For Quick Alerts
ALLOW NOTIFICATIONS  
For Daily Alerts

ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!

By Deepak
|

ನಿಮ್ಮ ಮುಖದಲ್ಲಿ ದೊಡ್ಡದಾದ, ತ್ವಚೆಯ ಆಳದಲ್ಲಿ ಇರುವ ಕೆಂಪು ಬಣ್ಣದಿಂದ ಕೂದಿದ ಮೊಡವೆಗಳು ಇವೆಯೇ? ಇದನ್ನು ಸಿಸ್ಟಿಕ್ ಮೊಡವೆಗಳು ಎಂದು ಕರೆಯುತ್ತಾರೆ. ಇದು ಮೊಡವೆಗಳಲ್ಲಿಯೇ ಅತ್ಯಂತ ಘೋರವಾದ ಮೊಡವೆಗಳಾಗಿರುತ್ತವೆ.

ತಾರುಣ್ಯದಲ್ಲಿರುವವರು ಇದರ ಹಿಡಿತಕ್ಕೆ ಸಿಕ್ಕಿಕೊಂಡು ನರಳುತ್ತಾರೆ. ಜೊತೆಗೆ ವಯಸ್ಸಾದವರಲ್ಲಿ ಸಹ ಇದು ಕಾಡುತ್ತದೆ. ಸಾಮಾನ್ಯವಾಗಿ ಇದು ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ಕಂಡು ಬರುತ್ತದೆ. ಇದೆಲ್ಲದ್ದಕ್ಕಿಂತ ಸಿಸ್ಟಿಕ್ ಮೊಡವೆಗಳಿಂದ (Cystic Acne) ಉಂಟಾಗುವ ಹೆಚ್ಚಿನ ಹಾನಿ ಯಾವುದೆಂದರೆ, ಇದರಿಂದ ಉಂಟಾಗುವ ಕಲೆಯು ಶಾಶ್ವತವಾಗಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ.

ಈ ಮೊಡವೆಗಳಲ್ಲಿ, ಕೀವು, ನಿರ್ಜೀವ ಕೋಶಗಳು, ಬ್ಯಾಕ್ಟೀರಿಯಾ ಮತ್ತು ಬಿಳಿ ರಕ್ತಕಣಗಳು ಎಲ್ಲವೂ ಇರುತ್ತವೆ. ಸಾಮಾನ್ಯ ಮೊಡವೆಗಳಂತಲ್ಲದೆ ಈ ಮೊಡವೆಗಳು ಚರ್ಮದ ಒಳಭಾಗದಲ್ಲಿ ಬೆಳೆದು, ಅಗಾಧವಾದ ನೋವು ಮತ್ತು ತುರಿಕೆಯನ್ನು ನೀಡುತ್ತವೆ. ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

Cure Cystic Acne With Home Remedies

ಸಿಸ್ಟಿಕ್ ಮೊಡವೆಗಳು ಕಾಣಿಸಿಕೊಳ್ಳಲು ಹಾರ್ಮೋನುಗಳಲ್ಲಾಗುವ ಬದಲಾವಣೆಗಳು, ಅತಿಯಾದ ನಿರ್ಜೀವ ಕೋಶಗಳು ಮತ್ತು ಅಧಿಕ ಪ್ರಮಾಣದ ಜಿಡ್ಡಿನಂಶವೇ ಕಾರಣ. ಜೊತೆಗೆ ಒತ್ತಡವು ಸಹ ಸಿಸ್ಟಿಕ್ ಮೊಡವೆಗಳು ಕಾಣಿಸಿಕೊಳ್ಳಲು ತಮ್ಮ ಕೊಡುಗೆಯನ್ನು ನೀಡುತ್ತವೆ. ಯಾರಿಗೆ ಇಂತಹ ಮೊಡವೆಗಳು ಇರುತ್ತವೆಯೋ, ಅವರು ಈ ಮೊಡವೆಗಳನ್ನು ಹಿಂಡಲೂ ಬಾರದು ಮತ್ತು ಅದರ ಮೇಲೆ ಉಗುರು ಮತ್ತು ಬೆರಳುಗಳಿಂದ ಗೀಚಿಕೊಳ್ಳಲೂಬಾರದು.

ಇದರಿಂದ ಈ ಮೊಡವೆಗಳು ಮತ್ತಷ್ಟು ಗಂಭೀರ ಸ್ವರೂಪಕ್ಕೆ ತಿರುಗುವ ಸಾಧ್ಯತೆಗಳು ಇರುತ್ತವೆ. ಸಾಂಪ್ರದಾಯಿಕ ಮೊಡವೆ ರಕ್ಷಣೆ ಮಾಡಿಕೊಳ್ಳಲು ಬಳಸುವ ಸಲಹೆಗಳು ಈ ಮೊಡವೆಗಳನ್ನು ನಿವಾರಿಸಿಕೊಳ್ಳಲು ಪರಿಣಾಮಕಾರಿಯಾಗಿ ನೆರವಾಗುತ್ತವೆ. ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ತಜ್ಞರು ಸಹ ಸ್ವಾಭಾವಿಕ ಮಾರ್ಗಗಳ ಮೂಲಕ ಮೊಡವೆಗಳನ್ನು ನಿವಾರಿಸಿಕೊಳ್ಳುವ ಸಲಹೆಗಳನ್ನು ಸೂಚಿಸುತ್ತಾರೆ. ಬನ್ನಿ ನಾವು ಇಂದು ಈ ಸಿಸ್ಟಿಕ್ ಮೊಡವೆಗಳನ್ನು ನಿವಾರಿಸಿಕೊಳ್ಳಲು ಇರುವ ಮನೆ ಮದ್ದುಗಳನ್ನು ತಿಳಿದುಕೊಳ್ಳೋಣ:

