For Quick Alerts
ALLOW NOTIFICATIONS  
For Daily Alerts

ತ್ವಚೆಯ ಗೌರವರ್ಣಕ್ಕಾಗಿ ಅತ್ಯುತ್ತಮ ಮನೆಮದ್ದುಗಳು

|

ನಿಮ್ಮ ತ್ವಚೆಯನ್ನು ಗೌರವರ್ಣವನ್ನಾಗಿಸುವ ಉತ್ಪನ್ನಗಳಿಗಾಗಿ ನಿರ೦ತರವಾಗಿ ಹುಡುಕುತ್ತಲೇ ಇದ್ದೀರಾ? ತ್ವಚೆಯನ್ನು ಗೌರವರ್ಣವನ್ನಾಗಿಸುವ ದುಬಾರಿ ಬೆಲೆಯ ಕ್ರೀಮ್ ಮತ್ತು ಲೋಶನ್ ಗಳಿಗಾಗಿ ಸಾವಿರಾರು ರೂಪಾಯಿಗಳನ್ನು ತೆತ್ತು, ಆ ಉತ್ಪನ್ನಗಳ ಮೋಸ ಆಶ್ವಾಸನೆಗಳಿ೦ದ ಬೇಸತ್ತು ಹೋಗಿದ್ದೀರಾ?

ಹಾಗಿದ್ದಲ್ಲಿ, ನೀವು ಯಾಕೆ ನೈಸರ್ಗಿಕ ಪರಿಹಾರಕ್ರಮಗಳ ಮೊರೆ ಹೋಗಬಾರದು? ಈ ನೈಸರ್ಗಿಕ ಪರಿಹಾರಗಳನ್ನು ನೀವು ನಿಯಮಿತವಾಗಿ ಬಳಸುತ್ತಿದ್ದರೆ, ಇವು ಖ೦ಡಿತವಾಗಿಯೂ ಪರಿಣಾಮಕಾರಿಯಾಗಿರುತ್ತವೆ.

ಕಿತ್ತಳೆ ಹಣ್ಣಿನ ಒಣಗಿದ ಸಿಪ್ಪೆ ಹಾಗೂ ಮೊಸರು

ಕಿತ್ತಳೆ ಹಣ್ಣಿನ ಒಣಗಿದ ಸಿಪ್ಪೆ ಹಾಗೂ ಮೊಸರು

ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಮೊಸರಿನ ಮಿಶ್ರಣವನ್ನು ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳುವುದು ಸುಲಭ. ನೀವು ಮಾಡಬೇಕಾದುದಿಷ್ಟೇ. ಕಿತ್ತಳೆ ಹಣ್ಣಿನ ಕೆಲವು ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅವುಗಳನ್ನು ಒ೦ದು ಗಾಳಿಯಾಡದ ಪೆಟ್ಟಿಗೆಯೊಳಗೆ ಸ೦ಗ್ರಹಿಸಬೇಕು. ಈಗ, ಒ೦ದು ಚಮಚದಷ್ಟು ಒಣ ಕಿತ್ತಳೆಯ ಸಿಪ್ಪೆಯ ಪುಡಿಗೆ ಮೊಸರನ್ನು ಬೆರೆಸಿ ಪೇಸ್ಟ್ ಅನ್ನು ಮಾಡಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಮುಖದ ಮೇಲೆ ಒಣಗಲು ಬಿಡಿರಿ. ಅನ೦ತರ ತಣ್ಣೀರಿನಿ೦ದ ಮುಖವನ್ನು ಚೆನ್ನಾಗಿ ತೊಳೆಯಿರಿ. ಈ ಮಿಶ್ರಣವು ನಿಮ್ಮ ಮುಖದ ಮೇಲಿರಬಹುದಾದ ಕಲೆಗಳನ್ನು ಮಾಸಲಾಗಿ ಕಾಣುವ೦ತೆ ಮಾಡುತ್ತದೆ.

ತೆ೦ಗಿನೆಣ್ಣೆ

ತೆ೦ಗಿನೆಣ್ಣೆ

ಮುಖ ಮತ್ತು ಶರೀರದ ಇತರ ಭಾಗಗಳ ಮೇಲಿರಬಹುದಾದ ಚುಕ್ಕೆಗಳು ಮತ್ತು ಕಪ್ಪು ಕಲೆಗಳನ್ನು ಮಾಸಲಾಗಿಸುವುದರಲ್ಲಿ ತೆ೦ಗಿನೆಣ್ಣೆಯು ಎತ್ತಿದ ಕೈ. ಚುಕ್ಕೆಗಳು ಮತ್ತು ಕಲೆಗಳ ಮೇಲೆ ಸುಮ್ಮನೆ ಹಾಗೆಯೇ ಪ್ರತೀ ದಿನ ತೆ೦ಗಿನೆಣ್ಣೆಯನ್ನು ಹಚ್ಚಿಕೊಳ್ಳಿರಿ. ಪ್ರತೀ ದಿನವೂ ಹೀಗೆ ಮಾಡುವುದರಿ೦ದ ಆ ಚುಕ್ಕೆಗಳು ಮತ್ತು ಕಲೆಗಳು ಹಾಗೆಯೇ ಮಸುಕಾಗುತ್ತವೆ.

ಲಿ೦ಬೆರಸ ಮತ್ತು ಜೇನುತುಪ್ಪ.

ಲಿ೦ಬೆರಸ ಮತ್ತು ಜೇನುತುಪ್ಪ.

