For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

By Arshad
|

ನಮ್ಮ ಆರೋಗ್ಯದ ಜೊತೆಗೇ ಸೌಂದರ್ಯವನ್ನೂ ವೃದ್ಧಿಸಲು ನಿಸರ್ಗ ನೀಡಿರುವ ವರಗಳಲ್ಲಿ ಕ್ಯಾರೆಟ್ ಸಹಾ ಒಂದು. ಕನ್ನಡದಲ್ಲಿ ಗಜ್ಜರಿ ಎಂದು ಕರೆಯಲ್ಪಡುವ ಈ ಸಿಹಿಯಾದ, ಕೇಸರಿ ಬಣ್ಣದ ಮೂಲಂಗಿಯಾಕಾರದ ಗಡ್ಡೆಯಲ್ಲಿ ಪ್ರಮುಖವಾಗಿ ವಿಟಮಿನ್ ಎ ಇದೆ. ಈ ವಿಟಮಿನ್ ಎ ಚರ್ಮದ ಆರೈಕೆ ಮತ್ತು ಕಣ್ಣಿನ ಪೋಷಣೆಗೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಚರ್ಮದ ಆರೈಕೆಯಲ್ಲಂತೂ ವಿಟಮಿನ್ ಎ ನ ಪಾತ್ರ ಮಹತ್ವದ್ದಾಗಿದೆ. ನಿತ್ಯವೂ ಒಂದು ಲೋಟ ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಕಾಂತಿ ಹೆಚ್ಚುವುದು ಮತ್ತು ಸಹಜವರ್ಣ ಪಡೆಯುವುದು ಖಚಿತ.

ಜೊತೆಗೇ ಹೊಳಪುಳ್ಳ ಕೂದಲು ಮತ್ತು ಉರುಗುಗಳು ಬೋನಸ್ ರೂಪದಲ್ಲಿ ಲಭಿಸುತ್ತವೆ, ಅಲ್ಲದೆ ಮೊಡವೆಗಳೂ ಕಡಿಮೆಯಾಗುತ್ತವೆ ಇದರ ಉಪಯೋಗ ಇಷ್ಟೇ ಎಂಬ ತೀರ್ಮಾನಕ್ಕೆ ಬರುವ ಮುನ್ನ ಇದರ ಜೀರ್ಣಕ್ರಿಯೆಗೆ ಲಭಿಸುವ ಲಾಭಗಳ ಬಗ್ಗೆ ತಿಳಿಯುವುದು ಒಳ್ಳೆಯದು. ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಬರದಂತೆ ತಡೆಯುತ್ತದೆ. ಸ್ಕಿನ್ ಕೇರ್ ಮಾಡುವುದು ಈ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ಟುಗಳಲ್ಲಿರುವ ಇನ್ನೊಂದು ಪ್ರಮುಖ ಪೋಷಕಾಂಶವೆಂದರೆ ಬೀಟಾ ಕ್ಯಾರೋಟೀನ್. ಇದರ ಸಹಿತ ಇರುವ ಇತರ ಆಂಟಿ ಆಕ್ಸಿಡೆಂಟುಗಳು ಚರ್ಮದ ವಿವಿಧ ರೋಗ ಮತ್ತು ಸೋಂಕುಗಳಿಂದ ತಡೆಯುತ್ತದೆ. ಬನ್ನಿ ಈ ರುಚಿಕರ, ಹಸಿಯಾಗಿಯೇ ಸೇವಿಸಬಹುದಾದ ತರಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಕ್ಯಾರೆಟ್‌ಗಳಲ್ಲಿರುವ ವಿಟಮಿನ್ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೇ ಮೊಡವೆಗಳನ್ನು ಕೊನೆಗೊಳಿಸಲೂ ನೆರವಾಗುತ್ತದೆ. ಅಲ್ಲದೇ ಚರ್ಮದಡಿಯಿಂದ ಮೊಡವೆಗಳು ಮೂಡಲು ಕಾರಣವಾಗುವ ಕೊಳೆ ಮತ್ತು ಕಲ್ಮಶಗಳನ್ನು ಚರ್ಮದ ರಂಧ್ರಗಳ ಮೂಲಕ ಹೊರದೂಡಿ ಮೊಡವೆಗಳು ಮೂಡುವ ಸಂಭವವನ್ನೇ ಬುಡದಿಂದ ನಿವಾರಿಸುತ್ತದೆ.

