For Quick Alerts
ALLOW NOTIFICATIONS  
For Daily Alerts

ಟೊಮೇಟೊ ಬಳಸಿ, ತ್ವಚೆಯ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ!

By Arshad
|

ಚರ್ಮದ ಆರೈಕೆಗೆ ಟೊಮೇಟೋ ಉತ್ತಮವೇ? ಈ ಪ್ರಶ್ನೆಗೆ ಸೌಂದರ್ಯತಜ್ಞರು ಹೌದು ಎಂದೇ ಉತ್ತರಿಸುತ್ತಾರೆ. ಏಕೆಂದರೆ ಟೊಮೇಟೊಗೆ ಕೆಂಪು ಬಣ್ಣ ಬರಲು ಕಾಣವಾದ ಲೈಕೋಪೀನ್ ಎಂಬ ಪೋಷಕಾಂಶ ಚರ್ಮದ ಆರೈಕೆಗೆ ಉತ್ತಮವಾಗಿದೆ. ಇನ್ನೂ ಕೆಲವು ಸೌಂದರ್ಯತಜ್ಞರ ಪ್ರಕಾರ ಟೊಮೇಟೊ ಹಣ್ಣನ್ನು ಬಳಸಿ ಸೂರ್ಯನ ಪ್ರಖರ ಅತಿನೇರಳೆ ಕಿರಣಗಳ ಪ್ರಭಾವದಿಂದಲೂ ರಕ್ಷಣೆ ಪಡೆಯಬಹುದು. ಆದರೆ ಇದಕ್ಕೆ ಟೊಮೇಟೊವನ್ನು ಹೇಗೆ ಬಳಸಬೇಕು ಎಂದು ತಿಳಿದಿರುವುದು ಅವಶ್ಯ. ನಿಯಮಿತವಾಗಿ ಟೊಮೇಟೊ ತಿರುಳನ್ನು ಚರ್ಮಕ್ಕೆ ಹಚ್ಚಿಕೊಳ್ಳುತ್ತಾ ಬಂದರೆ ನೆರಿಗೆಗಳು ಮೂಡುವ ಕ್ರಿಯೆ ನಿಧಾನವಾಗಿ ಮುಪ್ಪನ್ನೂ ಮುಂದೂಡಬಹುದು.

ಟೊಮೇಟೊ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಚರ್ಮಕ್ಕೆ ಒಳಗಿನಿಂದ ಉತ್ತಮ ಪೋಷಣೆ ದೊರಕುವ ಕಾರಣ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಉತ್ತಮ ಸೆಳೆತ ಪಡೆಯುತ್ತದೆ. ಇದು ವಯಸ್ಸಿಗೂ ಮುನ್ನ ಚರ್ಮದಲ್ಲಿ ನೆರಿಗೆ ಬೀಳುವುದನ್ನು ತಡೆಯುತ್ತದೆ. ಬನ್ನಿ ಟೊಮೇಟೊ ಹಣ್ಣಿನ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ನೋಡೋಣ...

How juicy tomatoes can enhance your beauty

ಮೊಡವೆಗಳನ್ನು ನಿವಾರಿಸುತ್ತದೆ
ಹರಿಹರೆಯದವರಲ್ಲಿ ಮುಖದ ದೊಡ್ಡ ಮೊಡವೆಗಳು (acne) ತುಂಬಾ ತೊಂದರೆ ನೀಡುತ್ತವೆ. ತಾಳ್ಮೆ ಕಳೆದುಕೊಂಡು ಚಿವುಟಿ ಮೊಡವೆಯ ಮೂಲವನ್ನು ಹೊರತೆಗೆಯುವ ಮೂಲಕ ಚರ್ಮಕ್ಕೆ ಘಾಸಿಯುಂಟುಮಾಡುತ್ತಾರೆ. ಈ ಸ್ಥಳದಲ್ಲಿ ಶಾಶ್ವತವಾದ ಕಪ್ಪು ಕಲೆ ಉಳಿಯುತ್ತದೆ. ಈ ತೊಂದರೆಯಿಂದ ಕಾಪಾಡಲು ಕೊಂಚ ತಾಳ್ಮೆ ಹಾಗೂ ವಿಟಮಿನ್ ಎ ಮತ್ತು ಸಿ ಅಗತ್ಯವಿದೆ. ಟೊಮೇಟೊದಲ್ಲಿ ಈ ಎರಡೂ ಪೋಷಕಾಂಶಗಳು ಹೇರಳವಾಗಿದ್ದು ಮೊಡವೆ ನಿವಾರಿಸಿ ಕಲೆಯಿಲ್ಲದ ಚರ್ಮ ಉಳಿಯುವಂತಾಗಲು ಸಹಕರಿಸುತ್ತದೆ. ಇದಕ್ಕಾಗಿ ಟೊಮೇಟೊ ಹಣ್ಣನ್ನು ನೀರು ಸೇರಿಸದೇ ಚೆನ್ನಾಗಿ ಗೊಟಾಯಿಸಿದ ರಸವನ್ನು ರಾತ್ರಿ ಹಚ್ಚಿ ಒಣಗಲು ಬಿಡಬೇಕು. ಬೆಳಿಗ್ಗೆ ಸ್ವಚ್ಛ ನೀರಿನಿಂದ ತೊಳೆದುಕೊಂಡ ಬಳಿಕ ಉತ್ತಮ ಪರಿಣಾಮ ಕಂಡುಬರುತ್ತದೆ.

