For Quick Alerts
ALLOW NOTIFICATIONS  
For Daily Alerts

ಮೊಡವೆಗಳನ್ನು ನಿವಾರಿಸಲು ಇರುವ ಅತ್ಯುತ್ತಮವಾದ 20 ಉಪಾಯಗಳು

|

ಮೊಡವೆಗಳು ಯಾರಿಗೆ ತಾನೇ ಬಂದಿಲ್ಲ. ಎಲ್ಲರಿಗು ಒಂದಲ್ಲ ಒಂದು ಬಾರಿ ಮೊಡವೆಗಳು ಕಾಡುತ್ತಲೇ ಇರುತ್ತವೆ. ಇದರ ಬಗ್ಗೆ ಹಲವಾರು ಮೂಢನಂಬಿಕೆಗಳು ಜನಸಾಮಾನ್ಯರಲ್ಲಿ ಮನೆಮಾಡಿದೆ. ಇದು ಬರಲು ಇರುವ ಕಾರಣಗಳು ಅತ್ಯಂತ ಸರಳವಾಗಿರುತ್ತದೆ. ಕೂದಲಿನ ಒಳಗಿರುವ ಫಾಲಿಕಲ್ ಹಾಗು ಸೆಬಸಿಯಸ್ ಗ್ಲ್ಯಾಂಡ್‍ಗಳು ದೊಡ್ಡದಾದಾಗ ಮತ್ತು ಸತ್ತ ಚರ್ಮದ ಕೋಶ ಹಾಗು ಅಧಿಕ ಸೆಬುಮ್‍ನಿಂದಾಗಿ ಮೊಡವೆಗಳು ಉಂಟಾಗುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಪ್ರೊಪಿಯನ್ ಬ್ಯಾಕ್ಟೀರಿಯಂ ಎಂಬ ಮೊಡವೆ ಕಾರಕ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದರಿಂದಾಗಿ ಬಾವುಗಳು ಉಂಟಾಗುತ್ತವೆ. ಈ ಬಾವುಗಳು ಮೊಡವೆಗಳು ಕೆಂಪಗೆ ಕಾಣುವಂತೆ ಮಾಡುತ್ತದೆ ಹಾಗು ಕೀವು ತುಂಬಿಕೊಳ್ಳುವಂತೆ ಸಹ ಮಾಡುತ್ತದೆ.

ಹದಿ ಹರೆಯದ ವಯಸ್ಸಿನಲ್ಲಿ ಮೊಡವೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಆಂಡ್ರೊಜೆನ್ ಹಾರ್ಮೋನ್‍ಗಳು, ಟೆಸ್ಟೊಸ್ಟೆರೋನ್, ಡಿಹೈಡ್ರೋಸ್ಟೊಸ್ಟೆರೋನ್( DHT) ಮತ್ತು ಡಿಹೈಡ್ರೋಪಿಯಂಡ್ರೊಸ್ಟೆರೋನ್ ಸಲ್ಫೇಟ್ ಹಾರ್ಮೋನುಗಳು ಹೆಣ್ಣು - ಗಂಡು ಇಬ್ಬರಲ್ಲೂ ಅಧಿಕವಾಗಿದ್ದಾಗ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಈ ಹಾರ್ಮೋನುಗಳು ನಮ್ಮ ದೇಹದಲ್ಲಿ ಸೆಬಸಿಯಸ್ ಗ್ಲ್ಯಾಂಡ್‍ಗಳಲ್ಲಿ ಸೆಬುಮ್ ಹೊರ ಬರುವಂತೆ ಮಾಡುತ್ತವೆ. ಹಾಗಾದರೆ ಈ ಸೌಂದರ್ಯ ನಾಶಕಗಳನ್ನು ಹೋಗಲಾಡಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ, ಇಲ್ಲಿದೆ ನೋಡಿ ಕೆಲವು ಪರಿಹಾರಗಳು

