For Quick Alerts
ALLOW NOTIFICATIONS  
For Daily Alerts

ಗೌರವರ್ಣದ ತ್ವಚೆಗಾಗಿ ಒಂದಿಷ್ಟು ಸರಳೋಪಾಯಗಳು

|

ಭಾರತೀಯರಲ್ಲಿ ಮೈಬಣ್ಣ ಒಂದೇ ತೆರನಾಗಿಲ್ಲ. ಉತ್ತರ ಭಾರತದವರು ಹೆಚ್ಚಾಗಿ ಬೆಳ್ಳಗಿದ್ದರೆ ದಕ್ಷಿಣ ಮತ್ತು ಕರಾವಳಿ ಜನತೆ ಗೋಧಿಬಣ್ಣ ಮತ್ತು ಗಾಢವರ್ಣ ಪಡೆದಿರುತ್ತಾರೆ. ಬಿಸಿಲಿನ ಝಳ ಮತ್ತು ಉಪ್ಪಿನಂಶ ಹೆಚ್ಚಾಗಿರುವ ತೀರದ ಊರುಗಳಲ್ಲಿನ ಜನತೆ ಗೋಧಿಬಣ್ಣ ಹೊಂದಿದ್ದರೂ ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗ ಗಾಢವರ್ಣ ಪಡೆದಿರುತ್ತದೆ.

ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾವಯೋಲೆಟ್ ಪ್ರಭಾವಳಿ ಇದಕ್ಕೆ ನೇರಕಾರಣವಾದರೆ ಆ ಪ್ರದೇಶದ ವಾತಾವರಣ ಹಾಗೂ ಗಾಳಿಯಲ್ಲಿರುವ ಉಪ್ಪಿನಂಶ ಇನ್ನೊಂದು ಕಾರಣ. ಹೀಗೆ ಅನೈಚ್ಛಿಕವಾಗಿ ತ್ವಚೆಯ ಕಾಂತಿ, ದೇಹದ ಚರ್ಮ ಕಪ್ಪುಗೊಂಡವರು ತಮ್ಮ ನೈಸರ್ಗಿಕ ಬಣ್ಣವನ್ನು ಪಡೆಯಲು ಹಲವು ಚಿಕಿತ್ಸೆಗಳನ್ನು ಮಾಡುತ್ತಾರೆ. ಸುಂದರ, ಕಾಂತಿಯುಕ್ತ ತ್ವಚೆಗಾಗಿ ಪಂಚ ಸೂತ್ರ

ಆದರೆ, ಒಂದು ಮಾತು ನಿಜ, ತ್ವಚೆಯು ನಮ್ಮ ಶರೀರದ ಅತ್ಯ೦ತ ಸೂಕ್ಷ್ಮವಾದ ಅ೦ಗವಾಗಿರುವುದರಿಂದ, ಕಠಿಣವಾದ ರಾಸಾಯನಿಕಗಳ ಬಳಕೆಯು ತ್ವಚೆಗೆ ಹಾನಿಕಾರಕವಾಗಬಲ್ಲದು ಎಂಬುದನ್ನು ಮರೆಯಬೇಡಿ. ಆದರೆ, ಮುಖಕ್ಕೆ ಬಳಸುವ ನೈಸರ್ಗಿಕ ಉತ್ಪನ್ನಗಳು, ತ್ವಚೆಗೆ ಸುರಕ್ಷಿತವಾಗಿರುವುದಷ್ಟೇ ಅಲ್ಲ, ಜೊತೆಗೆ ತ್ವಚೆಗೆ ಆರೋಗ್ಯದಾಯಕವೂ ಆಗಿರಬಲ್ಲವು. ಹೀಗಾಗಿ, ತತ್‌ಕ್ಷಣದ ಮೈಕಾ೦ತಿಯನ್ನು ಪಡೆಯುವತ್ತ ಮು೦ದಡಿಯಿಡುವಲ್ಲಿ, ನೀವು ಕೆಲವೊ೦ದು ವಿಚಾರಗಳ ಕುರಿತು ಜಾಗೃತರಾಗಿರಬೇಕಾಗುತ್ತದೆ. ತ್ವಚೆಯ ಸರ್ವರೋಗ ಪರಿಹಾರ ಶಕ್ತಿ-ಟೊಮೇಟೊ ಜ್ಯೂಸ್‌

ಹಾಗಾಗಿ ನೀವು ನೈಸರ್ಗಿಕವಾದ ಮಾರ್ಗೋಪಾಯವನ್ನನುಸರಿಸಲು ಮನಸ್ಸು ಮಾಡಿದಲ್ಲಿ, ತತ್‌ಕ್ಷಣದ ಮುಖದ ಕಾ೦ತಿಯನ್ನು ಪಡೆಯುವುದು ಅಷ್ಟೇನೂ ಕಷ್ಟಕರವಲ್ಲ. ನಿಮ್ಮ ತ್ವಚೆಯನ್ನು ಮತ್ತಷ್ಟು ಕೋಮಲವನ್ನಾಗಿಸುವುದಕ್ಕಾಗಿ ಹಾಗೂ ಕಾ೦ತಿಯುತವನ್ನಾಗಿಸುವುದಕ್ಕಾಗಿ ಅನೇಕ ಮಾರ್ಗೋಪಾಯಗಳಿವೆ.
ಸೂಚನೆ: ಪ್ರತಿ ವ್ಯಕ್ತಿಗೂ ಈ ಚಿಕಿತ್ಸೆ ಫಲಕಾರಿಯಾಗುವ ಸಮಯ ಕೊಂಚ ಏರುಪೇರಾಗಬಹುದು. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಇವನ್ನು ಪ್ರಯೋಗಿಸಬೇಕು.