ಬಿಸಿಲಿನಿಂದ ಕಂದಿದ (sun-burnt) ಚರ್ಮವನ್ನು ಪುನಃಶ್ಚೇತನಗೊಳಿಸುತ್ತದೆ
ಪ್ರತಿದಿನ ನಾಲ್ಕರಿಂದ ಐದು ಚಮಚ ಟೊಮೇಟೊ ಗೊಜ್ಜನ್ನು ಕನಿಷ್ಟ ಮೂರು ತಿಂಗಳು ಸೇವಿಸಿರುವವರಲ್ಲಿ ನೈಸರ್ಗಿಕವಾಗಿ ದೇಹ ಸೂರ್ಯನ ರಶ್ಮಿಯ ಪ್ರಖರತೆಯನ್ನು ತಡೆದುಕೊಳ್ಳುವ ಶಕ್ತಿ ಇರುತ್ತದೆ ಎಂದು ಹೆಚ್ಚಿನ ಸೌಂದರ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಒಂದು ವೇಳೆ ನೀವು ಈ ತೊಂದರೆಗೆ ಒಳಗಾಗಿದ್ದರೆ ಟೊಮೇಟೊ ಬಿಲ್ಲೆಯನ್ನು ಚರ್ಮ ಸುಟ್ಟಿರುವಲ್ಲಿ ಸವರುವ ಮೂಲಕ ಶೀಘ್ರ ಗುಣವಾಗುತ್ತದೆ.

ಟೊಮೇಟೊ ಎಣ್ಣೆ ಚರ್ಮವನ್ನು ಮೃದುಗೊಳಿಸುತ್ತದೆ
ಟೊಮೇಟೊ ಬೀಜಗಳನ್ನು ಒಣಗಿಸಿ ತೆಗೆದ ತೈಲವೇ ಟೊಮೇಟೊ ಎಣ್ಣೆ. ಬಿಸಿಲಿಗೆ ಒಡ್ಡುವ ಚರ್ಮವನ್ನು ಈ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡುವ ಮೂಲಕ ಒಣಗಿದ ಚರ್ಮ ಮತ್ತೆ ಕಾಂತಿಯನ್ನು ಪಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬೇಕು. ಮುಖದ ಕಾಂತಿಗೂ ಈ ತೈಲ ಉಪಯುಕ್ತವಾಗಿದೆ. ನೀವು ಬಳಸುವ ಕ್ರೀಮ್ ಜೊತೆ ಟೊಮೇಟೊ ಎಣ್ಣೆಯನ್ನು ಮಿಶ್ರಣಮಾಡಿ ಹಚ್ಚುವ ಮೂಲಕ ಕಾಂತಿ ಹೆಚ್ಚುತ್ತದೆ ಹಾಗೂ ಮೃದುವಾಗುತ್ತದೆ.

