For Quick Alerts
ALLOW NOTIFICATIONS  
For Daily Alerts

ಸ್ವಾಭಾವಿಕವಾಗಿ ಗುಲಾಬಿ ಕೆನ್ನೆಯನ್ನು ಪಡೆಯುವುದು ಹೇಗೆ?

|

ಗುಲಾಬಿ ಬಣ್ಣದ ಗಲ್ಲಗಳಿರಬೇಕೆಂದು ಪ್ರತಿಯೊಂದು ಹುಡುಗಿಯರ ಕನಸಾಗಿರುತ್ತದೆ. ನೀವು ಹೆಚ್ಚು ಕಾಂತಿಯುತವಾಗಿ ಕಾಣಬಯಸುತ್ತೀರಿ. ಸುಂದರವಾದ ಗುಲಾಬಿ ಬಣ್ಣದ ಗಲ್ಲಗಳಿಂದ ಮಹಿಳೆಯ ಮುಖವು ಮಿಂಚಿನಂತೆ ಹೊಳೆಯುತ್ತದೆ ಮತ್ತು ಅವಳ ಉತ್ತಮ ಆರೋಗ್ಯ ಹಾಗೂ ಒಳ ಕಾಂತಿಯನ್ನು ಪ್ರತಿಬಿಂಬಿಸುತ್ತದೆ. ತರಕಾರಿಗಳು ಮತ್ತು ಹಣ್ಣುಗಳ ಸಹಾಯದಿಂದ ನಿಮ್ಮ ಚರ್ಮವನ್ನು ಮೃದುಗೊಳಿಸಿ ಗುಲಾಬಿ ಬಣ್ಣದ ಗಲ್ಲವಿರುವ ಮುಖವನ್ನು ಪಡೆಯಬಹುದು.

ನಿಮಗೆ ನೈಸರ್ಗಿಕವಾಗಿ ಗುಲಾಬಿಬಣ್ಣದ ಗಲ್ಲಬೇಕಾದಿದ್ದಲ್ಲಿ ಇಲ್ಲಿ ಕೊಟ್ಟರುವ ಸಲಹೆಗಳನ್ನು ಪಾಲಿಸಬೇಕು. ಇಲ್ಲಿ ನಿಮಗೆ ಕೆಲವು ಸರಳವಾದ ತಂತ್ರಗಳು ಮತ್ತು ಸಲಹೆಗಳನ್ನು ಕೊಟ್ಟಿದ್ದೇವೆ. ಗುಲಾಬಿಯಂತಹ ಗಲ್ಲವನ್ನು ಹೊಂದಲು ಅತ್ಯುತ್ತಮ ನೈಸರ್ಗಿಕ ಸೂತ್ರಗಳು

ಬಿಳಿ ಕೂದಲನ್ನು ಮರೆಮಾಚಲು 5 ನೈಸರ್ಗಿಕ ವಿಧಾನಗಳು

ವಾಲ್‌ನಟ್ಸ್ ಮತ್ತು ಗುಲಾಬಿ ಹೂವಿನ ದಳಗಳು

ವಾಲ್‌ನಟ್ಸ್ ಮತ್ತು ಗುಲಾಬಿ ಹೂವಿನ ದಳಗಳು

ಕೆಲವು ವಾಲ್‌ನಟ್ಸ್‌ಗಳನ್ನು ತೆಗೆದುಕೊಂಡು ಪುಡಿಮಾಡಿ ಗುಲಾಬಿ ಹೂವಿನ ದಳಗಳು ಮತ್ತು ಜೇನು ತುಪ್ಪವನ್ನು ಬೆರಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಫ್ರಿಡ್ಜಿನಲ್ಲಿ ಸುಮಾರು ಒಂದು ವಾರದವರೆಗೂ ಕೆಡದಂತೆ ಇಟ್ಟಿರಬಹುದು. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು ಸ್ವಲ್ಪ ಸಮಯದ ನಂತರ ಚೆನ್ನಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆದುಕೊಳ್ಳಿ. ಗುಲಾಬಿ ಹೂವಿನ ದಳದ ಸಹಾಯದಿಂದ ನಿಮ್ಮ ಗಲ್ಲಕ್ಕೆ ಗುಲಾಬಿಯಂತಹ ವಿನ್ಯಾಸ ಮತ್ತು ಬಣ್ಣವನ್ನು ನಿಖರವಾಗಿ ತರುತ್ತದೆ. ಈ ರೀತಿ ಒಂದು ವಾರದ ಬಳಕೆಯ ನಂತರ ನಿಮ್ಮ ಗಲ್ಲವು ಗುಲಾಬಿಬಣ್ಣಕ್ಕೆ ತಿರುಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಚೆನ್ನಾಗಿ ಜಜ್ಜಿದ ಬಾಳೆಹಣ್ಣಿನಿಂದ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖದಮೇಲೆ ಲೇಪಿಸಿಕೊಳ್ಳಿ. 20 ನಿಮಿಷಗಳ ಬಳಿಕ ಅದನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖವು ಕೆಂಪು ಗುಲಾಬಿ ಬಣ್ಣವುಳ್ಳ ಕಾಂತಿಯಿಂದ ಶೋಭಿಸುತ್ತದೆ.

