For Quick Alerts
ALLOW NOTIFICATIONS  
For Daily Alerts

ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...

By C.M.Prasad
|

ಚರ್ಮದ ಕಾಂತಿಯನ್ನು ಹೆಚ್ಚಿಸಲು ಅನೇಕರು ಅನೇಕ ರೀತಿಯ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾಸಾಯನಿಕ ಸೌಂದರ್ಯವರ್ಧಕಗಳ ಬಳಕೆ ಹೆಚ್ಚಾಗಿ ಅದರಿಂದ ಉಪಯೋಗವಾಗುವ ಬದಲು ದುಷ್ಪರಿಣಾಮಗಳು ಉಂಟಾಗಿ ಮಾನಸಿಕವಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ತ್ವಚೆಯ ಕಾಂತಿ ಹೆಚ್ಚಿಸಲು ಪ್ರಾಕೃತಿಕವಾಗಿ ಬಂದಂತಹ ನೈಸರ್ಗಿಕ ವಿಧಾನಗಳನ್ನು ಬಳಸಲು ನಾವು ನಿಮಗೆ ಸೂಚಿಸುತ್ತಿದ್ದೇವೆ. ತಪ್ಪು ಗ್ರಹಿಕೆಗಳು ಹಾಗೂ ತಪ್ಪು ಪರಿಕಲ್ಪನೆಗಳಿಂದ ನಿಮ್ಮ ತ್ವಚೆಯ ಅಂದವನ್ನು ಕುಂದಿಸಬೇಡಿ. ಒಣ ಚರ್ಮವು ವಯಸ್ಸಾದಂತೆಲ್ಲಾ ಚರ್ಮದ ನಿಜವಾದ ಸತ್ವವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.

ಒಣ ಚರ್ಮದಲ್ಲಿ ಪ್ರಾಕೃತಿಕ ಜಿಡ್ಡಿನ ಅಂಶಗಳು ಕಡಿಮೆ ಪ್ರಮಾಣದಲ್ಲಿದ್ದು, ಇದರಿಂದ ಸುಕ್ಕು ಬೇಗನೆ ಆವರಿಸುತ್ತದೆ. ಮುಖದ ತ್ವಚೆಯು ಸುಕ್ಕುಗಟ್ಟಲು ಪ್ರಾರಂಭಿಸಿದರೆ ದಿನಕಳೆದಂತೆ ನಿಮ್ಮ ಮುಖವು ಅಂದವನ್ನು ಕಳೆದುಕೊಂಡು ಬಾಡಿಹೋಗುತ್ತದೆ. ಈ ಸೂಚನೆ ನಿಮಗೆ ಪ್ರಾರಂಭಿಕ ಹಂತದಲ್ಲೇ ಕಂಡುಬಂದಲ್ಲಿ ಇದನ್ನು ನಿರ್ಲಕ್ಷಿಸದೇ ತಕ್ಷಣವೇ ಇದಕ್ಕೆ ಪರಿಹಾರವನ್ನು ಹುಡುಕಲೇಬೇಕು. ಇದರಿಂದ ನಿಮ್ಮ ಒಟ್ಟಾರೆ ಸೌಂದರ್ಯವು ಕಳೆಗುಂದುವುದಲ್ಲದೆ ವಯಸ್ಸಾದಂತೆ ಸುಕ್ಕು ಹೆಚ್ಚಾಗಿ ಕಣ್ಣಿನ ಕೆಳಭಾಗದಲ್ಲಿ ಕಲೆಗಳು ಉದ್ಭವಿಸುತ್ತಾ ನಿಮ್ಮ ಕಾಂತಿಯನ್ನು ಕುಗ್ಗಿಸುತ್ತದೆ.

ಹಾಗಾಗಿ ಚರ್ಮದ ಸುಕ್ಕುಗಟ್ಟಿವಿಕೆಯನ್ನು ಸುಲಭವಾಗಿ ನಿವಾರಣೆಮಾಡಿ ನಿಮ್ಮ ಯೌವ್ವನವನ್ನು ನಿರಂತರ ಕಾಪಾಡಲು ಕೇವಲ 10 ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ನೀವು ಮಾಡಬೇಕಿರುವುದು ಇಷ್ಟೇ, ಮುಖದ ತ್ವಚೆಯನ್ನು ವೃತ್ತಾಕಾರದಲ್ಲಿ 10 ದಿನಗಳ ಕಾಲ ನಯವಾಗಿ ಮಸ್ಸಾಜ್ ಮಾಡಿ. ಇದರಿಂದ ನಿಮ್ಮ ಯೌವ್ವನಾವಸ್ಥೆಯು ಯಥಾಸ್ಥಿತಿ ಕಾಪಾಡಲು ನೆರವಾಗುತ್ತದೆ. ಸುಕ್ಕನ್ನು ಸುಲಭವಾಗಿ ನಿವಾರಣೆ ಮಾಡುವ ವಿಶಿಷ್ಟ ಸಂಗಂತಿಗಳಿಗಾಗಿ ಕೆಳಕಂಡಂತೆ ವಿವರ ಓದಿ... ನೆರಿಗೆ ಬೀಳದಂತೆ ತ್ವಚೆ ರಕ್ಷಣೆ ಮಾಡುವ 9 ಜ್ಯೂಸ್

