For Quick Alerts
ALLOW NOTIFICATIONS  
For Daily Alerts

ಕಾಂತಿಯುತ ಹಾಗೂ ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು

|

ಪ್ರತಿಯೊಬ್ಬರು 'ನಾನು ಅಂದವಾಗಿ ಕಾಣಬೇಕು' ಎಂದು ಆಸೆ ಪಡುವುದು ಸಹಜ. ಅಂದವಾಗಿ ಕಾಣಿಸಲು ಡ್ರೆಸ್ಸಿಂಗ್ ಚೆನ್ನಾಗಿರಬೇಕು, ಮೇಕಪ್ ಮಾಡಬೇಕು ಇವೆಲ್ಲಾ ನಿಜ. ಆದರೆ ಇವೆಲ್ಲಾಕ್ಕಿಂತ ಹೆಚ್ಚಾಗಿ ತ್ವಚೆ ಅಕರ್ಷಕವಾಗಿರಬೇಕು. ತ್ವಚೆ ಕಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಜೀವನ ಶೈಲಿ ಕೂಡ ಪ್ರಮುಖವಾದ ಅಂಶವಾಗಿರುತ್ತದೆ.

ಕಾಂತಿಯುತ ಹಾಗೂ ಮೊಡವೆ ರಹಿತ ತ್ವಚೆ ಪಡೆಯಲು ಅತ್ಯಂತ ಸರಳ ಮದ್ದನ್ನು ಬಯಸುತ್ತಿರುವವರು ನೀವಾಗಿದ್ದೀರಾ? ಹಾಗಿದ್ದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದನ್ನು ಅಳವಡಿಸಿಕೊಂಡರೆ ನಿಮಗೆ ಬೇಕಾಗಿರುವುದನ್ನು ಪಡೆಯಬಹುದು.

ನಿಮ್ಮ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಿದೆಯಾ? ಆದರೆ ಇದು ಮಹಿಳೆಯರಿಗೆ ನಿರೀಕ್ಷಿತ. ಸಾಮಾನ್ಯವಾಗಿ ಅವರು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋಗುತ್ತಾರೆ ಮತ್ತು ಮದ್ದಿಗೆ ಲೆಕ್ಕವಿಲ್ಲದಷ್ಟು ಹಣ ವ್ಯಯಿಸುತ್ತಾರೆ. ಮೊಡವೆ ಮುಕ್ತ ತ್ವಚೆಗೆ ನೀವು ಕೆಲವೊಂದು ಸರಳ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಹಣ ಉಳಿಸಬಹುದು. ಮೊಡವೆ ಸಮಸ್ಯೆಯನ್ನು ಮನೆಯಲ್ಲೇ ನಿವಾರಿಸಲು ಇಲ್ಲಿ ಕೆಲವೊಂದು ಉಪಯುಕ್ತ ವಿಧಾನಗಳಿವೆ.

Top Remedies For Acne Free Skin

ಹದಿಹರೆಯದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ!

ಆಗಾಗ ಮುಖ ತೊಳೆಯಿರಿ
ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ತೈಲ ಗ್ರಂಥಿಗಳು ಹೆಚ್ಚು ಕೆಲಸ ಮಾಡುವ ಪರಿಣಾಮ ನಿಮ್ಮ ಮುಖದಲ್ಲಿ ಎಣ್ಣೆಯಾಂಶ ಕಂಡುಬರಬಹುದು. ಇದು ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಮೊದಲ ಕಾರಣ. ಯಾವುದಾದರೂ ಒಳ್ಳೆಯ ಕ್ಲೀನ್ಸರ್ ನಿಂದ ಮುಖವನ್ನು ದಿನದಲ್ಲಿ ಎರಡು ಸಲವಾದರೂ ತೊಳೆಯಿರಿ. ಒಮ್ಮೆ ತೊಳೆದರೂ ಇದು ಕೆಲಸ ಮಾಡಬಹುದು. ದಿನದಲ್ಲಿ ಎಷ್ಟು ಸಲ ಮುಖ ತೊಳೆಯಬೇಕೆಂದು ನೀವು ನೋಡಲು ಪ್ರಯತ್ನಿಸಿ.

ಮೇಕಪ್ ತೆಗೆಯಿರಿ
ಸುಂದರವಾಗಿ ಕಾಣಿಸಿಕೊಳ್ಳಲು ಮಹಿಳೆಯರು ಮೇಕಪ್ ಮೊರೆ ಹೋಗುವುದು ಹೊಸತೇನಲ್ಲ. ಇದನ್ನು ಸರಿಯಾದ ರೀತಿ ನಿಭಾಯಿಸದಿದ್ದರೆ ಆಗ ಮೊಡವೆ ಉಂಟಾಗಬಹುದು. ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹೀಗೆ ಮಾಡದಿದ್ದರೆ ನೀವು ಉದ್ದೇಶಪೂರ್ವಕವಾಗಿ ಮುಖದಲ್ಲಿ ಮೊಡವೆಗಳನ್ನು ಆಹ್ವಾನಿಸುತ್ತಿದ್ದೀರಿ.

ದಯವಿಟ್ಟು ಧೂಮಪಾನ ನಿಲ್ಲಿಸಿ
ಹೌದು. ನಿಮಗೆ ನಾನು ಹೇಳುವುದು ಕೇಳಿದೆ. ಮೊಡವೆಯಿಂದ ಮುಕ್ತರಾಗಬೇಕಾದರೆ ನೀವು ಧೂಮಪಾನ ತ್ಯಜಿಸಲೇಬೇಕು. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವುದು ಮಾತ್ರವಲ್ಲದೆ ಮೊಡವೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಾಲನ್ನು ಕುಡಿಯಿರಿ
ಒಂದು ಲೋಟ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ, ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.

ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ.

ತ್ವಚೆಯಲ್ಲಿ ಮೊಡವೆಗಳಿಲ್ಲದೆ ನೀವು ಜನರ ಮಧ್ಯೆ ತುಂಬಾ ಆತ್ಮವಿಶ್ವಾಸದಿಂದ ತಿರುಗಾಡಲು ಇದು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಸಲಹೆಗಳು. ಇಲ್ಲಿ ನೀಡಲಾಗಿರುವ ಕೆಲವೊಂದು ಸಲಹೆಗಳನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುತ್ತಾರೆ. ಯಾಕೆಂದರೆ ಅವರಿಗೆ ಇದರಿಂದ ಹೆಚ್ಚು ಪರಿಣಾಮವಾಗುವುದಿಲ್ಲವೆಂದು ಭಾವಿಸುತ್ತಾರೆ. ಹೀಗಿದ್ದರೆ ಅದು ತಪ್ಪು. ಈ ಸಲಹೆಗಳನ್ನು ಪಾಲಿಸಿದರೆ ಬೇಸಿಗೆ ಕಾಲದಲ್ಲಿ ನೀವು ಮೊಡವೆ ಮುಕ್ತ ತ್ವಚೆ ಪಡೆಯಬಹುದು.

English summary

Top Remedies For Acne Free Skin

Are you among those who are anxiously looking for some simple remedies so that you could have a glowing and acne free skin? Then look no further and just go through this post till the end. You will get what you want.
Story first published: Monday, September 1, 2014, 12:01 [IST]
X
Desktop Bottom Promotion