For Quick Alerts
ALLOW NOTIFICATIONS  
For Daily Alerts

ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್‌‌ನಲ್ಲಿರಲಿ!

By Deepu
|

ಯಾರೇ ಆಗಲಿ ನಮ್ಮನ್ನು ಇತರರು ನೋಡಿ ಮೆಚ್ಚಿಕೊಳ್ಳಬೇಕು ಎಂಬ ಹಂಬಲವನ್ನು ಇರಿಸಿಕೊಂಡಿರುತ್ತೇವೆ. ಅದು ನಡೆ-ನುಡಿ ಅಥವಾ ನಮ್ಮ ಸೌಂದರ್ಯ ಯಾವುದೇ ಆದರೂ ಪರವಾಗಿಲ್ಲ. ಅದರಲ್ಲೂ ನಮ್ಮ ಸೌಂದರ್ಯ ಮತ್ತು ಲುಕ್ ಜನರ ಮೇಲೆ ಮೊದಲ ಪರಿಣಾಮ ಬೀರುತ್ತದೆ ಎಂಬುದು ಎಲ್ಲರೂ ನಂಬುವ ವಿಚಾರ. ಅದಕ್ಕಾಗಿ ನಾವು ಬ್ಯೂಟಿ ಪಾರ್ಲರ್‌ಗಳಿಗೆ ದಿನಾಲೂ ಹೋಗಬೇಕಾಗಿಲ್ಲ. ಬದಲಿಗೆ ನಾವೇ ಪ್ರತಿನಿತ್ಯ ಸೌಂದರ್ಯ ನಮ್ಮದಾಗಲೂ ಬೇಕಾಗಿರುವ ಕೆಲಸಗಳನ್ನು ಮಾಡಬೇಕಾಗುತ್ತದೆ.

ಪ್ರತಿದಿನ ಎದ್ದ ಕೂಡಲೇ ನಾವು ಸೌಂದರ್ಯವನ್ನು ಗಮನದಲ್ಲಿರಿಸಿಕೊಂಡು ಮಾಡುವ ಕೆಲವು ಕೆಲಸಗಳು ನಮ್ಮ ಇಡೀ ದಿನಕ್ಕೆ ಚೈತನ್ಯವನ್ನು ನೀಡುತ್ತವೆ. ಇಂತಹ ಚೈತನ್ಯ ಮತ್ತು ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದರೆ, ಏನು ಮಾಡಬೇಕೆಂಬುದರ ಕುರಿತು ನಿಮಗೆ ಲಕ್ಷಗಟ್ಟಲೆ ಪುಟದ ಮಾಹಿತಿ ದೊರೆಯಬಹುದು (ಕೆಲವೊಮ್ಮೆ ದೊರೆಯದೆಯೇ ಸಹ ಇರಬಹುದು), ಹಾಗಾಗಿ ಇದರಿಂದ ನಿಮಗೆ ಉಂಟಾಗುವ ಗೊಂದಲವನ್ನು ತಪ್ಪಿಸಲು ನಾವು ಇಂದು ನಿಮ್ಮ ನೆರವಿಗೆ ಬರುತ್ತಿದ್ದೇವೆ.

ಆ ಎಲ್ಲಾ ಸೌಂದರ್ಯ ಕಾಪಾಡಿಕೊಳ್ಳಲು ಇರುವ ಸಂಪೂರ್ಣ ಸಲಹೆಗಳನ್ನು ಪರಿಷ್ಕರಿಸಿ ಮೂರು ಸೌಂದರ್ಯದ ಅಭ್ಯಾಸಗಳನ್ನು ಪ್ರತಿದಿನ ಮಾಡಿ ಎಂದು ಹೇಳುತ್ತಿದ್ದೇವೆ. ಆ ಮೂಲಕ ಎಲ್ಲಾ ಪ್ರಯೋಜನಗಳು ನಿಮಗೆ ಸಿಗುತ್ತವೆ ಎಂಬುದು ನಿಮಗೆ ಸಂತಸ ತರದೆ ಇರುತ್ತವೆಯೇ? ಬನ್ನಿ ನಿಮ್ಮ ಸೌಂದರ್ಯವನ್ನು ಸ್ವಾಭಾವಿಕವಾಗಿ ಇಮ್ಮಡಿಗೊಳಿಸುವ ಆ ಮೂರು ಸಂಗತಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಲೋಟ ನೀರು ಕುಡಿಯಿರಿ

