For Quick Alerts
ALLOW NOTIFICATIONS  
For Daily Alerts

ತರಕಾರಿ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು

|

ಯಾವುದೇ ವ್ಯಕ್ತಿಯ ಪ್ರಥಮ ಭೇಟಿಯಲ್ಲಿ ನೆನಪಿರುವುದು ಬಾಹ್ಯ ಲಕ್ಷಣಗಳು. ಅದರಲ್ಲೂ ತ್ವಚೆಯ ವರ್ಣ ಹಾಗೂ ಹೊಳಪಿಗೆ ಹೆಚ್ಚಿನ ಮಹತ್ವ. ಹಾಗಾಗಿಯೇ ಸಿನಿಮಾದಲ್ಲಿ ಈ ಹೊಳಪನ್ನು ಹೆಚ್ಚಿಸಲು ಮೇಕಪ್ ಮೊರೆ ಹೋಗುವುದು ಅನಿವಾರ್ಯ.

ಆದರೆ ನಿಜ ಜೀವನದಲ್ಲಿ ದಿನವಿಡೀ ಮೇಕಪ್ ಮಾಡಿಕೊಂಡಿರುವುದು ಅನಾರೋಗ್ಯಕರ. ತ್ವಚೆಯನ್ನು ಇನ್ನಷ್ಟು ಆರೋಗ್ಯಕರಗೊಳಿಸಿ ನೈಸರ್ಗಿಕ ಹೊಳಪನ್ನು ಪಡೆಯುವುದು ಜಾಣತನ. ಈ ಹೊಳಪನ್ನು ಹೆಚ್ಚಿಸಲು ನಿಸರ್ಗ ಹಲವು ಪೋಷಕಾಂಶಗಳನ್ನು ಕೆಲವು ತರಕಾರಿಗಳ ಮೂಲಕ ನೀಡಿದೆ. ಕೆಳಗೆ ವಿವರಿಸಲಾಗಿರುವ ತರಕಾರಿಗಳ ಪ್ರತಿದಿನದ ಸೇವನೆಯಿಂದ ತ್ವಜೆಯ ಉಜ್ವಲತೆ ಹೆಚ್ಚುವುದು.

ಅಷ್ಟೇ ಅಲ್ಲದೆ ತರಕಾರಿಗಳಲ್ಲಿರುವ ಆಮ್ಲೀಯ ಅಂಶ ಚರ್ಮದ ಕಾಂತಿಯನ್ನು ಕಳೆಗುಂದಿಸುವ ಅಂಶಗಳನ್ನು ನಾಶಗೊಳಿಸಿ ನೈಸರ್ಗಿಕ ಹೊಳಪು ಪಡೆಯಲು ನೆರವಾಗುತ್ತವೆ. ಅಲ್ಲದೆ ಚರ್ಮದ ಕಲೆಗಳೂ ಕಾಲಕ್ರಮೇಣ ಕಾಣೆಯಾಗುತ್ತವೆ.

Best vegetables For Naturally Glowing Skin

ಮೂಲಂಗಿ
ಮೂಲಂಗಿಯಲ್ಲಿ ಚರ್ಮದ ಹೊಳಪನ್ನು ಹೆಚ್ಚಿಸುವ ಹಲವಾರು ಪೋಷಕಾಂಶಗಳಿವೆ. ಬೇರೆ ತರಕಾರಿಗಳಲ್ಲಿ ವಿರಳವಾದ ಗಂಧಕ ಮತ್ತು ಸಿಲಿಕಾನ್ ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಚರ್ಮಕ್ಕೆ ಬಲ ಒದಗಿಸುವ ಕೊಲಾಜೆನ್ ಜೀಕೋಶಗಳಿಗೆ ಹೆಚ್ಚಿನ ಶಕ್ತಿ ತುಂಬಿ ಚರ್ಮ ನೈಸರ್ಗಿಕವಾಗಿ ಬಲಿಷ್ಟವಾಗಲು ನೆರವಾಗುತ್ತವೆ. ಬಿಗಿಯಾದ ಚರ್ಮ ಮೈಕಾಂತಿಯನ್ನು ಹೆಚ್ಚಿಸುತ್ತದೆ.

