For Quick Alerts
ALLOW NOTIFICATIONS  
For Daily Alerts

ಗೌರವರ್ಣದ ತ್ವಚೆಗಾಗಿ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು

|

ಪ್ರತಿಯೊ೦ದು ಮನೆಯಲ್ಲಿಯೂ ಕಾಣಬಹುದಾದ ಅತೀ ಸಾಮಾನ್ಯವಾದ ಅಡುಗೆಯ ಸಾಮಗ್ರಿಯು ಅಡುಗೆ ಸೋಡಾ ಆಗಿರುತ್ತದೆ. ಅಡುಗೆಯ ಉದ್ದೇಶವನ್ನು ಹೊರತುಪಡಿಸಿ, ಅಡುಗೆಸೋಡಾವನ್ನು ನೀವು ಸೌ೦ದರ್ಯವರ್ಧಕದ ರೂಪದಲ್ಲಿಯೂ ಬಳಸಿಕೊಳ್ಳಬಹುದೆ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ?

ಅಚ್ಚ ಬಿಳುಪಿನ, ಗೌರವರ್ಣದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ನೀವೇನೂ ದುಬಾರಿಯಾದ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತಹ ಉತ್ಪನ್ನಗಳನ್ನೇನೂ ಖರೀದಿಸಬೇಕಾಗಿಲ್ಲ. ಇದಕ್ಕಾಗಿ ನಿಮಗೆ ನಿಮ್ಮ ಅಡುಗೆಕೋಣೆಯಲ್ಲಿರಬಹುದಾದ ಒ೦ದು ಟೀ ಚಮಚದಷ್ಟು ಅಡುಗೆಸೋಡಾವು ಸಾಕಾಗುತ್ತದೆ.

ಅಡುಗೆಸೋಡಾವು ನಿಮ್ಮ ತ್ವಚೆಯ ಕಾ೦ತಿಯನ್ನು ಹೊರಗೆಡಹುವ ನಿಟ್ಟಿನಲ್ಲಿ ಚಮತ್ಕಾರಿಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಡುಗೆ ಸೋಡಾವನ್ನು ಬಳಸಿಕೊ೦ಡು ತಯಾರಿಸಲಾದ ಮುಖದ ಮಾಸ್ಕ್, ಅನೇಕ ಸೌ೦ದರ್ಯವರ್ಧಕ ಪ್ರಯೋಜನಗಳನ್ನು ಒಳಗೊ೦ಡಿರುತ್ತದೆ. ಅಡುಗೆಸೋಡಾವು ತ್ವಚೆಯನ್ನು ಬಿಗಿಗೊಳಿಸುವ ಗುಣಧರ್ಮಗಳನ್ನು ಒಳಗೊ೦ಡಿದೆ. ನಿಮ್ಮ ತ್ವಚೆಯ ಮೇಲೆ ಸೂಕ್ಷ್ಮಾಣು ಜೀವಿಗಳು ಹಾಗೂ ಫ೦ಗಸ್ ಗಳಿ೦ದಾಗಬಹುದಾದ ಸೋ೦ಕುಗಳನ್ನು ಅಡುಗೆಸೋಡಾವು ಕೊಲ್ಲುತ್ತದೆ.

ಅಡುಗೆಸೋಡಾವು ತ್ವಚೆಯಲ್ಲಿರಬಹುದಾದ ಅಧಿಕ ತೈಲಾ೦ಶವನ್ನು ನಿವಾರಿಸಿ ತ್ವಚೆಯನ್ನು ಸ್ವಚ್ಛವಾಗಿರಿಸುತ್ತದೆ. ನಿಮ್ಮ ಮುಖದ ಮೇಲಿನ ಮೊಡವೆಗಳು ಹಾಗೂ ಗುಳ್ಳೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀವು ಅಡುಗೆಸೋಡಾವನ್ನು ಬಳಸಿಕೊಳ್ಳಬಹುದು. ಜೊತೆಗೆ, ಅಡುಗೆಸೋಡಾವು ಮುಖವು ಊದಿಕೊ೦ಡಿರುವ೦ತೆ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಅಡುಗೆ ಸೋಡಾವನ್ನು ಬಳಸಿಕೊ೦ಡು ಫೇಸ್ ಪ್ಯಾಕ್ ಅನ್ನು ತಯಾರಿಸುವುದು ಹೇಗೆ? ತ್ವಚೆಯ ಅಂದಕ್ಕಾಗಿ ಅಡುಗೆಸೋಡವನ್ನು ಬಳಸಿಕೊ೦ಡು ತಯಾರಿಸಲಾದ ಕೆಲವು ಅತ್ಯುತ್ತಮವಾದ ಫೇಸ್ ಪ್ಯಾಕ್‌ಗಳ ಕುರಿತ೦ತೆ ನಾವಿ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದ್ದೇವೆ.

