For Quick Alerts
ALLOW NOTIFICATIONS  
For Daily Alerts

ತ್ವಚೆಯ ಸೌಂದರ್ಯ ವೃದ್ಧಿಗೆ- ಮನೆಮದ್ದಿನ ಚಿಕಿತ್ಸೆ

By Manu
|

ನಿಸರ್ಗದತ್ತವಾಗಿ ಸೌಂದರ್ಯಪ್ರಜ್ಞೆ ಎನ್ನುವುದು ಮಹಿಳೆಯರಲ್ಲಿಯೇ ಹೆಚ್ಚಾಗಿ ನಾವು ಕಾಣುತ್ತೇವೆ. ಅದರಲ್ಲೂ ತಮ್ಮ ತ್ವಚೆ ಅತಿ ಕೋಮಲ, ಗೌರವರ್ಣ ಮತ್ತು ಕಲೆಯಿಲ್ಲಂದಿತಿರುವುದು ಪ್ರತಿಯೊಬ್ಬರ ಕನಸು. ಮೇಕಪ್‌ನಿಂದ ಕಲೆಗಳನ್ನು ಎದುರಿನವರ ನೋಟದಿಂದ ಮರೆಮಾಚಿದರೂ ಮನಸ್ಸಿನಿಂದ ಮರೆಮಾಚಲು ಸಾಧ್ಯವಿಲ್ಲ. ಇಂದಿನ ದಿನಚರಿ, ಬಿಸಿಲು, ಹೊಗೆ, ಅಲರ್ಜಿ, ನೀರಿನ ಗಡಸು, ವ್ಯಾಯಾಮದ ಕೊರತೆ. ಮದ್ಯಪಾನ, ಅತಿ ಧೂಮಪಾನ ಇಂತಹ ಹಲವಾರು ಕಾರಣದಿಂದ ಚರ್ಮ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡಿರುವುದನ್ನು ಸರಿಪಡಿಸಲು ಸಾಧ್ಯವಿದೆ. ಸುಂದರವಾಗಿ ಕಾಣಲು ಯದ್ವಾ-ತದ್ವಾ ಕ್ರೀಮ್‌‌ ಬಳಸಬೇಡಿ!

ಈ ಕಾರಣಗಳನ್ನೇ ತೋರಿಸಿ ಬಹುರಾಷ್ಟ್ರೀಯ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ಜಾಹೀರಾತಿನಿಂದ ಜನರನ್ನು ಮರಳುಮಾಡಿ ಹಾನಿಕಾರಕ ರಾಸಾಯನಿಕಗಳಿಂದ ಥಟ್ಟನೇ ಈ ತೊಂದರೆಗಳನ್ನು ಸರಿಪಡಿಸಿಬಿಡುತ್ತೇವೆ ಎಂದು ಪ್ರಚಾರ ಮಾಡುತ್ತವೆ. ಆದರೆ ಇದು ಮೇಲ್ನೋಟಕ್ಕೆ ಚರ್ಮವನ್ನು ಸುಂದರಗೊಳಿಸಿದರೆ ಇನ್ನೊಂದೆಡೆ ಶಿಥಿಲಗೊಳಿಸುತ್ತದೆ.

ಆದ್ದರಿಂದ ನೂರಾರು ವರ್ಷಗಳಿಂದ ಫಲಪ್ರದವೆಂದು ಸಾಬೀತುಪಡಿಸಿರುವ, ಯಾವುದೇ ಅಡ್ಡ ಪರಿಣಾಮವಿಲ್ಲದ, ನಿಧಾನವಾಗಿಯಾದರೂ ಉತ್ತಮ ಫಲಿತಾಂಶವನ್ನೇ ನೀಡುವ ಮನೆಮದ್ದುಗಳಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ಇಂಥ ಹಲವು ಮನೆಮದ್ದುಗಳ ಬಗ್ಗೆ ವಿವರ ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್

