For Quick Alerts
ALLOW NOTIFICATIONS  
For Daily Alerts

ಅಪ್ಸರೆಯಂತಹ ತ್ವಚೆಗಾಗಿ ತಾಜಾ ಹಣ್ಣಿನ ಫೇಸ್ ಪ್ಯಾಕ್

|

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಚರ್ಮದ ಕಾಂತಿ ಬೆಳಗಿಸಲು ಹಾಗೂ ಕಲೆಗಳನ್ನು ನಿವಾರಿಸಲು ಇಂದು ಹಲವು ಮುಖಲೇಪಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಲ್ಲದೇ ಈ ಮುಖಲೇಪವನ್ನು ಹಚ್ಚುವ ಪರಿಣಿತರೂ ಇದ್ದಾರೆ. ಆದರೆ ಇವೆಲ್ಲಾ ಕೊಂಚ ದುಬಾರಿಯೂ, ಇದಕ್ಕಾಗಿ ಸಮಯವನ್ನು ವ್ಯಯಿಸಬೇಕಾಗಿ ಬರುವಂತಹದ್ದೂ ಆದುದರಿಂದ ಎಲ್ಲರಿಗೂ ಇವುಗಳನ್ನು ಬಳಸಲು ಸಾಧ್ಯವಿಲ್ಲ.

ಆದರೆ ಇದಕ್ಕೂ ಉತ್ತಮವಾದ ಮುಖಲೇಪವನ್ನು (ಫೇಸ್‌ಪ್ಯಾಕ್) ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು, ಅದೂ ಕೇವಲ ಹಣ್ಣುಗಳಿಂದ! ಹೌದು, ಹಣ್ಣುಗಳ ತಿರುಳು ಹೇಗೆ ಆಹಾರದ ರೂಪದಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆಯೋ, ಇದೇ ಪೋಷಕಾಂಶಗಳು ಚರ್ಮದ ಹೊರಗಿನಿಂದಲೂ ಉತ್ತಮ ಆರೈಕೆ ನೀಡಬಲ್ಲವು. ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್

ಹಣ್ಣುಗಳ ತಿರುಳು ಮಾತ್ರವಲ್ಲದೇ ಅವುಗಳ ಸಿಪ್ಪೆಯನ್ನೂ ಮುಖಲೇಪವನ್ನಾಗಿ ಬಳಸಬಹುದು. ಇದರೊಂದಿಗೆ ಬೇರೇನನ್ನೂ ಸೇರಿಸುವ ಅಗತ್ಯವಿಲ್ಲ. ಇತರ ಮುಖಲೇಪ ತಯಾರಿಸಲು ಹೆಚ್ಚು ಸಮಯ ತೆಗೆದುಕೊಂಡರೆ ಹಣ್ಣುಗಳ ತಿರುಳು ಅಥವಾ ಸಿಪ್ಪೆಯನ್ನು ಸುಲಿಯುವುದೇ ಮುಖ್ಯ ಕಾರ್ಯ, ಬಳಿಕ ಮಿಕ್ಸಿಯಲ್ಲಿ ಅರೆಯುವುದು ಕೆಲವು ಕ್ಷಣಗಳ ಕೆಲಸವಷ್ಟೇ. ಆದರೆ ಕೆಲವರ ಚರ್ಮ ಸೂಕ್ಷ್ಮಸಂವೇದಿಯಾಗಿದ್ದು ಹಣ್ಣುಗಳ ಆಮ್ಲೀಯತೆಗೆ ಉರಿ ತರಿಸಬಹುದು. ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್

ಆದ್ದರಿಂದ ಯಾವುದೇ ಹಣ್ಣಿನ ತಿರುಳಿನ ಅಥವಾ ಸಿಪ್ಪೆಯ ಮುಖಲೇಪವನ್ನು ಮುಖಕ್ಕೆ ಹಚ್ಚುವ ಮೊದಲು ಮೊಣಕೈಗೆ ಹಚ್ಚಿ ಉರಿ ಅಥವಾ ಚರ್ಮ ಕೆಂಪಗಾಗುವುದು ಮೊದಲಾದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೊಂಚ ಅನುಮಾನವಿದ್ದರೂ ನಿಮ್ಮ ಹತ್ತಿರದ ಚರ್ಮವೈದ್ಯರಲ್ಲಿ ಸಲಹೆ ಪಡೆಯಿರಿ. ಈಗ ಈ ಹಣ್ಣುಗಳು ನಮ್ಮ ಚರ್ಮದ ಕಾಂತಿಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಚೆನ್ನಾಗಿ ಹಣ್ಣಾದ ಪಪ್ಪಾಯಿಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಚರ್ಮದ ಪೋಷಣೆಗೆ ನೆರವಾಗುತ್ತದೆ. ಜೊತೆಗೇ ಚರ್ಮದ ಹೊರಪದರದ ಒಣಗಿದ ಜೀವಕೋಶಗಳನ್ನು ನಿವಾರಿಸಿ ನವಕಾಂತಿ ನೀಡುತ್ತದೆ.ಇದಕ್ಕಾಗಿ ಪಪ್ಪಾಯಿ ಹಣ್ಣಿನ ತಿರುಳನ್ನು ಚೆನ್ನಾಗಿ ಅರೆದು ಮುಖಕ್ಕೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಬಾಳೆಹಣ್ಣು

