For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವೃದ್ಧಿಗೆ ಕೊತ್ತಂಬರಿ ಸೊಪ್ಪಿನ ಚಿಕಿತ್ಸೆ

By
|

ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಬಿಟ್ಟು ಬಹುತೇಕ ಎಲ್ಲಾ ಪದಾರ್ಥಗಳ ಕೊನೆಯಲ್ಲಿ ಸೇರಿಸುವುದು ಕೊತ್ತಂಬರಿ ಸೊಪ್ಪನ್ನು. ಇದು ಕೇವಲ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಇದು ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ತ್ವಚೆಯ ಸೌಂದರ್ಯವನ್ನೂ ವೃದ್ಧಿಸುವಲ್ಲಿಯೂ ಎತ್ತಿದ ಕೈ.

ಮುಖ್ಯವಾಗಿ ಹದಿಯರೆಯದಲ್ಲಿ ಕಾಡುವ ಮೊಡವೆಗಳಿಂದ ಮುಕ್ತಿ ಹೊಂದಲು, ಕೂದಲಿನ ಸೌಂದರ್ಯವನ್ನು ವೃದ್ಧಿಸಲು, ಕೂದಲು ಉದುರುವುದನ್ನು ನಿವಾರಿಸಲು, ಕಪ್ಪು ಚುಕ್ಕೆಗಳ ನಿವಾರಣೆಗೆ, ಹೀಗೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ನಿಸರ್ಗ ದತ್ತವಾಗಿ ದೊರೆಯುವ ಕೊತ್ತಂಬರಿ ಸೊಪ್ಪು ಬಹುಪಯೋಗಿ ಸಂಜೀವಿನಿ. ಅಲ್ಲದೆ ಕೊತ್ತಂಬರಿ ಸೊಪ್ಪಿನಲ್ಲಿರುವ ಪೋಷಕಾಂಶಗಳ ಪಟ್ಟಿಯನ್ನು ನೋಡಿದರೆ ಇಷ್ಟೊಂದು ಗುಣಗಳು ಈ ಪುಟ್ಟ ಸೊಪ್ಪಿನಲ್ಲಿದೆಯೇ ಎಂಬ ಅನುಮಾನ ಮೂಡುವುದು ಸಹಜ.

ಏಕೆಂದರೆ ಇದರಲ್ಲಿರುವ ಹನ್ನೊಂದು ವಿಧದ ಉಪಯುಕ್ತ ತೈಲಗಳು, ವಿಟಮಿನ್ ಸಿ ಎಂದು ಕರೆಯಲಾಗುವ ಆಸ್ಕಾರ್ಬಿಕ್ ಆಮ್ಲ ಸಹಿತ ಆರು ತರಹದ ಆಮ್ಲಗಳು, ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಇದರಲ್ಲಿ ಅಡಕವಾಗಿದ್ದು ತ್ವಚೆಯ ಹಾಗೂ ಆರೋಗ್ಯದ ದೃಷ್ಟಿಯಿಂದ ಕೊತ್ತಂಬರಿಯು ವರದಾಯಕ ಎಂದೆನಿಸಿದೆ. ಇದರ ಪರಿಮಳ ಮತ್ತು ತಾಜಾತನದ ಅಂಶಗಳಿಂದ ಕೊತ್ತಂಬರಿಯ ಬಳಕೆಯನ್ನು ಸುಗಂಧ ದ್ರವ್ಯಗಳಲ್ಲಿಯೂ ಮಾಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ಕೊತ್ತಂಬರಿ ಸೊಪ್ಪಿನ ಇನ್ನಷ್ಟು ಅದ್ಭುತ ಗುಣಗಳನ್ನು ಅರಿತುಕೊಳ್ಳೋಣ.

ತ್ವಚೆಯ ಕಾಂತಿಯನ್ನು ಹೆಚ್ಚಿಸಲು

ತ್ವಚೆಯ ಕಾಂತಿಯನ್ನು ಹೆಚ್ಚಿಸಲು

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ 4 ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಡವೆಗಳಿಂದ ಮುಕ್ತಿ ಹೊಂದಲು

ಮೊಡವೆಗಳಿಂದ ಮುಕ್ತಿ ಹೊಂದಲು

ಕೊತ್ತಂಬರಿಯಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ. ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಹಾಗೂ ಹದಿಹರೆಯದಲ್ಲಿ ಕಾಡುವ ಮೊಡವೆಗೆ ಕೂಡ ಅತ್ಯುತ್ತಮ ಮನೆಮದ್ದಾಗಿದೆ.