Effective Home-made Anti aging Facials for natural looking skin

ಫೇಶಿಯಲ್ ವಿಧಾನ - 1
ಒಂದು ಬಟ್ಟಲಿಗೆ ಅರ್ಧ ಚಮಚ ಜೆಲಟಿನ್ ಪುಡಿ, 1 ಚಮಚ ಜೇನುತುಪ್ಪ, 1 ಚಮಚ ಗ್ಲಿಸರೀನ್ ಮತ್ತು 1 ಚಮಚ ಆಸ್ಪಿರಿನ್ ಪುಡಿ ಎಲ್ಲವನ್ನೂ ಒಟ್ಟಾಗಿ ಸೇರಿಸಿ ಚೆನ್ನಾಗಿ ಮುಶ್ರಣ ಮಾಡಿ. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ನಿಮ್ಮ ಮುಖಕ್ಕೆ ಮೇಲಿನ ಮಾರ್ಗವಾಗಿ 15 ನಿಮಿಷಗಳ ನಯವಾಗಿ ಹಚ್ಚಿ. 10 ನಿಮಿಷದ ನಂತರ ನೀರಿನಿಂದ ತೊಳೆಯಿರಿ. ನಂತರ ಮುಖವನ್ನು ಒಣಗಿಸಬೇಡಿ. ಅದರ ಮೇಲಿರುವ ನೀರು ಹಾಗೆಯೇ ಆರಲು ಬಿಡಿ. ಇದು ನಿಮ್ಮ ಮುಖದಲ್ಲಿನ ಕಲೆಗಳು, ಮೊಡವೆಗಳು, ತ್ವಚೆಯ ಸೋಂಕು ಹಾಗೂ ತ್ವಚೆಯ ಸುಕ್ಕನ್ನು ನಿವಾರಿಸುತ್ತದೆ. ತ್ವಚೆಯ ಸರ್ವರೋಗಕ್ಕೂ, ಸೀಬೆಹಣ್ಣಿನ ಎಲೆಗಳೇ ಸಾಕು!

ಫೇಶಿಯಲ್ ವಿಧಾನ - 2
ಒಂದು ಚಮಚ ಬಾದಾಮಿ ಅರ್ಥವಾ ಆಲಿವ್ ತೈಲ, 1 ಮೊಟ್ಟೆಯ ಒಳ ಭಂಡಾರ, 1 ಚಮಚ ಜೇನುತುಪ್ಪ ಮತ್ತು 1 ಚಮಚ ಪನ್ನೀರು. ಇವೆಲ್ಲವನ್ನು ಒಟ್ಟಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ, ಕಣ್ಣಿನ ಮತ್ತು ಕೆನ್ನೆಯ ಕೆಳಭಾಗದಲ್ಲಿ 15 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ಇದಾದ ನಂತರ ಲಘು ತೇವಾಂಶ ಹೆಚ್ಚಿಸುವ ಸೌಂದರ್ಯವರ್ಧಕವನ್ನು ಲೇಪನ ಮಾಡಿಕೊಳ್ಳಿ.

ಫೇಶಿಯಲ್ ವಿಧಾನ - 3
1 ಚಮಚ ಮುಸುಕಿನ ಜೋಳದ ಪುಡಿ, 1 ಚಮಚ ಆಲಿವ್ ತೈಲ ಮತ್ತು 5 ಚಮಚ ಕ್ಯಾರೆಟ್ ರಸವನ್ನು ಒಟ್ಟಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ 15 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

ಫೇಶಿಯಲ್ ವಿಧಾನ - 4
ಅರ್ಧ ಮಾಗಿದ ಬಾಳೆಹಣ್ಣು, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಪನ್ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಂಡು ಮುಖದ ಮೇಲೆ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಗಳು ಮುಖದ ಸುಕ್ಕನ್ನು ತಡೆಯುವಲ್ಲಿ ಯಶಸ್ವಿಯಾಗಿವೆ. ಈ ಮಿಶ್ರಣವನ್ನು ಕ್ರಮವಾಗಿ ಹಚ್ಚುತ್ತಾ ಹೋದರೆ ನಿಮ್ಮ ಯೌವ್ವನಾವಸ್ಥೆಯನ್ನು ಕಾಪಾಡುವಲ್ಲಿ ನೆರವಾಗುತ್ತದೆ ಹಾಗೂ ನಿಮ್ಮ ಸೌಂದರ್ಯದ ಕಾಂತಿ ದ್ವಿಗುಣವಾಗುತ್ತದೆ.

English summary

Effective Home-made Anti aging Facials for natural looking skin

Dry skin is more prone to skin ageing, as the natural oils are secreted in less amounts on this skin type, thus causing wrinkles. Once wrinkles start appearing on your face, it is a signal that you have to do something about it. Just massage your face with these facials in a circular motion with gentle strokes for 10 days to get a younger-looking face. Scroll down to know the magical remedies for wrinkles at home.
X
Desktop Bottom Promotion