For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಸಮಯದಲ್ಲಿ ತ್ವಚೆಯ ಆರೈಕೆಗೆ ಸೂಕ್ತ ಸಲಹೆಗಳು

By Vishwanath
|

ಮಳೆಗಾಲದ ಸಮಯದಲ್ಲಿ ವಾತಾವರಣವು ಹಿತವಾಗಿಯೂ ಮತ್ತು ತಣ್ಣಗೂ ಇರುವುದು ಸಾಮಾನ್ಯ. ಆದರೆ ಅಂತಹ ಸಮಯದಲ್ಲಿ ಚರ್ಮ ಒಡೆದುಹೋಗುವುದಲ್ಲದೆ ಶಿಲೀಂದ್ರ (Fungal) ಸೋಂಕುಗಳು ಉದ್ಭವಿಸಿ ಚರ್ಮದ ರಂಧ್ರಗಳನ್ನು ಮುಚ್ಚಿಹೋಗುವುದು. ಈ ಕಾಲದಲ್ಲಿ ನಿಮಗೆ ಆರೋಗ್ಯಕರ ಮತ್ತು ಸ್ಪಷ್ಟ ಚರ್ಮ ಇರಬೇಕೆಂದರೆ ನೀವು ಏನು ಧೃಡವಾಗಿ ಏನು ಮಾಡಬೇಕು ಎಂಬುದನ್ನು ಬನ್ನಿ ನೋಡೋಣ.

ಮೊಡವೆಗಳನ್ನು ನಿವಾರಿಸಲು ಇರುವ ಅತ್ಯುತ್ತಮವಾದ 20 ಉಪಾಯಗಳು

ನಿಮ್ಮ ಮುಖವನ್ನು ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಚ್ಚಮಾಡಿರಿ

ನಿಮ್ಮ ಮುಖವನ್ನು ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಚ್ಚಮಾಡಿರಿ

ನಿಮ್ಮ ಮುಖದ ಚರ್ಮವು ಯಾವ ಬಣ್ಣವಿದ್ದರೂ ಅಥವ ಹೇಗಿದ್ದರೂ ಸರಿ, ಮುಖವನ್ನು ಮಾತ್ರ ಪ್ರತಿ ಎರಡು ಗಂಟೆಗೊಳಿಗೊಮ್ಮೆ ತೊಳೆದುಕೊಳ್ಳಿ. ಹಾಗೆ ತೊಳೆದುಕೊಳ್ಳುವಾಗ ಮುಖದಲ್ಲಿ ಈ ಮಳೆಗಾಲದಲ್ಲಿ ಸಾಮನ್ಯವಾಗಿ ಅಂಟಿಕೊಂಡಿರುವ ಎಲ್ಲಾ ತರಹದ ಕೊಳಕು ಮತ್ತು ಜಿಡ್ಡು ಹೋಗಿ ಸ್ವಚ್ಚವಾಗುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೆ ಪದೇ ಪದೇ ನಿಮ್ಮ ಮುಖದಲ್ಲಿ ಕಾಣುವ ಜಿಗುಟನ್ನು ತೆಗೆದು ಸ್ವಚ್ಚಗೊಳಿಸಲು ನಿಮ್ಮ ಬಳಿ ಒಂದು ಪ್ಯಾಕೆಟ್ ತೇವದ ವೈಪ್ (Wet wipe) ಇರಿಸಿಕೊಂಡಿರಿ. ಸ್ವಾಭಾವಿಕವಾಗಿ ಹೀಗೆ ಅಂಟು ಮತ್ತು ಕೊಳಕು ಸೇರಿ ನಿಮ್ಮ ಮುಖದ ಚರ್ಮದ ಮೇಲೆ ಪರಿಣಾಮ ಬೀಳುವುದರಿಂದ ವರ್ಷದ ಈ ಕಾಲದಲ್ಲಿ ವಾರಕ್ಕೊಮ್ಮೆ ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನಿಟ್ಟುಕೊಳ್ಳಿ. ಒಂದು ಉತ್ತಮ ಸಲಹೆಯೆಂದರೆ ನೀವು ಯಾವಾಗಲೂ ಒಂದು ಒಳ್ಳೆಯ ಗುಣಮಟ್ಟದ ಫೇಸ್ ವಾಶ್ ಇಟ್ಟುಕೊಳ್ಳುವುದು.

