For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಸೊಬಗುಳ್ಳ ಗುಲಾಬಿ ಕೆನ್ನೆ ನಿಮ್ಮದಾಗಿಸಿಕೊಳ್ಳಬೇಕೇ?

|

ಕಾಂತಿಯುತವಾದ ಗುಲಾಬಿ ಗಲ್ಲವು ನಿಮ್ಮ ಬ್ಲಶ್ ಅಥವಾ ಮೇಕಪ್‌ನ್ನು ಹೊರಹಾಕುತ್ತದೆ. ಗಲ್ಲದ ಮೇಲಿನ ನೈಸರ್ಗಿಕ ಕಾಂತಿಯು ನಿಮ್ಮನ್ನು ತುಂಬಾ ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ನೀವು ಮೇಕಪ್ ಬ್ಲಶ್ ಬಳಸುವುದನ್ನು ಬಿಟ್ಟು ಮನೆಯಲ್ಲೇ ಸಿಗುವ ಕೆಲವೊಂದು ನೈಸರ್ಗಿಕ ಪ್ಯಾಕ್‌ಗಳನ್ನು ಬಳಸಿಕೊಳ್ಳಬಹುದು.

ಬೀಟ್‌ರೂಟ್
ಬೀಟ್‌ರೂಟ್ ನಿಮ್ಮ ತ್ವಚೆಗೆ ಗುಲಾಬಿ ಬಣ್ಣವನ್ನು ನೀಡುತ್ತದೆ. 2-3 ಬೀಟ್‌ರೂಟ್‌ನ್ನು ಬೇಯಿಸಿ ಮತ್ತು ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಅಲ್ಲದೆ ಅದಕ್ಕೆ ಮೂರು ಚಮಚ ಕಯೋಲಿನ್ ಪೌಡರ್(ಇದು ನಿಮ್ಮ ಸಮೀಪದ ಮೆಡಿಕಲ್ ಅಂಗಡಿಯಲ್ಲಿ ಲಭ್ಯ) ಹಾಕಿ ಮತ್ತು ಇದನ್ನು ಮಿಶ್ರಣ ಮಾಡಿ ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷ ಹಾಗೆ ಬಿಡಿ ಮತ್ತು ಅದರ ಬಳಿಕ ತೊಳೆಯಿರಿ.

How to get pink cheeks naturally

ಮಸೂರ್ ದಾಲ್ ಮತ್ತು ಹಾಲು
ಹಸಿ ಹಾಲಿನಲ್ಲಿ 30 ನಿಮಿಷಗಳ ಕಾಲ ಮಸೂರು ದಾಲ್‌ನ್ನು ನೆನೆಸಲು ಹಾಕಿ. ಇದರ ಬಳಿಕ ಅದನ್ನು ರುಬ್ಬಿಕೊಳ್ಳಿ . ಇದಕ್ಕೆ ಸ್ವಲ್ಪ ಕಯೋಲಿನ್ ಪೌಡರ್ ಹಾಕಿ. ಮುಖಕ್ಕೆ ಹಚ್ಚಿ ಮತ್ತು 20 ನಿಮಿಷ ಹಾಗೆ ಬಿಡಿ.

ಕಡಲೆ ಹಿಟ್ಟು, ಹಾಲಿನ ಕೆನೆ, ಗೋಧಿ ಹುಡಿ ಮತ್ತು ಮೊಸರು
ಮೃಧುವಾದ ಮಾಶ್ ಮಾಡಲು 2-3 ಚಮಚ ಕಡಲೆ ಹಿಟ್ಟು ಹಾಕಿ, ಒಂದು ಚಮಚ ಹಾಲಿನ ಕೆನೆ, ಮೂರು ಚಮಚ ಗೋಧಿ ಹುಡಿ ಮತ್ತು ಮೊಸರು. ಇದನ್ನೆಲ್ಲಾ ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷ ಬಿಟ್ಟು ತೊಳೆಯಿರಿ.

ಸೌತೆಕಾಯಿ ತಿರುಳು
ನಿಮ್ಮ ತ್ವಚೆಯನ್ನು ತುಂಬಾ ಕಳೆಗುಂದಿದಂತೆ ಕಾಣುವಂತೆ ಮಾಡುವ ಸತ್ತ ಚರ್ಮವನ್ನು ತೆಗೆಯಲು ನಿಮ್ಮ ತ್ವಚೆಯ ಪದರ ಕಳಚುವುದು ತುಂಬಾ ಮುಖ್ಯವಾಗುತ್ತದೆ. ನಿಮ್ಮ ಮುಖಕ್ಕೆ ಸೌತೆಕಾಯಿಯ ತಿರುಳನ್ನು ಹಚ್ಚಿ. ಇದು ತ್ವಚೆಗೆ ಕಾಂತಿ ನೀಡಲು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳನ್ನು ತೆಗೆದು ಪದರ ಕಳಚುತ್ತದೆ.