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾವು ಮುಖದಲ್ಲಿರುವ ಜಿಡ್ಡಿನಂಶವನ್ನು ಕಡಿಮೆ ಮಾಡುವುದರ ಜೊತೆಗೆ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡಲು ಸಹ ಸಹಾಯ ಮಾಡುತ್ತದೆ. ಇದಲ್ಲದೆ, ಬೇಕಿಂಗ್ ಸೋಡಾವು ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ ಮತ್ತು ಇದು ತ್ವಚೆಯಲ್ಲಿರುವ ರಂಧ್ರಗಳನ್ನು ಸಹ ಬಿಗಿಗೊಳಿಸುತ್ತದೆ. ಇದು ನಿಮ್ಮ ತ್ವಚೆಯನ್ನು ಮೃದುಗೊಳಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಬೇಕಿಂಗ್ ಸೋಡಾವನ್ನು ನೀರು ಮತ್ತು ಸೌತೆಕಾಯಿ ರಸದ ಜೊತೆಗೆ ಬೆರೆಸಿ. ಮೊಡವೆಗಳಿರುವ ಭಾಗಕ್ಕೆ ಇದನ್ನು ಲೇಪಿಸಿ 15 ನಿಮಿಷ ಬಿಡಿ, ನಂತರ ಇದನ್ನು ನೀರಿನಿಂದ ತೊಳೆಯಿರಿ. ಮೊಡವೆ ಸಮಸ್ಯೆಗೆ ಮನೆಮದ್ದು

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗಗಳು ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಒಳಗೊಂಡಿರುತ್ತವೆ, ಇವು ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತವೆ. ಇದು ಸಿಸ್ಟಿಕ್ ಮೊಡವೆಗಳನ್ನು ಗುಣಪಡಿಸಿಕೊಳ್ಳಲು ಇರುವ ಒಂದು ಒಳ್ಳೆಯ ಮನೆಮದ್ದಾಗಿರುತ್ತದೆ. ಜೊತೆಗೆ ಇದು ತ್ವಚೆಯಲ್ಲಿರುವ ರಂಧ್ರಗಳನ್ನು ಸಹ ಬಿಗಿಗೊಳಿಸಿ, ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ನಿಮಗೆ ಬೇಕಾದಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಜೇನು ತುಪ್ಪ ಮತ್ತು ಹಾಲಿನ ಜೊತೆಗೆ ಬೆರೆಸಿಕೊಂಡು ಸಿಸ್ಟಿಕ್ ಮೊಡವೆಗಳಿಂದ ಪಾರಾಗಬಹುದು. ಮೊಡವೆ ಹೆಚ್ಚಾಗಲೂ ಈ ಆಹಾರಗಳು ಒಂದು ಕಾರಣ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿರುವ ಕೆಲವೊಂದು ಆಸಿಡ್‌ಗಳು ಇರುತ್ತವೆ. ಇವುಗಳಲ್ಲಿ ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶಗಳು ಇರುತ್ತವೆ. ಇವು ಸಿಸ್ಟಿಕ್ ಮೊಡವೆಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ಇದರಲ್ಲಿ ವಿಟಮಿನ್ ಇ ಇರುತ್ತದೆ. ಇವುಗಳು ಸಿಸ್ಟಿಕ್ ಮೊಡವೆಗಳಿಂದ ಉಂಟಾಗುವ ಕಲೆಗಳನ್ನು ತೆಗೆದು ಹಾಕುತ್ತವೆ. ಎರಡು ಮೂರು ಹನಿ ತೆಂಗಿನ ಎಣ್ಣೆಯನ್ನು ಮೊಡವೆಗಳಿರುವ ಭಾಗಕ್ಕೆ ಲೇಪಿಸಿ, ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿ.

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಇವುಗಳು ತ್ವಚೆಯನ್ನು ಒಳಗಿನಿಂದ ಗುಣಪಡಿಸುತ್ತವೆ. ಜೊತೆಗೆ ಗ್ರೀನ್ ಟೀಯಲ್ಲಿ ಉರಿಬಾವು ನಿಯಂತ್ರಿಸುವ ಅಂಶಗಳು ಸಹ ಇರುತ್ತವೆ. ಅವುಗಳು ಮೊಡವೆಗಳಿಂದ ತುರಿಕೆಯನ್ನುಂಟು ಮಾಡುವ ತ್ವಚೆಗೆ ಆರಾಮವನ್ನುಂಟು ಮಾಡುತ್ತದೆ. ಈ ಸಿಸ್ಟಿಕ್ ಮೊಡವೆಗಳಿಂದ ಹೊರಬರಲು, ಗ್ರೀನ್ ಟೀಯನ್ನು ಕುಡಿಯಲು ಆರಂಭಿಸಿ, ಬಿಸಿ ನೀರಿನಲ್ಲಿ ಮುಳುಗಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಸಿಸ್ಟಿಕ್ ಮೊಡವೆಗಳ ಮೇಲೆ ಲೇಪಿಸುವುದರಿಂದ ಸಹ ಈ ಮೊಡವೆಗಳನ್ನು ನಿವಾರಿಸಿಕೊಳ್ಳಬಹುದು.
English summary

Cure Cystic Acne With Home Remedies

Do you have large, red pimples that are deep in your skin? This is cystic acne, one of the worst seen acne breakouts. Teenagers suffer more from this, but sometimes it is seen in adults as well. Usually, it appears on face, neck and chest. The major risk associated with cystic acne is that it can leave permanent scars. Home remedies for cystic acne help to remove or reduce the scars as well as acne. have a look
Story first published: Tuesday, August 25, 2015, 20:01 [IST]
X
Desktop Bottom Promotion