For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಕೆಡಿಸುವ ಇಂತಹ ಆಹಾರಗಳಿಂದ ದೂರವಿರಿ

|

ಕಲೆಯಿಲ್ಲದ ಚರ್ಮ ಹೊಂದುವುದು ಎಲ್ಲರ ಕನಸು. ಆದರೆ ನಮ್ಮ ಚರ್ಮದಲ್ಲಿ ಮೂಡುವ ಕಲೆಗಳು, ಮೊಡವೆ, ಕೆಂಪಗಾಗಿರುವುದು, ಗೀರುಗಳು ಬಿದ್ದಿರುವುದು ಮೊದಲಾದವುಗಳಿಗೆ ನಮ್ಮ ಹಾರ್ಮೋನುಗಳ ಜೊತೆಗೇ ನಾವು ಸೇವಿಸುವ ಆಹಾರಗಳೂ ಪ್ರಧಾನ ಪಾತ್ರ ವಹಿಸುತ್ತವೆ. ದೇಹಕ್ಕೆ ಶಕ್ತಿ ನೀಡುವ ಸಕ್ಕರೆ ಚರ್ಮಕ್ಕೆ ಕಲೆಯನ್ನೂ ನೀಡುವುದು ಒಂದು ವೈಪರೀತ್ಯವಾಗಿದೆ. ಆದರೆ ಕಲೆರಹಿತ ಚರ್ಮ ಬೇಕಾದರೆ ಕೊಂಚ ತ್ಯಾಗ ಮಾಡುವುದು ಅಗತ್ಯ.

ಚರ್ಮತಜ್ಞರ ಪ್ರಕಾರ ಹಾಲಿನ ಉತ್ಪನ್ನ ಮತ್ತು ಸಕ್ಕರೆ ಚರ್ಮದ ಕಲೆಗಳಿಗೆ ಮೂಲ ಕಾರಣವಾಗಿವೆ. ಇದರೊಂದಿಗೆ ಆರೋಗ್ಯವನ್ನು ಕೆಡಿಸುವ ಅಭ್ಯಾಸಗಳಾದ ಧೂಮಪಾನ ಚರ್ಮದ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಇದೇ ರೀತಿ ಅನಾರೋಗ್ಯಕರ ಆಹಾರದ ಸೇವನೆಯಿಂದಲೂ ಚರ್ಮ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

ಇದಕ್ಕೆ ಕಾರಣ ಸರಳವಾಗಿದೆ-ಏನೆಂದರೆ ಅನಾರೋಗ್ಯಕರವಾದ ಆಹಾರಗಳು ಉರಿಯೂತವನ್ನುಂಟುಮಾಡುತ್ತವೆ. ಅದರಲ್ಲೂ ಸಂಸ್ಕರಿಸಿದ ಆಹಾರಗಳು ಚರ್ಮದ ಮೇಲೆ ಗಾಢವಾದ ಪರಿಣಾಮವನ್ನುಂಟುಮಾಡುತ್ತದೆ. ಇದೇ ಕಾರಣಕ್ಕಾಗಿ ಚರ್ಮತಜ್ಞರು ಸಂಸ್ಕರಿಸಿದ ಆಹಾರದ ಬದಲಿಗೆ ನೈಸರ್ಗಿಕವಾದ ಪೂರ್ಣ ಆಹಾರಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.

ಉದಾಹರಣೆಗೆ ಗೋಧಿಯ ಮೇಲ್ಕವಚವನ್ನು ನಿವಾರಿಸಿ ಒಳಗಿನ ತಿರುಳನ್ನು ಮಾತ್ರ ತೆಗೆದ ಮೈದಾಹಿಟ್ಟಿನ ಬಳಕೆಗಿಂತಲೂ ಇಡಿಯ ಗೋಧಿಯನ್ನೇ ಪುಡಿಮಾಡಿ ತಯಾರಿಸಿದ ಗೋಧಿಹಿಟ್ಟಿನ (whole wheat atta) ಬಳಕೆ ಉತ್ತಮ. ನಿಮ್ಮ ಚರ್ಮ ಉತ್ತಮ ಆರೈಕೆ ಪಡೆಯಬೇಕಾದರೆ ಯಾವ ಆಹಾರಗಳನ್ನು ತ್ಯಜಿಸಬೇಕೆಂದು ಈ ಸ್ಲೈಡ್ ಶೋ ಮೂಲಕ ನೋಡಿ ನಿರ್ಧರಿಸಿ.... ಸಣ್ಣ-ಪುಟ್ಟ ತಪ್ಪುಗಳು ತ್ವಚೆಯ ಅಂದವನ್ನೇ ಕೆಡಿಸಬಹುದು!

