For Quick Alerts
ALLOW NOTIFICATIONS  
For Daily Alerts

ಸುಂದರ, ಕಾಂತಿಯುಕ್ತ ತ್ವಚೆಗಾಗಿ ಪಂಚ ಸೂತ್ರ

By Super
|

ಪ್ರತಿಯೊಬ್ಬರು 'ನಾನು ಅಂದವಾಗಿ ಕಾಣಬೇಕು' ಎಂದು ಆಸೆ ಪಡುವುದು ಸಹಜ. ಅಂದವಾಗಿ ಕಾಣಿಸಲು ಡ್ರೆಸ್ಸಿಂಗ್ ಚೆನ್ನಾಗಿರಬೇಕು, ಮೇಕಪ್ ಮಾಡಬೇಕು ಇವೆಲ್ಲಾ ನಿಜ. ಆದರೆ ಇವೆಲ್ಲಾಕ್ಕಿಂತ ಹೆಚ್ಚಾಗಿ ತ್ವಚೆ ಅಕರ್ಷಕವಾಗಿರಬೇಕು. ತ್ವಚೆ ಕಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಜೀವನ ಶೈಲಿ ಕೂಡ ಪ್ರಮುಖವಾದ ಅಂಶವಾಗಿರುತ್ತದೆ.

ಹಾಗಾಗಿ ಇಂದು ಈ ಕೊರತೆಯನ್ನು ಬೋಲ್ಡ್ ಸ್ಕೈ ತಂಡ ನಿವಾರಿಸಲಿದೆ. ಏಕೆಂದರೆ ಕೆಳಗಿನ ಸ್ಲೈಡ್ ಶೋ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಮುಖಲೇಪಗಳಿಗಿಂತಲೂ ಉತ್ತಮವಾದ, ಅದಕ್ಕಿಂತಲೂ ಎಷ್ಟೂ ಪಾಲು ಅಗ್ಗವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಮುಖಲೇಪವನ್ನು ಸುಲಭವಾಗಿ ತಯಾರಿಸಲು ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಇದನ್ನು ಬಳಸಿದ ಬಳಿಕವೇ ಇದರ ಪರಿಣಾಮವನ್ನು ಮನಗಾಣಿರಿ ಮತ್ತು ನಮಗೆ ಖಂಡಿತಾ ತಿಳಿಸಿ.

ಪೌಷ್ಠಿಕ ಆಹಾರ ಸೇವಿಸಿ

ಪೌಷ್ಠಿಕ ಆಹಾರ ಸೇವಿಸಿ

ಆರೋಗ್ಯಕರ ತ್ವಚೆಗಾಗಿ ಸಂತುಲಿತ ಆಹಾರದ ಸೇವನೆ ಅತಿ ಅಗತ್ಯ. ಆದ್ದರಿಂದ ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಹಸಿ ತರಕಾರಿ, ಹಣ್ಣುಗಳು ಮತ್ತು ವಿಶೇಷವಾಗಿ ಕರಗದ ನಾರು ಹೆಚ್ಚಿರುವ ಆಹಾರಗಳು ಹೆಚ್ಚಿರುವಂತೆ ನೋಡಿಕೊಳ್ಳಿ. ಇದು ಕೆಲವೇ ದಿನಗಳಲ್ಲಿ ನಿಮ್ಮ ಚರ್ಮಕ್ಕೆ ಸಹಜ ಕಾಂತಿಯನ್ನು ನೀಡುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಆರೋಗ್ಯಕ್ಕೆ ನೀರು ಎಷ್ಟು ಅಗತ್ಯವೋ ತ್ವಚೆಗೂ ಅಷ್ಟೇ ಅಗತ್ಯ. ದಿನಕ್ಕೆ ಕನಿಷ್ಟ ಎಂಟು ಲೋಟ ದ್ರವವನ್ನು ಸೇವಿಸಬೇಕು. ಈ ದ್ರವ ನೀರೇ ಆಗಬೇಕೆಂದೇನಿಲ್ಲ, ನಿತ್ಯದ ದ್ರವಾಹಾರಗಳ ಮೂಲಕ ಸೇವಿಸುವ ಒಟ್ಟು ಪ್ರಮಾಣ ಕನಿಷ್ಠ ಎಂಟು ಲೋಟಗಳಾಗಬೇಕು. ಆದರ ಹೊರತಾಗಿಯೂ ಆಗಾಗ ನೀರನ್ನು ಕುಡಿಯುತ್ತಿರುವುದು ಉತ್ತಮ. ಇದರಿಂದ ಚರ್ಮದ ಬೆವರಿನ ಮೂಲಕ ಒಳಗಣ ಕಲ್ಮಶಗಳು ಹೊರಹರಿಯುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮದಡಿಯಲ್ಲಿ ಕಲ್ಮಶಗಳು ಸಂಗ್ರಹಗೊಳ್ಳದೇ ಮೊಡವೆಗಳಾಗುವ ಸಂಭವವೂ ಕಡಿಮೆಯಾಗುತ್ತದೆ.

