For Quick Alerts
ALLOW NOTIFICATIONS  
For Daily Alerts

ಮುಖ ಮಾರ್ಜನ ಉದಾಸೀನ ಖಂಡಿತ ಬೇಡ

By Deepu
|

ಸೌಂದರ್ಯವೆಂಬುದು ದೈವದತ್ತ ವರವಾಗಿದ್ದು ಅದರ ಪೋಷಣೆಯಲ್ಲಿ ನಾವು ಕಾಳಜಿಯನ್ನು ತೆಗೆದುಕೊಳ್ಳದೇ ಇರುವುದು ನಮಗೆ ಹೆಚ್ಚುವರಿ ನಷ್ಟವನ್ನು ಉಂಟುಮಾಡಬಹುದು. ಕೆಲವೊಂದು ಅನಾರೋಗ್ಯಕರವಾದ ವಿಧಾನಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವುದರ ಮೂಲಕ ಸೌಂದರ್ಯಕ್ಕೆ ಧಕ್ಕೆಯನ್ನು ನಾವು ತಂದುಕೊಳ್ಳುತ್ತೇವೆ. ರಾಸಾಯನಿಕ ವಿಧಾನಗಳನ್ನು ಅನುಸರಿಸುವುದು, ಸಾಕಷ್ಟು ನೀರು ಕುಡಿಯದೇ ಇರುವುದು, ಆರೋಗ್ಯಕಾರಿ ಚಟುವಟಿಕೆಗಳನ್ನು ನಿರ್ವಹಿಸದೇ ಇರುವುದರಿಂದ ಸೌಂದರ್ಯದಲ್ಲಿ ನಾವು ವ್ಯತ್ಯಯವನ್ನು ಕಂಡುಕೊಳ್ಳುತ್ತೇವೆ. ಮುಖ ತೊಳೆಯುವಾಗ ಮಾಡಬಾರದ ತಪ್ಪು ಯಾವುದು?

ಸೌಂದರ್ಯ ತಜ್ಞರ ಅಭಿಪ್ರಾಯದಂತೆ ಇಂದಿನ ಯುವ ಜನಾಂಗ ಟಿವಿ ಜಾಹೀರಾತುಗಳಲ್ಲಿ ಬರುವ ಕ್ರೀಮ್, ಲೋಷನ್‌ಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು ನಿಧಾನವಾಗಿ ಇವುಗಳ ಅಡ್ಡ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ. ನೈಸರ್ಗಿಕ ವಿಧಾನಗಳು ಯಾವುದೇ ಪರಿಣಾಮವನ್ನು ಬೀರವುದಿಲ್ಲ ಎಂಬುದು ಇವರ ಆಲೋಚನೆಯಾಗಿದ್ದು ರಾಸಾಯನಿಕ ಅಂಶಗಳಿಂದ ಕೂಡಲೇ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಅಂದುಕೊಂಡು ಜಾಹೀರಾತು ಉತ್ಪನ್ನಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಇದರಿಂದ ಅನಾನುಕೂಲವೇ ಹೆಚ್ಚು ಎಂದು ಅಭಿಪ್ರಾಯ ಪಡುತ್ತಾರೆ.

ಸೌಂದರ್ಯದ ಒಂದು ಭಾಗವೇ ಆಗಿರುವ ಮುಖವನ್ನು ಸ್ವಚ್ಛ ಮಾಡುವುದರ ಕುರಿತಾದ ಕೆಲವೊಂದು ಆರೋಗ್ಯಕಾರಿ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಮುಖ ತೊಳೆಯುವುದರಿಂದ ಕೂಡ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಲಿದ್ದು ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಮುಖಕ್ಕೆ ಹೊಂದುವ ಉತ್ಪನ್ನಗಳು

