For Quick Alerts
ALLOW NOTIFICATIONS  
For Daily Alerts

ಸಿಟ್ರಸ್ ಹಣ್ಣುಗಳ ಚಮತ್ಕಾರಕ್ಕೆ ತಲೆಬಾಗಲೇಬೇಕು!

|

ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಬೇಕೆಂಬ ಆಸೆಯಿರುವುದು ಸಾಮಾನ್ಯ, ಇದಕ್ಕಾಗಿ ದೇಹದ ಪ್ರತಿಯೊಂದು ಭಾಗಗಳನ್ನು ಆರೈಕೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ತ್ವಚೆಯ ಆರೈಕೆ ಅತೀ ಅಗತ್ಯವಾಗಿರುತ್ತದೆ.

ತ್ವಚೆಯ ಆರೈಕೆಯಲ್ಲಿ ಪ್ರಮುಖವಾಗಿ ವಾರಕ್ಕೊಮ್ಮೆಯಾದರೂ ಅದರ ಮೇಲ್ಪದರವನ್ನು ತೆಗೆಯುವುದು. ಸ್ಕ್ರಬ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳನ್ನು ಬಳಸುವುದರಿಂದ ತ್ವಚೆಯ ಮೇಲೆ ಗಾಯ ಮತ್ತು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದಕ್ಕಾಗಿ ನೈಸರ್ಗಿಕವಾಗಿಯೇ ಮೇಲ್ಪದರವನ್ನು ತೆಗೆಯಬೇಕಾಗುತ್ತದೆ. ಮಳೆಗಾಲದಲ್ಲಿ ತ್ವಚೆಯ ಆರೈಕೆ ತುಂಬಾ ಕಷ್ಟವಾಗಿರುವ ಕಾರಣ ಸಿಟ್ರಸ್ ಸಾಲ್ಟ್ ಅನ್ನು ಬಳಸಿಕೊಂಡು ಸ್ಕ್ರಬ್ ಮಾಡಿದರೆ ಚರ್ಮಕ್ಕೆ ನೀರಿನಾಂಶ ಸಿಗುವುದು, ಸತ್ತ ಜೀವಕೋಶಗಳನ್ನು ತೆಗೆದು ನಿಮ್ಮ ಮುಖ ತುಂಬಾ ಮೃದು ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಸಿಟ್ರಸ್ ಸಾಲ್ಟ್ ನಿಮ್ಮ ಚರ್ಮದ ಮೇಲ್ಪದರವನ್ನು ಸ್ವಚ್ಛಗೊಳಿಸುವುದರಲ್ಲಿ ತುಂಬಾ ಉಪಯುಕ್ತ ಮತ್ತು ಇದರಲ್ಲಿನ ಲಿಂಬೆಯ ಅಂಶವು ನಿಮ್ಮ ಚರ್ಮದ ಮೇಲಿನ ಕಂದು ಕಲೆಯನ್ನು ನೈಸರ್ಗಿಕವಾಗಿ ತೆಗೆಯುತ್ತದೆ. ಮಳೆಗಾಲದಲ್ಲಿ ಸಿಟ್ರಸ್ ಸಾಲ್ಟ್ ನ್ನು ಬಳಸಿಕೊಂಡು ಮಾಡುವಂತಹ ಸ್ಕ್ರಬ್ ಮೊಡವೆಗಳು ಬರದಂತೆ ತಡೆಯುತ್ತದೆ. ಇದು ಮೊಡವೆಗಳು ಉಂಟುಮಾಡುವಂತಹ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಈ ಸರಳ ಸಿಟ್ರಸ್ ಸಾಲ್ಟ್ ಸ್ಕ್ರಬ್ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ ಮತ್ತು ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಾಸಾಯನಿಕಯುಕ್ತ ಉತ್ಪನ್ನಗಳಿಗೆ ಖರ್ಚು ಮಾಡುವುದನ್ನು ತಡೆಯಬಹುದು.

ಲಿಂಬೆಹಣ್ಣು ಹಾಗೂ ಜೇನಿನ ಮಿಶ್ರಣ

Citrus Salt Scrubs For Monsoon

ಲಿಂಬೆಹಣ್ಣಿನ ರಸ ಮತ್ತು ಜೇನು ತುಪ್ಪದ ಮಿಶ್ರಣದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮಶುಚಿಗೊಳಿಸುವ ಕಾರ್ಯದಲ್ಲಿ ಸಹಕಾರಿಯಾಗಿದೆ. ಒಂದು ಟೇಬಲ್ ಚಮಚ ಲಿಂಬೆಹಣ್ಣಿನ ರಸಕ್ಕೆ, ಕಾಲು ಟೇಬಲ್ ಚಮಚ ಮೊಸರು ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಒಂದು ಟೇಬಲ್ ಚಮಚ ಜೇನುತುಪ್ಪ ಸೇರಿಸಿ ಕಲಸಿ. ಹೀಗೆ ಮಾಡಿದ ಏಕರೂಪದ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಲೇಪಿಸಿ. 15 ನಿಮಿಷಗಳು ಹಾಗೆಯೇ ಬಿಟ್ಟ ನಂತರ ಬೆಚ್ಚಗಿರುವ ನೀರಿನಿಂದ ನೆನೆಸಿ ತೊಳೆದುಕೊಳ್ಳಿ