ಆರ್ದ್ರತೆ ಒದಗಿಸಿ

ಆರ್ದ್ರತೆ ಒದಗಿಸಿ

ಚರ್ಮವು ನೀರಿನ ಅಂಶವನ್ನು ನೇರವಾಗಿ ಹೀರಿಕೊಳ್ಳಲು ಅಸಮರ್ಥವಾಗಿದೆ. ಆದರೆ ನೀರಿನ ಪಸೆ ಅಥವಾ ಆರ್ದ್ರತೆಯನ್ನು ಹೀರಿಕೊಳ್ಳಬಲ್ಲದು. ಆರ್ದ್ರತೆ ಚರ್ಮದ ಆರೈಕೆಗೆ ಅತ್ಯಂತ ಅಗತ್ಯ. ಚಳಿಗಾಲದಲ್ಲಿ ನೀರು ಒಣಗುವ ಪ್ರಮಾಣವೂ ಕಡಿಮೆಯಾಗುವುದರಿಂದ ಚರ್ಮಕ್ಕೆ ಲಭಿಸುವ ಆರ್ದತೆಯೂ ಕಡಿಮೆಯಾಗುತ್ತದೆ. ಇದರಿಂದಾಗಿ ಚರ್ಮ ಒಣಗಿ ಬಿರಿ ಬಿಡುತ್ತದೆ. ಇದನ್ನೇ ಚರ್ಮ ಒಡೆಯುವುದು ಎಂದು ಹೇಳುತ್ತೇವೆ. ಈ ಪರಿಸ್ಥಿತಿಗೆ ಒಳಗಾಗದಿರಲು ಚರ್ಮಕ್ಕೆ ಸಾಕಷ್ಟು ಆರ್ದ್ರತೆ ಲಭಿಸುತ್ತಿರುವಂತೆ ನೋಡಿಕೊಳ್ಳುವುದು ಅಗತ್ಯ. ಮಾರುಕಟ್ಟೆಯಲ್ಲಿ ಆರ್ದ್ರತೆ ನೀಡುವ ದ್ರಾವಣ (Moisturising lotion) ಗಳನ್ನು ಬಳಸಬಹುದು. ಚಳಿಗಾಲದಲ್ಲಿ ತಪ್ಪದೇ ವ್ಯಾಸೆಲಿನ್ ಹಚ್ಚುವುದು ಅಥವಾ ಬೇರೆ ಯಾವುದಾದರೂ ಸೂಕ್ತ ಕ್ರಮವನ್ನು ಅನುಸರಿಸಬೇಕು. ಇದು ಕಾಂತಿಯುಕ್ತ ತ್ವಚೆಗೆ ಅಗತ್ಯವಾದ ಆರೈಕೆಯಾಗಿದೆ.

ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ

ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ

ಎಷ್ಟು ಸಾಧ್ಯವೋ ಅಷ್ಟು ಮಟ್ಟಿಗೆ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ. ಮಧ್ಯಾಹ್ನದ ಹೊತ್ತು ಬಿಸಿಲಿಗೆ ಬರುವುದನ್ನು ತಪ್ಪಿಸಿ. ಅನಿವಾರ್ಯವಾದರೆ ಸನ್ ಸ್ಕ್ರೀನ್ ಇಲ್ಲದೆ ಹೊರಗೆ ಅಡಿಯಿಡಬೇಡಿ. ಆದರೆ ಮುಂಜಾನೆಯ ಪ್ರಥಮ ಕಿರಣಗಳನ್ನು ಮಾತ್ರ ಪಡೆಯಲು ಮರೆಯದಿರಿ.

ಟೋನರ್ ಬಳಸಿ

ಟೋನರ್ ಬಳಸಿ

ಚರ್ಮಕ್ಕೆ ಆರ್ದ್ರತೆ ಒದಗಿಸಿದ ಬಳಿಕ ಕೈಗೊಳ್ಳಬೇಕಾದ ಮುಂದಿನ ಕ್ರಮವೆಂದರೆ ಟೋನರ್ ಬಳಸುವುದು. ನಮ್ಮ ಚರ್ಮಕ್ಕೆ ಅತಿ ಆಮ್ಲೀಯವೂ ಅಲ್ಲದ, ಅತಿ ಕ್ಷಾರೀಯವೂ ಅಲ್ಲದ ದ್ರವದ ಅವಶ್ಯಕತೆಯಿದೆ. ಆದರೆ ಕೆಲವು ಕಲ್ಮಶ ಮತ್ತು ಚರ್ಮದ ಸ್ರಾವದ ಮೂಲಕ ಈ ದ್ರಮ ಕೊಂಚ ಆಮ್ಲೀಯವಾಗುತ್ತದೆ. ಸೂಕ್ತ ಆರೈಕೆ ಇಲ್ಲದಿದ್ದರೆ ಚರ್ಮ ಇದರ ಪ್ರಭಾವಕ್ಕೆ ಒಳಗಾಗಿ ಕಪ್ಪು ಕಲೆಗಳನ್ನು ಅಥವಾ ಚುಕ್ಕೆಗಳನ್ನು ಮೂಡಿಸಬಹುದು. ಇದನ್ನು ಸರಿಪಡಿಸಲು ಟೋನರ್ ಅಗತ್ಯ. ಇದು ಚರ್ಮದ ದ್ರವದ ಪಿಎಚ್ (ಆಮ್ಲೀಯ ಮತ್ತು ಕ್ಷಾರೀಯ ದ್ರವದ ಸಂತುಲನೆಯ ಕೋಷ್ಟಕ) ಮಟ್ಟವನ್ನು ಸೂಕ್ತವಾಗಿರಿಸಲು ನೆರವಾಗುತ್ತವೆ. ಪರಿಣಾಮವಾಗಿ ಕಾಂತಿಯುಕ್ತ, ಕಲೆರಹಿತವಾದ ಮತ್ತು ಆರೋಗ್ಯಕರ ತ್ವಚೆ ನಿಮ್ಮದಾಗುತ್ತದೆ.

English summary

5 Steps To Get A Flawless Skin

Not everyone is blessed with a clear, glowing skin. We all crave to get a bright skin. Nobody likes pimples, zits, dark spots and baggy eyes on their face. There are many skin types and different skin problems associated with it. In today's article we at Boldsky, have shared the ways in which you can get flawless skin. Read on, try it and see the difference.
X
Desktop Bottom Promotion