ಒಂದು ವೇಳೆ ನಿಮ್ಮ ತ್ವಚೆಯ ಚರ್ಮದಲ್ಲಿ ಎಣ್ಣೆಯಂಶ ಕೊಂಚ ಹೆಚ್ಚಾಗಿದ್ದರೆ ಅರಿಶಿನದೊಂದಿಗೆ ಚಂದನದ ಪುಡಿ ಅಥವಾ ತೇದಿದ ದ್ರವವನ್ನು ಸೇರಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದಕ್ಕಾಗಿ ಅರಿಶಿನದ ಒಣ ಕೊಂಬು, ಚಂದನದ ಕೊರಡನ್ನು ಕಲ್ಲಿನ ಮೇಲೆ ತೇದಿ ಸಮಪ್ರಮಾಣದಲ್ಲಿ ಲೇಪನವನ್ನು ತಯಾರಿಸಿ. ಇದಕ್ಕೆ ದ್ರವವಾಗಿ ಹಸಿಹಾಲನ್ನು ಬಳಸಿ. ಈ ಲೇಪನ ಸಾಕಷ್ಟು ದಟ್ಟನೆ ಇರಬೇಕು, ಅಂದರೆ ಮುಖದ ಮೇಲೆ ಹಚ್ಚಿಕೊಂಡಾಗ ದ್ರವವಾಗಿ ನೀರಿನಂತೆ ಇಳಿಯಬಾರದು, ಅಷ್ಟು ಘನವಾಗಿರಲಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್

ರಾತ್ರಿ ಮಲಗುವ ಮುನ್ನ ಈಗ ತಾನೇ ತೊಳೆದುಕೊಂಡ ಮುಖಕ್ಕೆ, ತುಟಿಗಳನ್ನು ಬಿಟ್ಟು ಇಡಿಯ ಮುಖ ಆವರಿಸುವಂತೆ ತೆಳುವಾಗಿ ಕೆಳಗಿನಿಂದ ಮೇಲಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಮಸಾಜ್ ಮಾಡುತ್ತಾ ಹಚ್ಚಿ. ಸ್ವತಃ ಹಚ್ಚುವುದಕ್ಕಿಂತ ಇನ್ನೊಬ್ಬರ ಸಹಾಯ ಪಡೆಯುವುದು ಲೇಸು. ಇದು ಕೊಂಚ ಉರಿ ತರಿಸಬಹುದು. ಬರೆಯ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಎಣ್ಣೆಚರ್ಮದವರಿಗೂ ಸೂಕ್ತವಾದ ವಿಧಾನವಾಗಿದ್ದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸಬಹುದಾಗಿದೆ. ಈ ಲೇಪದಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ಎಣ್ಣೆಯಂಶವೂ ಕಡಿಮೆಯಾಗುವುದು. ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ

ಮೂಡುವೆ ಮೊಡವೆಯ ನಿವಾರಣೆಗೆ- ಬೇವಿನ ಎಣ್ಣೆ

ಮೂಡುವೆ ಮೊಡವೆಯ ನಿವಾರಣೆಗೆ- ಬೇವಿನ ಎಣ್ಣೆ

ಬೇವಿನ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣ ಚರ್ಮದ ಅಡಿಯಲ್ಲಿಯೂ ತನ್ನ ಪರಿಣಾಮವನ್ನು ಬೀರಿ ಮೊಡವೆಗಳಿಗೆ ಮೂಲದಿಂದ ಆರೈಕೆ ನೀಡುತ್ತದೆ. ಇದರಿಂದ ಮೊಡವೆಗಳು ನಿವಾರಣೆಯಾಗುವ ಜೊತೆಗೇ ಹೊಸ ಮೊಡವೆಗಳು ಮೂಡುವ ಸಂಭವಗಳೂ ಕಡಿಮೆಯಾಗುತ್ತವೆ. ಜೊತೆಗೇ ಎದುರಾಗಬಹುದಾಗಿದ್ದ ಚರ್ಮದ ಇತರ ತೊಂದರೆಗಳಿಂದಲೂ ಮುಕ್ತಿ ದೊರಕುತ್ತದೆ.

ನುಗ್ಗೆ ಎಲೆ-ಲಿಂಬೆ ರಸ

ನುಗ್ಗೆ ಎಲೆ-ಲಿಂಬೆ ರಸ

ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಬಾಳೆಹಣ್ಣಿನ ಪ್ಯಾಕ್

ಬಾಳೆಹಣ್ಣಿನ ಪ್ಯಾಕ್

ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ.

English summary

Easy home remedies to get glowing skin in kannada

There are thousands of skin and beauty care products that promise to give you clear and glowing skin. Instead of relying on these products, you can try some simple and easy home remedies to improve the overall health and appearance of your skin. have a look
X
Desktop Bottom Promotion