For Quick Alerts
ALLOW NOTIFICATIONS  
For Daily Alerts

ಥಟ್ಟನೇ ತ್ವಚೆಯನ್ನು ಬೆಳ್ಳಗಾಗಿಸುವ ಫೇಸ್ ಕ್ರೀಮ್!

By Manu
|

ಹೆಣ್ಣಿಗೆ ಸೌಂದರ್ಯ ಎಂಬುದು ದೈವದತ್ತ ವರವಾಗಿದೆ. ದೇವರು ಸ್ತ್ರೀಯನ್ನು ನಿರ್ಮಾಣ ಮಾಡಲು ಬಹು ಸಮಯವನ್ನು ತೆಗೆದುಕೊಂಡಿದ್ದರು ಎಂಬ ಮಾತು ಖಂಡಿತ ಸುಳ್ಳಲ್ಲ ಏಕೆಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬ ಹೆಣ್ಣು ಒಂದಿಲ್ಲೊಂದು ರೀತಿಯಿಂದ ಸುಂದರಿಯಾಗಿದ್ದಾರೆ. ಆದರೆ ಹೆಣ್ಣಿನ ಮನೋಸಹಜ ಬಯಕೆಯಿಂದ ಆಕೆಗೆ ಇನ್ನಷ್ಟು ಸುಂದರವಾಗಿ ಕಾಣಬೇಕು ಎನ್ನುವ ಮೋಹ ಮನದಲ್ಲಿ ಮೂಡುತ್ತದೆ.

ತಾವು ಇನ್ನಷ್ಟು ಸುಂದರಿಯಾಗಿ ನಾಲ್ಕು ಜನರಲ್ಲಿ ಎದ್ದುಗಾಣುವಂತಿರಬೇಕು ನಮ್ಮ ಸೌಂದರ್ಯವನ್ನು ಪ್ರತಿಯೊಬ್ಬರೂ ಹೊಗಳುವಂತಿರಬೇಕು ಎಂದೇ ಪ್ರತಿಯೊಂದು ಹೆಣ್ಣು ಅಂದುಕೊಳ್ಳುತ್ತಾಳೆ ಮತ್ತು ಅದಕ್ಕಾಗಿ ಕೊಂಚ ಹಣವನ್ನೂ ವಿನಿಯೋಗಿಸುತ್ತಾಳೆ. ಸೌಂದರ್ಯ ಸಲಹೆಗಳನ್ನು ಪಾಲಿಸುವುದು, ಸೌಂದರ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಗಳನ್ನು ಅಧ್ಯಯನ ಮಾಡುವುದು, ಇಂಟರ್ನೆಟ್ ಜಾಲಾಡುವುದು ಹೀಗೆ ಸೌಂದರ್ಯ ವೃದ್ಧಿಸುವ ಸಲಹೆಗಳಿಗಾಗಿ ಆಕೆಯ ಹುಡುಕಾಟ ಮುಗಿಯುವುದೇ ಇಲ್ಲ. ಸಹಜ ಸೌಂದರ್ಯಕ್ಕಾಗಿ ಒಂದಿಷ್ಟು ಸರಳೋಪಾಯಗಳು

ಆದರೆ ಈ ಸೌಂದರ್ಯದ ಹುಚ್ಚು ಹೆಚ್ಚಾದಲ್ಲಿ ನಾವು ಸಲಹೆಗಳನ್ನು ಪಾಲಿಸದೆಯೇ ಹಲವಾರು ಪ್ರಸಾಧನ ಸಾಮಾಗ್ರಿಗಳ ಬಳಕೆಯನ್ನು ಮಾಡುತ್ತೇವೆ. ಅದು ಒಳ್ಳೆಯದೋ ಕೆಟ್ಟದ್ದೋ ಎಂಬುದಾಗಿ ಕೂಡ ಆಲೋಚಿಸದೇ ಅದನ್ನು ಬಳಸುತ್ತಾರೆ. ಇದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಅನುಭವಿಸುವುದು ಇದ್ದೇ ಇದೆ. ಇಂದಿನ ಲೇಖನದಲ್ಲಿ ಸೌಂದರ್ಯ ವೃದ್ಧಿಸುವ ಅದೂ ನೈಸರ್ಗಿಕ ರೀತಿಯಲ್ಲಿರುವ ಕೆಲವೊಂದು ಕ್ರಮಗಳನ್ನು ನಿಮ್ಮ ಮುಂದೆ ನಾವು ಇರಿಸುತ್ತಿದ್ದು ನಿಮಗೆ ಯಾವುದೇ ಅಡ್ಡಪರಿಣಾಮಗಳನ್ನು ಇದು ಉಂಟುಮಾಡದೇ ನಿಮ್ಮನ್ನು ಸುಂದರಿಯಾಗಿಸುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆ ಸಲಹೆಗಳೇನು ಎಂಬುದನ್ನು ಅರಿಯೋಣ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಚರ್ಮ ಒಣಗಲು ಮತ್ತು ಕಳಾಹೀನವಾಗಲು ಮುಖ್ಯ ಕಾರಣ ಚರ್ಮದ ನೈಸರ್ಗಿಕ ತೈಲಗಳು ಆವಿಯಾಗುವುದು. ಇದಕ್ಕೆ ಬಿಸಿನೀರಿನ ಸ್ನಾನ ಮತ್ತು ವಾತಾವರಣದ ಏರುಪೇರು ಪ್ರಮುಖ ಕಾರಣವಾಗಿವೆ. ಇದನ್ನು ಸರಿಪಡಿಸಲು ಬಾದಾಮಿ ಎಣ್ಣೆ ಅತ್ಯಂತ ಸೂಕ್ತವಾಗಿದೆ. ಇದಕ್ಕಾಗಿ ಕೊಂಚ ಬಾದಾಮಿ ಎಣ್ಣೆಯನ್ನು ನಯವಾಗಿ ಮಸಾಜ್ ಮಾಡುತ್ತಾ ಒಣಗಿರುವ ಚರ್ಮದ ಮೇಲೆ ಹಚ್ಚುತ್ತಾ ಬನ್ನಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಚರ್ಮ ಕೋಮಲ ಮತ್ತು ತುಂಬಿಕೊಂಡಂತಿರುತ್ತದೆ.

