For Quick Alerts
ALLOW NOTIFICATIONS  
For Daily Alerts

ಪುರುಷರ ಮೊಡವೆ ಹೋಗಿಸಲು ಪರಿಣಾಮಕಾರಿ ಫೇಸ್ ಪ್ಯಾಕ್

By Poornima heggade
|

ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪುರುಷರರಲ್ಲಿ ಮೊಡವೆ ಸಮಸ್ಯೆಗಳು, ಪರಿಸರ, ಜೀವನಶೈಲಿ ಮತ್ತು ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ. ಎಣ್ಣೆಯುಕ್ತ ಕೂದಲು ಮತ್ತು ತಲೆಹೊಟ್ಟು ತರುವಾಯ ನಿಮ್ಮ ಮುಖದ ಮೇಲೆ ಮೊಡವೆ ಬೆಳವಣಿಗೆಗೆ ಕಾರಣವಾಗುವ ಪ್ರಾಥಮಿಕ ಕಾರಣಗಳಾಗಿವೆ. ದೇಹದ ಒಳಗೆ ನಡೆಯುವ ಗ್ರಂಥಿಯಲ್ಲಿನ ಬದಲಾವಣೆಗಳು ಕೂಡ ಕೆಲವೊಮ್ಮೆ ಮೊಡವೆಗಳಿಗೆ ಕಾರಣವಾಗಬಹುದು. ಗ್ರಂಥಿಯಲ್ಲಿನ ಬದಲಾವಣೆಗಳು ಯೌವ್ವನ ಮತ್ತು ಹರೆಯದ ಹಂತದಲ್ಲಿ ಸಾಮಾನ್ಯವಾಗಿದೆ.

ಕಾಂತಿಯುತ ತ್ವಚೆಗಾಗಿ ಈ ಪಪ್ಪಾಯಿ ಫೇಸ್ ಮಾಸ್ಕ್

ನೀವು, ಮೊಡವೆಗೆ ಚಿಕಿತ್ಸೆ ನೀಡಲು ಮನೆಯಲ್ಲಿಯೇ ಸರಳ ಮತ್ತು ಪರಿಣಾಮಕಾರಿ ಮುಖದ ಮಾಸ್ಕ್ ಅನ್ನು ತಯಾರಿಸಬಹುದು. ಇದಕ್ಕೆ ಬೇಕಾಗುವ ಜೇನುತುಪ್ಪ, ಉಪ್ಪು , ಪಪ್ಪಾಯಿ ಇತ್ಯಾದಿ ಪದಾರ್ಥಗಳು, ಮನೆಯಲ್ಲಿ ಅಥವಾ ಸಮೀಪದ ಅಂಗಡಿಗಳಲ್ಲಿ ಲಭ್ಯವಿದೆ.

ಇಂತಹ ಸರಳ ನೈಸರ್ಗಿಕ ಪದಾರ್ಥಗಳನ್ನು ಮಿಶ್ರಣ ಮಾಡಿ, ಫೇಸ್ ಪ್ಯಾಕ್ ರೂಪಿಸಿ ಮೊಡವೆ ತಡೆಗಟ್ಟಲು ಬಳಸಬಹುದು. ಫೇಸ್ ಪ್ಯಾಕ್, ನಿಮ್ಮ ಮುಖದ ತೇವಾಂಶವನ್ನು ಕಾಪಾಡಲು ಮತ್ತು ಕಾಂತಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಮೊಡವೆಗಳೂ ಸಹ ಕ್ರಮೇಣ ನಿಮ್ಮ ಮುಖದಿಂದ ಮಾಯವಾಗುತ್ತವೆ. ಹಣ್ಣುಗಳು ಸಾಮಾನ್ಯವಾಗಿ ಮನೆಯಲ್ಲಿ ಮಾಡಬಹುದಾದ ಮುಖದ ಮಾಸ್ಕ್ಗಳಿಗೆ ಬಳಸಲಾಗುವ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಫೇಸ್ ಮಾಸ್ಕ್ ಪದಾರ್ಥಗಳಾಗಿವೆ.