ಲಿಂಬೆಹಣ್ಣಿನ ರಸ ಮತ್ತು ಸೌತೆಕಾಯಿ

ಲಿಂಬೆಹಣ್ಣಿನ ರಸ ಮತ್ತು ಸೌತೆಕಾಯಿ

ಎಳೆಯ ಸೌತೆಕಾಯಿ (ಸಿಪ್ಪೆಸಹಿತ) ಮತ್ತು ಲಿಂಬೆಹಣ್ಣಿನ ರಸವನ್ನು (ಮೂರು + ಒಂದು ಭಾಗದ ಅನುಪಾತದಲ್ಲಿ) ಸೇರಿಸಿ ಅರೆಯಿರಿ. ಈ ಮಿಶ್ರಣವನ್ನು ತ್ವಚೆಗೆ ಹಚ್ಚಿಕೊಂಡು ಸುಮಾರು ಒಂದು ಗಂಟೆಯ ಬಳಿಕ ಸ್ವಚ್ಛನೀರಿನಲ್ಲಿ ತೊಳೆದುಕೊಳ್ಳುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಓಟ್ ಮೀಲ್‌ನ ಪ್ಯಾಕ್

ಓಟ್ ಮೀಲ್‌ನ ಪ್ಯಾಕ್

ಓಟ್ ಮೀಲ್ ಅಥವಾ ಓಟ್ಸ್ ಆಹಾರವನ್ನು ದಪ್ಪನಾದ ಪೇಸ್ಟ್ ಅನ್ನು ತಯಾರಿಸುವುದಕ್ಕಾಗಿ ಲಿ೦ಬೆ ಹಾಗೂ ಅರಿಶಿನದ ಪುಡಿಯೊ೦ದಿಗೆ ಮಿಶ್ರಗೊಳಿಸಲಾಗುತ್ತದೆ. ನಿಮ್ಮ ಮುಖವನ್ನು ತೊಳೆದುಕೊಳ್ಳುವುದಕ್ಕೆ ಮೊದಲು ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಾಗೆಯೇ ಕೆಲನಿಮಿಷಗಳ ಕಾಲ ಇರಗೊಡಿರಿ. ದಿಢೀರ್ ಮೈ ಹಾಗೂ ಮುಖದ ಕಾ೦ತಿಯನ್ನು ಹೊ೦ದಲು ಲಭ್ಯವಿರುವ ಮಾರ್ಗೋಪಾಯಗಳ ಪೈಕಿ ಇದೂ ಕೂಡ ಒ೦ದು. ಏಕೆ೦ದರೆ, ಈ ಪೇಸ್ಟ್, ಕೊಳೆ ಹಾಗೂ ಧೂಳನ್ನು ತ್ವಚೆಯ ರ೦ಧ್ರಗಳಿ೦ದ ಹೋಗಲಾಡಿಸುತ್ತದೆ

ಪಪ್ಪಾಯಿ, ಮತ್ತು ಸೌತೆಕಾಯಿ

ಪಪ್ಪಾಯಿ, ಮತ್ತು ಸೌತೆಕಾಯಿ

ಪಪ್ಪಾಯಿ, ಮತ್ತು ಸೌತೆಕಾಯಿ - ಇವುಗಳನ್ನು ಮಿಶ್ರಗೊಳಿಸಿ ಒ೦ದು ಫೇಸ್ ಪ್ಯಾಕ್ ಅನ್ನು ತಯಾರಿಸಿಟ್ಟುಕೊಳ್ಳಬಹುದು. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಲೇಪಿಸಿಕೊ೦ಡು, ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಅನ೦ತರ ಮುಖವನ್ನು ತೊಳೆದುಕೊಳ್ಳಬೇಕು.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಚೆನ್ನಾಗಿ ಹಣ್ಣಾದ ಕೆಂಪು ಟೊಮೇಟೊ ಬೀಜಗಳನ್ನು ಮತ್ತು ಸಿಪ್ಪೆಯನ್ನು ಬೇರ್ಪಡಿಸಿ ಕೇವಲ ತಿರುಳನ್ನು ಅರೆದು ನುಣುಪಾದ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚಿಕೊಳ್ಳುವುದರಿಂದ ಶೀಘ್ರವೇ ಉತ್ತಮ ಪರಿಣಾಮವನ್ನು ನೋಡಬಹುದು.

ನೆನೆಸಿದ ಬಾದಾಮಿ

ನೆನೆಸಿದ ಬಾದಾಮಿ

ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಫನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.

English summary

Effective Ways To Get An Instant Glow

Everyone likes to charm with the healthy and good looking skin. If you have a glowing and beautiful skin then you will feel more confident than before. The radiant skin will be the key secret of your attraction. Everyone wants to look herself in the mirror with gorgeous and flawless glowing skin. so boldsky share some simple homemade remedies you can get the instant freshness, clear and glowing face.
X
Desktop Bottom Promotion