For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಹುಡುಗರಿಗಾಗಿ ತ್ವಚೆ ಆರೈಕೆಯ ಸೂಪರ್ ಟಿಪ್ಸ್

|

ಹದಿಹರೆಯಲ್ಲಿ ನಿಮ್ಮ ದೇಹದಲ್ಲಿ ಹಲವಾರು ರೀತಿಯ ಆಂತರಿಕ ಮತ್ತು ಬಾಹ್ಯ ಬದಲಾವಣೆಗಳು ಆಗುತ್ತದೆ. ಹದಿಹರೆಯದ ಈ ಸಮಯದಲ್ಲಿ ಸಾಮಾನ್ಯವಾಗಿ ಮೊಡವೆ ಮತ್ತು ಇತರ ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹದಿಹರೆಯದ ಹೆಚ್ಚಿನ ಹುಡುಗರು ಹೊರಾಂಗಣ ಚಟುವಟಿಕೆ ಮತ್ತು ಒತ್ತಡದ ಶಾಲಾ ವೇಳಾಪಟ್ಟಿಯಲ್ಲಿ ಮಗ್ನರಾಗಿರುತ್ತಾರೆ.

ಇದರಿಂದಾಗಿ ಹೊರಗಿನ ಮಾಲಿನ್ಯ ಮತ್ತು ಸೂರ್ಯನ ನೇರ ಪ್ರಭಾವಕ್ಕೆ ತ್ವಚೆ ಒಳಪಡುತ್ತದೆ. ದೇಹದಲ್ಲಿ ಬದಲಾವಣೆಗಳಾಗುತ್ತಿರುವ ಕಾರಣ ತ್ವಚೆಯಲ್ಲಾಗುವ ಬದಲಾವಣೆಗಳನ್ನು ನಿಯಮಿತವಾಗಿ ಗಮನಿಸಬೇಕು ಮತ್ತು ಇದಕ್ಕೆ ಸರಿಯಾದ ಸಲಹೆ ಪಡೆಯಬೇಕು.

ಕ್ಷಿಪ್ರಗತಿಯಲ್ಲಿ ಬೆಳೆಯುವ ಹದಿಹರೆಯದ ಯುವಕರಿಗೆ ಹೆಚ್ಚಿನ ಮಟ್ಟದ ಪೌಷ್ಠಿಕಾಂಶದ ಅಗತ್ಯವಿರುತ್ತದೆ. ಹದಿಹರೆಯದ ಯುವಕರಿಗೆ ಇತರರಿಗಿಂತ ಹೆಚ್ಚಿನ ಮಟ್ಟದ ವಿಟಮಿನ್, ಪ್ರೋಟೀನ್ ಮತ್ತು ಅತ್ಯಗತ್ಯ ಕೊಬ್ಬು ಬೇಕಾಗುತ್ತದೆ. ನಿಮ್ಮ ಬೆಳವಣಿಗೆಯ ಹಾರ್ಮೋನ್ ಗಳು ಈ ಆಹಾರಕ್ಕಾಗಿ ಹಪಹಪಿಸುತ್ತಾ ಇರುತ್ತದೆ.

ಯಾವುದೇ ಪೋಷಕಾಂಶಗಳ ಕೊರತೆಯು ಅನಾರೋಗ್ಯಕ್ಕೆ ಕಾರಣವಾಗಬಹುದು. ಅದಲ್ಲೂ ಕೆಲವು ತ್ವಚೆಯ ಮೇಲೆ ಪರಿಣಾಮ ಬೀರಬಹುದು. ಹರಿಹರೆಯದ ಹುಡುಗರಲ್ಲಿ ಸಾಮಾನ್ಯವಾಗಿ ಮೊಡವೆಗಳ ಹೆಚ್ಚಾಗಿ ಕಂಡುಬರುತ್ತದೆ. ಹೊರಾಂಗಣ ಚಟುವಟಿಕೆಗಳಾದ ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಒಳಗೊಳ್ಳುವ ಕಾರಣ ಹೆಚ್ಚಾಗಿ ಬೆವರು ಸುರಿಸುವುದರಿಂದ ಹೆಚ್ಚಿನ ನೀರನ್ನು ಸೇವಿಸಬೇಕಾಗುತ್ತದೆ.

ಹದಿಹರೆಯದ ಹುಡುಗರ ತ್ವಚೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಬದಲಾವಣಿಗಳು ಸಮಸ್ಯೆಯಲ್ಲ. ಕೆಲವು ಪ್ರಾಕೃತಿಕ ಬದಲಾವಣೆಗಳು. ಹದಿಹರೆಯದವರ ದೇಹದಲ್ಲಿ ಹೆಚ್ಚಿನ ಹಾರ್ಮೋನ್ ಬದಲಾವಣಿಗಳಾಗುತ್ತದೆ. ನಿಮ್ಮ ಮನೆಯ ಹಿರಿಯರು ಅಥವಾ ವೈದ್ಯರನ್ನು ಭೇಟಿಯಾಗಿ ಅವರಿಂದ ಅಗತ್ಯವಾದ ಸಲಹೆಗಳನ್ನು ಪಡೆಯಿರಿ.