ಚರ್ಮದ ಸೂಕ್ಷ್ಮರಂಧ್ರಗಳನ್ನು ಚೊಕ್ಕಟಗೊಳಿಸುತ್ತದೆ
ನಮ್ಮ ದೇಹದಾದ್ಯಂತ ಚರ್ಮದಲ್ಲಿ ಲಕ್ಷಾಂತರ ಸೂಕ್ಷ್ಮ ರಂಧ್ರಗಳಿವೆ. ಈ ರಂಧ್ರಗಳಲ್ಲಿಯೂ ಅದಕ್ಕೂ ಸೂಕ್ಷ್ಮ ಧೂಳು ಹಾಗೂ ಕೀಟಾಣುಗಳು ತುಂಬಿಕೊಂಡು ಮುಚ್ಚಿಬಿಡುತ್ತವೆ. ಇವುಗಳನ್ನು ತೆರೆಯಲು ಅತ್ಯಂತ ಪ್ರಬಲವಾದ ವಿಧಾನವೆಂದರೆ ಹಬೆಯ ಕೋಣೆಯಲ್ಲಿ ಕೊಂಚ ಕಾಲ ಕಳೆಯುವುದು (ಸೌನಾ ಸ್ನಾನ). ಆದರೆ ಈ ವಿಧಾನ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಇದೇ ಕೆಲಸವನ್ನು ನಮ್ಮ ಟೊಮೇಟೊ ಇನ್ನೂ ಸುಲಭವಾಗಿ ಮಾಡುತ್ತದೆ. ಒಂದು ಚಮಚ ನೀರಿನಲ್ಲಿ ಸುಮಾರು ನಾಲ್ಕು ತೊಟ್ಟು ಟೊಮೇಟೊ ಹಣ್ಣಿನ ರಸವನ್ನು ಸೇರಿಸಿ ಹತ್ತಿನ ಉಂಡೆಯಿಂದ ಈ ನೀರನ್ನು ಮುಖ ಮತ್ತು ಬಿಸಿಲಿಗೆ ಒಡ್ಡಿರುವ ಭಾಗಗಳನ್ನು ಉಜ್ಜಿಕೊಳ್ಳಬೇಕು. ಇದನ್ನು ಹಾಗೇ ಒಣಗಲು ಬಿಟ್ಟು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ವಿಧಾನವನ್ನು ನಿತ್ಯ ಅನುಸರಿಸುವುದರಿಂದ ಎಲ್ಲಾ ರಂಧ್ರಗಳು ಕ್ರಮೇಣ ಚೊಕ್ಕಟಗೊಂಡು ಕಿರಿದಾಗುತ್ತಾ ಹೋಗುತ್ತವೆ. ಪರಿಣಾಮವಾಗಿ ಚರ್ಮದ ಕಾಂತಿ ಮತ್ತು ಆರೋಗ್ಯ ಹೆಚ್ಚುತ್ತದೆ.

ಮೊಡವೆ ಮತ್ತು ಕೀವುತುಂಬಿದ ಬೊಕ್ಕೆಗಳಿಂದ ಮುಕ್ತಿ ನೀಡುತ್ತದೆ
ಹದಿಹರೆಯದಲ್ಲಿ ಪ್ರಾರಂಭವಾದ ಮೊಡವೆ ಮತ್ತು ಕೀವುತುಂಬಿದ ಬೊಕ್ಕೆ (zit) ಗಳು ನೋವು, ತುರಿಕೆ ಮತ್ತು ಮಾಗಿದ ಬಳಿಕ ಕಲೆಯನ್ನುಳಿಸುತ್ತವೆ. ಇದರಿಂದ ಪಾರಾಗಲು ಒಂದು ಟೊಮೇಟೊ ಹಣ್ಣನ್ನು ಅರ್ಧ ಕತ್ತರಿಸಿ ಮುಖದ ತುಂಬಾ ನಯವಾಗಿ ಹಚ್ಚಿಕೊಳ್ಳಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ (ನೋವು ಉಂಟಾದರೆ) ಟೊಮೇಟೊ ಹಣ್ಣಿನ ಸಿಪ್ಪೆಯನ್ನು ಸುಲಿದು, ಬೀಜ ತೆಗೆದು ನುಣ್ಣಗೆ ಅರೆದಿಟ್ಟುಕೊಂಡು ಒಂದು ನಯವಾದ ಬ್ರಶ್ ಉಪಯೋಗಿಸಿ ಹಚ್ಚಿಕೊಳ್ಳಿ. ಒಂದು ಘಂಟೆ ಕಾಲ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಿ. ಕ್ರಮೇಣ ನೋವು ನೀಡುತ್ತಿದ್ದ ಮೊಡವೆಗಳು ಕಲೆಯಿಲ್ಲದೇ ಮಾಯವಾಗುವುವು.

English summary

How juicy tomatoes can enhance your beauty

Tomatoes are juicy to eat and work wonders for your beauty too. This is so because tomatoes boast of lycopene which is meant to resolve your skin’s problems and leave a glowing effect. They can also be used as a natural conditioner for your hair, thereby making it shiny and smooth.
X
Desktop Bottom Promotion