For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಹೊಳಪಿಗೆ ಇಲ್ಲಿದೆ ಟ್ರಿಕ್ಸ್!

By Poornima Heggade
|

ಚಳಿಗಾಲದಲ್ಲಿ ತ್ವಚೆಯ ಆರೈಕೆಯನ್ನು ಮಾಡುವುದು ಅತ್ಯಂತ ಮುಖ್ಯ! ಏಕೆಂದರೆ ಚಳಿಗಾಲದಲ್ಲಿ ತ್ವಚೆಗೆ ಹಾನಿಯುಂಟಾಗುವುದು ಅಧಿಕ. ಚಳಿಗಾಲದಲ್ಲಿ ಚರ್ಮದಲ್ಲಿ ಹೊಳಪು ಇಲ್ಲದಿದ್ದರೆ ಮಾಡುವ ಕೆಲಸಗಳಲ್ಲಿಯೂ ಸಂತೋಷ ಮತ್ತು ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆದಾಗ್ಯೂ, ಚಳಿಗಾಲದಲ್ಲಿ ತಂಪು ಹವಾಮಾನದ ಕಾರಣದಿಂದ ತ್ವಚೆಯು ಅತ್ಯಂತ ಒಣ ಮತ್ತು ಸುಕ್ಕುಗಟ್ಟುವುದರಿಂದ ತ್ವಚೆಯನ್ನು ರಕ್ಷಿಸಿಕೊಳ್ಳಲು ಕಠಿಣ ಪರಿಶ್ರಮ ಪಡಲೇಬೇಕು! ಚಳಿಗಾಲದಲ್ಲಿ ತ್ವಚೆಯು ತೇವಾಂಶವನ್ನು ಕಳೆದುಕೊಂಡು, ಪರಿಣಾಮವಾಗಿ ಚರ್ಮ ಒಣ ಅಥವಾ ಶುಷ್ಕವಾಗುತ್ತದೆ. ಸಾಮಾನ್ಯ ಚರ್ಮವನ್ನು ಹೊಂದಿರುವವರರು ಸಹ ಚಳಿಗಾಲಲ್ಲಿ ಸಹಿಸಿಕೊಳ್ಳಲಾಗದಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನು ಒಣ ತ್ವಚೆಯನ್ನು ಹೊಂದಿರುವವರಂತೂ ಚಳಿಗಾಲದ ಸಂಪೂರ್ಣ ಋತುವನ್ನು ಶಪಿಸುವುದರಲ್ಲಿ ಆಶ್ವರ್ಯವಿಲ್ಲ!

ಹಾಗಾದರೆ ಚಳಿಗಾಲದಲ್ಲಿ ನಮ್ಮ ತ್ವಚೆ ಏಕೆ ಶುಷ್ಕತೆಯನ್ನು ಪಡೆದುಕೊಳ್ಳುತ್ತದೆ? ಚಳಿಗಾಲದಲ್ಲಿ ಚರ್ಮವು ಶುಷ್ಕವಾಗಿರುತ್ತಿದ್ದು, ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ಒಳಗಿನ ಶಾಖದಿಂದ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಚಳಿಗಾಲದ ಸಂದರ್ಭದಲ್ಲಿ ನಿಮ್ಮ ವಯಸ್ಸು ಯಾವುದೇ ಇರಲಿ ಚರ್ಮದ ಆರೈಕೆ ಮಾಡಬೇಕಾದದದ್ದು ಮಾತ್ರ ಅತೀ ಮುಖ್ಯ! ಇಲ್ಲಿ ಆರೋಗ್ಯಕರ ಹೊಳಪು ಉಳಿಸಿಕೊಳ್ಳಲು ಸಹಾಯ ಮಾಡುವ ಕೆಲವು ಸುಲಭ ಮಾರ್ಗಗಳನ್ನು ಹೇಳಲಾಗಿದೆ. ಉತ್ತಮ ಫಲಿತಾಂಶಗಳಿಗಾಗಿ ಈ ಕೂಡಲೇ ಈ ಟಿಪ್ಸ್ ಗಳನ್ನು ಅನುಸರಿಸಿ!