ಮೂಸ೦ಬಿ ಹಣ್ಣಿನಿ೦ದ ತ್ವಚೆ ಹಾಗೂ ಕೇಶರಾಶಿಗಾಗುವ ಲಾಭಗಳು

ನಿಮ್ಮ ತ್ವಚೆಯ ಬಗ್ಗೆ ಗಮನಹರಿಸಿ

ನಿಮ್ಮ ತ್ವಚೆಯ ಬಗ್ಗೆ ಗಮನಹರಿಸಿ

ನಿಮ್ಮ ಮುಖವನ್ನು ಪ್ರತಿದಿನವು ನಿಂಬೆ ಹಣ್ಣಿನ ಫೇಸ್ ವಾಶ್ ಮತ್ತು ನೀರನ್ನು ಬಳಸಿ ಚೆನ್ನಾಗಿ ತೊಳೆಯಿರಿ. ಮುಖವನ್ನು ತೊಳೆದ ನಂತರ ಮೊಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಎಕ್ಸ್ ಫೋಲಿಯೇಟ್ ಮಾಡಿ. ಅದು ನಿಮಗೆ ಅಗತ್ಯವಿದೆ ಎಂದು ತೋರಿದಲ್ಲಿ ಮಾತ್ರ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆ ಕ್ಯೂ ಟಿಪ್ ಅನ್ನು ಬೆರೆಸಿ, ಮೊಡವೆ ಇರುವ ಜಾಗಕ್ಕೆ ಹಚ್ಚಿ. ಹತ್ತು ನಿಮಿಷ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿ. ಆದರೆ ನಿಮ್ಮ ತ್ವಚೆಯಲ್ಲಿ ತುರಿಕೆ ಅಥವಾ ಅಧಿಕ ಎಣ್ಣೆಯಂಶ ಇದ್ದರೆ ಇದನ್ನು ಮಾಡಬೇಡಿ.

ನಿಂಬೆ ರಸ

ನಿಂಬೆ ರಸ

ಒಂದು ನಿಂಬೆ ಹಣ್ಣನ್ನು ಕತ್ತರಿಸಿ ತೆಗೆದುಕೊಳ್ಳಿ. ಅದರ ರಸ ಇರುವ ಭಾಗವನ್ನು ಮೊಡವೆಗಳಿರುವ ಭಾಗದ ಮೇಲೆ ಉಜ್ಜಿ. ಒಂದು ವೇಳೆ ಉರಿಯಾದರೆ, ಚಿಂತಿಸಬೇಡಿ. ಅದರರ್ಥ ನಿಮ್ಮ ಮದ್ದು ಕೆಲಸ ಮಾಡುತ್ತಿದೆ ಎಂದರ್ಥ. ಏಕೆಂದರೆ ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ಅದು ಮೊಡವೆಗಳನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಂದು ಹಾಕುತ್ತದೆ. ಆದರೆ ಇದನ್ನು ನಿಮ್ಮ ಮದ್ದಾಗಿ ಪ್ರಯೋಗಿಸಿದಾಗ ಸನ್ ಸ್ಕಿನ್ ಲೋಷನ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಏಕೆಂದರೆ ನಿಂಬೆ ಹಣ್ಣು ಸೂರ್ಯನ ಕಿರಣಗಳು ನಿಮ್ಮ ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುವಂತೆ ಮಾಡಲು ಪ್ರೋತ್ಸಾಹಿಸುತ್ತದೆ.

ಕಚ್ಛಾ ಆಲೂಗಡ್ಡೆ

ಕಚ್ಛಾ ಆಲೂಗಡ್ಡೆ

ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಉಂಟಾಗಿರುವ ಭಾಗದಲ್ಲಿ ಇಡಿ. ಆಲೂಗಡ್ಡೆಯಲ್ಲಿ ಮೊಡವೆಗಳನ್ನು ನಿವಾರಿಸುವ ಅಂಶಗಳು ಒಳಗೊಂಡಿದೆ- ಈಗಾಗಿ ಇದು ಮೊಡವೆಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ಆಲೂಗಡ್ಡೆಯನ್ನು 5-10 ನಿಮಿಷಗಳ ಕಾಲ ಮೊಡವೆಗಳಿರುವ ಭಾಗದಲ್ಲಿ ಇಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆಯು ಅತ್ಯುತ್ತಮವಾದ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಒಳಗೊಂಡಿದೆ. ಇದು ಮೊಡವೆಗಳನ್ನಷ್ಟೇ ಅಲ್ಲದೆ ಅದರಿಂದ ಉಂಟಾಗುವ ಕಲೆಗಳನ್ನು ಸಹ ನಿವಾರಿಸುತ್ತದೆ.

