For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯಕ್ಕೆ ಕ್ರೀಂ, ಪೌಡರ್ ಏತಕ್ಕೆ ಬೇಕು?

|

ಕೆಲವೊಮ್ಮೆ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ಹಲವಾರು ಕ್ರೀಂ, ಲೇಪನ, ಅನೇಕ ರೀತಿಯ ಸೌಂದರ್ಯವರ್ಧಕ ತ್ವಚೆಯ ಪೌಡರ್, ಆಯುರ್ವೇದ ಔಷಧಗಳ ಮೊರೆಹೋಗುತ್ತೇವೆ ಆದರೆ ಇದರಿಂದ ನಮಗೆ ಯಾವುದೇ ರೀತಿಯ ಫಲಿಂತಾಂಶ ಸಿಗುವುದಿಲ್ಲ.

ಹಾಗಾಗಿ ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದಲು ನೈಸರ್ಗಿಕವಾಗಿ ತಯಾರಿಸಲಾಗುವ ಫೇಸ್ ಪ್ಯಾಕ್‌ಗಳಿಗೆ ಮೊರೆ ಹೋಗುವುದು ಜಾಣತನ ಅಲ್ಲವೇ..? ಬನ್ನಿ ತ್ವಚೆಯನ್ನು ಇನ್ನಷ್ಟು ಆರೋಗ್ಯಕರಗೊಳಿಸಿ ನೈಸರ್ಗಿಕ ಹೊಳಪನ್ನು ಪಡೆಯುವ ವಿಧಾನ ಹೇಗೆ ಎಂಬುದನ್ನು ನೋಡೋಣ...

ಸೌತೆಕಾಯಿ

Face Pack for Glowing Skin at Home

ಮುಖದ ಚರ್ಮದ ಹೊಳಪನ್ನು ಹೆಚ್ಚಿಸಲು ಸೌತೆಕಾಯಿಗಿಂತ ಉತ್ತಮವಾದ ತರಕಾರಿ ಇನ್ನೊಂದಿಲ್ಲ. ಸೌತೆಕಾಯಿಯನ್ನು ಹಸಿಯಾಗಿ ಊಟದೊಂದಿಗೆ ಸೇವಿಸುವ ಮೂಲಕ ದೇಹದಲ್ಲಿರುವ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕರಿಸುತ್ತದೆ. ಚರ್ಮಕ್ಕೆ ಅಗತ್ಯವಾಗಿರುವ ನೀರಿನ ಅಂಶವನ್ನು ಸೌತೆಕಾಯಿ ನೀಡುವುದರಿಂದ ತಚೆಯ ಚರ್ಮದ ಕಾಂತಿ ಹೆಚ್ಚುತ್ತದೆ. ಸೌತೆಕಾಯಿಯನ್ನು ನಯವಾಗಿ ಅರೆದ ಲೇಪನವನ್ನು ಮುಖದ ಮೇಲೆ ಹಚ್ಚುವುದರಿಂದಲೂ ಮುಖದ ಕಲೆಗಳು ಮಾಯವಾಗುವುದರ ಜೊತೆಗೆ ತ್ವಚೆಯ ಸೌಂದರ್ಯ ಕೂಡ ಹೆಚ್ಚುತ್ತದೆ.

ಮೊಟ್ಟೆ ಮತ್ತು ಕ್ರೀಮ್ ಮಾಸ್ಕ್


ಮೊಟ್ಟೆಯು ಅಧಿಕ ಪ್ರಮಾಣದ ಬಯೋಟಿನ್, ಮತ್ತು ಪ್ರೋಟೀನ್ ಅಂಶಗಳನ್ನು ಹೊಂದಿದ್ದು ಇದು ಸುಕ್ಕುಗಳನ್ನು ಕಡಿಮೆ ಮದಲು ಸಹಾಯಮಾಡುತ್ತದೆ. ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ಅನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ಅನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ. ದಿನಕ್ಕೆರಡು ಬಾರಿ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!

