For Quick Alerts
ALLOW NOTIFICATIONS  
For Daily Alerts

ಚೆರ್ರಿಗಳಿಂದ ತಯಾರಿಸಿ ನೈಸರ್ಗಿಕ ಸ್ಕಿನ್ ಕೇರ್ !

By Poornima Hegde
|

ಚೆರ್ರಿ ಜ್ಯೂಸ್, ತ್ವಚೆಯ ಹೊಳಪಿಗೆ ಮತ್ತು ತ್ವಚೆಯಲ್ಲಿದ ಗಾಢ ಚುಕ್ಕೆಗಳು (ಡಾರ್ಕ್ ಸ್ಪಾಟ್ಸ್)ಗಳನ್ನು ತೆರವುಗೊಳಿಸುವ ಉದ್ದೇಶದಿಂದ ಬಳಸಲಾಗುವ ಅತ್ಯಂತ ಉಪಯುಕ್ತ ಹಣ್ಣು ಎಂದು ಪರಿಗಣಿಸಲಾಗಿದೆ.

ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ( ಉರಿಯೂತದ) ಗುಣಲಕ್ಷಣಗಳಿಂದ ಮೊಡವೆಯನ್ನು ಹೋಗಲಾಡಿಸಲು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಜೊತೆಗೆ, ಚೆರ್ರಿಗಳು ತ್ವಚೆಯ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ ಮತ್ತು ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ.

ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ, ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಇತ್ಯಾದಿ ಸತ್ವಗಳನ್ನು ಈ ರುಚಿಕರವಾದ ಹಣ್ಣು ಒಳಗೊಂಡಿದೆ. ಆದ್ದರಿಂದ ವಿವಿಧ ತ್ವಚೆಯ ಮತ್ತು ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ.

Natural Skin Care tips With Cherries

ಜೊತೆಗೆ, ಚೆರ್ರಿಗಳನು ತಿನ್ನುವುದರಿಂದ ಮೈಗ್ರೇನ್ ತಲೆನೋವು ಮತ್ತು ನಿದ್ರಾಹೀನತೆ ಸಮಸ್ಯೆಗಳನ್ನು ಶಮನ ಮಾಡುತ್ತದೆ. ಈ ಹಣ್ಣಿನ ನಿಯಮಿತ ಬಳಕೆ ಆರೋಗ್ಯವಂತ ಹೃದಯ ಕಾಯ್ದುಕೊಳ್ಳಲು ಮತ್ತು ನರಕೋಶಗಳ ಉತ್ಕರ್ಷಣಶೀಲ ಹಾನಿಯ ಕಾರಣ ಉಂಟಾಗುವ ನೆನಪಿನ ಶಕ್ತಿ ಹೋಗುವುದನ್ನು ತಡೆಯುತ್ತದೆ.

ಸರಳವಾಗಿ, ನಿಯಮಿತವಾಗಿ ನಿಮ್ಮ ಮುಖದ ಮೇಲೆ ಹಿಸುಕಿದ ಚೆರ್ರಿಗಳನ್ನು ( ಸಿಪ್ಪೆ ತೆಗೆದ ) ಅನ್ವಯಿಸುವುದರಿಂದ ನಿಮ್ಮ ಚರ್ಮದ ಮೃದುತ್ವ ಮತ್ತು ಹೊಳಪನ್ನು ಹೆಚ್ಚಿಸಬಹುದು. ನೀವು ಒಂದು ಫೋರ್ಕ್ ಸಹಾಯದಿಂದ ಚೆರ್ರಿಗಳನ್ನು ಮ್ಯಾಶ್ ಮಾಡಬಹುದು . ಈ ಹಣ್ಣನ್ನು ಮುಖಕ್ಕೆ ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ನೀವು ಎಣ್ಣೆಯುಕ್ತ ತ್ಚಚೆಯನ್ನು ಹೊಂದಿದ್ದರೆ, ಹುಳಿ ಚೆರ್ರಿಯನ್ನು ಬಳಸುವುದು ಉತ್ತಮ,