ಅಸ್ಪಿರಿನ್

ಅಸ್ಪಿರಿನ್

ಎರಡು ಅಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳಿ. ಅದನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ. ನಂತರ ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ. ಇವುಗಳಲ್ಲಿರುವ ಸ್ಯಾಲಿಸಿಕ್ ಆಮ್ಲವು ಮೊಡವೆಗಳ ಮೇಲೆ ಸಮರ್ಥವಾಗಿ ಹೋರಾಡುತ್ತವೆ.

ಅಲುಮ್ (ಒಂದು ಬಗೆಯ ಖನಿಜಯುಕ್ತ ಉಪ್ಪು)

ಅಲುಮ್ (ಒಂದು ಬಗೆಯ ಖನಿಜಯುಕ್ತ ಉಪ್ಪು)

ಇದೊಂದು ಸ್ವಾಭಾವಿಕ ನಂಜು ನಿವಾರಕ. ಇದು ಮೊಡವೆಗಳನ್ನು ಹೋಗಲಾಡಿಸುತ್ತದೆ. ಆದರೆ ಎಚ್ಚರವಿರಲಿ, ಇದನ್ನು ಅತಿಯಾಗಿ ಬಳಸಿದರೆ ಮೊಡವೆಗಳು ಹೆಚ್ಚಾಗುತ್ತವೆ.

ಸೇಬು ಹಣ್ಣಿನ ಸಿಡೆರ್ ವಿನೆಗರ್

ಸೇಬು ಹಣ್ಣಿನ ಸಿಡೆರ್ ವಿನೆಗರ್

ಸೇಬು ಹಣ್ಣಿನ ಸಿಡೆರ್ ವಿನೆಗರ್ ನಿಮ್ಮ ತ್ವಚೆಯಲ್ಲಿರುವ ಸತ್ತ ಚರ್ಮದ ಜೀವಕೋಶಗಳನ್ನು ಹೋಗಲಾಡಿಸುತ್ತದೆ. ಆದರೆ ಇದನ್ನು ಆದಷ್ಟು ಕಡಿಮೆಯಾಗಿ ಬಳಸಿ, ಏಕೆಂದರೆ ಅತಿಯಾದರೆ ಅಮೃತವು ವಿಷವಾಗುತ್ತದೆ. ಇದನ್ನು ಮುಖಕ್ಕೆ ಹಚ್ಚುವ ಮೊದಲು ನೀರಿನಲ್ಲಿ ಬೆರೆಸಿ ಹಚ್ಚಿ. ಹತ್ತು ನಿಮಿಷ ಬಿಡಿ, ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಟೂಥ್‍ಪೇಸ್ಟ್

ಟೂಥ್‍ಪೇಸ್ಟ್

ಟೂಥ್‍ಪೇಸ್ಟ್ ಇರುವುದು ಹಲ್ಲುಜ್ಜಲೊ? ಅಥವಾ ಮೊಡವೆಗಳನ್ನು ಉಜ್ಜಲೋ? ಎಂದು ಪ್ರಶ್ನಿಸುತ್ತೀರಾ?. ಇರಲಿ, ಟೂಥ್‍ಪೇಸ್ಟ್ ನಲ್ಲಿ ಸಿಲಿಕ ಇದ್ದು, ಅದು ನಿಮ್ಮ ತ್ವಚೆಗೆ ಮೊಯಿಶ್ಚರೈಸರಿನಂತೆ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದು ಮೊಡವೆಗಳನ್ನು ನಿವಾರಿಸುತ್ತದೆ.ಆದರೆ ಸೋಡಿಯಂ ಲಾರೈಲ್ ಸಲ್ಫೇಟ್ ಇರುವ ಟೂಥ್‍ಪೇಸ್ಟನ್ನು ಬಳಸುವುದನ್ನು ನಿಯಂತ್ರಿಸಿ, ಏಕೆಂದರೆ ಇದು ನಿಮ್ಮ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.

ಮಂಜುಗಡ್ಡೆ

ಮಂಜುಗಡ್ಡೆ

ಉರಿಬಾವುಗಳನ್ನು ಮತ್ತು ಮೊಡವೆಗಳನ್ನು ನಿವಾರಿಸಲು ಮಂಜುಗಡ್ಡೆಗಳು ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ. ಇವುಗಳು ರಕ್ತನಾಳಗಳನ್ನು ಸಂಕುಚನಗೊಳಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ಜೇನು ತುಪ್ಪ

