For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಂದು ಬಣ್ಣವನ್ನು ಹೋಗಲಾಡಿಸುವುದು ಹೇಗೆ?

|

ನಿಮ್ಮ ದೇಹದ ಚರ್ಮ ರಾಸಾಯನಿಕಗಳ ದೆಸೆಯಿಂದ, ಯುವಿ ಕಿರಣಗಳ ದೆಸೆಯಿಂದ, ಆಟವಾಡುವಾಗ, ಧೂಳು, ಕಸಗಳ ಮೂಲಕ, ಪರಿಸರ ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವ ಮೂಲಕ ಅಥವಾ ಸರಿಯಾಗಿ ಕೈಗಳನ್ನು ತೊಳೆಯದೆ ಇರುವುದರಿಂದ, ಬಿಸಿಲಿನ ಕಾರಣಗಳಿಂದ, ಹೀಗೆ ಮನೆಯ ಒಳಗೆ ಮತ್ತು ಹೊರಗೆ ನಾನಾ ಕಾರಣಗಳಿಗಾಗಿ ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಅದು ತನ್ನ ನೈಜ ಬಣ್ಣವನ್ನು ಕಳೆದುಕೊಳ್ಳುತ್ತದೆ.

ಈಗ ಇರುವ ಪ್ರಶ್ನೆ ಇದನ್ನು ತೆಗೆಯುವುದು ಹೇಗೆ? ಎಂಬುದು. ಮಹಿಳೆಯರಿಗಾಗಿ ಒಂದು ಶುಭ ಸುದ್ದಿ ಇಲ್ಲಿದೆ. ನಿಮ್ಮ ಚರ್ಮ ಕಂದು ಬಣ್ಣಕ್ಕೆ ತಿರುಗಿದರೆ ಅದನ್ನು ಈ ಕೆಳಗೆ ನೀಡಲಾಗಿರುವ ಸಲಹೆಗಳನ್ನು ಪಾಲಿಸುವ ಮೂಲಕ ಪರಿಹರಿಸಿಕೊಳ್ಳಿ.

ಬೇಕಿಂಗ್ ಸೋಡಾ ಮತ್ತು ನೀರು

ಬೇಕಿಂಗ್ ಸೋಡಾ ಮತ್ತು ನೀರು

ಬೇಕಿಂಗ್ ಸೋಡಾ ಮತ್ತು ನೀರನ್ನು ಬೆರೆಸಿ ಒಂದು ಮಿಶ್ರಣವನ್ನು ಅಥವಾ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಇದನ್ನು ಸ್ಕ್ರಬ್‍ನಂತೆ ಬಳಸಿ, ನಿಮ್ಮ ಕೈ ಅಥವಾ ತ್ವಚೆಯ ಮೇಲೆ ಇರುವ ಕಂದು ಬಣ್ಣ ನಿವಾರಿಸಿಕೊಳ್ಳಲು ಇದು ಸೂಕ್ತ ವಿಧಾನವಾಗಿದೆ. ನಿಮಗೆ ಶೀಘ್ರ ಬೆಳವಣಿಗೆ ಕಾಣಬೇಕೆಂದಲ್ಲಿ ಈ ಪರಿಹಾರವನ್ನು ದಿನ ಬಿಟ್ಟು ದಿನ ಪ್ರಯತ್ನಿಸಿ.

ವಿನೇಗರ್ ಮತ್ತು ನೀರು

ವಿನೇಗರ್ ಮತ್ತು ನೀರು

ವಿನೇಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಬೆರೆಸಿ. ಆನಂತರ ನಿಮ್ಮ ಕೈಗಳನ್ನು ಆ ಬಟ್ಟಲಿನಲ್ಲಿ ಮುಳುಗಿಸಿ, 5 ರಿಂದ 10 ನಿಮಿಷಗಳ ಕಾಲ ಬಿಡಿ. ಆನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ. ನೆನಪಿಡಿ, ಕೈಗಳನ್ನು ಚೆನ್ನಾಗಿ ಒಣಗಿಸಲು ಹತ್ತಿಯ ಟವೆಲ್‍ನಿಂದ ಚೆನ್ನಾಗಿ ಒರೆಸಿ.

ನಿಂಬೆ ರಸ ಮತ್ತು ಸೌತೆಕಾಯಿ

ನಿಂಬೆ ರಸ ಮತ್ತು ಸೌತೆಕಾಯಿ

ನಿಂಬೆ ರಸ, ಸೌತೆಕಾಯಿ ರಸ ಮತ್ತು ರೋಸ್ ವಾಟರ್‌ಗಳನ್ನೆಲ್ಲ ಸೇರಿಸಿ ಒಂದು ಮಿಶ್ರಣ ಮಾಡಿಕೊಳ್ಳಿ. ಇದನ್ನು ಕಂದು ಬಣ್ಣ ಆಗಿರುವ ಭಾಗಕ್ಕೆ ಲೇಪಿಸಿ. ಈ ಮಿಶ್ರಣವು ನಿಮ್ಮ ಕೈಗಳ ಮೇಲೆ 10-15 ನಿಮಿಷಗಳ ಕಾಲ ಇರಲು ಬಿಡಿ ಹಾಗು ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ಈ ಮಿಶ್ರಣವು ಸೂರ್ಯನ ಬೆಳಕಿನಿಂದ ಮತ್ತು ಸನ್ ಬರ್ನ್‍ನಿಂದ ಆದ ಕಂದು ಬಣ್ಣ ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು, ರೋಸ್ ವಾಟರ್‌ನಲ್ಲಿರುವ ತಂಪು ಮಾಡುವ ಗುಣಗಳು ನಿಮ್ಮ ತ್ವಚೆಯಲ್ಲಿರುವ ಕಂದು ಬಣ್ಣವನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತೆಗೆಯುತ್ತವೆ. ಈ ಮಿಶ್ರಣವನ್ನು ನೀವು ತಯಾರಿಸಿ ಅದನ್ನು ರೆಫ್ರಿಜಿರೇಟರಿನಲ್ಲಿ ಇರಿಸಿಕೊಂಡು ಒಂದು ವಾರದವರೆಗೆ ಬೇಕಾದರು ಬಳಸಬಹುದು.

