For Quick Alerts
ALLOW NOTIFICATIONS  
For Daily Alerts

ವಾಲ್‍ನಟ್ ಎಣ್ಣೆ ಬಳಸಿ, ಕಲೆ ಮುಕ್ತ ತ್ವಚೆ ನಿಮ್ಮದಾಗಿಸಿ!

|

ನೀವು ಎಂದಾದರು ನಿಮ್ಮ ತ್ವಚೆಯ ಸೌಂದರ್ಯಕ್ಕಾಗಿ ವಾಲ್‍ನಟ್ ಎಣ್ಣೆಯನ್ನು ಬಳಸಿದ್ದೀರಾ? ಬಹುಶಃ ನೀವು ನಿಮ್ಮ ಸ್ನ್ಯಾಕ್ಸ್ ಅವಧಿಯಲ್ಲಿ ವಾಲ್‍ನಟ್ ಬೀಜಗಳನ್ನು ಸೇವಿಸಿರಬಹುದು. ಆದರೆ ಈಗ ವಾಲ್‍ನಟ್ ಎಣ್ಣೆಯನ್ನು ನಿಮ್ಮ ಸೌಂದರ್ಯಕ್ಕಾಗಿ ಬಳಸುವ ಕಾಲ ಬಂದಿದೆ. ಈಗಾಗಲೆ ತಿಳಿದಿರುವಂತೆ ಇದರಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳು ಅಧಿಕವಾಗಿರುತ್ತವೆ.

ವಾಲ್‍ನಟ್ ಎಣ್ಣೆಯಲ್ಲಿ ಸಮೃದ್ಧ ಪೋಷಕಾಂಶಗಳು ಇರುತ್ತವೆ. ಇದನ್ನು ಅಡುಗೆ ಎಣ್ಣೆಯಾಗಿ ಮತ್ತು ದೇಹಕ್ಕೆ ಲೇಪಿಸುವ ಎಣ್ಣೆಯಾಗಿ ಸಹ ಬಳಸಬಹುದು. ಇದರಲ್ಲಿ ವಿಟಮಿನ್ ಇ ಮತ್ತು ರಂಜಕ, ತಾಮ್ರ, ಸೆಲೆನಿಯಂ, ಮೆಗ್ನಿಶಿಯಂ, ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಇರುತ್ತವೆ. ವಾಲ್‌ನಟ್‌ನಲ್ಲಿ ಆರೋಗ್ಯಕರ ಪ್ರಯೋಜನಗಳು ಇರುವುದರಿಂದ ಅದನ್ನು ತ್ವಚೆಗೆ ಲೇಪಿಸುವುದರಿಂದ ತ್ವಚೆಯಲ್ಲಿ ಕಂಡುಬರುವ ಕಲೆ ನಿವಾರಣೆಯಾಗಿ, ಹೊಳಪಿನಿಂದ ಕಂಗೊಳಿಸುತ್ತದೆ.

ಇದನ್ನು ಕೂದಲಿಗೆ ಹಚ್ಚಿಕೊಂಡರೆ, ತಲೆ ಹೊಟ್ಟು ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ವಾಲ್‌ನಟ್ ಎಣ್ಣೆಯಿಂದ ದೊರೆಯುವ ಪ್ರಯೋಜನಗಳು ಯಾವುವು? ಎಂದು ನಾವು ಚರ್ಚೆ ಮಾಡಲು ಹೋದರೆ ಈ ಕೆಳಗಿನ ಅಂಶಗಳು ನಮಗೆ ಗೋಚರಿಸುತ್ತವೆ. ಬನ್ನಿ ಅವುಗಳ ಕುರಿತು ತಿಳಿದುಕೊಳ್ಳೋಣ...

ಮೊಯಿಶ್ಚರೈಸರ್

ಮೊಯಿಶ್ಚರೈಸರ್

ಇದನ್ನು ಮೊಯಿಶ್ಚರೈಸಿಂಗ್ ಏಜೆಂಟ್ ಆಗಿ ಸಹ ಬಳಸಬಹುದು. ಒಂದು ವೇಳೆ ನೀವು ಒಣ ತ್ವಚೆಯಿಂದ ಬಳಲುತ್ತಿದ್ದಲ್ಲಿ,ಇದನ್ನು ಲೇಪಿಸಿ.ಇದು ತ್ವಚೆಯನ್ನು ಒಳಗಿನಿಂದಲೆ ಮೊಯಿಶ್ಚರೈಸ್ ಮಾಡುತ್ತದೆ. ವಿಶೇಷವಾಗಿ ನಿಮ್ಮ ಮೊಣಕೈ ಪ್ರದೇಶದಲ್ಲಿ ಇದು ತನ್ನ ಪ್ರಭಾವವನ್ನು ತೋರುತ್ತದೆ. ಇದು ವಾಲ್‍ನಟ್ ಎಣ್ಣೆಯಿಂದ ದೊರೆಯುವ ಒಂದು ಉತ್ತಮ ಪ್ರಯೋಜನವಾಗಿದೆ.