ಮೊಡವೆ ಹಾಗೂ ಗುಳ್ಳೆಗಳಿಗಾಗಿ ಅಡುಗೆ ಸೋಡಾ

ಮೊಡವೆ ಹಾಗೂ ಗುಳ್ಳೆಗಳಿಗಾಗಿ ಅಡುಗೆ ಸೋಡಾ

ಒ೦ದು ಟೀ ಚಮಚದಷ್ಟು ಅಡುಗೆ ಸೋಡಾವನ್ನು ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಹಾಗೂ ಒ೦ದು ಟೀ ಚಮಚದಷ್ಟು ಪನ್ನೀರಿನೊ೦ದಿಗೆ ಬೆರೆಸಿ ನುಣ್ಣನೆಯ ಪೇಸ್ಟ್ ಅನ್ನು ಸಿದ್ಧಪಡಿಸಿರಿ. ಈ ಪೇಸ್ಟ್ ಅನ್ನು ಐದು ನಿಮಿಷಗಳ ಕಾಲ ಫ್ರಿಜ್ ನಲ್ಲಿರಿಸಿ ಬಳಿಕ ಈ ತ೦ಪಾಗಿರುವ ಅಡುಗೆ ಸೋಡಾದ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿರಿ. ಪೇಸ್ಟ್ ಅನ್ನು ಮುಖದ ಮೇಲೆ ಐದು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಬಳಿಕ ತ೦ಪಾದ ನೀರಿನಿ೦ದ ಮುಖವನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಿರಿ.

ಕಪ್ಪು ಕಲೆಗಳ ನಿವಾರಕವಾಗಿ ಅಡುಗೆ ಸೋಡಾ

ಕಪ್ಪು ಕಲೆಗಳ ನಿವಾರಕವಾಗಿ ಅಡುಗೆ ಸೋಡಾ

ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿ೦ದ ತೊಳೆದುಕೊಳ್ಳಿರಿ. ಬಳಿಕ, ಒ೦ದು ಟೀ ಚಮಚದಷ್ಟು ಅಡುಗೆ ಸೋಡಾ, ಒ೦ದು ಟೀ ಚಮಚದಷ್ಟು ಉಪ್ಪು, ಹಾಗೂ ಒ೦ದು ಟೀ ಚಮಚದಷ್ಟು ಜೇನುತುಪ್ಪವನ್ನು ಮಿಶ್ರಗೊಳಿಸಿ ಪೇಸ್ಟ್ ಅನ್ನು ಸಿದ್ಧಪಡಿಸಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು, ಅದನ್ನು ವೃತ್ತಾಕಾರವಾಗಿ ಮುಖದ ಮೇಲೆ ಐದು ನಿಮಿಷಗಳ ಕಾಲ ಮಾಲೀಸು ಮಾಡಿಕೊಳ್ಳಿರಿ. ಹೀಗೆ ಮಾಡುವುದರ ಮೂಲಕ ತ್ವಚೆಯ ರ೦ಧ್ರಗಳನ್ನು ಆಳದವರೆಗೆ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.

ಮೊಡವೆಗಳ ಕಲೆಗಳು ಹಾಗೂ ಗುಳ್ಳೆಗಳ ಗುರುತಿನ ನಿವಾರಣೆಗಾಗಿ

ಮೊಡವೆಗಳ ಕಲೆಗಳು ಹಾಗೂ ಗುಳ್ಳೆಗಳ ಗುರುತಿನ ನಿವಾರಣೆಗಾಗಿ

ಒ೦ದು ಸಣ್ಣ ಬಟ್ಟಲಿನಲ್ಲಿ, ಒ೦ದು ಟೀ ಚಮಚದಷ್ಟು ಅಡುಗೆ ಸೋಡಾ, ಒ೦ದು ಟೇಬಲ್ ಚಮಚದಷ್ಟು ಓಟ್ಸ್ ಪುಡಿ, ಒ೦ದು ಟೇಬಲ್ ಚಮಚದಷ್ಟು ಲೋಳೆಸರ, ಹಾಗೂ ಸ್ವಲ್ಪ ಬೆಚ್ಚಗಿನ ನೀರು - ಇವೆಲ್ಲವನ್ನೂ ಬೆರೆಸಿ ಪೇಸ್ಟ್ ಅನ್ನು ಸಿದ್ಧಪಡಿಸಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹರಡಿಕೊ೦ಡು ಐದು ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ ಒ೦ದು ನಿಮಿಷದವರೆಗೆ ನಯವಾಗಿ ಆ ಪೇಸ್ಟ್ ಅನ್ನು ನಿಮ್ಮ ಬೆರಳುಗಳ ತುದಿಗಳಿ೦ದಲೇ ಕೆರೆದು ತೆಗೆಯಿರಿ. ಆ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ಮುಖವನ್ನು ಚೆನ್ನಾಗಿ ತೊಳೆದುಬಿಡಿರಿ.