ಜೇನು ತುಪ್ಪ

ಇದೊಂದು ಅತ್ಯುತ್ತಮವಾದ ಸ್ವಾಭಾವಿಕ ಮೊಡವೆ ನಿವಾರಕ. ಮೊಡವೆ ಇರುವ ಭಾಗಕ್ಕೆ ಜೇನು ತುಪ್ಪವನ್ನು ಹಚ್ಚಿ, ರಾತ್ರಿಯೆಲ್ಲ ಹಾಗೆಯೇ ಬಿಡಿ. ಬೆಳಗ್ಗೆ ತಣ್ಣೀರಿನಲ್ಲಿ ಇದನ್ನು ತೊಳೆಯಿರಿ. ನಿಮಗೆ ಬೇಕಾದಲ್ಲಿ ಜೇನುತುಪ್ಪವನ್ನು ಫೇಶಿಯಲ್ ಮಾಸ್ಕ್ ರೀತಿ ಸಹ ಬಳಸಬಹುದು.

ಬ್ರೌನ್ ಶುಗರ್

ಬ್ರೌನ್ ಶುಗರ್

ಬ್ರೌನ್ ಶುಗರ್ ಒಮ್ದು ಅತ್ಯುತ್ತಮವಾದ ಫೇಶಿಯಲ್ ಸ್ಕ್ರಬ್. ಇದು ನಿಮ್ಮ ತ್ವಚೆಯಲ್ಲಿರುವ ಅಧಿಕ ಜಿಡ್ಡಿನಂಶವನ್ನು ನಿವಾರಿಸುತ್ತದೆ ಹಾಗು ಮೊಡವೆಗಳುಂಟಾಗುವುದನ್ನು ತಡೆಯುತ್ತದೆ. ಈ ಸ್ಕ್ರಬ್ ಅನ್ನು ತಿಂಗಳಿಗೆ ಎರಡು- ಮೂರು ಬಾರಿ ಬಳಸಿ

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯ ಬಿಳಿಯ ಭಾಗವನ್ನು ನಿಮ್ಮ ಮುಖದ ಮೇಲೆ ಹಚ್ಚಿ; ಇದು ನಿಮ್ಮ ಮುಖದಲ್ಲಿರುವ ಹೆಚ್ಚಿನ ಜಿಡ್ಡಿನಂಶವನ್ನು ನಿವಾರಿಸಿ ಮೊಡವೆಗಳುಂಟಾಗದಂತೆ ತಡೆಯುತ್ತದೆ. ಇದಕ್ಕಾಗಿ ನೀವು ಮೊಟ್ಟೆಯ ಹಳದಿ ಭಾಗವನ್ನು ಸಹ ಬಳಸಬಹುದು. ಏಕೆಂದರೆ ಇದು ಬ್ಯಾಕ್ಟೀರಿಯಾಗಳುಂ ಬೆಳವಣಿಗೆಯಾಗದಂತೆ ತಡೆಯುತ್ತದೆ. ಮೊಟ್ಟೆಯ ಲೋಳೆಯನ್ನು ಮುಖಕ್ಕೆ ಹಚ್ಚಿ, 15-20 ನಿಮಿಷ ಬಿಡಿ. ನಂತರ ತೊಳೆಯಿರಿ, ಹೀಗೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಎರಡು ಬೆಳ್ಳುಳ್ಳಿಗಳನ್ನು ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ, ಹತ್ತು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಈ ಕೋಟನ್ನು ನಿಮ್ಮ ಮುಖಕ್ಕೆ ಹಚ್ಚಿ, 15-20 ನಿಮಿಷ ಬಿಡಿ. ಇದು ನಿಮ್ಮ ಮುಖದಲ್ಲಿ ಉರಿಯನ್ನುಂಟು ಮಾಡಬಹುದು, ಆದರೂ ತಡೆದುಕೊಳ್ಳಿ.

ಪುದಿನಾ

ಪುದಿನಾ

ಪುದಿನಾ ಎಣ್ಣೆ ಅಥವಾ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆಯಿರಿ.

ಹೋಮಿಯೋಪತಿ

ಹೋಮಿಯೋಪತಿ

ಹೋಮಿಯೋಪತಿ ಚಿಕಿತ್ಸೆಯನ್ನು ಪಡೆಯುವುದರಿಂದ ಮೊಡವೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇದಕ್ಕೆ ಪರಿಣತರ ನೆರವನ್ನು ಪಡೆಯುವುದು ಒಳ್ಳೆಯದು.