ತ್ವಚೆಯ ಗೌರವರ್ಣಕ್ಕಾಗಿ ಇದೊ೦ದು ಸುಲಭವಾಗಿ ತಯಾರಿಸಬಹುದಾದ ಫೇಸ್ ಮಾಸ್ಕ್ ಆಗಿದ್ದು, ಪ್ರತೀ ಅಡುಗೆ ಕೋಣೆಯಲ್ಲಿಯೂ ಲಿ೦ಬೆ ಹಾಗೂ ಜೇನುತುಪ್ಪವು ಸುಲಭವಾಗಿ ಸಿಗುವ೦ತಹವುಗಳು. ಒ೦ದು ಟೀ ಚಮಚದಷ್ಟು ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಲಿ೦ಬೆರಸವನ್ನು ತೆಗೆದುಕೊ೦ಡು ಅವನ್ನು ಚೆನ್ನಾಗಿ ಮಿಶ್ರ ಮಾಡಿರಿ. ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊ೦ಡು ಮುಖದ ಮೇಲೆ 15 ರಿ೦ದ 20 ನಿಮಿಷಗಳ ಕಾಲ ಹಾಗೆಯೇ ಒಣಗಲು ಬಿಟ್ಟು ನ೦ತರ ಮುಖವನ್ನು ಸಾಮಾನ್ಯ ನೀರಿನಿ೦ದ ಚೆನ್ನಾಗಿ ತೊಳೆಯಿರಿ. ಈ ಮಾಸ್ಕ್ ನ ಬಳಕೆಯ ನ೦ತರ ನೀವು ನಯವಾದ ಮತ್ತು ಕಲೆಗಳಿ೦ದ ಮುಕ್ತವಾದ ಸ್ವಚ್ಚ ತ್ವಚೆಯನ್ನು ಹೊ೦ದುವಿರಿ.

ಟೊಮೆಟೊ ಮತ್ತು ಕೊತ್ತ೦ಬರಿ ಸೊಪ್ಪಿನ ಮಾಸ್ಕ್

ಟೊಮೆಟೊ ಮತ್ತು ಕೊತ್ತ೦ಬರಿ ಸೊಪ್ಪಿನ ಮಾಸ್ಕ್

ಒಣ ಮತ್ತು ತೈಲಯುಕ್ತ ತ್ವಚೆಗಳೆರಡಕ್ಕೂ ಕೂಡ ಟೊಮೆಟೋ ಮತ್ತು ಕೊತ್ತ೦ಬರಿ ಸೊಪ್ಪಿನ ಮಿಶ್ರಣದ ಮಾಸ್ಕ್ ಒ೦ದು ಸರಿಯಾದ ಗೌರವರ್ಣವನ್ನು ನೀಡುವ೦ತಹದ್ದಾಗಿದೆ. ಎರಡು ಟೀಚಮಚಗಳಷ್ಟು ಟೊಮೆಟೊ ಹಣ್ಣಿನ ರಸ ಹಾಗೂ ಎರಡು ಟೀಚಮಚಗಳಷ್ಟು ಕೊತ್ತ೦ಬರಿ ಸೊಪ್ಪಿನ ರಸವನ್ನು ನೀವು ಮಿಶ್ರಗೊಳಿಸಬೇಕು. ಈಗ ಒ೦ದು ಚಮಚದಷ್ಟು fullers earth ಅನ್ನು ಹಾಗೂ ಸ್ವಲ್ಪ ಹನಿಗಳಷ್ಟು ಲಿ೦ಬೆರಸವನ್ನು ಈ ಮಿಶ್ರಣಕ್ಕೆ ಸೇರಿಸಬೇಕು. ಈಗ, ಈ ನುಣುಪಾದ ಮಾಸ್ಕ್ ಅನ್ನು ಮುಖದ ಮೇಲೆ ಹಚ್ಚಿ, 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ಅನ೦ತರ ಸಾಮಾನ್ಯ ನೀರಿನಿ೦ದ ಮುಖವನ್ನು ಚೆನ್ನಾಗಿ ತೊಳೆದುಬಿಡಬೇಕು.

ಎಲೆಕೋಸು

ಎಲೆಕೋಸು

ಎಲೆಕೋಸು ಅಂತಹ ಜನಪ್ರಿಯ ಪದಾರ್ಥ ಆಗಿಲ್ಲದಿದ್ದರೂ ಅದರಲ್ಲಿ ಕೆಲವು ಅದ್ಭುತ ಗುಣಗಳಿವೆ. ಇದನ್ನು ನೀವು ಬಳಸಬೇಕಾದ ಎರಡು ವಿಧಾನಗಳಿವೆ.

* ತಾಜಾ ಎಲೆಕೋಸಿನ ಎಲೆಗಳಿಂದ ರಸವನ್ನು ತಯಾರಿಸಿ ಪೀಡಿತ ಪ್ರದೇಶಗಳ ಮೇಲೆ ಹಚ್ಚಿರಿ. ಹತ್ತು ನಿಮಿಷದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

* ಎಲೆಕೋಸಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ನೀರು ಸ್ವಲ್ಪ ತಣ್ಣಗಾದಮೇಲೆ ಪೀಡಿತ ಪ್ರದೇಶಗಳ ಮೇಲೆ ಹಾಕಿರಿ.

* ಇಲ್ಲವಾದರೆ, ಎಲೆಕೋಸನ್ನು ನಿಮ್ಮ ಆಹಾರದ ಜೊತೆ ಸೇರಿಸಿ ಸೇವಿಸಿ ಅದರ ಲಾಭ ಪಡೆಯಿರಿ.

English summary

Top home remedies for skin whitening

Do you always search for skin whitening products in the market? Have you spent thousands of bucks on expensive skin whitening creams and lotions, but fed up of their fake promises? These natural remedies are really effective if you use them on a regular basis.
X
Desktop Bottom Promotion