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲನ್ನು ಬಿಸಿಮಾಡಿ ತಕ್ಷಣ ಶೈತ್ಯೀಕರಿಸುವ ಮೂಲಕ (UHT-Ultra heat treatment) ಇದನ್ನು ಬಹಳ ಕಾಲ ಕೆಡದಂತೆ ಇಡಬಹುದಾದರೂ ಚರ್ಮಕ್ಕೆ ಈ ಹಾಲು ಅತ್ಯುತ್ತಮವಲ್ಲ. ಅಲ್ಲದೇ ಇತರ ಉತ್ಪನ್ನಗಳಾದ ಐಸ್ ಕ್ರೀಮ್, ಚೀಸ್ ಮೊದಲಾದವುಗಳೂ ಚರ್ಮದಡಿ ವಿವಿಧ ಸ್ರವಿಕೆಗೆ ಕಾರಣವಾಗಿ ಮೊಡವೆಗಳು ಮೂಡಲು ಪ್ರಾರಂಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಅತಿಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಚರ್ಮದಲ್ಲಿ ಕಲೆಗಳು, ವಿಶೇಷವಾಗಿ ಕೆನ್ನೆಯಲ್ಲಿ ಕಪ್ಪು ಮತ್ತು ಕಂದು ಬಣ್ಣದ ಕಲೆಗಳು ಚಿಕ್ಕದಾಗಿ ಪ್ರಾರಂಭವಾಗಿ ನಿಧಾನವಾಗಿ ಅಗಲಗೊಳ್ಳುತ್ತಾ ಹೋಗುತ್ತದೆ. ಇದಕ್ಕೆ ಚರ್ಮತಜ್ಞರು ನೀಡುವ ಕಾರಣವೇನೆಂದರೆ ಈ ಉತ್ಪನ್ನಗಳು ಶರೀರದಲ್ಲಿ ಸ್ರವಿಸುವ ಹಾರ್ಮೋನುಗಳ ಪ್ರಮಾಣ ಮತ್ತು ಅವಧಿಯನ್ನು ಬದಲಿಸಿ ಬಿಡುವುದರಿಂದ ಹಲವು ಅಡ್ಡಪರಿಣಾಮಗಳು ಎದುರಾಗುತ್ತವೆ.

ಸಂಸ್ಕರಿಸಿದ (ಬಿಳಿ) ಸಕ್ಕರೆ

ಸಂಸ್ಕರಿಸಿದ (ಬಿಳಿ) ಸಕ್ಕರೆ

ನಮ್ಮ ದೈನಂದಿನ ಚಟುವಟಿಕೆಗಳಿಗನುಸಾರವಾಗಿ ಚರ್ಮ ಕೊಂಚ ಹಿಗ್ಗುವ ಅಥವಾ ಕುಗ್ಗುವ ಸಾಮರ್ಥ್ಯ ಹೊಂದಿದೆ. (ಹಸ್ತದ ಚರ್ಮ ಅತಿ ಹೆಚ್ಚು ಹಿಗ್ಗುತ್ತದೆ. ಇದೇ ಕಾರಣಕ್ಕಾಗಿ ನೀರಿನಲ್ಲಿ ಕೊಂಚಕಾಲ ಅದ್ದಿದ ಬಳಿಕ ಹಸ್ತದ ಚರ್ಮ ನೆರಿಗೆನೆರಿಗೆಯಾಗಿ ಇರುತ್ತದೆ). ಬಿಳಿಸಕ್ಕರೆಯ ಸೇವನೆಯಿಂದ ಈ ಶಕ್ತಿ ಪ್ರಭಾವಗೊಳ್ಳುವುದನ್ನು ಸಂಶೋಧನೆಗಳು ತಿಳಿಸಿವೆ. ಅತಿ ಹೆಚ್ಚು ಸಕ್ಕರೆ ಸೇವಿಸುವವರ ಚರ್ಮದಲ್ಲಿ ಕಡಿಮೆ ವಯಸ್ಸಿನಲ್ಲಿಯೇ ನೆರಿಗೆಗಳು ಮೂಡಲು ಪ್ರಾರಂಭಿಸುತ್ತವೆ. ಸಕ್ಕರೆಗೆ ದಾಸರಾಗಿರುವವರು ಕೂಡಲೇ ಸಕ್ಕರೆಯ ಪರ್ಯಾಯಗಳತ್ತ ಒಲವು ತೋರುವುದು ಉತ್ತಮ.