ಕೂದಲ ಬೆಳವಣಿಗೆಗೆ ನೆರವಾಗುತ್ತದೆ

ಕೂದಲ ಬೆಳವಣಿಗೆಗೆ ನೆರವಾಗುತ್ತದೆ

ಕ್ಯಾರೆಟ್ಟುಗಳಲ್ಲಿರುವ ಅವಶ್ಯಕ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಕ್ಯಾರೆಟ್ಟುಗಳಲ್ಲಿರುವ ವಿಟಮಿನ್ ಸಿ, ಮತ್ತು ಇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕೂದಲು ನೆರೆಯುವುದನ್ನು ತಡೆಯುತ್ತದೆ.

ಚರ್ಮದ ಉರಿಯನ್ನು ತಗ್ಗಿಸುತ್ತದೆ

ಚರ್ಮದ ಉರಿಯನ್ನು ತಗ್ಗಿಸುತ್ತದೆ

ಕೆಲವೊಮ್ಮೆ ಬಿಸಿಲು, ಚಿಕ್ಕಪುಟ್ಟ ಗಾಯಗಳು, ಗೀರುಗಳು, ಬೆವರುಸಾಲೆಯ ಮೂಲಕ ಉಂಟಾದ ಗುಳ್ಳೆ ಒಡೆದ ಬಳಿಕ ಉಂಟಾಗುವ ಉರಿಯನ್ನು ಕ್ಯಾರೆಟ್ಟುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಮರ್ಥವಾಗಿ ನಿವಾರಿಸುತ್ತವೆ. ಅಲ್ಲದೇ ಬೇಗನೇ ಗುಣವಾಗಲೂ ನೆರವಾಗುತ್ತವೆ.

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾದರೆ ಚರ್ಮ ಆರ್ದ್ರತೆಯನ್ನು ಹಿಡಿದಿಡಲು ಅಸಮರ್ಥವಾಗುತ್ತದೆ. ಕ್ಯಾರೆಟ್ಟುಗಳಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಚರ್ಮ ಆರ್ದ್ರತೆಯನ್ನು ಹೀರಿಕೊಳ್ಳಲು ನೆರವಾಗುವ ಮೂಲಕ ಆರ್ದ್ರತೆ ಪಡೆಯಲು ನೆರವಾಗುತ್ತದೆ.

ನೆರಿಗೆ ಮೂಡುವುದನ್ನು ನಿವಾರಿಸುತ್ತದೆ

ನೆರಿಗೆ ಮೂಡುವುದನ್ನು ನಿವಾರಿಸುತ್ತದೆ

ಮೂವತ್ತು ದಾಟಿದ ಬಳಿಕ ನಿಧಾನವಾಗಿ ಚರ್ಮದ ಸೆಳೆತ ಕಡಿಮೆಯಾಗಿ ನೆರಿಗೆಗಳು ಮೂಡುತ್ತವೆ. ಕಣ್ಣುಗಳ ಕೆಳಗೆ ಚೀಲವೊಂದು ಜೋತುಬಿದ್ದಂತೆ ಕಾಣುತ್ತದೆ. ನಿತ್ಯವು ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಸೆಳೆತ ಹೆಚ್ಚಾಗಿ ಈ ತೊಂದರೆಗಳಿಂದ ಬಹುಕಾಲ ರಕ್ಷಣೆ ಪಡೆಯಬಹುದು.

English summary

Beauty Benefits Of Carrot juice

Carrots are one of the amazing vegetables that nature has blessed us with. Carrots are the best source of vitamin A. Vitamin A is very much necessary for a healthy skin. It is loaded with plenty of nutrients which benefits our skin and hair. Drinking carrot juice everyday results in glowing skin. Carrots are rich in fiber. It cleanses the digestive system and keeps acne and pimples at bay. Apart from that, it also improves vision and prevents various types of cancer.
X
Desktop Bottom Promotion