ಸೌತೆಕಾಯಿ, ನಿಂಬೆ, ಹಾಲು ಮತ್ತು ಜೇನಿನ ಪೇಸ್ಟ್
ಸೌತೆಕಾಯಿ, ನಿಂಬೆ ರಸ(1/4ಕಪ್), ತಲಾ ಐದು ಚಮಚ ಜೇನು ಮತ್ತು ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಮನೆಯಲ್ಲಿ ಫೇಸ್ ಪ್ಯಾಕ್ ಮಾಡಬಹುದು. ಇದು ದಪ್ಪವಾಗಲು ಕಡಲೆ ಹಿಟ್ಟು ಹಾಕಿ. ಈ ಮಿಶ್ರಣವನ್ನು ಸುಮಾರು 5-6 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಡಿ. ಈ ತಂಪಾದ ಫೇಸ್ ಪ್ಯಾಕ್‌ನ್ನು ಮುಖಕ್ಕೆ ಹಚ್ಚಿ. 15-20 ನಿಮಿಷ ಬಿಟ್ಟು ತೊಳೆಯಿರಿ.

ಕಾಂತಿಯುತ ಹಾಗೂ ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು

ನಿಂಬೆ ಮತ್ತು ಹಾಲಿನ ಮಸಾಜ್
ನಿಮ್ಮ ತ್ವಚೆಯನ್ನು ಯುವ ಹಾಗೂ ಕಾಂತಿಯುತವಾಗಿ ಕಾಣಿಸುವಂತೆ ಮಾಡಲು ಮಸಾಜ್ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕಾಗಿ 1/4 ಕಪ್ ನಿಂಬೆ ರಸವನ್ನು ಹಾಲಿನೊಂದಿಗೆ ಮಿಶ್ರ ಮಾಡಿ. ನಿಮ್ಮ ಮುಖದ ಮೇಲೆ ನಿಂಬೆ ಮತ್ತು ಹಾಲಿನ ಮಸಾಜ್ ಮಾಡಿದರೆ ರಕ್ತದ ಸಂಚಲನ ಉತ್ತಮವಾಗುತ್ತದೆ.

ಬಾದಾಮಿ ಕ್ರಷ್
ಆರೋಗ್ಯಕರ ಕಾಂತಿಗಾಗಿ ನಿಮ್ಮ ತ್ವಚೆಯನ್ನು ಮೊಶ್ಚಿರೈಸರ್ ಮಾಡುವುದು ತುಂಬಾ ಮುಖ್ಯ. ಕೆಲವು ಬಾದಾಮಿಯನ್ನು ರುಬ್ಬಿಕೊಳ್ಳಿ, ಅದರೊಂದಿಗೆ ಗುಲಾಬಿ ದಳ, ತಲಾ ಐದು ಚಮಚ ಪುದೀನಾ ರಸ ಮತ್ತು ಜೇನನ್ನು ಹಾಕಿ. ಈ ಮಿಶ್ರಣವು ಕ್ರೀಮ್‌ನಂತೆ ಕಾಣಿಸುತ್ತದೆ ಮತ್ತು 5-6 ದಿನ ಫ್ರಿಡ್ಜ್‌ನಲ್ಲಿಡಬಹುದು. ಈ ಫೇಶ್ ಮಾಸ್ಕ್ ಒಂದು ವಾರದಲ್ಲಿ ಫಲಿತಾಂಶ ನೀಡುತ್ತದೆ. ಇದನ್ನು ಮಲಗುವ ಸಮಯದಲ್ಲಿ ಮುಖಕ್ಕೆ ಹಚ್ಚಿಕೊಳ್ಳಬೇಕು.
ಉತ್ತಮ ಫಲಿತಾಂಶ ಪಡೆಯಲು ಫೇಸ್ ಪ್ಯಾಕ್‌ನ್ನು ನಿಯಮಿತವಾಗಿ ಹಚ್ಚಿಕೊಳ್ಳಿ. ಸರಳ ಹಾಗೂ ನೈಸರ್ಗಿಕವಾಗಿ ನಿಮ್ಮ ತ್ವಚೆಯು ಕಾಂತಿಯುತವಾಗಿ ಮಾಡಬಹುದು.

English summary

How to get pink cheeks naturally

Glowing, pink cheeks can outdo any blush on or make-up. The natural radiance on the cheeks makes the skin look so much healthier. You can ditch your usual blush and go the natural way with some home-made packs:
X
Desktop Bottom Promotion