ಮಾಯಿಶ್ಚರೈಸರ್ ಕ್ರೀಮ್:

ಮಾಯಿಶ್ಚರೈಸರ್ ಕ್ರೀಮ್:

ನೀವು ಬೇಸಿಗೆ ಹಾಗೂ ವಸಂತಕಾಲದಲ್ಲಿ ಒಂದೇ ಮಾಯಿಶ್ಚರೈಸರ್ ಕ್ರೀಮ್ ಗಳನ್ನು ಬಳಸಬಹುದು.ಆದರೆ ಚಳಿಗಾಲದಲ್ಲಿ ಹವಾಮಾನಕ್ಕೆ ಸೂಕ್ತವಾದ ಉತ್ಪನ್ನವನ್ನು ಬದಲಾಯಿಸಲು ಪ್ರಯತ್ನಿಸಿ. ಚಳಿಗಾಲದಲ್ಲಿ ನಿಮ್ಮ ಚರ್ಮದ ಹೊಳಪಿಗಾಗಿ ನೀರು ಆಧಾರಿತ ತೇವಾಂಶಯುಕ್ತ ಕ್ರೀಮ್ ಗಳ ಬದಲು ತೈಲ ಆಧಾರಿತ ಮಾಯಿಶ್ವರೈಸರ್ ಬಳಸಿ. ತೈಲ ಆಧಾರಿತ ಮಾಯಿಶ್ವರೈಸರ್ ಗಳನ್ನು ನಿಮ್ಮ ಚರ್ಮದ ಪದರಗಳನ್ನು ರಕ್ಷಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಚಳಿಗಾಲಕ್ಕೆ ಉತ್ತಮ ಚರ್ಮದ ಹೊಳಪಿಗಾಗಿ ವಿಶೇಷವಾಗಿ ಗ್ಲಿಸರಿನ್ ಮತ್ತು ಪ್ರೊಪೈಲೆನ್ ( PROPYLENE) ಗ್ಲೈಕಾಲ್ ಗಳನ್ನು ಹೊಂದಿರುವ ಮಾಯಿಶ್ಚರೈಸರ್ ಕ್ರೀಮ್ ಗಳನ್ನೇ ಬಳಸುವುದು ಒಳ್ಳೆಯದು. ಆಲ್ಫಾ ಹೈಡ್ರಾಕ್ಸಿ ಆಮ್ಲಗಳ (AHAs) ಸಹ ತ್ವಚೆಯ ಶುಷ್ಕತೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಮನೆಯಿಂದ ಹೊರಡುವ ಮುನ್ನ ಸನ್ಸ್ಕ್ರೀನ್ ಬಳಸಿ:

ಮನೆಯಿಂದ ಹೊರಡುವ ಮುನ್ನ ಸನ್ಸ್ಕ್ರೀನ್ ಬಳಸಿ:

ಮೋಡಗಳು ಅಥವಾ ಮಂಜು ಇರುವಾಗಲೂ ಕೂಡ ಸೂರ್ಯನ ಕಿರಣಗಳು ಸುಮಾರು 80% ಪಸರಿಸಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ವಾಯುಮಂಡಲದಲ್ಲಿವೆ ಸೂರ್ಯನ ಅತಿಯಾದ ನೇರಳಾತೀತ ಕಿರಣಗಳು ಚರ್ಮದ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ನಿಮ್ಮ ಚರ್ಮವನ್ನು ಚಳಿಗಾಲದಲ್ಲಿ ರಕ್ಷಿಸಲು SPF 15 ಅಂಶವನ್ನು ಒಳಗೊಂಡಿರುವ ಸನ್ಸ್ಕ್ರೀನ್ ನ್ನು ತ್ವಚೆಗ ಅನ್ವಯಿಸಿ. ಪರಿಪೂರ್ಣ ಚರ್ಮದ ಹೊಳಪನ್ನು ಉಳಿಸಿಕೊಳ್ಳಲು ಮೊದಲು ನಿಮ್ಮ ಮುಖವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವುದು ಅತ್ಯಂತ ಅಗತ್ಯ.