ಸೌತೆಕಾಯಿ

ಮುಖದ ಚರ್ಮದ ಹೊಳಪನ್ನು ಹೆಚ್ಚಿಸಲು ಸೌತೆಕಾಯಿಗಿಂತ ಉತ್ತಮವಾದ ತರಕಾರಿ ಇನ್ನೊಂದಿಲ್ಲ. ಸೌತೆಕಾಯಿಯನ್ನು ಹಸಿಯಾಗಿ ಊಟದೊಂದಿಗೆ ಸೇವಿಸುವ ಮೂಲಕ ದೇಹದಲ್ಲಿರುವ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕರಿಸುತ್ತದೆ. ಚರ್ಮಕ್ಕೆ ಅಗತ್ಯವಾಗಿರುವ ನೀರಿನ ಅಂಶವನ್ನು ಸೌತೆಕಾಯಿ ನೀಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಸೌತೆಕಾಯಿಯನ್ನು ನಯವಾಗಿ ಅರೆದ ಲೇಪನವನ್ನು ಮುಖದ ಮೇಲೆ ಹಚ್ಚುವುದರಿಂದಲೂ ಮುಖದ ಕಲೆಗಳು ಮಾಯವಾಗುತ್ತವೆ.

ಮೊಳಕೆ ಬರಿಸಿದ ಕಾಳುಗಳು

ಕಾಳುಗಳು ಮೊಳಕೆ ಬರಿಸಿದಾಕ್ಷಣ ಪೋಷಕಾಂಶಗಳ ಆಗರವಾಗುತ್ತವೆ. ಹೆಸರು ಕಾಳು, ಕಡಲೆ ಕಾಳು, ಹುರುಳಿ, ಉದ್ದು ಮೊದಲಾದ ಕಾಳುಗಳನ್ನು ನೆನೆಸಿ ಸುಮಾರು ಎರಡರಿಂದ ಮೂರು ದಿನಗಳ ಮೊಳಕೆ ಮೂಡಿದ ಬಳಿಕ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮದಡಿ ಹರಡಿರುವ ಕಪ್ಪು ಕಲೆಗಳು (freckles) ಸಹಾ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತವೆ. ಇದು ಸಾಮಾನ್ಯ ಫೇಸ್‌ಪ್ಯಾಕ್ ಅಲ್ಲ, ನೀವೂ ಒಮ್ಮೆ ಪ್ರಯತ್ನಿಸಿ!

ಶತಾವರಿ

(Asparagus) ಶತಾವರಿಯಲ್ಲಿ ಸಿಲಿನಿಯಂ ಎಂಬ ರಾಸಾಯನಿಕ ಹೇರಳವಾಗಿದೆ. ವಯಸ್ಸಿನೊಂದಿಗೆ ಚರ್ಮ ಬಿಗು ಕಳೆದುಕೊಳ್ಳುವುದನ್ನು ತಡೆಯುವುದರಲ್ಲಿ ಸಿಲಿನಿಯಂ ಪಾತ್ರ ಮಹತ್ತರವಾದುದು. ಶತಾವರಿಯ ನಿಯಮಿತ ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುವುದು ಮಾತ್ರವಲ್ಲದೇ ಮಗುವಿನ ಚರ್ಮದಂತೆ ನುಣುಪಾಗಿಯೂ ಇರುವುದು. ಸೌಂದರ್ಯ ರಹಸ್ಯ, ಅದೂ ಬರೀ ಒಂದೇ ನಿಮಿಷದಲ್ಲಿ!

ಟೊಮೇಟೊ ಹಣ್ಣು

ನಾವು ತರಕಾರಿಯಾಗಿ ಬಳಸುತ್ತಿರುವ ಟೊಮಾಟೋ ವಾಸ್ತವವಾಗಿ ಒಂದು ಹಣ್ಣು. ಟೊಮೇಟೊ ಹಣ್ಣಿಗೆ ಕೆಂಪು ಬಣ್ಣ ಬರಲು ಅದಲ್ಲಿರುವ ಲೈಕೋಪಿನ್ (Lycopene) ಎಂಬ ಪೋಷಕಾಂಶ ಕಾರಣ. ಈ ಪೋಷಕಾಂಶ ಚರ್ಮದ ಕಲೆಗಳನ್ನು ಹೋಗಲಾಡಿಸುವುದು ಮಾತ್ರವಲ್ಲ, ತ್ವಚೆಯ ತೈಲದ ಅಂಶವನ್ನೂ ಕಡಿಮೆಗೊಳಿಸುತ್ತದೆ.
English summary

Best vegetables For Naturally Glowing Skin

Today, Boldsky shares with you some of the best vegetables to consume to get fair skin. Consuming these veggies on a regular basis has the potential to give you fair skin. These yummy nutritional vegetables can be prepared in various ways. Stirred fried, boiled and grilled are three options to consume these vegetables for white skin. When you consume vegetables cooked without oil, there is a lesser chance of developing health problems.
X
Desktop Bottom Promotion