ಒಂದು ಲೋಟ ನೀರು ಕುಡಿಯಿರಿ

ಬೆಳಗ್ಗೆ ಎದ್ದ ಕೂಡಲೆ ನೀವು ಮಾಡಬೇಕಾದ ಮೊದಲ ಕೆಲಸವೇನೆಂದರೆ, ಒಂದು ಲೋಟ ನೀರು ಕುಡಿಯಬೇಕು. ಹೌದು, ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ನಮ್ಮ ದೇಹದಲ್ಲಿ 70% ಭಾಗ ನೀರು ತುಂಬಿದೆ. ರಾತ್ರಿಯೆಲ್ಲಾ ನಿಮ್ಮ ದೇಹದಲ್ಲಿರುವ ನೀರಿನಂಶವು ಟಾಕ್ಸಿನ್‍ಗಳ ರೂಪದಲ್ಲಿ ಬೆಳಗ್ಗೆ ವಿಸರ್ಜನೆಯಾಗಿರುತ್ತದೆ. ಹಾಗಾಗಿ ಅದನ್ನು ಮರುಪೂರಣ ಮಾಡಿಕೊಳ್ಳಬೇಕು ಎಂದರೆ ನೀವು ಬೆಳಗ್ಗೆ ನೀರು ಸೇವಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ಲೋಟ ನೀರು ಕುಡಿಯಿರಿ

ಒಂದು ಲೋಟ ನೀರು ಕುಡಿಯಿರಿ

ನೀರನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಕೋಶಗಳಿಗೆ ನೀರಿನಂಶ ದೊರೆಯುತ್ತದೆ, ಮೆದುಳು ಚುರುಕುಗೊಳ್ಳುತ್ತದೆ. ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಅಂಗದ ಕಾರ್ಯವೈಖರಿ ಸುಗಮಗೊಳ್ಳುತ್ತದೆ. ನಿಮ್ಮ ಜೀವ ಕೋಶಗಳಿಗೆ ಚೈತನ್ಯ ಒದಗುತ್ತದೆ, ಹಾಗಾಗಿ ಬೆಳಗ್ಗೆ ಎದ್ದ ಕೂಡಲೆ ಒಂದು ದೊಡ್ಡ ಲೋಟದ ತುಂಬಾ ತಣ್ಣಗಿನ ನೀರನ್ನು ಸೇವಿಸಿಸಿ. ಒಂದು ವೇಳೆ ಬರೀ ನೀರನ್ನು ಸೇವಿಸಲು ನಿಮಗೆ ಹಿಡಿಸದಿದ್ದಲ್ಲಿ, ಅದಕ್ಕೆ ಒಂದು ತುಂಡು ಲಿಂಬೆಹಣ್ಣಿನ ರಸ ಹಿಂಡಿಕೊಳ್ಳಿ.

ಜಾಗಿಂಗ್, ಯೋಗ ಅಥವಾ ಧ್ಯಾನ

ಜಾಗಿಂಗ್, ಯೋಗ ಅಥವಾ ಧ್ಯಾನ

ನೀರು ಕುಡಿದ ಮೇಲೆ ನಿಮ್ಮ ದೇಹಕ್ಕೆ ನೀರಿನ ಅಂಶವು ಸೇರ್ಪಡೆಯಾಗುತ್ತದೆ. ಆಗ ಆ ನೀರನ್ನು ಸಹ ನೀವು ವ್ಯಯ ಮಾಡಬೇಕಾಗುತ್ತದೆ. ಅದಕ್ಕೆ ಇರುವ ಮಾರ್ಗ ವರ್ಕ್‌ಔಟ್ ಮಾಡುವುದು. ಹೌದು,ಬೆಳಗಿನ ಜಾವದ ಜಾಗಿಂಗ್,ಯೋಗ ಮತ್ತು ಧ್ಯಾನವು ನಿಮ್ಮ ಮುಂಜಾನೆಯನ್ನು ಮತ್ತಷ್ಟು ಆಹ್ಲಾದಕಾರಿಗೊಳಿಸುತ್ತದೆ. ಇವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವುದರ ಜೊತೆಗೆ ದೇಹದಲ್ಲಿ ಸಹ ಚೈತನ್ಯವನ್ನು ತರುತ್ತದೆ.