ಮಸಾಜ್ ಮಾಡುವುದು

ಮಸಾಜ್ ಮಾಡುವುದು

ನಿಮ್ಮ ಮುಖದಮೇಲಿನ ಚರ್ಮಕ್ಕೆ ಹೊಳಪನ್ನು ತರಲು ಅದರಡಿಯಲ್ಲಿ ರಕ್ತಸಂಚಾರ ಸಹಕಾರಿಯಾಗಿದೆ. ಸರಿಯಾಗಿ ವೃತಾಕಾರದಲ್ಲಿ ಮುಖದ ಭಾಗದ ಮೇಲೆ ಮಸಾಜ್ ಮಾಡಿದರೆ ರಕ್ತಸಂಚಾರ ವೃದ್ಧಿಯಾಗಿ ಕೆಲವೇ ದಿನಗಳಲ್ಲಿ ಚರ್ಮವು ಗುಲಾಬಿ ಬಣ್ಣಕ್ಕೆ ತರಲು ಸಾಧ್ಯವಾಗುತ್ತದೆ. ಈ ರೀತಿ ಮಾಡುವುದನ್ನು ಮುಂದುವರಿಸಿದರೆ ನೀವು ಸೂಕ್ತ ಲಾಭಗಳನ್ನು ಪಡೆಯಬಹುದು. ಮುಖಕ್ಕೆ ಲೇಪಿಸುವ ಮಸಾಜ್ ಕ್ರೀಮ್ ಬಳಸಿಕೊಂಡು ನಿಮ್ಮ ಮುಖಕ್ಕೆ ಮಸಾಜ್ ಮಾಡಲೂ ಬಹುದು.

ಮೊಟ್ಟೆಯ ಬಿಳಿ ಅಂಶ ಮತ್ತು ಜೇನುತುಪ್ಪ

ಮೊಟ್ಟೆಯ ಬಿಳಿ ಅಂಶ ಮತ್ತು ಜೇನುತುಪ್ಪ

ಒಂದು ಸ್ಪೂನ್ ತುಂಬ ಸಾವಯವ (Organic) ಜೇನುತುಪ್ಪದ ಜೊತೆ ಮೊಟ್ಟೆಯ ಬಿಳಿ ಅಂಶವನ್ನು ಚೆನ್ನಾಗಿ ತಿರುಚಿ ಮಾಡಿದ ಮಿಶ್ರಣವನ್ನು ನಿಮ್ಮ ಮುಖಕ್ಕೆ ಉಜ್ಜಿ ಲೇಪಿಸಿ. ಕನಿಷ್ಟಪಕ್ಷ 10 ನಿಮಿಷಗಳಕಾಲ ಈ ಮುಖವಾಡವನ್ನು ಹಾಗೇ ಇಟ್ಟ ನಂತರ ಬೆಚ್ಚಗಿನ ನೀರಲ್ಲಿ ಮೃದುವಾಗಿ ತೊಳೆದು ನೋಡಿ ನಿಮ್ಮ ಮುಖದ ಚರ್ಮ ಎಷ್ಟು ಕಾಂತಿಯುತವಾಗಿರುವುದೆಂದು?

ನಿಂಬೆ ಮತ್ತು ಸೌತೆಕಾಯಿಗಳ ರಸದ ಮಿಶ್ರಣ

ನಿಂಬೆ ಮತ್ತು ಸೌತೆಕಾಯಿಗಳ ರಸದ ಮಿಶ್ರಣ

ನಿಂಬೆ ರಸ ಮತ್ತು ಸೌತೆಕಾಯಿ ರಸ, ಇವೆರಡನ್ನು ಜೇನುತುಪ್ಪದ ಜೊತೆ ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಲ್ಲಿ ತೊಳೆದರೆ ನಿಮ್ಮ ಕೆನ್ನೆಗಳು ಗುಲಾಬಿಯ ಕಾಂತಿಯಿಂದ ಹೊಳೆಯುತ್ತದೆ.