ಮುಖಕ್ಕೆ ಹೊಂದುವ ಉತ್ಪನ್ನಗಳು

ಮುಖ ಅತ್ಯಂತ ಸಂವೇದಿಯಾಗಿರುವುದರಿಂದ ಸೂಕ್ಷ್ಮರಂಧ್ರದ ಮೂಲಕ ಸೋಪಿನ ಕಣಗಳೂ ಪ್ರವೇಶ ಪಡೆಯಬಹುದು. ಗಡಸು ಸೋಪಿನಿಂದ ಮುಖ ತೊಳೆಯುವುದರಿಂದ ಮತ್ತು ಬ್ರಶ್ ಬಳಸಿ ಗಸಗಸ ಉಜ್ಜುವುದರಿಂದ ಚರ್ಮ ಅತೀವವಾಗಿ ಘಾಸಿಗೊಳ್ಳುತ್ತದೆ. ಅಲ್ಲದೇ ಮುಖದ ಚರ್ಮದಲ್ಲಿರುವ ತೈಲದ ಅಂಶವನ್ನು ತೊಳೆದುಕೊಂಡು ಹೋಗುತ್ತದೆ. ಇದು ಚರ್ಮವನ್ನು ಒಳಗಿನಿಂದ ಶಿಥಿಲಗೊಳಿಸುತ್ತದೆ. ಆದ್ದರಿಂದ ಮುಖ ತೊಳೆಯಲೆಂದೇ ಮಾರುಕಟ್ಟೆಯಲ್ಲಿ ದೊರಕುವ ನೈಸರ್ಗಿಕ ಫೇಸ್ ವಾಷ್ ಅಥವಾ ಫೇಸ್ ಸೋಪ್ ಉಪಯೋಗಿಸುವುದು ಅತ್ಯಂತ ಉತ್ತಮ. ಮೈಗೆ ಹಚ್ಚುವ ಸೋಪು, (ಬಟ್ಟೆ ಸೋಪು ಅತ್ಯಂತ ಅನಾಹುತಕಾರಿ), ತಲೆಗೆ ಹಚ್ಚುವ ಶಾಂಪೂ ಮೊದಲಾದವುಗಳನ್ನು ಕೂಡ ತಾಗಿಸಬೇಡಿ.

ನೀರಿನ ತಾಪಮಾನ

ನೀರಿನ ತಾಪಮಾನ

ಬಿಸಿನೀರಿನಿಂದ ಮುಖ ತೊಳೆದುಕೊಳ್ಳುವಾಗ ಕೊಂಚ ಆಹ್ಲಾದಕರ ಎನಿಸಿದರೂ ಮುಖದ ಚರ್ಮಕ್ಕೆ ತಣ್ಣೀರೇ ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಮುಖದ ಚರ್ಮ ಅತ್ಯಂತ ಸೂಕ್ಷ್ಮಸಂವೇದಿಯಾಗಿದ್ದು ತಾಪಮಾನಕ್ಕೆ ಅತಿಹೆಚ್ಚಾಗಿ ಸ್ಪಂದಿಸುತ್ತದೆ. ಬಿಸಿನೀರಿನಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಹೆಚ್ಚು ಸ್ಪಂದಿಸಿ ಹೆಚ್ಚಾಗಿ ತೆರೆದುಕೊಳ್ಳುತ್ತವೆ. ದೊಡ್ಡದಾಗಿ ತೆರೆದ ರಂಧ್ರಗಳು ಇನ್ನೂ ದೊಡ್ಡ ಧೂಳಿನ ಕಣಗಳಿಗೆ ಆಹ್ವಾನ ನೀಡುತ್ತದೆ. ಜೊತೆಗೇ ಹೆಚ್ಚಿನ ಪ್ರಮಾಣದ ಮತ್ತು ಆಳವಾಗಿ ಕುಳಿತುಕೊಳ್ಳಲು ನಾವೇ ರತ್ನಗಂಬಳಿ ಹಾಸಿ ಬೇಡದ ಅತಿಥಿಗಳನ್ನು ಕರೆದಂತಾಗುತ್ತದೆ. ಚರ್ಮ ಸಡಿಲವಾಗಿ ನೆರಿಗೆಗಳು ಶೀಘ್ರವಾಗಿ ಆವರಿಸುತ್ತವೆ. ಬದಲಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಈ ರಂಧ್ರಗಳು ಇನ್ನಷ್ಟು ಕಿರಿದಾಗಿ ಧೂಳಿನ ಕಣಗಳ ಪ್ರವೇಶಕ್ಕೆ ಪ್ರವೇಶವಿಲ್ಲ ಎಂಬ ಫಲಕ ತೋರಿಸುತ್ತವೆ. ಇದರಿಂದ ಚರ್ಮ ತನ್ನ ಸಹಜ ಸೆಳೆತವನ್ನು ಪಡೆದು ನೆರಿಗೆಗಳಿಂದ ಮುಕ್ತವಾಗಿರುತ್ತದೆ.