ಲಿಂಬೆಯನ್ನು ಮುಖಕ್ಕೆ ಹಚ್ಚಿಕೊಳ್ಳುವ ಉತ್ತಮ ವಿಧಾನಗಳು

ಸುಲಭವಾಗಿ ಚೆರ್ರಿ ಮಾಸ್ಕ್ ತಯಾರಿಸಲು ಒಂದು ಚಮಚ ನೈಸರ್ಗಿಕ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಕೆಲವು ಹಿಸುಕಿದ ಚೆರ್ರಿಗಳ ಜೊತೆ ಮಿಶ್ರಣ ಮಾಡಿ ತಯಾರು ಮಾಡಬಹುದು. ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಈ ಪೇಸ್ಟ್ ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ಮನೆಮದ್ದನ್ನು ಬಳಸಿ.

ಒಂದಿಷ್ಟು ಚೆರ್ರಿ ಹಣ್ಣುಗಳು ಮತ್ತು ಎರಡು ಚಮಚ ಜೇನನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸ್ವಾಭಾವಿಕವಾಗಿ ಸುಕ್ಕುಗಳು ಮತ್ತು ತ್ವಚೆಯಲ್ಲಿನ ಸೂಕ್ಷ್ಮ ರೇಖೆಗಳನ್ನು ತೆಗೆಯಲು ಲಾಭದಾಯಕ ಮನೆಮದ್ದಾಗಿದೆ. ಜೊತೆಗೆ ತ್ವಚೆಯಲ್ಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಐದು ಚೆರ್ರಿಗಳು ಮತ್ತು ಮೂರು ಸ್ಟ್ರಾಬೆರಿಗಳನ್ನು ತೆಗೆದುಕೊಳ್ಳಿ. ಸಂಪೂರ್ಣವಾಗಿ ಎರಡೂ ಹಣ್ಣುಗಳನ್ನು ಹಿಸುಕಿ ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಮುಖದಲ್ಲಿನ ವಯಸ್ಸಾದ ಕಲೆಗಳನ್ನು ತೆಗೆಯಲು ಸಹಾಯಕ. ಇದರ ಸೌಂದರ್ಯ ಪ್ರಯೋಜನಗಳನ್ನು ಹೆಚ್ಚಿಸಲು ಪನ್ನೀರು (ರೋಸ್ ವಾಟರ್) ನ್ನೂ ಕೂಡ ಸೇರಿಸಬಹುದು.

ಮೊಡವೆ ನಿವಾರಕ ಚಿಕಿತ್ಸೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಬೆರಳೆಣಿಕೆಯಷ್ಟು ಚೆರ್ರಿಗಳನ್ನು ಹಿಸುಕಿ ಇದಕ್ಕಿ 2 -3 ಚಮಚ ಮೊಸರನ್ನು ಸೇರಿಸಿ. 20-30 ನಿಮಿಷಗಳ ನಿಮ್ಮ ತ್ವಚೆಯ ಮೇಲೆ ಈ ಪೇಸ್ಟ್ ಹಚ್ಚಿ ನಂತರ ತೊಳೆಯಿರಿ. ಈ ರೆಸಿಪಿ, ಮಂದ ಚರ್ಮದ ಕಾಂತಿಯನ್ನು ವರ್ಧಿಸುವಲ್ಲಿ ಅತ್ಯುತ್ತಮವಾಗಿದೆ. ಅಲ್ಲದೆ, ನಿಮ್ಮ ಚರ್ಮಕ್ಕೆ ಹೊಳಪನ್ನೂ ನೀಡುತ್ತದೆ. ಇದರ ಜೊತೆಗೆ ಸಕ್ಕರೆ ಸೇರಿಸಿ ಮತ್ತು ಸ್ಕ್ರಬ್ ರೀತಿಯಲ್ಲಿಯೂ ಬಳಸಬಹುದು.