ರುಚಿ ಹೆಚ್ಚಿಸುವ ಪದಾರ್ಥಗಳು

ರುಚಿ ಹೆಚ್ಚಿಸುವ ಪದಾರ್ಥಗಳು

ಮಾರುಕಟ್ಟೆಯಲ್ಲಿ ದೊರಕುವ ಸಿದ್ಧ ಆಹಾರ ಮತ್ತು ಪೇಯಗಳು ಪೂರ್ಣಪ್ರಮಾಣದಲ್ಲಿ ಅದರ ಮೂಲ ದ್ರವ್ಯವನ್ನು ಹೊಂದಿರುವುದಿಲ್ಲ. ಉದಾಹರಣೆಗೆ ಒಂದು ಲೀಟರ್ ಮಾವಿನ ಹಣ್ಣಿನಲ್ಲಿ ಅಪ್ಪಟ ಮಾವಿನ ಹಣ್ಣಿನ ರಸ (mango pulp) ಇರುವುದು ಗರಿಷ್ಟ ನಾನೂರು ಮಿಲಿಲೀಟರ್. ಇನ್ನುಳಿದದ್ದು ಮಾವಿನ ಹಣ್ಣಿನ ರುಚಿಯನ್ನೇ ಹೋಲುವ ಕೃತಕ ರಸ (food additive). ಈ ಪರಿ ಇರುವ ಪೇಯಗಳಿಗೆ 'ಡ್ರಿಂಕ್' ಎಂದು ನಾಮಕರಣ ಮಾಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. (ಉದಾಹರಣೆಗೆ mango drink). ಭಾರತದಲ್ಲಿ ಭರದಿಂದ ಮಾರಾಟವಾಗುವ ಬಹುತೇಕ ಈ ಡ್ರಿಂಕ್‌ಗಳಲ್ಲಿ ಅಪ್ಪಟ ಹಣ್ಣಿನ ರಸ ಇರುವುದು ಶೇಕಡಾ ಇಪ್ಪತ್ತು ಮಾತ್ರ. ಈ ಆಹಾರಗಳು ರುಚಿಯಲ್ಲಿ ಉತ್ತಮವಾಗಿದ್ದರೂ ಆರೋಗ್ಯಕ್ಕೆ, ವಿಶೇಷವಾಗಿ ಚರ್ಮಕ್ಕೆ ಹಲವು ರೀತಿಯ ಹಾನಿ ಎಸಬಲ್ಲವು. ಇದರ ಬದಲಿಗೆ ತಾಜಾ ಹಣ್ಣುಗಳ ರಸ ಅಥವಾ ತಾಜಾ ಹಣ್ಣುಗಳನ್ನೇ ತಿನ್ನುವುದು ಉತ್ತಮ.

ಸಂಸ್ಕರಿಸಿದ ಆಹಾರಗಳು (All Refined Foods)

ಸಂಸ್ಕರಿಸಿದ ಆಹಾರಗಳು (All Refined Foods)

ಸಂಸ್ಕರಿಸಿದ ಆಹಾರಗಳಿಗಿಂತ ನೈಸರ್ಗಿಕವಾದ ಆಹಾರಗಳನ್ನೇ ಅಯ್ಕೆ ಮಾಡಿ. ಮೈದಾ ಬದಲು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಆರಿಸಿ. ಪಾಲಿಶ್ ಮಾಡಿದ ಅಕ್ಕಿಗಿಂತ ಕಡಿಮೆ ಪಾಲಿಶ್ ಮಾಡಿದ ಅಕ್ಕಿ ಉತ್ತಮ. ಅಂತೆಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಸಂಸ್ಕರಿಸಿದ ಆಹಾರಗಳ ಬದಲಿಗೆ ನೈಸರ್ಗಿಕವಾಗಿ ಸಿಗುವ ಆಹಾರಗಳ ಬಳಕೆಗೆ ಆದ್ಯತೆ ನೀಡಿ. ಇದರಿಂದ ದೇಹದ ಒಟ್ಟಾರೆ ಆರೋಗ್ಯ ವೃದ್ದಿಸುವುದರೊಂದಿಗೇ ಚರ್ಮದ ಕಾಂತಿ ಮತ್ತು ಸೆಳೆತವೂ ಹೆಚ್ಚುತ್ತದೆ.

English summary

Foods To Avoid For Clear Skin

If you want clear skin, if you hate rashes and spots, it is highly important to know that there is a link between your food and your skin. There are some foods to avoid for clear skin. In fact, that is the reason why some skin experts ask you to stay away from sugar and dairy items. We generally think that food affects our health but it also effects the skin health.
X
Desktop Bottom Promotion