ಪರಿಪೂರ್ಣ ಮಾಯಿಶ್ಚರೈಸರ್


ನಿಮ್ಮ ಚರ್ಮದ ಮೇಲಿನ ಹೆಚ್ಚುವರಿ ತೈಲತ್ವವನ್ನು ಕಡಿಮೆಮಾಡಲು ವಿಧಾನಗಳನ್ನು ಹುಡುಕುತ್ತಿದ್ದರೆ, ಲಿಂಬೆಹಣ್ಣಿನ ರಸವನ್ನು ನೇರವಾಗಿ ಚರ್ಮದ ಮೇಲೆ ಬಳಿಯಿರಿ. ಆದರೆ ನಿಮಗೆ ಸೂಕ್ಷ್ಮ ಚರ್ಮವಿದ್ದಲ್ಲಿ ಲಿಂಬೆಹಣ್ಣಿನ ರಸವನ್ನು ಲೇಪಿಸ ಬೇಡಿ ಇಲ್ಲದಿದ್ದರೆ ಕೆಟ್ಟ ಪರಿಣಾಮ ಬೀರಬಹುದು. ಆದಾಗ್ಯೂ ನಿಮಗೆ ಒಣ ಚರ್ಮವಿದ್ದು ಅದನ್ನು ಮೃದುವಾಗಿಸಬೇಕಿದ್ದಲ್ಲಿ, ಸ್ವಲ್ಪ ಎಳನೀರು ಮತ್ತು ಸ್ವಲ್ಪ ಲಿಂಬೆಹಣ್ಣಿನ ರಸ ಬೆರಸಿ ಲೇಪಿಸಿ ಪ್ರಯತ್ನಿಸಿ. ಎಳನೀರು ನಿಮ್ಮ ಚರ್ಮವನ್ನು ತಣಿಸುವ ಗುಣಹೊಂದಿದೆ ಮತ್ತು ಲಿಂಬೆಹಣ್ಣಿನ ರಸ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಕಿತ್ತಳೆ - ಉಪ್ಪಿನ ಸ್ಕ್ರಬ್


ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು, ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಒಂದು ಪಾತ್ರೆಯಲ್ಲಿ ಕಿತ್ತಳೆ ಹಣ್ಣಿನ ರಸಕ್ಕೆ, ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಆಲಿವ್ ಆಯಿಲ್ ಹಾಕಿ, ಎಲ್ಲವನ್ನೂ ಮಿಶ್ರಣ ಮಾಡಿ ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿ. ಸಿಟ್ರಸ್ ಸಾಲ್ಟ್ ಸ್ಕ್ರಬ್ ಎಷ್ಟು ಪರಿಣಾಮಕಾರಿಯೆಂದರೆ ಒಂದೇ ರಾತ್ರಿಯಲ್ಲಿ ಮೊಡವೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಅನಾನಸ್‌ನ ಸಾಲ್ಟ್ ಸ್ಕ್ರಬ್


ಫೈನ್ಯಾಪಲ್ ನಲ್ಲಿ ಹೆಚ್ಚಿನ ವಿಟಮಿನ್ ಸಿ ಇದೆ ಮತ್ತು ಸಿಟ್ರಿಕ್ ಅಂಶ ಕಡಿಮೆಯಿದೆ. ಆದರೂ ಈ ಹಣ್ಣಿನಿಂದ ನಾವು ಆರೋಗ್ಯಕರ ಸಿಟ್ರಸ್ ಸಾಲ್ಟ್ ಸ್ಕ್ರಬ್ ಅನ್ನು ತಯಾರಿಸಬಹುದು. ಒಂದು ಚಮಚದಷ್ಟು ಅನಾನಸ್‌ ತುಂಡನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಎರಡು ಚಮಚ ಉಪ್ಪು ಮತ್ತು ಜೇನನ್ನು ಸೇರಿಸಿ, ತ್ವಚೆಗೆ ಚೆನ್ನಾಗಿ ಸ್ಕ್ರಬ್ ಮಾಡಿ ಅದರಲ್ಲೂ ಎಣ್ಣೆಯುಕ್ತ ತ್ವಚೆಯ ಸಮಸ್ಯೆಯನ್ನು ಎದುರಿಸುವವರು ಈ ಸ್ಕ್ರಬ್ ಅನ್ನು ದಿನ ನಿತ್ಯ ಬಳಸುವುದನ್ನು ಮಾತ್ರ ಮರೆಯಬೇಡಿ.
English summary

Citrus Salt Scrubs For Monsoon

Exfoliation is an essential part of skin care and must be followed strictly at least twice in the week. Natural exfoliation is the best as it leaves behind no rashes and skin problems unlike chemically based products which are sold in the market. So take a look at these simple citrus salt scrubs and stop spending your hard earned money on products loaded with obscure chemicals.
Story first published: Saturday, June 27, 2015, 18:55 [IST]
X
Desktop Bottom Promotion