್ ಮಾಡಿ. ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸಬೇಡಿ. ಇದರಿಂದ ನೈಸರ್ಗಿಕ ಬಣ್ಣ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಬ್ಲೂಬೆರಿ

ಬ್ಲೂಬೆರಿ

ಕೆಲವು ಬ್ಲೂಬೆರಿ ಹಣ್ಣುಗಳನ್ನು ಚೆನ್ನಾಗಿ ಹಿಚುಕಿ ಸ್ವಲ್ಪ ಲಿಂಬೆರಸ ಮತ್ತು ಕಂದುಸಕ್ಕರೆಯನ್ನು ಬಳಸಿ ಮಿಶ್ರಣ ಮಾಡಿ. ಇದನ್ನು ಈಗತಾನೇ ತೊಳೆದ ಮುಖದ ಮೇಲೆ ವೃತ್ತಾಕಾರದಲ್ಲಿ ಸುಮಾರು ಐದು ನಿಮಿಷಗಳವರೆಗೆ ಮಸಾಜ್ ಮಾಡಿ. ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬಾದಾಮಿ

ಬಾದಾಮಿ

ಕೆಲವು ಒಣಬಾದಾಮಿಗಳನ್ನು ಸ್ವಲ್ಪ ದೊರಗಾರಿವಂತೆ ಅರೆಯಿರಿ. ಇದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಹಾಕಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಓಟ್ಸ್

ಓಟ್ಸ್

ಸಮಪ್ರಮಾಣದಲ್ಲಿ ಕೊಂಚ ಬಿಳಿ ಓಟ್ಸ್, ಹಾಲುಪುಡಿಯಿಂದ ತಯಾರಿಸಿದ ಹಸಿ ಹಾಲು, ಲ್ಯಾವೆಂಡರ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈಗತಾನೇ ತೊಳೆದ ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ. ಮೂಗಿನ ಅಕ್ಕಪಕ್ಕ ಮತ್ತು ಹಣೆಗೆ ಈ ಲೇಪನ ಅತ್ಯುತ್ತಮವಾಗಿದೆ. ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಪಪ್ಪಾಯಿ

ಪಪ್ಪಾಯಿ

ಚೆನ್ನಾಗಿ ಕಳಿತ ಪಪ್ಪಾಯಿ ಹಣ್ಣನ್ನು ಸ್ವಲ್ಪ ಸಕ್ಕರೆ ಮತ್ತು ಜೇನು ಸೇರಿಸಿ ನಯವಾದ ಲೇಪನ ತಯಾರಿಸಿ. ಇದನ್ನು ಈಗತಾನೇ ತೊಳೆದ ಮುಖಕ್ಕೆ ಬೆರಳ ತುದಿಗಳಿಂದ ನಯವಾಗಿ ಮಸಾಜ್ ಮಾಡಿ. ಕೆಲವು ನಿಮಿಷ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

English summary

Get Baby Skin At Home By These Scrubs

Facial scrubs remove the dead cells from skin and improve complexion. They also open up the skin pores to remove black heads. Facial scrubs exfoliate the skin and makes it refreshed. They also remove entrapped dirt and oil from the skin. They prevent the development of acne and pimples as they deeply remove oil and impurities.
Story first published: Thursday, July 16, 2015, 11:37 [IST]
X
Desktop Bottom Promotion