ಬಾಳೆಹಣ್ಣು

ಚೆನ್ನಾಗಿ ಕಳಿತ ಪಚ್ಚಬಾಳೆ ಮುಖಲೇಪಕ್ಕೆ ಉತ್ತಮವಾದ ಆಯ್ಕೆಯಾಗಿದೆ. ಇದರಲ್ಲಿರುವ ವಿಟಮಿನ್‌ಗಳು ಚರ್ಮದ ಪೋಷಣೆಗೆ ನೆರವಾಗುತ್ತವೆ.ಇದರಲ್ಲಿನ ಮೆಗ್ನೀಶಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ಚರ್ಮದ ಆರೈಕೆಗೆ ನೆರವಾಗುತ್ತವೆ. ಇದಕ್ಕಾಗಿ ಒಂದೆರಡು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಕೈಯಲ್ಲಿಯೇ ಕಿವುಚಿ ಮುಖಕ್ಕೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದರೂ ಇದರಲ್ಲಿರುವ ಸಿಟ್ರಿಕ್ ಆಮ್ಲ ಸೂಕ್ಷ್ಮ ಚರ್ಮದವರಿಗೆ ಉರಿ ತರಿಸಬಹುದು. ಮೊದಲು ಇದು ಸೂಕ್ತವೇ ಎಂದು ಮೊಣಕೈಗೆ ಹಚ್ಚಿ ಕೆಲನಿಮಿಷ ಬಿಟ್ಟುನೋಡಿಕೊಳ್ಳಿ. ಏನೂ ತೊಂದರೆ ಇಲ್ಲವೆಂದಾದಲ್ಲಿ ಮುಖವನ್ನು ಮೊದಲು ಸೌಮ್ಯ ಸೋಪು ಅಥವಾ ಫೇಸ್ ವಾಶ್ ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಕೈಗೆ ಲಿಂಬೆರಸವನ್ನು ಸುರಿದುಕೊಂಡು ಮುಖವಿಡೀ ಸವರಿ. ಎಚ್ಚರಿಕೆ: ಅಪ್ಪಿತಪ್ಪಿಯೂ ಮುಖ ತೊಳೆಯುವವರೆಗೂ ಕಣ್ಣು ಬಿಡಬಾರದು, ಏಕೆಂದರೆ ಸಿಟ್ರಿಕ್ ಆಮ್ಲ ಕಣ್ಣಿಗೆ ದಾಟಿದರೆ ಭಯಂಕರ ಉರಿಯನ್ನು ಸಹಿಸಬೇಕಾಗುತ್ತದೆ. ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಈಗ ಸೋಪು ಉಪಯೋಗಿಸಬೇಡಿ.

ಸೇಬು

ಸೇಬು

ಬೀಜ ನಿವಾರಿಸಿದ ಸೇಬುಹಣ್ಣಿನ ಒಂದು ತುಂಡನ್ನು ಸಿಪ್ಪೆಮೇಲಾಗಿಸಿ ಒಂದು ತಟ್ಟೆಯಲ್ಲಿಟ್ಟು ಮೇಲಿನಿಂದ ಅಮುಕಿ. ಬಳಿಕ ಈ ತುಂಡನ್ನು ಸೋಪಿನಂತೆ ಹಿಡಿದು ಮುಖವನ್ನು ಉಜ್ಜುತ್ತಾ ಬನ್ನಿ. ಸುಮಾರು ಐದು ನಿಮಿಷದ ಬಳಿಕ ಉಜ್ಜುವುದನ್ನು ನಿಲ್ಲಿಸಿ ಸುಮಾರು ಹತ್ತು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ಚರ್ಮದಲ್ಲಿ ಬದಲಾವಣೆಯನ್ನು ಗಮನಿಸುವಿರಿ.

ಮಾವಿನ ಹಣ್ಣು

ಮಾವಿನ ಹಣ್ಣು

ಚೆನ್ನಾಗಿ ಹಣ್ಣಾದ ಮಾವಿನ ತಿರುಳನ್ನು ಕೈಯಲ್ಲಿ ಕಿವುಚಿ ರಸ ಹಿಂಡಿಕೊಳ್ಳಿ. ಈ ರಸವನ್ನು ಈಗ ತಾನೇ ತೊಳೆದ ಮುಖಕ್ಕೆ ಚೆನ್ನಾಗಿ ಸವರಿ ಐದು ನಿಮಿಷ ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಈಗ ಸೋಪು ಉಪಯೋಗಿಸಬೇಡಿ. ನಿಮ್ಮ ಚರ್ಮ ಉತ್ತಮ ಸೆಳೆತ ಪಡೆದು ನೆರಿಗೆಗಳೆಲ್ಲಾ ಮಾಯವಾಗುತ್ತವೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆಯಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶ ಮತ್ತು ಆಂಟಿ ಆಕ್ಸಿಡೆಂಟುಗಳಿವೆ (ಉತ್ಕರ್ಷಣ ನಿರೋಧಕ). ಇವು ಚರ್ಮದ ನೆರಿಗೆಗಳನ್ನು ನಿವಾರಿಸಿ ಮುಪ್ಪು ಬೇಗನೇ ಆವರಿಸದಂತೆ ರಕ್ಷಿಸುತ್ತದೆ. ಇದಕ್ಕಾಗಿ ದಾಳಿಂಬೆಯ ಕಾಳುಗಳನ್ನು ಜಜ್ಜಿ ರಸವನ್ನು ತೆಗೆದು ಇದನ್ನು ಈಗ ತಾನೇ ತೊಳೆದ ಮುಖಕ್ಕೆ ಹಚ್ಚಿ ಐದು ನಿಮಿಷ ಒಣಗಲು ಬಿಡಿ, ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

English summary

Fruits To Massage On Your Skin

Have you ever tried applying fruits on skin? Well, most of us know well that consuming fruit juices can help the skin in many ways. But do you know that fruits are also used in many face packs? You can massage some fruits on your skin and reap the benefits. But don't try any random fruit on your skin until you totally know the safest ones.
X
Desktop Bottom Promotion