ಜೇನು ತುಪ್ಪ, ಚಕ್ಕೆ ಮತ್ತು ನಟ್‍ಮೆಗ್

ಜೇನು ತುಪ್ಪ, ಚಕ್ಕೆ ಮತ್ತು ನಟ್‍ಮೆಗ್

ಜೇನು ತುಪ್ಪ, ಚಕ್ಕೆ ಮತ್ತು ನಟ್‍ಮೆಗ್ ಮೂರನ್ನು ಬೆರೆಸಿ ಒಂದು ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 1-2 ಗಂಟೆಗಳ ಕಾಲ ಬಿಡಿ. ನಂತರ ಮೊಡವೆಗಳ ಗಾತ್ರ ಚಿಕ್ಕದಾಗುವುದನ್ನು ನೀವೇ ನೋಡಬಹುದು. ಇದನ್ನು ಪೇಶಿಯಲ್ ಮಾಸ್ಕ್ ಆಗಿ ಸಹ ಬಳಸಬಹುದು. ಇದನ್ನು ಮುಖಕ್ಕೆ ಹಚ್ಚಿ, ಹತ್ತು ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಪಥ್ಯ

ಪಥ್ಯ

ಅತಿಯಾದ ಎಣ್ಣೆ, ಹಿಟ್ಟಿನ ಪದಾರ್ಥ, ಸಕ್ಕರೆಗಲನ್ನು ನಿಯಂತ್ರಿಸಿ. ಅದರ ಬದಲಿಗೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಏಕೆಂದರೆ ಇವುಗಳಲ್ಲಿ ವಿಟಮಿನ್ ಮತ್ತು ಖನಿಜಗಳು ಯಥೇಚ್ಛವಾಗಿರುತ್ತದೆ. ಇದು ನಿಮ್ಮ ತ್ವಚೆಯಲ್ಲಿ ತಾಜಾತನವನ್ನು ಕಾಪಾಡುತ್ತದೆ ಹಾಗು ಯಾವುದೇ ನ್ಯೂನತೆಗಳು ಉಂಟಾಗದಂತೆ ಕಾಪಾಡುತ್ತದೆ. ಜೊತೆಗೆ ನಿಮ್ಮ ದೇಹವನ್ನು ವಿಷಕಾರಕ ಅಂಶಗಳಿಂದ ಮುಕ್ತವಾಗಿಡಲು ಯಥೇಚ್ಛವಾಗಿ ನೀರನ್ನು ಕುಡಿಯಿರಿ.

ವ್ಯಾಯಾಮ

ವ್ಯಾಯಾಮ

ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಅಧಿಕಗೊಳ್ಳುತ್ತದೆ. ಇದು ನಿಮ್ಮ ದೇಹದಲ್ಲಿರುವ ಮೊಡವೆಗಳನ್ನು ಮತ್ತು ಉರಿಯೂತಗಳನ್ನು ನಿವಾರಿಸುತ್ತದೆ.

ಮಲ್ಟಿ ವಿಟಮಿನ್‍ಗಳು

ಮಲ್ಟಿ ವಿಟಮಿನ್‍ಗಳು

ಪ್ರತಿದಿನ ತಪ್ಪದೇ ನಿಮ್ಮ ಆಹಾರದಲ್ಲಿ ಮಲ್ಟಿ ವಿಟಮಿನ್‍ಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಅದರಲ್ಲೂ ವಿಟಮಿನ್ ಎ ಯನ್ನು ತಪ್ಪದೆ ತೆಗೆದುಕೊಳ್ಳಿ. ಈ ಸಮೃದ್ಧ ವಿಟಮಿ ನಿಮ್ಮ ತ್ವಚೆಗೆ ಅಗತ್ಯವಾದ ಆರೋಗ್ಯವನ್ನು ನೀಡುತ್ತದೆ. ಇದು ತ್ವಚೆಯಲ್ಲಿರುವ ಸುಕ್ಕನ್ನು, ಕಲೆಗಳನ್ನು ನಿವಾರಿಸುತ್ತದೆ.ಇದಕ್ಕಾಗಿ ನಿಮ್ಮ ವೈಧ್ಯರನ್ನು ಕಂಡು ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಉತ್ತಮ.

English summary

Top 20 best ways to treat pimples

Pimples are common in teenagers, due to the high production of androgen hormones, testosterone, dihydrotestosterone (DHT) and dehydroepiandrosterone sulfate in both sexes. These hormones cause a raised output of sebum by the Sebaceous Glands
X
Desktop Bottom Promotion