For Quick Alerts
ALLOW NOTIFICATIONS  
For Daily Alerts

ತ್ವಚೆಯ ನೆರಿಗೆಗಳನ್ನು ಮರೆಸಿ ಸ್ಮಾರ್ಟ್ ಲುಕ್ ನಿಮ್ಮದಾಗಿಸಿ!

|

ವಯಸ್ಸಾಗುವ ಪ್ರಕ್ರಿಯೆಯನ್ನು ನಾವು ತಡೆಯಲು ಸಾಧ್ಯವಿಲ್ಲ. ವಯಸ್ಸಾಗುವಿಕೆಯು ಎಲ್ಲಾ ಜೀವಿಗಳಲ್ಲಿ ಜರುಗುವ ಒ೦ದು ನೈಸರ್ಗಿಕ, ಸಹಜ ಪ್ರಕ್ರಿಯೆ ಎ೦ದು ವಯಸ್ಸಾಗುವಿಕೆಯನ್ನು ನಾವು ನಿರೂಪಿಸಬಹುದು. ಆದರೂ ಕೂಡ, ಇಲ್ಲಿರುವ ಒ೦ದು ಸಮಾಧಾನಕರ ಅ೦ಶವೇನೆ೦ದರೆ, ಒ೦ದು ಮಿತಿಯವರೆಗೆ ಈ ಸಂಗತಿಗಳನ್ನು ನಮಗೆ ಬೇಕಾದ೦ತೆ ಬದಲಾಯಿಸಿಕೊಳ್ಳಬಹುದು.

ಅರ್ಥಾತ್, ನೀವು ಪ್ರಯತ್ನಿಸಿದರೆ, ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಿಲ್ಲವಾದರೂ ಸಹ, ಆ ಪ್ರಕ್ರಿಯೆಯನ್ನು ಮ೦ದಗತಿಗೊಳಿಸಬಹುದು.! ತ್ವಚೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸುಕ್ಕು ಮತ್ತು ಗೆರೆಗಳು ನಿಮಗೆ ಮುಜುಗರವನ್ನುಂಟು ಮಾಡಬಹುದು. ಆದರು ಇವು ಕಾಣಿಸಿಕೊಳ್ಳಲು ವಯಸ್ಸಿನ ಕಾರಣಗಳೇ ಬೇಕಾಗಿಲ್ಲ, ಅದರ ಜೊತೆಗೆ ಬಿಸಿಲಿನಲ್ಲಿ ಓಡಾಡುವುದು, ಒಣ ತ್ವಚೆ ಮುಂತಾದ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು.

ಸುಕ್ಕುಗಳು ಮುಖದ ಲಕ್ಷಣಗಳನ್ನು ಹಾಳು ಮಾಡಿ ಬಿಡುತ್ತವೆ. ಆಗ ಜನರಿಗೆ ದುಬಾರಿಯಾದ ಕಾಸ್ಮೆಟಿಕ್ ಅಥವಾ ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಪಡೆಯದೆ ವಿಧಿಯಿರುವುದಿಲ್ಲ. ಆದರೆ ಈಗ ನೀವು ಕಷ್ಟಪಟ್ಟು ದುಡಿದ ಹಣವನ್ನು ಸುಮ್ಮನೆ ಖರ್ಚು ಮಾಡಬೇಕಾದ ಅಗತ್ಯವಿರುವುದಿಲ್ಲ. ಬನ್ನಿ ಇದಕ್ಕೆ ನಿಮ್ಮ ಮನೆಯಲ್ಲಿಯೇ ಹಲವಾರು ಔಷಧಿಗಳು ಇವೆ. ಅವು ಯಾವುವು ಎಂದು ತಿಳಿದುಕೊಳ್ಳೋಣ. ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

ಕೆಲವೊಂದು ಆಹಾರ ಪದಾರ್ಥಗಳ ಮೂಲಕ ನಿಮ್ಮ ಮುಖದ ಮೇಲೆ ಬಂದಿರುವ ಸುಕ್ಕನ್ನು ನೀವು ನಿವಾರಿಸಿಕೊಳ್ಳಬಹುದು. ನಾವು ಏನೇನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದು ಮುಖದಲ್ಲಿ ಪ್ರತಿಬಿಂಬಿತವಾಗುತ್ತವೆ. ಇದರ ಪರಿಣಾಮವಾಗಿ ನಮಗೆ ಸುಕ್ಕುಗಳು ಸಹ ಕಾಣಿಸಿಕೊಳ್ಳಬಹುದು. ಬನ್ನಿ ಸುಕ್ಕುಗಳು ಬರದಂತೆ ತಡೆಯಲು ಮತ್ತು ಬಂದಿರುವ ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿವೆ ಕೆಲವೊಂದು ಪವಾಡ ಸದೃಶ್ಯ ಆಹಾರ ಪದಾರ್ಥಗಳು. ಮುಂದೆ ಓದಿ....