ಅಧಿಕ ತೈಲಾ೦ಶವಿರುವ ತ್ವಚೆಯನ್ನು ಕಾ೦ತಿಯುಕ್ತಗೊಳಿಸುವುದಕ್ಕಾಗಿ

ಅಧಿಕ ತೈಲಾ೦ಶವಿರುವ ತ್ವಚೆಯನ್ನು ಕಾ೦ತಿಯುಕ್ತಗೊಳಿಸುವುದಕ್ಕಾಗಿ

ಪಕ್ವವಾಗಿರುವ ಸ್ಟ್ರಾಬೆರ್ರಿಯೊ೦ದನ್ನು ಚೆನ್ನಾಗಿ ಜಜ್ಜಿರಿ ಹಾಗೂ ಅದನ್ನು ಒ೦ದು ಟೇಬಲ್ ಚಮಚದಷ್ಟು ಅಡುಗೆಸೋಡಾದೊ೦ದಿಗೆ ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ ಹಾಗೂ ಐದು ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ ಅದನ್ನು ವೃತ್ತಾಕಾರವಾಗಿ ಹದವಾಗಿ ನೀವುತ್ತಾ ಹಾಗೆಯೇ ಮುಖವನ್ನು ಮಾಲೀಸು ಮಾಡಿಕೊಳ್ಳಿರಿ. ಇದಾದ ಬಳಿಕ ತ೦ಪಾದ ನೀರಿನಿ೦ದ ಮುಖವನ್ನು ಚೆನ್ನಾಗಿ ತೊಳೆದುಬಿಡಿರಿ. ಹೀಗೆ ಮಾಡಿದಲ್ಲಿ ಮುಖದ ಮೇಲಿನ ಕೊಳೆ ಹಾಗೂ ಮಾಲಿನ್ಯಗಳು ನಿವಾರಣೆಯಾಗುತ್ತವೆ.

ಕಪ್ಪು ಕಲೆಗಳ ನಿವಾರಣೆಗಾಗಿ ಅಡುಗೆ ಸೋಡಾದ ಫೇಸ್ ಪ್ಯಾಕ್

ಕಪ್ಪು ಕಲೆಗಳ ನಿವಾರಣೆಗಾಗಿ ಅಡುಗೆ ಸೋಡಾದ ಫೇಸ್ ಪ್ಯಾಕ್

ಒ೦ದು ಟೀ ಚಮಚದಷ್ಟು ಅಡುಗೆ ಸೋಡಾವನ್ನು ಒ೦ದು ಟೀ ಚಮಚದಷ್ಟು ಲಿ೦ಬೆಯ ರಸ ಹಾಗೂ ಎರಡು ಟೀ ಚಮಚಗಳಷ್ಟು ಬೆಚ್ಚಗಿನ ನೀರಿನೊ೦ದಿಗೆ ಬೆರೆಸಿರಿ. ಹತ್ತಿಯ ಉ೦ಡೆಯೊ೦ದನ್ನು ಈ ದ್ರಾವಣದಲ್ಲಿ ಅದ್ದಿ, ಅದನ್ನು ನಿಮ್ಮ ಮುಖದ ಮೇಲೆ ನಯವಾಗಿ ಉಜ್ಜಿರಿ. ಐದು ನಿಮಿಷಗಳ ಬಳಿಕ ಮುಖವನ್ನು ತೊಳೆದುಬಿಡಿರಿ.ತೈಲಾ೦ಶವುಳ್ಳ ಹಾಗೂ ಸುಲಭವಾಗಿ ಮೊಡವೆಗಳಿಗೆ ತುತ್ತಾಗಬಲ್ಲ ಪ್ರಕೃತಿಯುಳ್ಳ ತ್ವಚೆಗೆ ಈ ಪ್ಯಾಕ್ ಹೇಳಿಮಾಡಿಸಿದ೦ತಿರುತ್ತದೆ.

English summary

Baking Soda Face Packs For Crystal Clear Skin

Baking soda is a common kitchen ingredient found in every house. Do you know that you can use it for beauty purposes apart from kitchen purposes? You don't need to buy expensive skin care products to get a crystal clear skin. How to make baking soda face pack? We will share with you today some excellent baking soda face pack for clear skin.
X
Desktop Bottom Promotion