ನಿಮ್ಮ ಬಳಿ ಟೋನರ್ ಇಟ್ಟುಕೊಳ್ಳುವುದು ಬಹಳ ಅಗತ್ಯ

ನಿಮ್ಮ ಬಳಿ ಟೋನರ್ ಇಟ್ಟುಕೊಳ್ಳುವುದು ಬಹಳ ಅಗತ್ಯ

ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಂಡಿರಲು ನೀವು ಟೋನರ್ ಉಪಯೋಗಿಸುವುದು ಬಹಳ ಅಗತ್ಯ. ಆಲ್ಕೋಹಾಲ್-ಮುಕ್ತ ಟೋನರ್ ಆಯ್ದುಕೊಂಡು ನಿಮ್ಮ ದಿನಕ್ಕೆರಡುಬಾರಿ ಮುಖದಮೇಲೆ ಲೇಪಿಸಿಕೊಳ್ಳಿ. ಹಾಗೆ ಮಾಡುವುದರಿಂದ ನಿಮ್ಮ ಚರ್ಮ ಗುಣಮಟ್ಟದ ಪಿ.ಹೆಚ್. (pH) ಸಮತೋಲನವನ್ನು ಕಾಪಾಡಿಕೊಳ್ಳಬಹುದು ಮತ್ತು ಚರ್ಮವು ಪರಿಪೂರ್ಣವಾಗಿ ಟೋನ್ ಆಗಿರುತ್ತದೆ. ಅಲೋ ವೇರ ಆಧಾರಿತ ಟೋನರ್ ಒಂದು ಒಳ್ಳೆಯ ಆಯ್ಕೆ ಮತ್ತು ಅದು ನಿಮ್ಮ ಮುಖದ ಚರ್ಮವನ್ನು ಪುನಶ್ಚೇತನಗೊಳಿಸುವುದಲ್ಲದೆ ಅರೋಗ್ಯಕರವಾಗಿಯೂ ಇಟ್ಟುಕೊಳ್ಳಲು ಸಹಾಯಮಾಡುತ್ತದೆ.

ಮೃದುವಾದ ಮಾಯಿಸ್ಚರ್‌ಲೋಶನ್ (Moisture Lotion) ಉಪಯೋಗಿಸಿ

ಮೃದುವಾದ ಮಾಯಿಸ್ಚರ್‌ಲೋಶನ್ (Moisture Lotion) ಉಪಯೋಗಿಸಿ

ಮಳೆಗಾಲದಲ್ಲಿ ಆರ್ದ್ರತೆ (Humidity) ಮಟ್ಟವು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಭಾರೀಮಟ್ಟದ ಲೋಶನ್‌ಗಳು ಅಥವ ಕ್ರೀಮ್‌ಗಳನ್ನು ಹಚ್ಚುವುದನ್ನು ತಪ್ಪಿಸಿ ನಿಮ್ಮ ಮುಖ ಅಂಟಿನಂತಿರುವುದನ್ನು ತಪ್ಪಿಸಿ. ತೊಳೆಯಲು ನೀರನ್ನು ಅಥವ ಜೆಲ್ ಆಧಾರಿತ ಲೋಶನ್ ಉಪಯೋಗಿಸಿದಾಗ ಅದು ನಿಮ್ಮ ಚರ್ಮದಲ್ಲಿ ಹೀರಿಕೊಂಡು ಜಿಡ್ಡಿರುವಂತೆ ಕಾಣುವುದಿಲ್ಲ.

