For Quick Alerts
ALLOW NOTIFICATIONS  
For Daily Alerts

ಮುಖದಲ್ಲಿನ ಕೂದಲ ನಿವಾರಣೆಗೆ ಹಣ್ಣಿನ ಫೇಸ್ ಪ್ಯಾಕ್

By Super
|

ನಿಮ್ಮ ಮುಖದಲ್ಲಿ ಕೂದಲುಗಳು ಇವೆಯೇ? ನಿಮ್ಮ ಮುಖದಲ್ಲಿರುವ ಕೂದಲಿನ ಕಾರಣದಿಂದಾಗಿ ನಿಮ್ಮ ಸೌಂದರ್ಯವು ಕಳೆಗುಂದಿದೆ ಎಂದು ಭಾವಿಸುತ್ತಿದ್ದೀರಾ? ಚಿಂತೆ ಬಿಡಿ ಎಲ್ಲದ್ದಕ್ಕೂ ಒಂದು ಪರಿಹಾರವಿರುತ್ತದೆ. ನಿಮ್ಮ ಮುಖದಲ್ಲಿರುವ ಕೂದಲಿನ ಸಮಸ್ಯೆಯಿಂದ ಪಾರಾಗಲು ನಾವು ನಿಮಗೆ ಇಂದು ಕೆಲವೊಂದು ಸಲಹೆಗಳನ್ನು ನೀಡುತ್ತೇವೆ. ಹೆಣ್ಣಿಗೆ ಮುಖ್ಯವಾಗಿರುವ ಸೌಂದರ್ಯ, ಅದರಲ್ಲಿಯೂ ಮುಖದ ಸೌಂದರ್ಯಕ್ಕೆ ಮಾರಕವಾಗುವ ಈ ಕೂದಲುಗಳ ಸಮಸ್ಯೆಯನ್ನು ಸರಳವಾಗಿ ನಿವಾರಿಸಿಕೊಳ್ಳುವ ಮಾರ್ಗವನ್ನು ನಾವು ಹೇಳಿಕೊಡುತ್ತೇವೆ.

ಅಸಲಿಗೆ ಈ ಮುಖದ ಮೇಲೆ ಕೂದಲು ಏಕೆ ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಒತ್ತಡ, ಅನುವಂಶೀಯತೆ, ಮುಟ್ಟು ನಿಲ್ಲುವಿಕೆ ಮತ್ತು ಹಾರ್ಮೋನುಗಳ ಅಸಮತೋಲನವು ನಿಮಗೆ ಬಂದಿರುವ ಸಮಸ್ಯೆಗೆ ಕಾರಣವಾಗಿರುತ್ತದೆ. ನಾವು ಇಂದು ನೀಡುತ್ತಿರುವ ಪರಿಹಾರೋಪಾಯಗಳು ಮನೆಯಲ್ಲಿಯೇ ದೊರೆಯುವ ವಸ್ತುಗಳಿಂದ ದೊರೆಯುತ್ತದೆ. ಇದರಿಂದ ನಿಮ್ಮ ತ್ವಚೆಯ ಮೇಲೆ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಜೊತೆಗೆ ಇದು ತಕ್ಷಣ ಪರಿಹಾರವನ್ನು ಸಹ ನೀಡುವುದಿಲ್ಲ.

ಏಕೆಂದರೆ ಇದನ್ನು ನೀವು ನಿವಾರಿಸಿಕೊಳ್ಳಲು ಬಳಸುವ ಪದಾರ್ಥಗಳು ಸ್ವಾಭಾವಿಕವಾದುದರಿಂದ, ಅದು ನಿಮ್ಮ ಸಮಸ್ಯೆಯನ್ನು ನಿವಾರಿಸಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಬನ್ನಿ ಇನ್ನು ತಡ ಮಾಡದೆ ಆ ಪದಾರ್ಥಗಳು ಮತ್ತು ಅವುಗಳನ್ನು ಬಳಸುವ ಕ್ರಮಗಳು ಯಾವುವು ಎಂದು ತಿಳಿದುಕೊಂಡು ಬರೋಣ. ಮುಖದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬೇಕೆ?