ಅವೊಕಾಡೊ

ಅವೊಕಾಡೊ

ಇದರಲ್ಲಿ ವಿಟಮಿನ್ ಇ, ಬಿ ಕಾಂಪ್ಲೆಕ್ಸ್, ಅಗತ್ಯವಾದ ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ತ್ವಚೆಗೆ ನೈಸರ್ಗಿಕವಾಗಿ ಮೊಯಿಶ್ಚರನ್ನು ಒದಗಿಸುತ್ತವೆ. ಅವೊಕಾಡೊನಲ್ಲಿರುವ ವಿಟಮಿನ್‍ಗಳು ತ್ವಚೆಯ ಸುಕ್ಕನ್ನು ನಿಭಾಯಿಸುತ್ತವೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತವೆ.

ಬೆರ್ರಿಗಳು

ಬೆರ್ರಿಗಳು

ಬೆರ್ರಿಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತವೆ. ಇವು ತ್ವಚೆಯು ಹಾನಿಯಾಗುವುದನ್ನು ತಪ್ಪಿಸುತ್ತದೆ. ಇವುಗಳು ತ್ವಚೆಯನ್ನು ಮೃದು ಮಾಡುತ್ತವೆ ಮತ್ತು ಅದಕ್ಕೆ ಆಹ್ಲಾದಕತೆಯನ್ನು ನೀಡುತ್ತದೆ. ಪರಿಸರ ಮಾಲಿನ್ಯದಿಂದ ತ್ವಚೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಇವುಗಳು ತಡೆಯುತ್ತವೆ. ಇವು ಸಹ ಸುಕ್ಕುಗಳನ್ನು ನಿವಾರಿಸಲು ಅತ್ಯುತ್ತಮವಾದ ಮನೆ ಮದ್ದುಗಳಾಗಿರುತ್ತವೆ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಈ ಕೊಬ್ಬು ಇರುವ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಹೀಗಾಗಿ ಸಾಲ್ಮನ್ ಮೀನು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡಲು,ಮೃದುತ್ವವನ್ನು ನೀಡಲು ಹಾಗು ತಾಜಾತನವನ್ನು ನೀಡಲು ಹೇಳಿ ಮಾಡಿಸಿದ ಆಹಾರ ಪದಾರ್ಥವಾಗಿರುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲಗಳು ಸಹ ನಿಮ್ಮ ತ್ವಚೆಗೆ ಅವಧಿ ಪೂರ್ವ ಸುಕ್ಕುತನ ಭಾದಿಸದಂತೆ ತಡೆಯುತ್ತದೆ.

ಜೇನು ತುಪ್ಪ

ಜೇನು ತುಪ್ಪ

ಜೇನು ತುಪ್ಪವು ಸ್ವಾಭಾವಿಕವಾಗಿ ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಇದನ್ನು ತ್ವಚೆಗೆ ಲೇಪಿಸಿ, ತ್ವಚೆಯನ್ನು ಮೊಯಿಶ್ಚರೈಸ್ ಮಾಡಬಹುದು. ಜೊತೆಗೆ ಇದು ತ್ವಚೆಯನ್ನು ಒಣಗುವಿಕೆಯಿಂದ ಕಾಪಾಡುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಇದು ಕೊಂದು ಹಾಕುತ್ತದೆ. ಇದಕ್ಕಾಗಿ ಯಾವಾಗಲು ಕಚ್ಛಾ ಜೇನುತುಪ್ಪವನ್ನು ಬಳಸಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಮೊಸರು

ಮೊಸರು

ಇದರಲ್ಲಿ ಪ್ರೊಬಯೊಟಿಕ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ ಮತ್ತು ಇವು ತ್ವಚೆಗೆ ಆರೈಕೆಯನ್ನು ನೀಡುತ್ತವೆ. ಇದು ನಿಮ್ಮನ್ನು ಆರೋಗ್ಯವಂತವಾಗಿ ಇಡುತ್ತದೆ, ಆ ಮೂಲಕ ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ.ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳಲು ಮೊಸರನ್ನು ಸೇವಿಸಿ. ಇದು ತ್ವಚೆಯಲ್ಲಿರುವ ಗೆರೆಗಳನ್ನು ಮತ್ತು ಕಲೆಗಳನ್ನು ಸಹ ನಿವಾರಿಸುತ್ತದೆ.

English summary

Foods That Remove Wrinkles From Your Face

The first sign of aging is wrinkles and fine lines. However, they can also surface due to dry skin conditions, sun exposure etc. Wrinkles spoil the fresh,appealing and young look of your face and makes you look dull and old. Here is a list of foods that will lessen all your skin wrinkles and signs of aging.
X
Desktop Bottom Promotion