ಜಾಗಿಂಗ್, ಯೋಗ ಅಥವಾ ಧ್ಯಾನ

ಜಾಗಿಂಗ್, ಯೋಗ ಅಥವಾ ಧ್ಯಾನ

ಸ್ವಲ್ಪ ಪ್ರಮಾಣದ ಪ್ರಾಣಾಯಮ ಮತ್ತು ಧ್ಯಾನವು ಸಹ ನಿಮಗೆ ಅನುಕೂಲಕರವಾಗಿರುತ್ತದೆ. ವ್ಯಾಯಾಮವು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವ್ಯಾಯಾಮ ಮಾಡುವುದರಿಂದ ಬರುವ ಬೆವರಿನಲ್ಲಿ ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳು ಹೊರ ಹಾಕಲ್ಪಡುತ್ತವೆ. ಹೀಗೆ ನಿಮ್ಮ ದೇಹವು ಟಾಕ್ಸಿನ್ ಮುಕ್ತವಾಗುವುದರ ಜೊತೆಗೆ ಸೌಂದರ್ಯದಿಂದ ಕಂಗೊಳಿಸುತ್ತದೆ.

ವರ್ಕ್‍ಔಟ್ ಅಥವಾ ವ್ಯಾಯಮ

ವರ್ಕ್‍ಔಟ್ ಅಥವಾ ವ್ಯಾಯಮ

ವ್ಯಾಯಮ ಮಾಡಿದ ನಂತರ ತಪ್ಪದೆ ಸ್ನಾನ ಮಾಡಿ, ಇದರಿಂದ ನಿಮ್ಮ ತ್ವಚೆಗೆ ಹಾರೈಕೆ ದೊರೆಯುತ್ತದೆ. ವ್ಯಾಯಾಮ ಮಾಡುವಾಗ ಬರುವ ಬೆವರು ನಿಮ್ಮ ತ್ವಚೆಯಲ್ಲಿ ಅಂಟಿಕೊಂಡಿರುತ್ತದೆ. ಅದು ಸಹ ವ್ಯಾಯಾಮದಲ್ಲಿ ದಣಿದಿರುತ್ತದೆ ಎಂಬುದನ್ನು ಮರೆಯಬೇಡಿ. ಸ್ನಾನ ಮಾಡುವಾಗ ಆಂಟಿ ಆಕ್ಸಿಡೆಂಟ್ ಕ್ರೀಮ್ ಹಾಕಿಕೊಂಡು ಸ್ನಾನ ಮಾಡುವುದು ಒಳ್ಳೆಯದು. ವಿಟಮಿನ್ ಇ ಮತ್ತು ಸಿ ಸಹ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ. ಅದಕ್ಕಾಗಿ ಈ ಅಂಶಗಳು ಇರುವ ಸೋಪಿನ ಜೊತೆಗೆ ನಿಮ್ಮ ತ್ವಚೆಯನ್ನು ಫ್ರೀ ರ‍್ಯಾಡಿಕಲ್‌ಗಳಿಂದ ಮುಕ್ತಗೊಳಿಸಬೇಕೆಂಬುದನ್ನು ಮರೆಯಬಾರದು. ಜೊತೆಗೆ ಸ್ನಾನ ಆದ ನಂತರ ಮೇಕಪ್‌ ಮಾಡುವ ಮೊದಲು ಸನ್‌ಸ್ಕ್ರೀನ್ ಲೋಷನ್ ಹಾಕಿಕೊಳ್ಳಲು ಮರೆಯಬೇಡಿ. ಈ ಕಾರ್ಯಗಳನ್ನು ಮುಂಜಾನೆ ಮಾಡಿ ಇಡೀ ದಿನ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಿ.

English summary

Beauty habits you must follow every morning

While you will find tons of information on what all you should (and should not) be doing every AM, we have simplified the process further for you! Here are 3 beauty habits you should be following every morning for healthy, glowing skin that is naturally beautiful.
X
Desktop Bottom Promotion