For Quick Alerts
ALLOW NOTIFICATIONS  
For Daily Alerts

ಹ್ಯಾಂಗ್ ಓವರ್ ಚರ್ಮ ಸರಿಪಡಿಸುವ ವಿಧಾನಗಳು

By Hemanth P
|

ರಾತ್ರಿಯ ಒಳ್ಳೆಯ ಪಾರ್ಟಿಯ ಬಳಿಕ ನಿಮಗೆ ಹಲವಾರು ಸಲ ಹ್ಯಾಂಗ್ ಓವರ್ ಆಗಿರಬಹುದು. ಆದರೆ ಕೇವಲ ನಿಮ್ಮ ದೇಹ ಹಾಗೂ ಮೆದುಳು ಮಾತ್ರ ಹ್ಯಾಂಗ್ ಓವರ್ ಗೆ ಒಳಗಾಗುದಲ್ಲ, ನಿಮ್ಮ ಮುಖದ ಚರ್ಮ ಕೂಡ ಹ್ಯಾಂಗ್ ಓವರ್ ನ ಲಕ್ಷಣಗಳನ್ನು ತೋರಿಸುತ್ತದೆ ಎಂದು ಸಾಬೀತಾಗಿದೆ. ಹ್ಯಾಂಗ್ ಓವರ್ ಗೆ ಒಳಗಾದಾಗ ನಿಮ್ಮ ಮುಖದ ಚರ್ಮ ಜೋತುಬಿದ್ದಂತೆ ಮತ್ತು ನಿರ್ಜೀವವಾದಂತೆ ಕಾಣಿಸುತ್ತದೆ. ಹ್ಯಾಂಗ್ ಓವರ್ ನಿಂದಾಗಿ ಚರ್ಮವು ಒಣ ಹಾಗೂ ಒರಟು ತೇಪೆಯೆದ್ದಂತೆ ಕಾಣಬಹುದು. ಹ್ಯಾಂಗ್ ಓವರ್ ನಿಂದಾಗಿ ಚರ್ಮ ಮತ್ತು ಮುಖದೊಂದಿಗೆ ಕಣ್ಣು ಕೂಡ ತುಂಬಾ ಬಳಲಿದಂತೆ ಕಾಣಿಸುತ್ತದೆ.

ಹ್ಯಾಂಗ್ ಓವರ್ ಬಳಿಕ ದೇಹ ಮತ್ತು ಮೆದುಳನ್ನು ಸಮಸ್ಥಿತಿಗೆ ತರಲು ಹಲವಾರು ಮಾರ್ಗಗಳಿವೆ. ಆದರೆ ಮುಖದ ಚರ್ಮಕ್ಕೆ ಈ ವಿಧಾನಗಳು ಕೆಲಸ ಮಾಡದು. ಚರ್ಮದ ಹ್ಯಾಂಗ್ ಓವರ್ ನ್ನು ತೆಗೆಯಲು ಕೆಲವೊಂದು ಟಿಪ್ಸ್ ಗಳನ್ನು ಬಳಸಬೇಕಾಗುತ್ತದೆ. ಚರ್ಮ ಮತ್ತು ಮುಖದ ಹ್ಯಾಂಗ್ ಓವರ್ ನ್ನು ತೆಗೆಯಲು ಕೆಲವೊಂದು ಟಿಪ್ಸ್ ಮತ್ತು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