ಬಿಸಿ ನೀರಿನ ಸ್ನಾನ ಮಾಡದಿರಿ:

ಬಿಸಿ ನೀರಿನ ಸ್ನಾನ ಮಾಡದಿರಿ:

ಚಳಿಗಾಲದಲ್ಲಿ ನಿಮ್ಮ ಚರ್ಮದ ಹೊಳಪನ್ನು ರಕ್ಷಿಸಲು, ತ್ವಚೆಯ ಅಗತ್ಯ ತೇವಾಂಶವನ್ನು ಕಳೆದುಕೊಳ್ಳುವಂತೆ ಮಾಡುವ ಬಿಸಿ ನೀರಿನ ಸ್ನಾನ ಮಾಡುವುದನ್ನು ತಪ್ಪಿಸಿ. ಅತಿಯಾದ ಬಿಸಿ ನೀರಿನ ಸ್ನಾನ ನೀವು ಚರ್ಮದ ಚಳಿಯಿಂದ ಹೊರಬರಲು ಸಹಾಯಮಾಡಬಹುದು. ಆದರೆ ಇದೇ ಬಿಸಿ ನೀರು ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವ ಮತ್ತು ತೇವಾಂಶವನ್ನು ಅಡಗಿಸಲು ಕಾರಣವಾಗಬಹುದು! ಚರ್ಮದ ಹೊಳಪಿಗೆ ಸೂಕ್ತ ಪರಿಹಾರವೆಂದರೆ ನಿಮ್ಮ ದಿನದ ಸ್ನಾನ 10 ನಿಮಿಷಗಳನ್ನು ಮೀರದಿರಲಿ. ಸ್ನಾನ ಮಾಡುವಾಗ ಉಗುರುಬೆಚ್ಚಗಿನ ನೀರನ್ನು ಬಳಸುವುದು ಅತ್ಯಂತ ಒಳಿತು.

ಮೃದು ಸೋಪ್/ ಸಾಬೂನುಗಳ ಬಳಕೆ:

ಮೃದು ಸೋಪ್/ ಸಾಬೂನುಗಳ ಬಳಕೆ:

ಕಠಿಣ ಸುಗಂಧಗಳಿರುವ ಸಾಬೂನುಗಳನ್ನು ಚಳಿಗಾಲದಲ್ಲಿ ಬಳಸಬೇಡಿ. ಚಳಿಗಾಲದಲ್ಲಿ ತ್ವಚೆಯಲ್ಲಿ ತೇವಾಂಸವನ್ನು ಉಳಿಸಿಕೊಳ್ಳಲು , ತೈಲ ಆಧಾರಿತ ಫೋಮಿಂಗ್ ಕ್ಲಿನ್ಸರ್ ಗಳಿಂಗಿಂತ ಡವ್ ಅಥವಾ ನ್ಯೂಟ್ರೋಜೆನಾದಂತಹ ಕ್ರೀಮ್ ಆಧಾರಿತ ಸಾಬೂನುಗಳನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಚರ್ಮದಲ್ಲಿ ನೀರಿನ ಅಂಶವನ್ನು ಇರಿಸಿಕೊಳ್ಳಲು ಮೃದು ಕ್ಲೆನ್ಸರ್ ಗಳನ್ನು ಬಳಸಿ.

ಆರೋಗ್ಯಕ್ಕಾಗಿ ಹೈಡ್ರೇಟ್:

ಆರೋಗ್ಯಕ್ಕಾಗಿ ಹೈಡ್ರೇಟ್:

ಚಳಿಗಾಲದಲ್ಲಿ ನಿಮ್ಮ ತ್ವಚೆ ಹೊಳಪನ್ನು ಕಾಯ್ದುಕೊಳ್ಳಲು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ.ನೀರು ನಿಮ್ಮ ದೇಹದಲ್ಲಿ ವಿಷ/ ಅನಗತ್ಯ ಅಂಸಗಳನ್ನು ಹೊರಕ್ಕೆ ತಳ್ಳುವುದರ ಮೂಲಕ ಚಳಿಗಾಲದಲ್ಲಿ ನಿಮ್ಮ ಚರ್ಮದ ಹೊಳಪನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ನೀರು ನಿಮ ದೇಹದ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.