ಕೆಲವೊಮ್ಮೆ ತ್ವಚೆಯಲ್ಲಿ ತುರಿಕೆ ಅಥವಾ ಚಿಹ್ನೆಗಳು ಕಾಣಿಸಿಕೊಳ್ಳುವುದು ಅಲರ್ಜಿಯಿಂದ ಆಗಿರಬಹುದು. ಇದಕ್ಕೆ ವಯಸ್ಸು ಅಥವಾ ಹಾರ್ಮೋನ್ ಕಾರಣವಲ್ಲ. ಆರೋಗ್ಯಕರ ಆಹಾರ ಕ್ರಮ ಮತ್ತು ಸರಿಯಾದ ಫಿಟ್ ನೆಸ್ ನಿಂದ ತ್ವಚೆಯನ್ನು ಆರೋಗ್ಯ ಮತ್ತು ಕಾಂತಿಯುತವಾಗಿಡಬಹುದು. ಹದಿಹರೆಯದ ಹುಡುಗರಿಗೆ ತ್ವಚೆ ಆರೈಕೆಗೆ ಕೆಲವೊಂದು ಟಿಪ್ಸ್ ಗಳು

ತ್ವಚೆಯನ್ನು ಅರಿತುಕೊಳ್ಳಿ

ತ್ವಚೆಯನ್ನು ಅರಿತುಕೊಳ್ಳಿ

ತ್ವಚೆ ಆರೈಕೆಯ ಉತ್ಪನ್ನಗಳು ಮತ್ತು ಮನೆ ಮದ್ದು ಮಾಡುವ ಮೊದಲು ನಿಮ್ಮ ತ್ವಚೆ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಿ. ಎಣ್ಣೆಯುಕ್ತ ಚರ್ಮವನ್ನು ಕೇವಲ ಸೋಪ್ ಹಾಕಿ ತೊಳೆದರೆ ಆಗದು. ಎಣ್ಣೆಯಾಂಶವನ್ನು ತೆಗೆಯಲು ಗಾಢ ಕ್ಲೀನರ್ ಗಳೊಂದಿಗೆ ಸ್ಕ್ರಬ್ ಬಳಸಿ ಮತ್ತು ಎಣ್ಣೆಯಾಂಶವಿರುವ ತ್ವಚೆಗೆ ಅಂಟಿಕೊಂಡಿರುವ ಕಲ್ಮಶಗಳನ್ನು ಸ್ಕ್ರಬ್ ಮಾಡಿ.

ತ್ವಚೆಗೆ ಎಸ್ ಪಿಎಫ್ ಮಾಡಿ

ತ್ವಚೆಗೆ ಎಸ್ ಪಿಎಫ್ ಮಾಡಿ

ಹದಿಹರೆಯದ ಹುಡುಗನಾಗಿರುವ ಕಾರಣ ಶಾಲಾ ಸಮಯದ ಬಳಿಕ ಹೆಚ್ಚಿನ ಸಮಯ ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳುತ್ತೀರಿ. ಇದರಿಂದ ನಿಮ್ಮ ತ್ವಚೆ ನೇರವಾಗಿ ಸೂರ್ಯನ ಶಾಖಕ್ಕೆ ಸಿಲುಕುತ್ತದೆ. ಇದಕ್ಕಾಗಿ ಎಸ್ ಪಿಎಫ್ ಹೊಂದಿರುವ ತ್ವಚೆಯ ಕ್ರೀಮ್ ನ್ನು ಅಳವಡಿಸಿ. ಬೆವರಿನಲ್ಲಿ ಕರಗಿ ಹೋಗದಿರುವಂತಹ ವಾಟರ್ ಪ್ರೂಫ್ ಕ್ರೀಮ್ ನ್ನು ಆಯ್ಕೆ ಮಾಡಿ.

ಹೆಚ್ಚು ನೀರನ್ನು ಕುಡಿಯಿರಿ

ಹೆಚ್ಚು ನೀರನ್ನು ಕುಡಿಯಿರಿ

ಹದಿಹರೆಯದ ಹುಡುಗರು ತಮ್ಮ ವ್ಯಸ್ತ ಚಟುವಟಿಕೆಗಳಲ್ಲಿ ಹೆಚ್ಚಾಗಿ ನೀರನ್ನು ಕುಡಿಯಲು ಮರೆಯುತ್ತಾರೆ. ಪ್ರಕೃತಿಯ ಅತ್ಯಂತ ಶಕ್ತಿಶಾಲಿ ನಿರ್ವಿಷಗೊಳಿಸುವಿಕೆ ಗುಣ ಹೊಂದಿರುವ ನೀರನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಬೆವರು ಹರಿಸಲು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ದೇಹ ಮತ್ತು ತ್ವಚೆಯಲ್ಲಿರುವ ಕಲ್ಮಶವನ್ನು ದೂರ ಮಾಡಲು ಇದು ನೆರವಾಗುತ್ತದೆ.