1. ಮುಖ ತೊಳೆಯಿರಿ

1. ಮುಖ ತೊಳೆಯಿರಿ

ರಾತ್ರಿಯ ತುಂಬಾ ಬಳಲಿದ ಪಾರ್ಟಿಯ ಬಳಿಕ ಮರುದಿನ ಎದ್ದ ಕೂಡಲೇ ನೀವು ತಣ್ಣಗಿನ ನೀರಿನಿಂದ ಮುಖ ತೊಳೆಯಲು ಮರೆಯದಿರಿ. ತಂಪಾದ ನೀರು ಚರ್ಮವನ್ನು ಎಚ್ಚರಿಸುತ್ತದೆ ಮತ್ತು ಹ್ಯಾಂಗ್ ಓವರ್ ನಿಂದ ಅದನ್ನು ಎಬ್ಬಿಸುತ್ತದೆ. ಮುಖದ ಚರ್ಮಕ್ಕೆ ಶಕ್ತಿ ಮತ್ತು ಪುನರ್ಚೇತನಗೊಳಿಸಲು ಒಳ್ಳೆಯ ಫೇಸ್ ವಾಶ್ ಬಳಸಿ. ಚರ್ಮ ಮತ್ತು ಮುಖದಿಂದ ಹ್ಯಾಂಗ್ ಓವರ್ ತೆಗೆಯಲು ಇದು ಅತೀ ಮುಖ್ಯ ಹಾಗೂ ಮೊದಲ ಟಿಪ್ಸ್. ಪ್ರತಿಯೊಬ್ಬರು ಎದ್ದ ಬಳಿಕ ಮುಖ ತೊಳೆಯುವುದು ಸಾಮಾನ್ಯ. ಆದರೆ ನೀವು ಹ್ಯಾಂಗ್ ಓವರ್ ಗೆ ಒಳಗಾಗಿದ್ದರೆ ಆಗ ಹೆಚ್ಚಿನ ಸಲ ಮುಖ ತೊಳೆಯಿರಿ.

2. ಮೊಶ್ಚಿರೈಸರ್

2. ಮೊಶ್ಚಿರೈಸರ್

ಒಳ್ಳೆಯ ಪಾರ್ಟಿಯ ಬಳಿಕ ನಿಮ್ಮ ಚರ್ಮವನ್ನು ಮೊಶ್ಚಿರೈಸರ್ ಮತ್ತು ಹೈಡ್ರೆಟ್ ಆಗಿರುವಂತೆ ನೋಡಿಕೊಳ್ಳಿ. ಕೆಟ್ಟ ಹ್ಯಾಂಗ್ ಓವರ್ ಮುಖದ ಮೇಲಿದ್ದರೆ ಆಗ ಚರ್ಮ ಮತ್ತು ಮುಖದ ಮೇಲೆ ಒಣ ತೇಪೆ ಉಂಟಾಗಬಹುದು. ಹ್ಯಾಂಗ್ ಓವರ್ ಗೆ ಒಳಗಾದಾಗ ನೀವು ಚರ್ಮಕ್ಕೆ ಹೆಚ್ಚಿನ ಮೊಶ್ಚಿರೈಸರ್ ಬಳಸಿ. ಹೈಡ್ರೇಶನ್ ನಿಂದ ಚರ್ಮ ತಾಜಾ ಮತ್ತು ಪುನರ್ಚೇತನಗೊಳ್ಳಲಿದೆ. ಇದು ಚರ್ಮ ಮತ್ತು ಮುಖದಿಂದ ಹ್ಯಾಂಗ್ ಓವರ್ ತೆಗೆಯಲು ಒಳ್ಳೆಯ ವಿಧಾನ.

3. ಫೇಸ್ ಮಾಸ್ಕ್

3. ಫೇಸ್ ಮಾಸ್ಕ್

ನಿಮ್ಮ ಮುಖ ತುಂಬಾ ಮಂಕು ಮತ್ತು ಬಳಲಿದಂತೆ ಕಂಡುಬಂದರೆ ಆಗ ಚರ್ಮಕ್ಕೆ ಕಾಂತಿ ಉಂಟುಮಾಡುವ ಫೇಸ್ ಮಾಸ್ಕ್ ನ್ನು ಬಳಸಿ. ಹಣ್ಣುಗಳ ಫೇಸ್ ಮಾಸ್ಕ್ ಬಳಸುವುದರಿಂದ ಚರ್ಮವು ಹೆಚ್ಚಿನ ತಾಜಾತನ ಪಡೆಯಲಿದೆ. ಇದು ನಿಮ್ಮ ಮುಖ ಮತ್ತು ಚರ್ಮದಿಂದ ಹ್ಯಾಂಗ್ ಓವರ್ ತೆಗೆಯಲು ಒಳ್ಳೆಯ ವಿಧಾನ. ಇದು ತುಂಬಾ ಪರಿಣಾಮಕಾರಿ ವಿಧಾನ. ಕೆಲವೊಂದು ಫೇಸ್ ಮಾಸ್ಕ್ ಗಳನ್ನು ಮನೆಯಲ್ಲೇ ತಯಾರಿಸಬಹುದು. ರೋಸ್ ವಾಟರ್, ಮುಲ್ತಾನಿ ಮಿಟ್ಟಿ, ಹಾಲು ಮತ್ತು ಹಣ್ಣುಗಳನ್ನು ಬಳಸಿ ಫೇಸ್ ಮಾಸ್ಕ್ ಮಾಡಬಹುದು. ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ. ಅದು ಒಣಗುವ ತನಕ ಚರ್ಮದ ಮೇಲೆ ಇರಲಿ, ಬಳಿಕ ತಂಪಾದ ನೀರಿನಿಂದ ತೊಳೆಯಿರಿ.