ಮಸೂರ್ ಬೇಳೆ

ಮಸೂರ್ ಬೇಳೆ

ಹಸಿ ಹಾಲಿನಲ್ಲಿ ಸ್ವಲ್ಪ ಮಸೂರ್ ಬೇಳೆಯನ್ನು 30 ನಿಮಿಷ ನೆನೆಸಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಕಾಯೊಲಿನ್ ಪುಡಿಯನ್ನು ಚೆನ್ನಾಗಿ ಬೆರಸಿ ಮಾಡಿದ ಪೇಸ್ಟನ್ನು ನಿಮ್ಮ ಮುಖದ ಮೇಲೆ ಹರಡಿ 20 ನಿಮಿಷ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಚೆನ್ನಾಗಿ ತೊಳೆದು ನಿಮ್ಮ ಮುಖ ಗುಲಾಬಿಹೂವಿನಂತೆ ಹೊಳೆಯುವುದನ್ನು ನೋಡಿ.

ಕಡಲೆಹಿಟ್ಟು ಮತ್ತು ಹಾಲಿನ ಕೆನೆ

ಕಡಲೆಹಿಟ್ಟು ಮತ್ತು ಹಾಲಿನ ಕೆನೆ

2-3 ಟೀ ಚಮಚ ಕಡಲೆ ಹಿಟ್ಟು, ಒಂದು ಸ್ಪೂನ್ ಹಾಲಿನ ಕೆನೆ, 3 ಟೀ ಚಮಚ ಗೋಧಿ ಹೊಟ್ಟು ಮತ್ತು 3 ಟೀ ಚಮಚ ಮೊಸರು ಇವೆಲ್ಲನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಹರಡಿ 15 ನಿಮಿಷಗಳಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ನಿಮ್ಮ ಮುಖದ ಚರ್ಮ ಮೃದುವಾಗಿ ಹೊಳೆಯುತ್ತಿರುವುದನ್ನು ಗಮನಿಸಿ.

ಕಿತ್ತಳೆಹಣ್ಣಿನ ಸಿಪ್ಪೆಪುಡಿ

ಕಿತ್ತಳೆಹಣ್ಣಿನ ಸಿಪ್ಪೆಪುಡಿ

ಕಿತ್ತಳೆಹಣ್ಣಿನ ಸಿಪ್ಪೆಪುಡಿ ಜೊತೆ ಹಸಿ ಹಾಲು ಅಥವ ಕೆನೆಯ ಜೊತೆ ಪೇಸ್ಟಿನಂತೆ ಮಿಶ್ರಣಮಾಡಿ ನಿಮ್ಮ ಕೆನ್ನೆಗಳಮೇಲೆ ಚೆನ್ನಾಗಿ ಹರಡಿ. ಸ್ವಲ್ಪಸಮಯದ ನಂತರ ಬೆಚ್ಚಗಿನನೀರಿನಲ್ಲಿ ತೊಳೆಯಿರಿ. ಹೀಗೆ ನಿಯಮಿತವಾಗಿ ಬಳಸಿದರೆ ನಿಮಗೆ ಸುಂದರವಾಗಿ ಕಾಣುವ ಕೆನ್ನೆಗಳನ್ನು ಪಡೆಯಲು ಸಹಾಯವಾಗುತ್ತದೆ. ಇದರ ಜೊತೆ ನೈಸರ್ಗಿಕವಾಗಿ ನಿಮಗೆ ಗುಲಾಬಿಯಂತಹ ಕೆನ್ನೆಗಳು ಬರಲು ವಿಟಮಿನ್ ಇ ಮತ್ತು ವಿಟಮಿನ್ ಸಿ ಇರುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಲು ಮರೆಯಬೇಡಿ.

ಸಕ್ಕರೆ ಹರಳುಗಳು

ಸಕ್ಕರೆ ಹರಳುಗಳು

ನಿಮ್ಮ ನಿಮ್ಮ ಕೆನ್ನೆಗಳನ್ನು ಒದ್ದೆಮಾಡಿಕೊಂಡು ಒದ್ದೆಯ ಕೆನ್ನೆಗಳಮೇಲೆ ಸಕ್ಕರೆ ಹರಳುಗಳಿಂದ ಮಸಾಜ್ ಮಾಡಿದರೆ ನೈಸರ್ಗಿಕವಾಗಿ ಗುಲಾಬಿ ಕೆನ್ನೆಗಳು ಬರಲು ಸಾಧ್ಯವಾಗುತ್ತದೆ. ಗುಲಾಬಿ ಗಲ್ಲ ಪಡೆಯಲು ಈ ಸೌಂದರ್ಯ ಸಲಹೆಯನ್ನು ವಾರಕ್ಕೊಮ್ಮೆ ಪ್ರಯತ್ನಿಸಿ.