ಓಟ್ಸ್ ಮತ್ತು ಜೇನು

ಓಟ್ಸ್ ಮತ್ತು ಜೇನು

ಓಟ್ ಮೀಲ್ ಅಥವಾ ಓಟ್ಸ್‌ನ ಭೂಸಾ ಸಹಾ ಉತ್ತಮ ಸೌಂದರ್ಯವರ್ಧಕವಾಗಿದೆ. ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಇದಕ್ಕೆ ಕೊಂಚ ಜೇನು ಮತ್ತು ಕೊಂಚ ಓಟ್ಸ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಪ್ಪನಾಗಿ ಮುಖಕ್ಕೆ ಹಚ್ಚಿ ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೌತೆಕಾಯಿ

ಸೌತೆಕಾಯಿ

ಸೂರ್ಯನ ಝಳದಿಂದ ಬಳಲಿದ ಚರ್ಮಕ್ಕೆ ಆರೈಕೆ ನೀಡಲು ಸೌತೆಕಾಯಿ ಅತ್ಯುತ್ತಮವಾಗಿದೆ. ಇದು ಚರ್ಮಕ್ಕೆ ಆರ್ದ್ರತೆ ನೀಡುವ ಜೊತೆಗೇ ಕಣ್ಣುಗಳ ಕೆಳಭಾಗದ ಕಪ್ಪುಕಲೆಯನ್ನೂ ತೊಲಗಿಸಲು ನೆರವಾಗುತ್ತದೆ. ಇದಕ್ಕಾಗಿ ಎಳೆ ಸೌತೆಯನ್ನು ನಯವಾಗಿ ಅರೆದು ನೇರವಾಗಿ ಚರ್ಮದ ಮೇಲೆ ದಪ್ಪನಾದ ಲೇಪನದಂತೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾದಾಮಿ

ಬಾದಾಮಿ

ಕೆಲವು ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಇದನ್ನು ಕೊಂಚ ಹಸಿ ಹಾಲಿನೊಂದಿಗೆ ನಯವಾಗಿ ಅರೆದು ಚರ್ಮಕ್ಕೆ ಹಚ್ಚಿಕೊಳ್ಳಿ. ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮದ ಕಲೆಗಳನ್ನು ತೊಲಗಿಸಲು ಮತ್ತು ಕಪ್ಪಾದ ಭಾಗಗಳನ್ನು ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ನಿಯಮಿತವಾಗಿ ಉಪಯೋಗಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ನೈಸರ್ಗಿಕ ಸ್ಕ್ರಬ್

ನೈಸರ್ಗಿಕ ಸ್ಕ್ರಬ್

ಮೂರು ಚಮಚ ಗ್ರೀನ್ ಟೀ, ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ನಿಮ್ಮ ಆಯ್ಕೆಯ ಮಾಯಿಶ್ಚರ ಕ್ರೀಮ್‪ನ್ನು ಸರಿಯಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾ ನಿಧಾನವಾಗಿ ಸ್ಕ್ರಬ್ ಮಾಡಿ. ಈ ಸ್ಕ್ರಬ್ ನಿಮ್ಮ ಮುಖವನ್ನು ತಾಜಾ, ಹೊಳಪು ಮತ್ತು ಸಹಜವಾಗಿರುವಂತೆ ಮಾಡುತ್ತದೆ. ಈ ನೈಸರ್ಗಿಕ ಸ್ಕ್ರಬ್ ಅನ್ನು ಸಹಜ ಮತ್ತು ಹೊಳೆಯುವ ತ್ವಚೆಗೆ ಬಳಸಿ.

ಹಸಿ ಬೀಟ್‌ರೂಟಿನ ರಸ

ಹಸಿ ಬೀಟ್‌ರೂಟಿನ ರಸ

ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

English summary

Beauty tips for Instant glowing fairness in kannada

we tend to use lots of products that claim healthy glow and smooth skin. These products will eventually ruin your skin. Therefore, instead of relying on these products, you can use home remedies. Since these products are natural, they don't harm your skin in the long run and they provide effective results. In this article, we at Boldsky have listed out some of the home remedies that keep your skin fresh and glowing.
Story first published: Saturday, November 21, 2015, 11:28 [IST]
X
Desktop Bottom Promotion