ಮೇಕಪ್ ಅಳಿಸಲು ಫೇಸ್‌ವಾಶ್ ಬಳಕೆ ಬೇಡ

ಮೇಕಪ್ ಅಳಿಸಲು ಫೇಸ್‌ವಾಶ್ ಬಳಕೆ ಬೇಡ

ಮೇಕಪ್ ಅನ್ನು ತೊಡೆದು ಹಾಕಲು ಎಂದಿಗೂ ಫೇಸ್‌ವಾಶ್ ಅನ್ನು ಬಳಸದಿರಿ. ರಿಮೂವರ್ ಅಥವಾ ಉತ್ತಮ ರೀತಿಯ ಮಾಯಿಸ್ಚರೈಸರ್ ಬಳಕೆಯನ್ನು ಮಾಡಿ. ನಂತರವಷ್ಟೇ ಫೇಸ್‌ವಾಶ್ ಬಳಸಿ. ಕೆಲವರು ಕ್ಲೆನ್ಸರ್, ಟೋನರ್, ಮಾಯಿಸ್ಚರೈಸರ್ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಇದು ಎಲ್ಲರಿಗೂ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಗಮನದಲ್ಲಿರಲಿ.

ಮೊದಲು ಕಿವಿಯ ಹಿಂಭಾಗಕ್ಕೆ ಬಳಸಿ

ಮೊದಲು ಕಿವಿಯ ಹಿಂಭಾಗಕ್ಕೆ ಬಳಸಿ

ಯಾವಾಗಲೂ ಹೊಸ ಉತ್ಪನ್ನಗಳನ್ನು ನೀವು ಪ್ರಥಮ ಬಾರಿಗೆ ಬಳಸುತ್ತಿದ್ದೀರಿ ಎಂದಾದಲ್ಲಿ ಅದನ್ನು ಕಿವಿಯ ಹಿಂಭಾಗಕ್ಕೆ ಬಳಸಿ ನಂತರ 48-72 ಗಂಟೆಗಳವರೆಗೆ ಕಾಯಿರಿ. ಇದು ಹೊಂದುತ್ತಿದೆ ಎಂದಾದಲ್ಲಿ ಮಾತ್ರ ಅದನ್ನು ಮುಖಕ್ಕೆ ಬಳಸಲು ಆರಂಭಿಸಿ.

ನೈಸರ್ಗಿಕ ಉತ್ಪನ್ನಗಳು

ನೈಸರ್ಗಿಕ ಉತ್ಪನ್ನಗಳು

ಯಾವಾಗಲೂ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದಕ್ಕೆ ಬದಲಿಗೆ ನೈಸರ್ಗಿಕ ಉತ್ಪನ್ನಗಳಾದ ಕಡಲೆ ಹಿಟ್ಟು, ಮೊಸರು, ಲಿಂಬೆಯ ಬಳಕೆಯನ್ನು ಮಾಡಿ. ರಾಸಾಯನಿಕಗಳ ತೀವ್ರ ಪರಿಣಾಮಕ್ಕೆ ತ್ವಚೆ ಒಳಗಾಗಿದೆ ಎಂದಾದಲ್ಲಿ ಈ ನೈಸರ್ಗಿಕ ಅಂಶಗಳು ಅದನ್ನು ರಿಪೇರಿ ಮಾಡಲು ನೆರವಾಗುತ್ತವೆ.

English summary

Dos and don’ts while face washing

From washing your face couple of times to how you wash it, along with the water that is being used, each factor plays a major role in having a beautiful skin. Read on to know more about the various do's and don'ts while washing the face that need to be followed.
X
Desktop Bottom Promotion