For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ಕಂಡು ಬರುವ ಬಿಳಿ ಚುಕ್ಕಿಗಳನ್ನು ನಿವಾರಿಸುವುದು ಹೇಗೆ?

|

ಒತ್ತಡದಿಂದ ಕೂಡಿದ ಬಿಡುವಿಲ್ಲದ ಜೀವನಶೈಲಿ, ಪರಿಸರ ಮಾಲಿನ್ಯ ಮತ್ತು ಅಸಮತೋಲನ ಹಾಗು ಅನಾರೋಗ್ಯಕಾರಿ ಆಹಾರ ಪದ್ಧತಿಗಳು ನಿಮ್ಮ ತ್ವಚೆಯನ್ನು ಮಂಕಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ನಾವು ಇಲ್ಲಿ ನೀಡಿರುವ ಸುಲಭವಾದ ತ್ವಚೆಯ ಮಾಸ್ಕ್‌ಗಳನ್ನು ಉಪಯೋಗಿಸಿ ನೋಡಿ.

ಮುಖದ ಹೊಳಪು ಹೆಚ್ಚಿಸಿಕೊಳ್ಳಲು ಕೆಮಿಕಲ್ ಮೊರೆ ಹೋಗುವ ಬದಲು ನೈಸರ್ಗಿಕ ದಾರಿ ಹಿಡಿದರೆ ಒಳ್ಳೆಯದು. ನೈಸರ್ಗಿಕ ವಿಧಾನ ಒಂದೇ ರಾತ್ರಿಯಲ್ಲಿ ಫಲಿತಾಂಶ ನೀಡದಿದ್ದರೂ ಉತ್ತಮ ಫಲಿತಾಂಶವಂತೂ ಗ್ಯಾರಂಟಿ. ಈ ವಿಧಾನವನ್ನು ನಿರಂತರವಾಗಿ ಅನುಸರಿಸಿದರೆ ಕೆಲವೇ ವಾರಗಳಲ್ಲಿ ಬದಲಾವಣೆಯನ್ನು ನೀವೇ ಕಂಡುಕೊಳ್ಳುತ್ತೀರ.

Tips to Get Rid Of White Spots On face

ಸೌತೆಕಾಯಿ ಫೇಸ್ ಮಾಸ್ಕ್:
ಸೌತೆಕಾಯಿಯನ್ನು ಸೌಂದರ್ಯವರ್ಧಕವಾಗಿ ಬಳಸುವುದು ಸಾಮಾನ್ಯ. ಇದು ಮುಖದ ಕಾಂತಿ ಹೆಚ್ಚಿಸುವುದು. ಇದರ ಮತ್ತೊಂದು ವಿಶೇಷವೆಂದರೆ ಎಲ್ಲಾ ರೀತಿಯ ತ್ವಚೆಯವರು ಸೌತೆಕಾಯಿ ಫೇಸ್ ಮಾಸ್ಕ್ ಬಳಸಬಹುದು.

ಸ್ಟ್ರಾಬರಿ ಫೇಸ್ ಮಾಸ್ಕ್:
ಸ್ಟ್ರಾಬರಿಯನ್ನು ಪೇಸ್ಟ್ ಮಾಡಿ ಅದಕ್ಕೆ ಆಲೀವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು.

ನಿಂಬೆ ಹಣ್ಣು ಮತ್ತು ಮೊಸರಿನ ಮಾಸ್ಕ್:
ಸ್ವಲ್ಪ ಮೊಸರಿಗೆ 2-3 ಹನಿ ನಿಂಬೆರಸ ಹಾಕಿ ದಿನವೂ ಮುಖಕ್ಕೆ ಹಚ್ಚ ಒಳ್ಳೆಯದು. ಮುಖವನ್ನು ಕಡೆ ಹಿಟ್ಟಿನಿಂದ ತೊಳೆದರೆ ತ್ವಚೆಗೆ ಮತ್ತಷ್ಟು ಒಳ್ಳೆಯದು.

ಟೊಮೆಟೊ ಮಾಸ್ಕ್:
ಟೊಮೆಟೊ ಜ್ಯೂಸ್ ಅನ್ನು ದಿನವೂ 15 ನಿಮಿಷ ಮುಖಕ್ಕೆ ಹಚ್ಚುವುದು ಕಲೆಗಳು ಕಡಿಮೆಯಾಗುವುದು ಮತ್ತು ಬಿಸಿಲಿಗೆ ತ್ವಚೆ ಬೇಗನೆ ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.

