For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದವನ್ನು ಹೆಚ್ಚಿಸುವ ಅತ್ಯದ್ಭುತ ಫೇಸ್ ಮಾಸ್ಕ್‌ಗಳು

|

ಒಣ ಚರ್ಮದ ಸಮಸ್ಯೆಯಿಂದ ಬಹುತೇಕ ಮಂದಿ ಬಳಲುತ್ತಿರುತ್ತಾರೆ. ಅಂತಹವರಿಗಾಗಿ ನಾವು ಇಂದು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಫೇಸ್ ಮಾಸ್ಕ್‌ಗಳ ಕುರಿತು ತಿಳಿಸಿಕೊಡುತ್ತಿದ್ದೇವೆ. ಒಣ ಚರ್ಮವು ಮಾಮೂಲಿ ಚರ್ಮಕ್ಕಿಂತ ಹೆಚ್ಚಿನ ಆರೈಕೆಯನ್ನು ಬಯಸುತ್ತದೆ. ಇದು ಚರ್ಮ ಸುಲಿಯುವುದು, ಸುಕ್ಕುಗಳು ಮತ್ತು ನವಿರಾದ ಗೆರೆಗಳಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಒಣ ತ್ವಚೆಯು ತನ್ನಲ್ಲಿರುವ ಸ್ವಾಭಾವಿಕವಾಗಿ ಅಡಕವಾಗಿರುವ ಎಣ್ಣೆಯ ಅಂಶದಿಂದಾಗಿ ಬೇಗ ವಯಸ್ಸಾದ ರೀತಿ ಕಾಣುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಕಾಳಜಿ ಅತ್ಯಾವಶ್ಯಕ. ನಿಮ್ಮ ತ್ವಚೆಯನ್ನು ಯಾವುದೇ ಕಾರಣಕ್ಕು ಒಣಗಲು ಬಿಡಬೇಡಿ. ಏಕೆಂದರೆ ಇದು ತನ್ನ ಒಣಗುವಿಕೆಯಿಂದಾಗಿ ಮತ್ತಷ್ತು ಹಾನಿಯನ್ನು ತಂದುಕೊಳ್ಳುತ್ತದೆ. ಇದರಿಂದ ಚರ್ಮ ಸುಲಿಯುವಿಕೆ ಮತ್ತು ತುರಿಕೆ ಸಹ ಕಂಡು ಬರುತ್ತದೆ. ಆದ್ದರಿಂದಲೇ ಬೋಲ್ಡ್‌ಸ್ಕೈ ಇಂದು ನಿಮಗೆ ಹೋಮ್ ಮೇಡ್ ಫೇಸ್ ಮಾಸ್ಕ್ ತಯಾರಿಸಿಕೊಳ್ಳುವ ಬಗ್ಗೆ ತಿಳಿಸಿಕೊಡುತ್ತಿದೆ. ಇವು ನಿಮ್ಮ ತ್ವಚೆಗೆ ತೇವಾಂಶವನ್ನು, ನೀರಿನಂಶವನ್ನು, ಆರೋಗ್ಯವನ್ನು ಮತ್ತು ಹೊಳಪನ್ನು ಸಹ ತಂದು ನೀಡುತ್ತವೆ. ಬನ್ನಿ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ....

ಮೊಟ್ಟೆ, ಸೂರ್ಯಕಾಂತಿ ಎಣ್ಣೆ ಮತ್ತು ಜೇನು ತುಪ್ಪದ ಫೇಸ್ ಮಾಸ್ಕ್

Best Homemade Face Masks For Dry Skin

ಮೊಟ್ಟೆಯನ್ನು, ಎರಡು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಸೂರ್ಯಕಾಂತಿ ಎಣ್ಣೆಯ ಜೊತೆಗೆ ಒಂದು ಬಟ್ಟಲಿನಲ್ಲಿ ಬೆರೆಸಿಕೊಳ್ಳಿ. ಇದನ್ನು ಒಂದು ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಯ ಮೇಲೆ ಮೃದುವಾಗಿ ಲೇಪಿಸಿ. 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೊಯಿಶ್ಚರ್ ನೀಡುತ್ತದೆ. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

ಬಾಳೆಹಣ್ಣು, ಮೊಸರು ಮತ್ತು ಜೇನು ತುಪ್ಪದ ಫೇಸ್ ಮಾಸ್ಕ್


ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು, ಸ್ವಲ್ಪ ಮೊಸರನ್ನು ಮತ್ತು ಸ್ವಲ್ಪ ಜೇನು ತುಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪೇಸ್ಟ್ ರೀತಿ ರುಬ್ಬಿಕೊಳ್ಳಿ. ಇದನ್ನು ಮುಖದ ಮೇಲೆ ಲೇಪಿಸಿ 15 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೊಯಿಶ್ಚರ್ ಒದಗಿಸುತ್ತದೆ.

ಸೌತೆಕಾಯಿ ಮತ್ತು ಅಲೋವಿರಾ ಫೇಸ್ ಮಾಸ್ಕ್


ಒಣ ತ್ವಚೆಗೆ ಇದು ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಅಲೋವಿರಾವನ್ನು ಹಾಕಿ ಜೆಲ್ ರೀತಿ ಮಾಡಿಕೊಳ್ಳಿ. ಇದನ್ನು ಮುಖದ ಮೇಲೆ ಲೇಪಿಸಿ, 25 ನಿಮಿಷ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ನೀರಿನಂಶವನ್ನು ನೀಡುತ್ತದೆ ಮತ್ತು ಇಡೀ ದಿನ ಮೊಯಿಶ್ಚರ್ ಒದಗಿಸುತ್ತದೆ. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ಅವೊಕ್ಯಾಡೊ ಮತ್ತು ಜೇನು ಫೇಸ್ ಮಾಸ್ಕ್


ಒಣ ತ್ವಚೆಗೆ ಇದು ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಚೆನ್ನಾಗಿ ಹಣ್ಣಾದ ಅವೊಕ್ಯಾಡೊವೊಂದನ್ನು ತೆಗೆದುಕೊಳ್ಳಿ. ಅದನ್ನು ಜಜ್ಜಿ ಜೇನು ತುಪ್ಪದ ಜೊತೆಗೆ ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ನಿಮ್ಮ ತ್ವಚೆಗೆ ಲೇಪಿಸಿ 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ. ಅವೊಕ್ಯಾಡೊವಿನಲ್ಲಿರುವ ಸ್ವಾಭಾವಿಕ ಎಣ್ಣೆಗಳು ನಿಮ್ಮ ತ್ವಚೆಗೆ ಆಹ್ಲಾದಕತೆಯನ್ನು, ಮೊಯಿಶ್ಚರ್ ಮತ್ತು ನೀರಿನಂಶವನ್ನು ನೀಡುತ್ತವೆ. ಜೇನು ತುಪ್ಪವು ಸಹ ಮೊಯಿಶ್ಚರ್ ಮಾಡುತ್ತದೆ. ಜೊತೆಗೆ ಸುಕ್ಕುಗಳನ್ನು ನಿವಾರಿಸಿ, ತ್ವಚೆಯನ್ನು ಆರೋಗ್ಯಕರ ಮಾಡುತ್ತದೆ.
English summary

Best Homemade Face Masks For Dry Skin

There are some best homemade face masks for dry skin that we will share with you today. Dry skin needs more care as it an lead to peeling of skin, rashes, wrinkles and thin lines. Dry skin is more to ageing as it is deficient in natural oils that is naturally secreted in skin. It needs extra care than any skin type.
X
Desktop Bottom Promotion