4. ನೀರು

4. ನೀರು

ಆಲ್ಕೋಹಾಲ್ ನಿಂದಾಗಿ ಉಂಟಾಗಿರುವ ಹ್ಯಾಂಗ್ ಓವರ್ ನ್ನು ಹೆಚ್ಚಿನ ನೀರು ಕುಡಿಯುವ ಮೂಲಕ ನಿವಾರಿಸಬಹುದು. ನೀರು ಚರ್ಮದ ಜೀವಕೋಶಗಳನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮವು ಚುರುಕು ಹಾಗೂ ಆರೋಗ್ಯವಾಗಿರುವಂತೆ ಮಾಡುತ್ತದೆ. ಹೆಚ್ಚಿನ ನೀರು ಕುಡಿಯುವುದರಿಂದ ಹ್ಯಾಂಗ್ ಓವರ್ ನಿಂದ ಒಣ ಹಾಗೂ ಬಳಲಿದಂತಾಗಿರುವ ಚರ್ಮ ಸರಿಯಾಗುತ್ತದೆ. ನೀರು ದೇಹ ಹಾಗೂ ಮೆದುಳಿನ ಹ್ಯಾಂಗ್ ಓವರ್ ನ್ನು ನಿವಾರಿಸಲು ನೆರವಾಗುತ್ತದೆ. ಯಾವುದೇ ರೀತಿಯ ಹ್ಯಾಂಗ್ ಓವರ್ ತೆಗೆಯಲು ನೀರು ಒಳ್ಳೆಯ ವಿಧಾನ.

5. ಸರಿಯಾಗಿ ತಿನ್ನಿ

5. ಸರಿಯಾಗಿ ತಿನ್ನಿ

ಹಿಂದಿನ ರಾತ್ರಿಯ ಹ್ಯಾಂಗ್ ಓವರ್ ನಿವಾರಿಸಲು ಆಹಾರ ತಿನ್ನುವುದು ಒಳ್ಳೆಯ ವಿಧಾನ. ಆಹಾರವು ನಿಮಗೆ ಅಗತ್ಯವಿರುವ ಶಕ್ತಿ ಒದಗಿಸಿ ಇಂದ್ರಿಯಗಳಿಗೆ ತಮ್ಮ ಸ್ಥಿತಿಗೆ ಮರಳಲು ನೆರವಾಗಲಿದೆ. ಸರಿಯಾಗಿ ಆಹಾರ ಸೇವನೆಯಿಂದ ದೇಹದ ಎಲ್ಲಾ ಹ್ಯಾಂಗ್ ಓವರ್ ನಿವಾರಣೆಯಾಗುತ್ತದೆ ಮತ್ತು ಚರ್ಮವು ಶಕ್ತಿಯುತ ಹಾಗೂ ಪುನರ್ಚೇತನಗೊಳ್ಳುತ್ತದೆ.


English summary

Prevent Hangover Skin Damage With These Tips

You must have faced a hangover so many times after a good party night. But it was not just your body and brain with a hangover. It is proven that even our face skin has hangover symptoms post a good party night. The face skin becomes pale and dull when it suffers from the hangover. The skin may even show dry and rough patches due to the hangover.
Story first published: Saturday, January 11, 2014, 14:12 [IST]
X
Desktop Bottom Promotion