ಹತ್ತಿಯ ಉಂಡೆ

ಹತ್ತಿಯ ಉಂಡೆ

ಒಂದು ಹತ್ತಿಯ ಉಂಡೆಯನ್ನು ನಿಂಬೆ ರಸದಲ್ಲಿ ಅದ್ದಿ ಮತ್ತು ಅದನ್ನು ಕಂದು ಬಣ್ಣ ಆಗಿರುವ ಭಾಗಕ್ಕೆ ಲೇಪಿಸಿ/ಉಜ್ಜಿ. ಇದನ್ನು 2 ನಿಮಿಷಗಳ ಕಾಲ ಮಸಾಜ್ ಮಾಡಿ ಹಾಗು ಅದನ್ನು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಸಂಪೂರ್ಣವಾಗಿ ಒಣಗಿದಾಗ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಕಡಲೆ ಹಿಟ್ಟು, ಯೋಗರ್ಟ್ ಮತ್ತು ನಿಂಬೆ

ಕಡಲೆ ಹಿಟ್ಟು, ಯೋಗರ್ಟ್ ಮತ್ತು ನಿಂಬೆ

ಕಡಲೆ ಹಿಟ್ಟು, ಯೋಗರ್ಟ್ ಮತ್ತು ನಿಂಬೆ ಒಳಗೊಂಡ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಈ ಮೂರರ ಪ್ರಮಾಣವು ಸರಿ ಸಮನಾಗಿರಬೇಕು. ಈ ಪೇಸ್ಟ್ ಅನ್ನು ಕಂದು ಬಣ್ಣ ಆಗಿರುವ ಪ್ರದೇಶಕ್ಕೆ ಲೇಪಿಸಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಸಂಪೂರ್ಣವಾಗಿ ಒಣಗಿದ ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿಂಬೆ ರಸ

ನಿಂಬೆ ರಸ

ಹಸಿ ಹಾಲಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಮತ್ತು ಅರಿಶಿಣ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಬೆರೆಸಿ, ಅದನ್ನು ಕಂದು ಬಣ್ಣ ಆಗಿರುವ ಪ್ರದೇಶಕ್ಕೆ ಲೇಪಿಸಿ. ಇದನ್ನು 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಎಳೆನೀರು

ಎಳೆನೀರು

ನಿಮಗೆ ಸಾಧ್ಯವಾದಾಗೆಲ್ಲ ನಿಮ್ಮ ಕೈಗಳಿಗೆ ಎಳೆನೀರನ್ನು ಹಚ್ಚುತ್ತ ಇರಿ, ಮತ್ತು ಅದನ್ನು ಒಣಗಲು ಬಿಡಿ. ನಿಮಗೆ ಶೀಘ್ರ ಉಪಶಮನ ಬೇಕಾಗಿದ್ದಲ್ಲಿ ಇದನ್ನು ದಿನಕ್ಕೆ ಒಂದಕ್ಕಿಂತ ಅಧಿಕ ಬಾರಿ ಪ್ರಯತ್ನಿಸಿ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನ ಪಲ್ಪ್ ಸಹ ಚರ್ಮದಲ್ಲಿ ಕಂಡುಬರುವ ಕಂದು ಬಣ್ಣ ನಿವಾರಿಸುವ ಅದ್ಭುತ ಮನೆ ಮದ್ದಾಗಿರುತ್ತದೆ. ಈ ಪಲ್ಪನ್ನು ಕಂದು ಬಣ್ಣ ಇರುವ ಭಾಗಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ 10 ನಿಮಿಷ ಹಾಗೆಯೇ ಬಿಡಿ. ಯಾವಾಗ ಅದು ಒಣಗಿದೆ ಎಂದು ಅನಿಸುತ್ತದೆಯೋ, ಆಗ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಸೋರೆಕಾಯಿ ಮತ್ತು ಮುಲ್ತಾನಿ ಮಿಟ್ಟಿ

ಸೋರೆಕಾಯಿ ಮತ್ತು ಮುಲ್ತಾನಿ ಮಿಟ್ಟಿ

ನಿಮಗೆ ಅಗತ್ಯವಿದ್ದಲ್ಲಿ ಸೋರೆಕಾಯಿ ಮತ್ತು ಮುಲ್ತಾನಿ ಮಿಟ್ಟಿಗಳನ್ನು ಸೇರಿಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಅದನ್ನು ಕಂದು ಬಣ್ಣ ಆದ ಭಾಗಕ್ಕೆ ಲೇಪಿಸಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ನಿಮ್ಮ ಕೈಗಳ ಚರ್ಮದ ಮೇಲೆ ಕಂಡುಬರುವ ಕಂದು ಬಣ್ಣವನ್ನು ತೆಗೆಯಲು ಈ ಸಲಹೆಗಳನ್ನು ಪಾಲಿಸಿರಿ

English summary

How To Remove Tan From Hands

Your hands may get tanned due to different reasons like you may work with harsh chemicals day-in and day-out, get exposed to UV rays constantly, play sports that may get you involved in murky, dusty environment.. In this way your hands get tanned and losses its original color and beauty.
X
Desktop Bottom Promotion