ಟೋನರ್ ಬಳಸಿ

ಟೋನರ್ ಬಳಸಿ

ಟೋನರ್ ಗಳು ನಿಮ್ಮ ತ್ವಚೆಯಲ್ಲಿನ ಕೊಳಕನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ನಿಮ್ಮ ಚರ್ಮವನ್ನು ಚಳಿಗಾಲದಲ್ಲಿ ಹೊಳಪನ್ನು ಪಡೆಯಲು ಮದ್ಯ ಆಧಾರಿತ ಉತ್ಪನ್ನಗಳನ್ನು ತಪ್ಪಿಸಿ ಚರ್ಮದ ತೇವಾಂಶವನ್ನು ಇರಿಸಿಕೊಳ್ಳಲು ಸಹಾಯ ಮಾಡುವ ಹೈಯಲುರೋನಿಕ್ ಆಮ್ಲ ಅಥವಾ ಪಾಂತಿಯನ್ (pantheon) ಹೊಂದಿರುವ ಉತ್ವನ್ನಗಳನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಮೃದು ಹತ್ತಿ ಪ್ಯಾಡ್ ತೆಗೆದುಕೊಂಡು ಮುಖದಲ್ಲಿನ ಕೊಳೆಯನ್ನು ನಿಧಾನವಾಗಿ ಟೋನರ್ ಗಳ ಮೂಲಕ ತೆಗೆದುಹಾಕಬಹುದು.

ಶುಷ್ಕ ತ್ಚಚೆಯನ್ನು ತೊಡೆದುಹಾಕಿ

ಶುಷ್ಕ ತ್ಚಚೆಯನ್ನು ತೊಡೆದುಹಾಕಿ

ಡೆಡ್ ಸ್ಕಿನ್ (ಹೊಳಪು ಕಳೆದುಕೊಂಡ ತ್ವಚೆ) ತೆಗೆದುಹಾಕಲು ಮೃದು ಸ್ಕರ್ಬ್ ಗಳ ಮಾಸ್ಕ್ ಗಳನ್ನು ಬಳಸಿ. 10% ಗ್ಲೈಕೊಲಿಕ್ ಆಮ್ಲವನ್ನು ಹೊಂದಿರುವ ಮೃದು ಮಾಸ್ಕ್ ಗಳನ್ನು ಬಳಸಿ. ಜೊತೆಗೆ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಮನೆಯಲ್ಲಿ ತಯಾರಿಸಿದ ಮಾಸ್ಕ್ ಗಳನ್ನು ಉಪಯೋಗಿಸಿ. ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುವ ಸಲುವಾಗಿ ನೈಸರ್ಗಿಕ ಸ್ಕ್ರಬ್ ಗಳ ಮೂಲಕ ಮುಖವನ್ನು ಆಗಾಗ ಮಸಾಜ್ ಮಾಡಿ.

ನಿಮ್ಮ ತ್ವಚೆಯನ್ನು ಸ್ವಚ್ಛ ಮತ್ತು ಹೊಳಪಾಗಿಸಲು ಈ ಸಲಹೆಗಳನ್ನು ಅನುಸರಿಸಿ. ಜೊತೆಗೆ ಆರೋಗ್ಯಕರ ತ್ವಚೆಯ ರಕ್ಷಣೆಗಾಗಿ ಸಮತೋಲಿತ ಆಹಾರವನ್ನೂ ಸರಿಯಾಗಿ ಸೇವಿಸಿ.

English summary

Tricks to make your skin glow in winter

How to make your skin glow during winter months? Nothing can make you feel more happy and confident in winter than making your skin glow. However, maintaining or keeping your skin glowing during winters can be a tough task especially since harsh cold weather does take a toll on your skin,
X
Desktop Bottom Promotion