ನೀರನ್ನು ಕುಡಿಯಿರಿ
ನೀರು, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕಾಗಿ ಬಳಸಬಹುದಾದ ಅತ್ಯಂತ ಅನುಕೂಲಕರ ಉತ್ಪನ್ನಗಳಲ್ಲಿ ಒಂದು. ನಿಮ್ಮ ದೇಹದ ವ್ಯವಸ್ಥೆಯನ್ನ ಶುದ್ಧೀಕರಿಸಿ ಜೀವಾಣುಗಳನ್ನು ಹೋಗಲಾಡಿಸಲು ಮತ್ತು ಅತ್ಯುತ್ತಮ ಚರ್ಮವನ್ನು ಪಡೆಯಲು ಪ್ರತಿ ದಿನ ಕನಿಷ್ಠ 8 ಲೋಟ ನೀರನ್ನು ಕುಡಿಯಿರಿ. ಇದು ನಿಮ್ಮ ಕೂದಲಿಗೂ ತುಂಬಾ ಒಳ್ಳೆಯದು.

ನೈಸರ್ಗಿಕ ಬ್ಲೀಚಿ೦ಗ್
ಬ್ಲೀಚಿ೦ಗ್ ಪ್ರಕ್ರಿಯೆಯು ಮುಖದ ತ್ವಚೆಯನ್ನು ತಿಳಿಗೊಳಿಸಲು ನೆರವಾಗುತ್ತದೆ. ನೀವು ಲಿ೦ಬೆಯ ರಸವನ್ನೋ ಇಲ್ಲವೇ ಮೊಸರನ್ನೋ ನೈಸರ್ಗಿಕವಾದ ಬ್ಲೀಚಿ೦ಗ್ ವಸ್ತುಗಳ ರೂಪದಲ್ಲಿ ಬಳಸಿಕೊಳ್ಳಬಹುದು. ಮುಖದ ಮೇಲೆ ಲಿ೦ಬೆಯ ರಸವನ್ನು ಲೇಪಿಸಿಕೊ೦ಡು ಕೆಲಕಾಲದವರೆಗೆ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ಮುಖವನ್ನು ತೊಳೆಯಿರಿ ಹಾಗೂ ಬಟ್ಟೆಯೊ೦ದರಿ೦ದ ಮುಖವನ್ನು ಹದವಾಗಿ ತಟ್ಟುತ್ತಾ ಒಣಗಿಸಿಕೊಳ್ಳಿರಿ. ಮುಖವನ್ನು ಸ್ವಚ್ಚವಾಗಿರಿಸಿಕೊಳ್ಳುವುದರ ಪ್ರಯೋಜನಗಳ ಪೈಕಿ ಮತ್ತೊ೦ದು ಯಾವುದೆ೦ದರೆ, ಈ ಪ್ರಕ್ರಿಯೆಯು ನಿಮ್ಮ ತ್ವಚೆಯನ್ನು ಎಲ್ಲಾ ಭಾಗಗಳಲ್ಲಿಯೂ ಸಮನಾಗಿ ಬಿಗಿಗೊಳಿಸುತ್ತದೆ.

ಪಪ್ಪಾಯಿ ಹಣ್ಣು


ಪಪ್ಪಾಯಿ ಹಣ್ಣಿನಂತಹ ಪ್ಯಾಕ್‍ಗಳು ತ್ವಚೆಗೆ ಯೌವನವನ್ನು ತಂದು ಕೊಡುತ್ತವೆ. ಪಪ್ಪಾಯಿ ಹಣ್ಣನ್ನು ತೆಗೆದುಕೊಂಡು,ಅದನ್ನು ರುಬ್ಬಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಲೇಪಿಸಿ, 15-20 ನಿಮಿಷ ಬಿಡಿ. ಇದು ಟ್ಯಾನ್ ಆಗಿರುವ ತ್ವಚೆಯ ಕೋಶಗಳಿಗೆ ಪುನಃಶ್ಚೇತನವನ್ನು ಒದಗಿಸುತ್ತದೆ.

ಲಿಂಬೆ ಸೌತೆಕಾಯಿ ಟೊಮೇಟೊ ರಸ
2 ಚಮಚ ಲಿಂಬೆ ರಸ 2 ಚಮಚ ಸೌತೆಕಾಯಿ ರಸ 1 ಚಮಚ ಟೊಮೇಟೊ ರಸ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತ್ವಚೆಗೆ ಹಚ್ಚಿಕೊಳ್ಳಿ ತದನಂತೆ ಒಣಗಲು ಬಿಡಿ, ನಂತರ ನೀರಿನಿಂದ ತೊಳೆಯಿರಿ.

English summary

Face Pack for Glowing Skin at Home

There are many home made remedies for getting fair skin naturally at home,which can found easily around you with the help of which you can made face mask and still homemade face mask yield wonderful results. Following are some face masks that can be used for fair and glowing skin.
X
Desktop Bottom Promotion