5 Ways To Lighten Facial Hair Naturally

ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಮೊಸರು
ಕಿತ್ತಳೆ ಹಣ್ಣಿನ ಸಿಪ್ಪೆಯು ತ್ವಚೆಯ ಬಣ್ಣವನ್ನು ಮತ್ತು ಮುಖದ ಮೇಲಿನ ಕೂದಲನ್ನು ತಿಳಿಗೊಳಿಸುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಅಗತ್ಯ ಪ್ರಮಾಣದ ಮೊಸರು ಜೊತೆಗೆ ಬೆರೆಸಿ ಮತ್ತು ಅದಕ್ಕೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿ ಕೂದಲು ಇರುವ ಭಾಗಕ್ಕೆ ಲೇಪಿಸಿ, ಈ ಪ್ರಕ್ರಿಯೆಯನ್ನು ಪ್ರತಿದಿನ ಪುನರಾವರ್ತನೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಪಪ್ಪಾಯಿ ಹಣ್ಣು ಮತ್ತು ಅರಿಶಿನ
ಪಪ್ಪಾಯಿ ಹಣ್ಣು ಸ್ವಾಭಾವಿಕ ಬ್ಲೀಚ್‌ನಂತೆ ಕೆಲಸ ಮಾಡುತ್ತದೆ, ಹಾಗಾಗಿ ಇದರ ತಿರುಳನ್ನು ಒಂದು ಚಿಟಿಕೆ ಅರಿಶಿನದ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ಸ್ವಚ್ಛವಾಗಿರುವ ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಿ, ಅಷ್ಟೇ ಅಲ್ಲದೆ ಕೆಲವು ನಿಮಿಷಗಳ ಕಾಲ ಇದನ್ನು ಮುಖದ ಮೇಲೆ ಮಸಾಜ್ ಮಾಡುತ್ತಾ ಇರಿ, ತದನಂತರ ಸುಮಾರು 20 ನಿಮಿಷಗಳ ಬಳಿಕ ಇದನ್ನು ತೊಳೆಯಿರಿ. ಸುಂದರಿಗೆ ಕಸಿವಿಸಿ ತರುವ ಸಣ್ಣ ಮೀಸೆ

ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ ಮತ್ತು ಲಿಂಬೆ
ಈ ಮಿಶ್ರನವು ನಿಮ್ಮ ಮುಖದಲ್ಲಿರುವ ಕೂದಲನ್ನು ಪರಿಣಾಮಕಾರಿಯಾಗಿ ತೆಳ್ಳಗೆ ಮಾಡುತ್ತದೆ. ಜೊತೆಗೆ ಇದು ನಿಮ್ಮ ಮುಖದ ಮೇಲೆ ಹೊಳಪನ್ನು ಸಹ ತರುತ್ತದೆ. ಇದಕ್ಕಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು 1 ಟೇಬಲ್ ಚಮಚ ಲಿಂಬೆರಸದಲ್ಲಿ ಬೆರೆಸಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಕೆಲವು ನಿಮಿಷಗಳ ಕಾಲ ಬಿಟ್ಟು ನಂತರ ಇದನ್ನು ತೊಳೆಯಿರಿ.

ಲಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪ
ಲಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವು ಸಹ ಕೂದಲನ್ನು ತೆಳ್ಳಗೆ ಮಾಡಿಕೊಳ್ಳಲು ಇರುವ ಅತ್ಯುತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಈ ಮಿಶ್ರಣವು ಸ್ವಾಭಾವಿಕ ಬ್ಲೀಚ್‌ನಂತೆ ಕೆಲಸ ಮಾಡುತ್ತದೆ ಮತ್ತು ಅನಗತ್ಯವಾದ ಕೂದಲನ್ನು ಮುಖದಿಂದ ತೆಗೆದುಹಾಕುತ್ತದೆ.

ಟೊಮೇಟೊ ಜ್ಯೂಸ್ ಮಾಸ್ಕ್
ಟೊಮೇಟೊ ಜ್ಯೂಸ್ ಮಾಸ್ಕ್ ನಿಮ್ಮ ಮುಖದಲ್ಲಿರುವ ಕೂದಲನ್ನು ತೆಳ್ಳಗೆ ಮಾಡಲು ಇರುವ ಅದ್ಭುತವಾದ ಮಾರ್ಗವಾಗಿರುತ್ತದೆ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಟೊಮೇಟೊ ಮಾತ್ರ. ಒಂದು ಟೊಮೇಟೊವನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ, ಅದನ್ನು ನಿಮ್ಮ ಮುಖದಲ್ಲಿ ಕೂದಲು ಇರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಿ. ಇದನ್ನು ನೀವು ಬಯಸಿದ ಫಲಿತಾಂಶವನ್ನು ಪಡೆಯುವವರೆಗೆ ಪುನರಾವರ್ತನೆ ಮಾಡುತ್ತಾ ಇರಿ.

English summary

5 Ways To Lighten Facial Hair Naturally

Do you have facial hair? Is your facial hair is making you look less appealing? Don't fret! We have a solution for you. We will guide you to get rid rid of your facial hair. Unwanted facial hair is a serious beauty concern and could be embarrassing at times. It makes a women look less feminine. Some of the factors that contribute to facial hair are stress, heredity, menopause and hormonal imbalance.
Story first published: Monday, September 28, 2015, 18:18 [IST]
X
Desktop Bottom Promotion