ದೊಡ್ಡ ಹೊಟ್ಟೆ ಮರೆಮಾಚುವ ಉಪಾಯಗಳು

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಇದು ಪರಿಣಾಮಕಾರಿಯಾದ, ಭಾರತೀಯ ಸಂಸ್ಕೃತಿಯಲ್ಲಿ ಮೊಡವೆ ಚಿಕಿತ್ಸೆಯಾಗಿ ಮೊದಲಿನಿಂದಲೂ ಬಳಸಲಾಗುತ್ತಿರುವ ಸಾಂಪ್ರದಾಯಿಕ ಫೇಸ್ ಮಾಸ್ಕ್. ನೀವು ಹತ್ತಿರದ ಹೆಚ್ಚಿನ ಮಳಿಗೆಗಳಲ್ಲಿ ಲಭ್ಯವಿರುವ ಈ ಮಿಶ್ರಣ ಮೊಡವೆ ನಿವಾರಿಸುವ ಆಯುರ್ವೇದ ಗುಣಗಳನ್ನು ಹೊಂದಿದೆ. ಮುಲ್ತಾನಿ ಮಿಟ್ಟಿ ಪೇಸ್ಟ್ ತಯಾರಿಸಿ ಇದಕ್ಕೆ ರೋಸ್ ವಾಟರ್ ನ (ಗುಲಾಬಿ ನೀರಿನ) ಕೆಲವು ಹನಿಗಳನ್ನು ಮತ್ತು ನಿಂಬೆ ರಸವನ್ನು ಸೇರಿಸಿ ಫೇಸ್ ಪ್ಯಾಕ್ ಮಾಡಬಹುದು.

ಕಡಲೆ ಹಿಟ್ಟು

ಕಡಲೆ ಹಿಟ್ಟು

ಒಂದು ಸಣ್ಣ ಬಟ್ಟಲಿನಲ್ಲಿ ಮೊಸರು ಮತ್ತು ಎರಡು ಚಮಚ ಕಡಲೆ ಹಿಟ್ಟು ಸೇರಿಸಿ ಒಂದು ಮಧ್ಯಮ ದಪ್ಪ ಹದದಲ್ಲಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ನ್ನು ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿ ಮತ್ತು 30-45 ನಿಮಿಷಗಳ ಕಾಲ ಒಣಗಲು ಬಿಡಿ. ಇದು ಸಂಪೂರ್ಣವಾಗಿ ಒಣಗಿದ ನಂತರ, ನೀರನ್ನು ಹಾಕಿ ನಿಮ್ಮ ಮುಖದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಚೆನ್ನಾಗಿ ಮುಖವನ್ನು ತೊಳೆದು ಉತ್ತಮ ಮಾಯಿಶ್ಚರೈಸರ್ ನ್ನು ನಿಮ್ಮ ಮುಖಕ್ಕೆ ಹಚ್ಚಿ. ಒಳ್ಳೆಯ ಪರಿಣಾಮ ಪಡೆಯಲು ವಾರದಲ್ಲಿ 2 ಬಾರಿ ಪುನರಾವರ್ತಿಸಿ.

ಪುದೀನಾ ಫೇಸ್ ಪ್ಯಾಕ್

ಪುದೀನಾ ಫೇಸ್ ಪ್ಯಾಕ್

ಪುದೀನಾ ಫೇಸ್ ಪ್ಯಾಕ್ ಪರಿಶುದ್ಧ ಮೂಲಿಕೆಯಾಗಿದ್ದು, ಇದು ತ್ವಚೆಗೆ ತಂಪಾದ ಅನುಭವವನ್ನು ನೀಡುತ್ತದೆ. ಒಂದಿಷ್ಟು ಪುದೀನ ಎಲೆಗಳನ್ನು ರುಬ್ಬಿಕೊಳ್ಳಿ. ಒಂದು ಬಟ್ಟಲಿನಲ್ಲಿ 2-3 ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಅದು ಒಣಗುವವರೆಗೂ ಹಾಗೆಯೇ ಬಿಡಿ. ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ಒಂದು ವಾರದಲ್ಲಿ ಸಾಕಷ್ಟು ಬಾರಿ ಪುನರಾವರ್ತಿಸಿ.