ಮುಖದ ಚರ್ಮವನ್ನು ಶುದ್ಧಿಮಾಡುವುದು (Exfoliate)

ಮುಖದ ಚರ್ಮವನ್ನು ಶುದ್ಧಿಮಾಡುವುದು (Exfoliate)

ಮಳಿಗೆಗಳಿಂದ ಎಕ್ಸ್ಫಾಲಿಯೇಟ್ ಮಾಡುವ ಮುಖವಾಡಗಳು ತಂದು ನಿಮ್ಮ ಮುಖದ ಮೇಲೆ ನಿಯಮಿತವಾಗಿ ಬಳಸಿದರೆ ಒಳ್ಳೆಯ ಪರಿಣಾಮ ಬೀರುವುದು. ಇಲ್ಲದಿದ್ದರೆ ನಿಮ್ಮದ್ದೇ ಆದ ಮುಖವಾಡವನ್ನು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕೆ ಬೇಯಿಸದ ಓಟ್ಸ್ ಮೀಲ್ ಮತ್ತು ಹಸಿ ಹಾಲನ್ನು ಬಳಸಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖದ ಮೇಲೆ ಬಳೆದು ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಚೆನ್ನಾಗಿ ತೊಳೆದರೆ ನಿಮ್ಮ ಮುಖಚರ್ಮದಲ್ಲಿ ಜೀವಂತ ಕೋಶಗಳನ್ನು ಮುಚ್ಚಿಕೊಂಡಿದ್ದ ಸತ್ತ ಜೀವಕೋಶಗಳು ನಿರ್ಮೂಲವಾಗಿ ಮತ್ತೆ ಗುಲಾಬಿಯಂತಹ ಕಾಂತಿ ತರುತ್ತದೆ.

ಟೊಮೇಟೊ

ಟೊಮೇಟೊ

ಟೊಮೇಟೊ ಹಣ್ಣು ವಿರೋಧಿ ಆಕ್ಸಿಡೆಂಟ್‌ ಭರಿತವಾಗಿದೆ. ತಾರುಣ್ಯದ ಚರ್ಮದಲ್ಲಿ ಅತಿ ಕಡಿಮೆ ಸುಕ್ಕುಗಳಿರಬೇಕೆಂದರೆ 2 ಟೊಮೇಟೊ ಜೂಸ್, 2 ಕಪ್ ನೀರು ಮತ್ತು 2 ಟೀ ಚಮಚ ಸಾವಯುವ ಜೇನುತುಪ್ಪ ಬೆರಸಿ ಕುಡಿಯಿರಿ. ಈ ಮಿಶ್ರಣವನ್ನು ಬೆಳಗ್ಗೆ ಎದ್ದನಂತರ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ನಿಮ್ಮ ಬ್ರೇಕ್ಫಾಸ್ಟನ್ನು 30 - 40 ನಿಮಿಷಗಳವರೆಗೆ ತೆಗೆದುಕೊಳ್ಳಬೇಡಿ. ಈ ಕ್ರಮವನ್ನು ನಿಯಮಿತವಾಗಿ ಮಾಡಿದರೆ ಚರ್ಮದ ತಾರುಣ್ಯ ಕಾಪಾಡಿಕೊಳ್ಳಬಹುದು.

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿದು ನಿಮ್ಮ ದೇಹದಲ್ಲಿನ ಜಲಾಂಶವನ್ನು ಕಾಪಾಡಿಕೊಳ್ಳಿ. ಅಪಾಯಕಾರಿ ಜೀವಾಣುಗಳನ್ನು ತೊಡೆದುಹಾಕಲು ಆಹಾರದ ಜೊತೆ 6 - 8 ಗ್ಲಾಸ್ ನಷ್ಟು ನೀರನ್ನು ಕುಡಿದು ನಿಮ್ಮ ಶರೀರದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ನೀರಿನಿಂದ ನಿಮ್ಮ ತುಟಿಗಳು ಮತ್ತು ಬಾಯಿಯು ತೇವದಿಂದ ಕೂಡಿರುವುದಕ್ಕೆ ಸಹಾಯಮಾಡುತ್ತದೆ.


English summary

Tips to Get Rosy Cheeks Naturally

Rosy cheeks are a girl’s dreams! It makes you more gorgeous.Beautiful, rosy cheeks light up a woman’s face and reflect good health and inner radiance Here are some simple tricks and tips to get rosy cheeks. Best Natural Tips To Get Rosy Cheek:
X
Desktop Bottom Promotion