ನೀವು ಚೆರ್ರಿ ರಸಕ್ಕೆ ಎರಡು ಚಮಚ ಓಟ್ ಹಿಟ್ಟು ಬೆರೆಸಿ ಮತ್ತೊಂದು ಉತ್ತಮ ಚೆರ್ರಿ ಮಾಸ್ಕ್ ತಯಾರು ಮಾಡಬಹುದು. ಐದು ನಿಮಿಷಗಳ ಕಾಲ ನಿಮ್ಮ ತ್ವಚೆಯ ಮೇಲೆ ಹಾಗೆಯೇ ಬಿಟ್ಟು ಮತ್ತು ನಂತರ ತೊಳೆಯಿರಿ. ಇದು ಡೆಡ್ ಸ್ಕಿನ್ (ಅನಗತ್ಯ ಜೀವಕೋಶ) ಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

ಪಕ್ವವಾದ ಎಂಟು ಅಥವಾ ಒಂಬತ್ತು ಚೆರ್ರಿಗಳನ್ನು ತೆಗೆದುಕೊಂಡು ಅದರ ತಿರುಳನ್ನು ತೆಗೆಯಿರಿ. ಒಂದು ಬ್ಲೆಂಡರ್ ಅಥವಾ ಫುಡ್ ಪ್ರೊಸೆಸರ್ ಮೂಲಕ ಇದನ್ನು ಮಿಶ್ರಣ ಮಾಡಿ. ನಂತರ ಮುಖದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸುಮಾರು 20 ನಿಮಿಷಗಳ ಕಾಲ ನಿಮ್ಮ ತ್ವಚೆಯ ಮೇಲೆ ಈ ಪೇಸ್ಟ್ ಹಚ್ಚಿ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.ಈ ಮಾಸ್ಕ್ ಒಣ ತ್ವಚೆಗೆ ವಿಶೇಷವಾಗಿ ಒಳ್ಳೆಯದು. ನೀವು ಇದಕ್ಕೆ ಆಲಿವ್ ಎಣ್ಣೆ ಸೇರಿಸುವ ಮೂಲಕ ಇದರ ಉಪಯುಕ್ತತೆಯನ್ನು ಹೆಚ್ಚಿಸಬಹುದು.

ಒಂದು ಮೊಟ್ಟೆಯ ಬಿಳಿ ಭಾಗ ಮತ್ತು ಎರಡು ಚಮಚ ಜೋಳದ ಹಿಟ್ಟು, ಒಂದು ಚಮಚ ಜೇನು, ಮತ್ತು ಸುಮಾರು ಹತ್ತು ಹಿಸುಕಿದ ಚೆರ್ರಿಗಳನ್ನು ಬೆರೆಸಿ ಮಾಸ್ಕ್ ತಯಾರಿಸಿ ಎಣ್ಣೆಯುಕ್ತ ಚರ್ಮದಿಂದ ಮುಕ್ತಿಯನ್ನು ಪಡೆಯಲು ನಿಯಮಿತವಾಗಿ ಬಳಸಿ. ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿ. ಸುಮಾರು 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಈ ಮಾಸ್ಕ್ ನಿಮ್ಮ ಸೌಂದರ್ಯ ವೃದ್ಧಿಸುವಲ್ಲಿ ಪರಿಪೂರ್ಣ ಮನೆಮದ್ದಾಗಿದೆ.

English summary

Natural Skin Care tips With Cherries

Cherry juice is considered extremely useful for the purpose of skin lightening and clearing dark spots. Due to its anti-inflammatory properties, it treats acne and rosacea, too. In addition, cherries moisturize the skin and soothe damaged skin.
Story first published: Thursday, June 19, 2014, 9:52 [IST]
X
Desktop Bottom Promotion