ಸೌತೆಕಾಯಿ ಫೇಸ್ ಮಾಸ್ಕ್

ಸೌತೆಕಾಯಿ ಫೇಸ್ ಮಾಸ್ಕ್

ಸೌತೆಕಾಯಿ ಸಾರಗಳು, ದೇಹದ ಶಾಖವನ್ನು ಕಾಯ್ದುಕೊಳ್ಳುವ ಮೂಲಕ, ಮೊಡವೆ ಮತ್ತು ಉರಿಯೂತದೊಂದಿಗೆ ಹೋರಾಡುವ ಸೂಕ್ತ ಫೇಸ್ ಪ್ಯಾಕ್ ಆಗಿದೆ. ಇದು ಮುಖದಲ್ಲಿನ ಮೊಡವೆ ಗುಳ್ಳೆಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯಕಾರಿ. ಇದನ್ನು ಮಾಡುವ ಪ್ರಕ್ರಿಯೆ ಸಾಕಷ್ಟು ಸುಲಭ. ಸೌತೆಕಾಯಿಯನ್ನು ರಸ ತೆಗೆದು/ ತುರಿದು ಮುಖಕ್ಕೆ ಲೇಪಿಸುವುದಕ್ಕಿಂತ ಮೊದಲು ಸುಮಾರು 30-40 ನಿಮಿಷಗಳ ಕಾಲ ರೆಫ್ರೀಜರೇಟರ್ ನಲ್ಲಿ ಇಡಿ. ಇದು ಸಾಕಷ್ಟು ತಂಪಾದ ಸಂದರ್ಭದಲ್ಲಿ, ರಸದಲಿರುವ ತಿರುಳನ್ನು ಆಯ್ಕೆ ಮಾಡಿಕೊಂಡು ಮುಖಕ್ಕೆ ಹಚ್ಚಿ. ಮೊಡವೆ ಭಾಗಗಳಲ್ಲಿ ಸೌತೆಕಾಯಿ ತಿರುಳನ್ನು ಇಟ್ಟು ಕೈಯಾಡಿಸಿ. ಮತ್ತೆ ಮತ್ತೆ ಈ ಕ್ರಮವನ್ನು ಪುನರಾವರ್ತಿಸಿ.

ಪಪ್ಪಾಯಿ ಹಣ್ಣಿನ ಪ್ಯಾಕ್

ಪಪ್ಪಾಯಿ ಹಣ್ಣಿನ ಪ್ಯಾಕ್

ನೀವು ಒಂದು ಹಣ್ಣು ಅನೇಕ ಹಣ್ಣುಗಳನ್ನು ಬಳಾಸಿ ಫೇಸ್ ಪ್ಯಾಕ್ ತಯಾರಿಸಬಹುದು. ಅವುಗಳ ಲಭ್ಯತೆಗಳಿಗನುಗುಣವಾಗಿ ಬಾಳೆಹಣ್ಣು, ಪಪ್ಪಾಯಿ, ಆವಕಾಡೊ, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಮುಖಕ್ಕೆ ಹಚ್ಚಲು ಆಯ್ದುಕೊಳ್ಳಬಹುದು. ಒಂದು ಅಥ್ಯವಾ ಎರಡು ಹಣ್ಣುಗಳನ್ನು ಮ್ಯಾಶ್ ಮಾಡಿ ಜೇನು ಮತ್ತು ಮೊಸರಿನ ಜೊತೆ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.

English summary

super homemade acne face packs for men

There are several environmental, lifestyle and genetic reasons for acne problems in men. Forehead is the most problematic areas on face that is more easily affected by acne. Face packs help in moisturising and rejuvenating your facial skin and help in treating as well as avoiding facial acne. Fruits are the most popular and effective face mask ingredients that are commonly used in most home made face masks.
Story first published: Saturday, June 28, 2014, 15:40 [IST]
X
Desktop Bottom Promotion