ಈ ಪ್ಯಾಕನ್ನು ತಯಾರಿಸಿಕೊಳ್ಳಲು ಲೆಮನ್ ಗ್ರಾಸ್, ಕೊತ್ತಂಬರಿ ಮತ್ತು ಚಾಮೋಲಿನ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಎಲ್ಲಾ ಪದಾರ್ಥಗಳನ್ನು ಒಂದು ಕಪ್ ನೀರಿನಲ್ಲಿ ಬೆರೆಸಿಕೊಂಡು ಬೇಯಿಸಿ. ನಂತರ ಅದು ತಣ್ಣಗಾಗಲು ಬಿಡಿ. ಆನಂತರ ಪದಾರ್ಥಗಳನ್ನು ಶೋಧಿಸಿಕೊಂಡು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, ಆಮೇಲೆ ತಣ್ಣೀರಿನಿಂದ ತೊಳೆಯಿರಿ. ಇದು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕಪ್ಪು ಕಲೆಗಳನ್ನು ನಿವಾರಿಸಲು

ಕಪ್ಪು ಕಲೆಗಳನ್ನು ನಿವಾರಿಸಲು

ಕಪ್ಪು ಕಲೆಗಳಿಂದ ನಿವಾರಣೆಯನ್ನು ಪಡೆಯಲು, ಒಂದು ಟೀ ಚಮಚ ಕೊತ್ತಂಬರಿ ಮತ್ತು ಲಿಂಬೆರಸವನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿ ಕಪ್ಪು ತಲೆಗಳು ಇರುವ ಭಾಗಕ್ಕೆ ಲೇಪಿಸಿ. 30 ನಿಮಿಷ ಬಿಡಿ. ಇದು ಕಪ್ಪು ತಲೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.

ಕಲೆಗಳನ್ನು ನಿವಾರಿಸಲು

ಕಲೆಗಳನ್ನು ನಿವಾರಿಸಲು

ಎರಡು ಟೀ ಚಮಚ ಕೊತ್ತಂಬರಿ ಸೊಪ್ಪನ್ನು ಜಜ್ಜಿ ತೆಗೆದಿರುವ ರಸ, 2 ಟೀ ಚಮಚ ಟೊಮೇಟೊ ರಸ ಹಾಗು ಒಂದೆರಡು ಹನಿ ರೋಸ್ ವಾಟರ್ ಅನ್ನು ಸೇರಿಸಿ ಪೇಸ್ಟ್ ಮಾಡಿಕೊಂಡು ತ್ವಚೆಯ ಮೇಲೆ ಲೇಪಿಸಿಕೊಳ್ಳಿ. ತದನಂತರ 20 ನಿಮಿಷಗಳ ಕಾಲ ಬಿಟ್ಟು, ತಣ್ಣೀರಿನಲ್ಲಿ ತೊಳೆಯಿರಿ. ಇದು ಕಲೆಗಳನ್ನು ನಿವಾರಿಸಲು ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ.

ಕೂದಲು ಉದುರುವುದನ್ನು ನಿವಾರಿಸಲು

ಕೂದಲು ಉದುರುವುದನ್ನು ನಿವಾರಿಸಲು

ಕೊತ್ತಂಬರಿ ರಸವು ಕೂದಲು ಉದುರುವಿಕೆಯನ್ನು ತಪ್ಪಿಸಲು ಇರುವ ಅತ್ಯುತ್ತಮ ಮನೆಮದ್ದಾಗಿದೆ. ಇದು ಕೂದಲ ಬೆಳವಣಿಗೆಗೂ ಸಹ ನೆರವು ನೀಡುತ್ತದೆ. ಇದರಲ್ಲಿರುವ ವಿಟಮಿನ್‌ಗಳು ಮತ್ತು ಪ್ರೋಟಿನ್‌ಗಳು ಕೂದಲಿಗೆ ಪ್ರಯೋಜನಕಾರಿಯಾಗಿರುತ್ತವೆ. ಸ್ವಲ್ಪ ಪ್ರಮಾಣದ ಕೊತ್ತಂಬರಿ ರಸವನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ, ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.

ಕೊತ್ತಂಬರಿ ಮಾಸ್ಕ್

ಕೊತ್ತಂಬರಿ ಮಾಸ್ಕ್

ಈ ಮಾಸ್ಕ್ ತಯಾರಿಸಲು ನಿಮಗೆ ತಾಜಾ ಕೊತ್ತಂಬರಿ ಎಲೆಗಳು ಬೇಕಾಗುತ್ತವೆ. ಇದನ್ನು ಮೊಸರು, ಅಲೋವಿರಾಗಳ ಜೊತೆಗೆ ಸಮಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆರೆಸಿಕೊಂಡು, ಚೆನ್ನಾಗಿ ರುಬ್ಬಿಕೊಳ್ಳಿ. ತದನಂತರ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು 15 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತವೆ. ನಿಮ್ಮ ಮುಖವು ಸೌಂದರ್ಯದಿಂದ ಕಂಗೊಳಿಸುತ್ತದೆ.

English summary

Beauty Benefits Of Coriander

Coriander is also known as cilantro and is generally used in the preparation of various food dishes as a garnishing ingredient. But, little do we know that there are a few unique beauty benefits associated with coriander? Well, yes there are various face packs that you can make with the help of coriander that can give your skin a natural glow.
X
Desktop Bottom Promotion