ಪಪ್ಪಾಯಿ ಫೇಸ್ ಮಾಸ್ಕ್:
ಒಂದು ಬಟ್ಟಲಿಗೆ ಪಪ್ಪಾಯಿ ತುಂಡುಗಳನ್ನು ಹಾಕಿ, ಅದನ್ನು ಹಿಸುಕಿ ಪೇಸ್ಟ್ ರೀತಿ ಮಾಡಿ. ಈಗ 1 ಚಮಚ ಗಂಧದ ಪುಡಿ ಅಥವಾ ಮುಲ್ತಾನಿ ಮಿಟಿ ಸೇರಿಸಿ, ನಂತರ 1 ಚಮಚ ಜೇನು ಸೇರಿಸಿ. ಈಗ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಫೇಸ್ ಮಾಸ್ಕ್ ರೆಡಿ. ಫೇಸ್ ಮಾಸ್ಕ್ ರೆಡಿಯಾದ ನಂತರ ನಿಮ್ಮ ಮುಖವನ್ನು ಫೇಸ್ ಮಾಸ್ಕ್ ಮಾಡಲು ರೆಡಿ ಮಾಡಿ. ಅದಕ್ಕಾಗಿ ನೀವು ಮಾಡಬೇಕಾದದು,ಮುಖವನ್ನು ತೊಳೆದು ಟವಲ್ ನಿಂದ ಮೆಲ್ಲನೆ ಒರೆಸಿ ಇನ್ನು ಫೇಸ್ ಮಾಸ್ಕ್ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ವಿಧಾನ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

ಮಾವು ಮೊಸರಿನ ಫೇಸ್ ಮಾಸ್ಕ್:
ಸೂರ್ಯನಿಂದ ಉಂಟಾಗುವ ಕಂದುಬಣ್ಣವನ್ನು ತೆಗೆಯಲು ಈ ಫೇಶಿಯಲ್ ಅನ್ನು ದಿನವೂ ಹಚ್ಚ ಬಹುದು ಅಥವಾ ವಾರಕ್ಕೆ ಮೂರು ಬಾರಿಯಾದರೂ ಬಳಸಬಹುದು. ಒಂದು ಮಾವನ್ನು ಹಿಸುಕಿ, 1 ಚಿಕ್ಕ ಚಮಚ ಮೊಸರು ಹಾಗೂ ನಿಂಬೆ ರಸಗಳನ್ನು ಚನ್ನಾಗಿ ಬೆರೆಸಿ,ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ. ನೀವು ಇದನ್ನು ತೋಳು ಹಾಗೂ ಇತರೆ ಹೊರ ತೆರೆಯಲ್ಪಟ್ಟ ಚರ್ಮದ ಕಂದು ಬಣ್ಣ ನಿವಾರಣೆಗಾಗಿ ಬಳಸಬಹುದು. ಈ ಬೇಸಿಗೆ ಹಣ್ಣಿನ ಮುಖವಾಡವನ್ನು ಸುಮಾರು 15 ನಿಮಿಷಗಳವರೆಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು.

ಆಲೂ ಸ್ಕ್ರಬ್:
ಆಲೂಗಡ್ಡೆ ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಅನ್ನು ಮಾಸ್ಕ್ ಆಗಿಯೂ ಬಳಸಬಹುದು.

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:
ಈ ಸಂಯೋಜನೆಯು ಸ್ವಲ್ಪ ವಿಲಕ್ಷಣದಂತೆ ಕಂಡರೂ ತ್ವಚೆಯ ಮೇಲೆ ಪವಾಡವನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕ್ಯಾರೆಟ್ ಎರಡೂ ಚರ್ಮದ ಬಿಗಿಗೊಳಿಸುವ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಈ ಪ್ಯಾಕ್ ಅನ್ನು ಒಂದು ಬಾಳೆಹಣ್ಣು ಮತ್ತು ಒಂದು ಕ್ಯಾರೆಟ್ ಪೇಸ್ಟ್ ಮಾಡಿ ತಯಾರಿಸಿ. ಈ ಪೇಸ್ಟ್ ಅನ್ನು ಚೆನ್ನಾಗಿ ಮಿಶ್ರಣಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷವರೆಗೆ ಹಾಗೆಯೇ ಇಟ್ಟು ನಂತರ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೊಟ್ಟೆಯಲ್ಲಿನ ಲೋಳೆ ಅಂಶ:
ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ಅನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ಅನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ.

ನಿಂಬೆ ಮತ್ತು ಮುಲ್ತಾನಿ ಮಣ್ಣಿನ ಪ್ಯಾಕ್:
ಎರಡು ಚಮಚಗಳಷ್ಟು ಮುಲ್ತಾನಿ ಮಣ್ಣು ಮತ್ತು ಒಂದು ಚಮಚದಷ್ಟು ನಿಂಬೆರಸವನ್ನು ತೆಗೆದುಕೊಂಡು ಚನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಸರಿಯಾಗಿ ಮುಖ್ದ ತುಣ್ಬೆಲಾ ಲೇಪಿಸಿಕೊಳ್ಳಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಎಣ್ಣೆಯುಕ್ತ ತ್ವಚೆಯವರಿಗೆ ಇದು ಅತ್ಯುತ್ತಮ ಫೇಸ್ ಪ್ಯಾಕ್.

X
Desktop Bottom Promotion