For Quick Alerts
ALLOW NOTIFICATIONS  
For Daily Alerts

ಅರೆ ಇದೇನಿದು? ತ್ವಚೆಯ ಸೌಂದರ್ಯಕ್ಕೆ ಬೆಣ್ಣೆಯನ್ನು ಬಳಸಬಹುದೇ?

|

ರುಚಿ ರುಚಿಯಾದ ಬೆಣ್ಣೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದರಲ್ಲೂ ಇದನ್ನು ಬ್ರೆಡ್ ಮೇಲೆ ಹರಡಿಕೊಂಡು ತಿನ್ನಲು ಬಹಳಷ್ಟು ಜನ ಇಷ್ಟಪಡುತ್ತಿರುತ್ತಾರೆ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಅದರಿಂದ ನಿಮ್ಮ ಮುಖಕ್ಕೆ ಹೊಳಪು ಸಹ ಬರುತ್ತದೆ. ಇದನ್ನು ಕೇಳಿ ನಿಮಗೆ ಶಾಕ್ ಆಗಬಹುದು. ಆದರೆ ತಜ್ಞರ ಪ್ರಕಾರ ಇದು ನಿಮ್ಮ ತ್ವಚೆಗೆ ಹೇಳಿ ಮಾಡಿಸಿದ ಪದಾರ್ಥವಾಗಿದೆ. ಇದರ ಜೊತೆಗೆ ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಸೇರಿಸಿಕೊಂಡು ಬಳಸಿದರೆ ಧನಾತ್ಮಕ ಪರಿಣಾಮಗಳನ್ನು ಕಾಣಬಹುದು.

ಬೆಣ್ಣೆಯನ್ನು ಬಳಸುವುದರಿಂದ ನಿಮ್ಮ ತ್ವಚೆ ಸ್ವಲ್ಪ ಜಿಡ್ಡು ಜಿಡ್ದಾಗಿ ಕಾಣಬಹುದು. ಆದರೆ ಇದರಿಂದ ನಿಮ್ಮ ತ್ವಚೆಗೆ ಹೆಚ್ಚಿನ ಪ್ರಯೋಜನ ದೊರೆಯುವುದು ಖಂಡಿತ. ತ್ವಚೆಗೆ ಆರೈಕೆ ನೀಡುವ ವಿಚಾರದಲ್ಲಿ ನೈಸರ್ಗಿಕವಾದ ಪರಿಹಾರೋಪಾಯವಾಗಿರುವ ಈ ಬೆಣ್ಣೆಯು, ತ್ವಚೆಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. ಬನ್ನಿ ಇದರಿಂದ ನಿಮಗೆ ದೊರೆಯುವ ಪ್ರಯೋಜನಗಳನ್ನು ಈ ಮುಂದೆ ನೋಡೋಣ. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

Butter Face Packs For Skin

ಆಲಿವ್ ಎಣ್ಣೆಯ ಜೊತೆಗೆ ಬೆಣ್ಣೆ
ಎರಡು ಟೇಬಲ್ ಚಮಚ ಬೆಣ್ಣೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದಕ್ಕೆ ಒಂದು ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. 15 ನಿಮಿಷ ಬಿಡಿ. ಈ ಪ್ಯಾಕ್ ನಿಮಗೆ ಶೀಘ್ರ ಹೊಳಪನ್ನು ನೀಡುತ್ತದೆ.

ಹಾಲಿನ ಜೊತೆಗೆ ಬೆಣ್ಣೆ
ಎಣ್ಣೆ ಚರ್ಮ ಇರುವವರಿಗೆ ಹೇಳಿ ಮಾಡಿಸಿದ ಪ್ಯಾಕ್ ಇದು. ಒಂದು ಬಟ್ಟಲಿನಲ್ಲಿ ಒಂದು ಟೇಬಲ್ ಚಮಚ ಬೆಣ್ಣೆ ತೆಗೆದುಕೊಳ್ಳಿ. ಅದಕ್ಕೆ ಹಾಲನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ಪ್ಯಾಕನ್ನು ವಾರಕ್ಕೆ ಎರಡು ಬಾರಿ ಬಳಸಿ. ಅಪ್ಸರೆಯಂತಹ ಸೌಂದರ್ಯಕ್ಕಾಗಿ ಹೆಸರುಬೇಳೆಯೆಂಬ ಸಿದ್ಧೌಷಧ

ಕೆನೆಯ ಜೊತೆಗೆ ಬೆಣ್ಣೆ
ಕೆನೆಯ ಜೊತೆಗೆ ಬೆಣ್ಣೆಯನ್ನು ಬಳಸುವುದರಿಂದ ತಕ್ಷಣ ಹೊಳಪನ್ನು ಪಡೆದುಕೊಳ್ಳಬಹುದು. ಈ ಪದಾರ್ಥಗಳಿಂದ ನಿಮ್ಮ ಮುಖವನ್ನು ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಮೊಸರಿನ ಜೊತೆಗೆ ಬೆಣ್ಣೆ
ಒಂದು ಬಟ್ಟಲು ಮೊಸರಿನ ಜೊತೆಗೆ ಬೆಣ್ಣೆಯನ್ನು ಬೆರೆಸಿ. ಈ ಎರಡು ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಫೇಸ್ ಪ್ಯಾಕ್ ಆಗಿ ಬಳಸಿ. ಇದರಿಂದ ನಿಮ್ಮ ಒಣ ತ್ವಚೆಗೆ ಒಳ್ಳೆಯ ಉಪಯೋಗವನ್ನು ಪಡೆಯಬಹುದು. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ತೆಂಗಿನ ಎಣ್ಣೆಯ ಜೊತೆಗೆ ಬೆಣ್ಣೆ
ಎರಡು ಟೇಬಲ್ ಚಮಚ ಬೆಣ್ಣೆಗೆ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಮಿಶ್ರಣವು ತೀರಾ ಎಣ್ಣೆ ಎಣ್ಣೆಯಾಗಿ ಕಾಣಿಸುತ್ತಿರುತ್ತದೆ. ಆದ್ದರಿಂದ ಇದನ್ನು ಫೇಸ್ ಪ್ಯಾಕ್ ಮಾಡಿಕೊಂಡಾಗ 10 ನಿಮಿಷಕ್ಕಿಂತ ಹೆಚ್ಚಾಗಿ ಇರಿಸಿಕೊಳ್ಳಬೇಡಿ. ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ಮತ್ತು ನಂತರ ಹತ್ತಿಯಿಂದ ಇದನ್ನು ಉಜ್ಜಿ ತೆಗೆಯಿರಿ.

English summary

Butter Face Packs For Skin

The yummy butter you apply on bread can now be used on your face to give you an instant glow. You might be shocked with this, but experts believe it is the best ingredient to also get rid of oily skin Here are some of the perfect ways to use butter face pack on your skin for all purposes. Take a look.
Story first published: Friday, March 6, 2015, 15:52 [IST]
X
Desktop Bottom Promotion