ಮುಖಕ್ಕೆ ನೀರಿನ ಆವಿಯನ್ನು ತೆಗೆದುಕೊಳ್ಳಿ

ಮುಖಕ್ಕೆ ನೀರಿನ ಆವಿಯನ್ನು ತೆಗೆದುಕೊಳ್ಳಿ

ಮುಖದಲ್ಲಿರುವ ರಂಧ್ರಗಳನ್ನು ತೆರೆಯಲು ದಿನ ಬಿಟ್ಟು ದಿನ ನೀರಿನ ಆವಿಯನ್ನು ತೆಗೆದುಕೊಳ್ಳಿರಿ. ಆವಿಯು ಚರ್ಮದ ಆಳವಾದ ಪದರವನ್ನು ಹೊಕ್ಕಿ ಅದರಲ್ಲಿ ಸೇರಿರುವ ಕೊಳೆಯನ್ನು ತೆಗೆಯುತ್ತದೆ. ಹೀಗೆ ಆವಿಯನ್ನು ತೆಗೆದುಕೊಂಡು ಸ್ವಲ್ಪ ಸಮಯದ ಬಿಟ್ಟ ನಂತರ ಮಂಜುಗಡ್ಡೆ (Ice) ಯಿಂದ ಉಜ್ಜಿದರೆ ಸ್ವಚ್ಚವಾದ ರಂಧ್ರಗಳನ್ನು ಮುಚ್ಚುತ್ತದೆ.

ವಾರಕ್ಕೆರಡುಬಾರಿ ಮುಖದ ಮೇಲಿನ ಸಪ್ಪೆಕಳೆಯನ್ನು ತೆಗೆಯಿರಿ

ವಾರಕ್ಕೆರಡುಬಾರಿ ಮುಖದ ಮೇಲಿನ ಸಪ್ಪೆಕಳೆಯನ್ನು ತೆಗೆಯಿರಿ

ಮುಖದ ಮೇಲ್ಭಾಗದ ಪದರವು ಮಳೆಗಾಲದಲ್ಲಿ ಒಣಗಿಹೋಗುವ ಸಾಧ್ಯತೆಗಳಿವೆ. ಇದನ್ನು ಸುಲಭವಾಗಿ ತಪ್ಪಿಸಲು ಉತ್ತಮರೀತಿಯಲ್ಲಿ ಚರ್ಮವನ್ನು ಬಲಗೊಳಿಸಬೇಕು. ಹೀಗೆ ಮಾಡಲು ವಾರಕ್ಕೆರಡುಬಾರಿ ಮೃದುವಾದ ಮಣಿಗಳಿಂದ ಸೌಮ್ಯವಾಗಿ ಉಜ್ಜಿ ಚರ್ಮದ ಮೇಲ್ಭಾಗವನ್ನು ಸರಿಯಾಗಿ ಬಲಪಡಿಸಿಕೊಳ್ಳಿ. ಹಾಗೂ, ತಿಂಗಳಲ್ಲಿ ಎರಡುಬಾರಿ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಖಚಿತಪಡಿಸಿಕೊಳ್ಳಲು ರಾಸಾಯನಿಕ ಗ್ಲೈಕೊಲಿಕ್(Chemical Glycolic) ಸಹಾಯದಿಂದ ಚಿಕಿತ್ಸೆ ಪಡೆಯಿರಿ.

ಪುದೀನ ಫೇಶಿಯಲ್ ಸೂಕ್ತವಾಗಿದೆ

ಪುದೀನ ಫೇಶಿಯಲ್ ಸೂಕ್ತವಾಗಿದೆ

ಮಳೆಗಾಲದಲ್ಲಿ ಪುದೀನ ಅಥವಾ ಪಪಯಾ ಫೇಶಿಯಲ್ ಮಾಡಿಸಿಕೊಂಡರೆ ಒಳ್ಳೆಯ ಪರಿಣಾಮವಿರುತ್ತದೆ. ಪುದೀನ ನಿಮ್ಮ ಮುಖವನ್ನು ತಣ್ಣಗಾಗಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸಿ ಮುಚ್ಚಿಹೋಗಿರುವ ರಂಧ್ರಗಳನ್ನೂ ಸಹ ಶುದ್ಧಿ ಮಾಡಿ ಆ ರಂಧ್ರಗಳ ಗಾತ್ರವನ್ನು ಕಡಿಮೆಮಾಡುತ್ತದೆ. ಪರಂಗಿ (ಪಪಯಾ) ಹಣ್ಣಿ‌ನಿಂದ ಪೋಷಣೆ ಮಾಡಿದರೆ ಮುಖವು ತೇವಾಂಶದಿಂದ ಕಾಂತಿಯುತವಾಗಿ ಕಾಣುತ್ತದೆ.

English summary

Unclogging skin pores during monsoon

Monsoons are not only synonymous with soothing and cooling showers, but also skin eruptions, fungal infections and clogged skin pores. To make sure that you have a clear and healthy skin during this season, here's what you need to do religiously.
X
Desktop Bottom Promotion