ಎಚ್ಚರಿಕೆಯಿಂದ ಮೊಡವೆ ಹಿಂಡಿ

ಎಚ್ಚರಿಕೆಯಿಂದ ಮೊಡವೆ ಹಿಂಡಿ

ಹದಿಹರೆಯದ ಹುಡುಗರ ಮುಖದಲ್ಲಿ ಗಾಯಗಳಾಗುವುದು ಸಾಮಾನ್ಯ. ಕೆಲವು ಸಲ ಯಾವುದೇ ಚಿಕಿತ್ಸೆ ಮಾಡಿದರೂ ಮುಖದ ಮೇಲೆ ಕಲೆಗಳನ್ನು ಹಾಗೆ ಉಳಿದುಕೊಳ್ಳುತ್ತದೆ. ನೀವು ಹಿಂಡಲು ಪ್ರಯತ್ನಿಸಿದರೆ ಉರಿಯೂತ ಮತ್ತು ಅದು ಉಂಟುಮಾಡುವ ಕಲೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವಚ್ಛ ಕೈಯಿಂದ ಹಿಂಡಿ ಮತ್ತು ಕ್ಲೀನರ್ ಗಳಿಂದ ಹಿಂಡಿದ ಭಾಗವನ್ನು ತೊಳೆಯಿರಿ.

ಮುಖಕ್ಕೆ ಮಾಸ್ಕ್ ಮತ್ತು ಹಣ್ಣಿನ ಫೇಶಿಯಲ್ ಹಾಕಿ

ಮುಖಕ್ಕೆ ಮಾಸ್ಕ್ ಮತ್ತು ಹಣ್ಣಿನ ಫೇಶಿಯಲ್ ಹಾಕಿ

ಫೇಶಿಯಲ್ ಮಾಸ್ಕ್ ಮತ್ತು ಹಣ್ಣಿನ ಸ್ಕ್ರಬ್ ವೇಳೆ ನೀವು ಹದಿಹರೆಯಕ್ಕಿಂತ ಹೆಚ್ಚಾಗಿ ಪುರುಷರಾಗಬೇಕಾಗುತ್ತದೆ. ಪಪ್ಪಾಯಿ, ಕಿತ್ತಾಳೆ ಸಿಪ್ಪೆ ಅಥವಾ ಸಾರ, ಬೆಣ್ಣೆ ಹಣ್ಣು, ಅನಾನಸ್ ಹಣ್ಣು, ಸ್ಟ್ರಾಬೆರಿ ಇತ್ಯಾದಿ ಹಣ್ಣುಗಳಿಗೆ ಜೇನುತುಪ್ಪವನ್ನು ಬಳಸಿಕೊಂಡು ಮನೆಯಲ್ಲೇ ಮಾಸ್ಕ್ ಮತ್ತು ಸ್ಕ್ರಬ್ ಮಾಡಿ. ಇದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿ ಕಾಣಿಸಿಕೊಳ್ಳಲು ನೆರವಾಗುತ್ತದೆ.

ಆಹಾರ ಕ್ರಮ

ಆಹಾರ ಕ್ರಮ

ಹದಿಹರೆಯದ ಹುಡುಗನಾಗಿ ಸರಿಯಾದ ಪೌಷ್ಠಿಕಾಂಶಗಳ ಆಹಾರ ಕ್ರಮ ಮತ್ತು ಅನಾರೋಗ್ಯಕರ ಎಣ್ಣೆಯಾಂಶಯುಳ್ಳ ಆಹಾರಗಳನ್ನು ಕಡೆಗಣಿಸಿ. ತರಕಾರಿ, ಹಣ್ಣು, ಬೀಜ, ಧಾನ್ಯ ಇತ್ಯಾದಿ ಪೌಷ್ಠಿಕಾಂಶಗಳಿರುವ ಆಹಾರಕ್ರಮ ಆಯ್ಕೆ ಮಾಡಿ. ಫಿಜ್ಜಾ ಮತ್ತು ಬರ್ಗರ್ ಗಳನ್ನು ನಿಯಮಿತವಾಗಿ ಸೇವಿಸುವ ಬದಲು ಹಣ್ಣು, ಬೀಜ ಮತ್ತು ಬೆಣ್ಣೆ ಹಣ್ಣು, ಡಾರ್ಕ್ ಬೆರ್ರಿ, ದ್ರಾಕ್ಷಿ, ಬೀಟ್ ರೂಟ್ ಗಳನ್ನು ತಿನ್ನಿ. ಇದರಿಂದ ನಿಮ್ಮ ತ್ವಚೆ ಪ್ರಾಕೃತಿಕವಾಗಿ ಕಾಂತಿಯುತವಾಗುತ್ತದೆ.

English summary

Super skin care tips for teenage boys

Sometimes rashes or other marks that occur could be due to allergic reaction than your age or hormones. You need to follow healthy diet and fitness regime to keep your skip healthy and glowing.Here are a few skin care tips for teenage boys.
Story first published: Monday, June 23, 2014, 15:44 [IST]
X
Desktop Bottom Promotion