ಕೂದಲ ಬೆಳವಣಿಗೆ

ಕೂದಲ ಬೆಳವಣಿಗೆ

ವಾಲ್‌ನಟ್ ಎಣ್ಣೆಯಲ್ಲಿ ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಇದನ್ನು ಬೆಳಗ್ಗೆ ಸ್ನಾನ ಮಾಡುವ ಮುನ್ನ ನಿಮ್ಮ ಕೂದಲಿಗೆ ಮಸಾಜ್ ಮಾಡಲು ಬಳಸಿ. ಇದು ಸಹ ವಾಲ್‍ನಟ್ ಎಣ್ಣೆಯಿಂದ ದೊರೆಯುವ ಉತ್ತಮ ಪ್ರಯೋಜನಗಳಲ್ಲಿ ಒಂದಾಗಿದೆ.

ಸುಕ್ಕುಗಳು

ಸುಕ್ಕುಗಳು

ಸುಕ್ಕುಗಳು ವಯಸ್ಸಾದಂತೆ ಸಹಜವಾಗಿ ಕಾಣಿಸಿಕೊಳ್ಳುತ್ತವೆ. ವಾಲ್‍ನಟ್ ಎಣ್ಣೆಯನ್ನು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಸುಕ್ಕುಗಳನ್ನು ದೂರ ಮಾಡಬಹುದು.

ಸೋರಿಯಾಸಿಸ್

ಸೋರಿಯಾಸಿಸ್

ಎಲ್ಲರಿಗು ತಿಳಿದಿರುವಂತೆ ಸೋರಿಯಾಸಿಸ್ ತಡೆಯಲು ಅಸಾಧ್ಯವಾದ ತ್ವಚೆಯ ಸಮಸ್ಯೆಯಾಗಿರುತ್ತದೆ. ವಾಲ್‍ನಟ್ ಎಣ್ಣೆಯನ್ನು ಸ್ನಾನಕ್ಕೆ ಮೊದಲು ಲೇಪಿಸಿಕೊಳ್ಳುವುದರಿಂದ ಇದರ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೊಂದು ವೇಳೆ ಸೋರಿಯಾಸಿಸ್ ಕಡಿಮೆಯಾಗದಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ.

ತಲೆಹೊಟ್ಟು

ತಲೆಹೊಟ್ಟು

ಒಂದು ವೇಳೆ ನೀವು ತಲೆ ಹೊಟ್ಟಿನ ಸಮಸ್ಯೆಯಿಂದ ನರಳುತ್ತಿದ್ದಲ್ಲಿ, ಆಲೀವ್ ಎಣ್ಣೆಯನ್ನು ಬಳಸಿ, ಕೂದಲ ಬುಡದಲ್ಲಿ ಮಸಾಜ್ ಮಾಡಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಇದೇ ಮಾದರಿಯ ಫಲಿತಾಂಶವನ್ನು ವಾಲ್‍ನಟ್ ಎಣ್ಣೆಯಿಂದ ಸಹ ನಾವು ಪಡೆಯಬಹುದು. ತಲೆಹೊಟ್ಟಿನ ಭಾಗಗಳಿಗೆ ವಾಲ್‌ನಟ್ ಎಣ್ಣೆಯನ್ನು ಬಳಸುವ ಮೂಲಕ ಈ ಪರಿಹಾರವನ್ನು ನಿಮ್ಮದಾಗಿಸಿಕೊಳ್ಳಬಹುದು.

ಇನ್‍ಫೆಕ್ಷನ್‍ಗಳು

ಇನ್‍ಫೆಕ್ಷನ್‍ಗಳು

ವಾಲ್‍ನಟ್ ಎಣ್ಣೆಯು ಫಂಗಲ್ ಅಥವಾ ಶಿಲೀಂಧ್ರದ ಸಮಸ್ಯೆಯನ್ನು ದೂರ ಮಾಡುತ್ತದೆ. ಇದಕ್ಕಾಗಿ ಈ ಎಣ್ಣೆಯನ್ನು ಬಾಧಿತ ಪ್ರದೇಶಕ್ಕೆ ಲೇಪಿಸಿದರೆ ಸಾಕು. ಪರಿಹಾರ ಶತಃಸಿದ್ಧ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಕೂದಲು ಉದುರುವುದು ಯಾರಿಗೆ ಸಂತೋಷವನ್ನು ನೀಡುತ್ತದೆ. ಒತ್ತಡವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕಾಗಿ ವಾಲ್‍ನಟ್ ಎಣ್ಣೆಯನ್ನು ಬಳಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳಿ. ಇದು ವಾಲ್‌ನಟ್ ಎಣ್ಣೆಯಿಂದ ದೊರೆಯುವ ಅದ್ಭುತ ಪ್ರಯೋಜನಗಳಲ್ಲಿ ಒಂದಾಗಿದೆ.

English summary

Beauty Benefits Of Walnut Oil

Have you ever tried walnut oil for skin care? You must have enjoyed walnuts as a snack till now; it is time you try walnut oil as a beauty product. Well, it contains antioxidants as well as omega-3 fatty acids. What are the other beauty benefits of walnut oil? Well, let us discuss...
Story first published: Tuesday, April 28, 2015, 12:14 [IST]
X
Desktop Bottom Promotion